Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸ್ವಲ್ಪ ವೇಟ್ ಮಾಡು
ಮಳೆಗಾಲ ಒಂದು ಮುಗಿಲಿ
ಕಂಟ್ರಾಕ್ಟರ್ lessons ಮೇಲೆ
ಒಂದೆರೆಡು ಕೆಲಸ ಮಾಡಿಕೋಂಡು
ಮನೆಯವರ ಎದುರೆ
ತಾಳಿ ಕಟ್ಟಿ ಕೈ ಹಿಡಿದು
ಅರುಂಧತಿ ನಕ್ಷತ್ರ
ತೋರಸ್ತಿನಿ...!!
ಎಮ್.ಎಸ್.ಭೋವಿ...✍️
.
..
...
...
.......
....
..
...
...
- mani_s_bhovi
06 Jun 2024, 12:43 pm
ಕವಿತೆ ಬರಿಯೋ ಅಷ್ಟು ಸಾಲು ನಿನಲ್ಲ...
ನನಗೆ ನೆನಪು ಆಗೋ
ಕವಿತೆಯು ಊಹಿಸಿಕೊಂಡಗ ಆಗೋ
ನೆನಪಿನ ಚೆಲುವೆ ನೀನು...
ಸದಾ ನಗುವ ಹೂವುಗಳೂ ನೀನು...
ಆ ಹೂವಿನ ಮೇಲೆ ಕುತೂಕೊಂಡು
ಹೋಗೋ ದುಂಬಿ ನಾನು...
ಹೃದಯದಲ್ಲಿ ಹಾರಾಡೋ ಹಕ್ಕಿ ನೀನು...
ಹಾರಾಡೋ ಹಕ್ಕಿಯ ಜೊಪಾನಮಾಡೋ
ಗೂಡು ನಾನು...
ನಿನ್ನ ಮನಸ್ಸು ದೇಗುಲ...
ನಿನ್ನ ಮುದ್ದಾದ ಮನಸ್ಸು ಹಾಡಿ ಹೊಗೊಳೋ
ಪೂಜಾರಿ ನಾನು....
ಎಮ್.ಎಸ್.ಭೋವಿ...✍️
- mani_s_bhovi
05 Jun 2024, 08:44 pm
ಪ್ರೀತಿ ನೀನೆ ನನ್ನ ಒಲವು
ಮನದಾಳದಲ್ಲಿ ಅಡಗಿರುವ ಛಲವು
ಪ್ರೀತಿ ಪ್ರೀತಿ ಪ್ರೀತಿ ನಿನ್ನಿಂದಲೇ ಸದ್ದತಿ
ನಾನೆಂದು ಬಯಸುವ ಆಗಲು ನಿನ್ನೊಡತಿ
ನನ್ನ ಪ್ರೀತಿಯ ರಾಯಭಾರಿ ನೀನೇ
ಮನಸಿನ ತುಂಬೆಲ್ಲ ನಿನ್ನ ಪ್ರೀತಿಯ ಛಾಯೆ
ಮಾಡಿದೆ ನೀನೆಂತಹ ಮಾಯೆ
ಪ್ರೀತಿಯಿಂದ ಕೂಡಿದ ಜೀವನವೇ ವಿಸ್ಮಯ
ಪ್ರೀತಿಯ ಪಯಣವು ಸಾಗಲಿ ಜಗದಲಿ
ವಿರಸಗಳು ಕೊನೆಯಾಗಲಿ ಪ್ರೀತಿಯಲ್ಲಿ
ಸರಸ ಸಲ್ಲಾಪಗಳು ಶುರುವಾಗಲಿ
ಕೊನೆಗೆ ಪ್ರೀತಿಯೇ ಅಮರವಾಗಲಿ
ಪ್ರೀತಿ ಪ್ರೀತಿ ನೀನೇ ನನಗೆಲ್ಲ ನಿನ್ನಿಂದಲೇ ಎಲ್ಲಾ
- RoopaGowtham
31 May 2024, 11:31 am
ಕೈಲಾಸದಲ್ಲಿ ನೆಲೆಸಿರುವ ಶಂಭೋ ಶಂಕರ
ಕಷ್ಟಗಳ ಪರಿಹರಿಸುವ ತ್ರಯಂಬಕೇಶ್ವರ
ಭಕ್ತರ ಪಾಲಿನ ನಂಜುಡೇಶ್ವರ
ಹರಸು ನಮ್ಮನ್ನು ಅಭಯಂಕರ
ಮನಸಿನಲಿ ಶಾಂತಮೂರ್ತಿ
ನಂಬಿದರೆ ನಿನ್ನ ಬೆಳೆಯುವುದು ನಮ್ಮ ಕೀರ್ತಿ
ನೀನೆ ಶಾಂತಿ ನೀನೆ ಕ್ರಾಂತಿ
ನಿನ್ನಿಂದಲೆ ಮನಃಶಾಂತಿ
ಓ ಶಿವ ಬಾ ಅಳಿಸು ಕ್ರಾಂತಿ ಉಳಿಸು ಶಾಂತಿ
ಶಿವ ಶಿವ ನಿನ್ನ ನಾಮವೆ ಶಕ್ತಿ
ಅದ ಜಪಿಸಿದರೆ ಬೆಳೆವುದು ಯುಕ್ತಿ
ನಿನ್ನ ಕರುಣೆಯೇ ನೀಡುವುದು ಶಕ್ತಿ
ನಿನ್ನಿಂದಲೆ ಸಿಗಬೇಕು ಕಷ್ಟಗಳಿಗೆ ಮುಕ್ತಿ
- RoopaGowtham
28 May 2024, 01:10 pm
ದಾರಿಯಲ್ಲಿ ಹೋಗುವಾಗ ಪಕ್ಕದಲ್ಲಿ ಬಂದು ನಿಂತಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅರಳಿತು ಅನುರಾಗ
ಮನಸೇಳುತ್ತಿತ್ತು ನೀನೆ ನನ್ನ ಹುಡುಗಿ ಎಂದು
ನಿನಗೇನನಿಸಿತು ಅಂದು ನಾನು ಹೇಳಿದಾಗ ನೀನೆ ನನ್ನ ಅವಳೆಂದು
ನನ್ನ ಮನಸ್ಸಿನ ಪುಟ್ಟ ಗುಬ್ಬಿಮರಿ ನೀನು
ನನ್ನ ಉಸಿರಿಗೆ ಉಸಿರಾಗು ನೀನು
ಮನದಾಸೆಯ ಗಾಳಿಪಟ ಆಡಿದ ಬಿಟ್ಟಾಗ
ಸೂತ್ರದೊಂದಿಗೆ ನೀ ಸೇರು ನನ್ನ ಬೇಗ
ಕಣ್ಣಲ್ಲಿನ ಪ್ರತಿಬಿಂಬ ನೀನು
ತುಟಿಯಂಚಲ್ಲಿ ನಗುವು ನೀನು
ನನ್ನ ನೆನಪಿನ ತುಂಬೆಲ್ಲ ನಿನ್ನದೇ ಧ್ಯಾನ
ನೀನಿಲ್ಲದೆ ಇಲ್ಲ ನನ್ನ ಜೀವನ
ಕಾದಿರುವುದು ಈ ಜೀವ
ನಿನಗಾಗಿ
ಪರಿ ತಪಿಸಿದೆ ಈ ತೋಳುಗಳು ನಿನ್ನ ಅಪ್ಪುಗೆಗಾಗಿ
ತುಟಿಯಂಚಲಿ ಅಡಗಿದೆ ಮಾತೊಂದು ನಿನಗಾಗಿ
ಅದೇನಂದರೆ ನಾನಿರುವುದೇ ನಿನಗಾಗಿ
- RoopaGowtham
28 May 2024, 12:31 pm
ಪ್ರೀತಿಯು
ಮಂಡಿಯೂರಿತಂತೆ
ಹಣದ ಮುಂದೆ
ವಾತ್ಸಲ್ಯವು
ವಾಕರಿಸಿತಂತೆ
ಹಣದ ಮುಂದೆ
ಅಕ್ಕರೆಯು
ಸಕ್ಕರೆಯ ರುಚಿಯ
ಕಳೆದುಕೊಂಡಿತಂತೆ
ಹಣದ ಮುಂದೆ
ನಂಬಿಕೆಯು
ನಕ್ಕಿ ನಾಶವಾಯಿತಂತೆ
ಹಣದ ಮುಂದೆ
ರೊಕ್ಕವೇ ಎಲ್ಲವೂ
ಹಾಗಿರುವಾಗ
ಪಕ್ಕದವರು ನಕ್ಕರಂತೆ
ಹಣ ಇರದೇ ಇರುವಾಗ
ಜಗವೇ ಹಣದ
ಹಿಂದೆ ಓಡುತ್ತಿರುವಾಗ
ನಮ್ಮವರೆನಿಸಿಕೊಂಡವರು
ಓಡುತ್ತಿರುವದಲ್ಲಿ ತಪ್ಪೇನಿದೆ ?
ಹಣದ ಹಿಂದೆ ಬೀಳದ
ನಮ್ಮ ತಪ್ಪು ಇದೆ ?
?️ಸತೀಶ್ ಕಳುವರಹಳ್ಳಿ
- ಸತೀಶ್ ಕಳುವರಹಳ್ಳಿ
23 May 2024, 08:05 pm
ಕಂಡ ಕನಸು ನನಸಾಗುವ ಆಸೆ
ಪ್ರವಾಸದಲಿ ನಿನ್ನೂಂದಿಗೆ ಇರುವಾಸೆ
ಬೊಗಸೆ ತುಂಬಾ ನಿನ್ನ ಪ್ರೀತಿಯ ಆಸೆ
ಆದರೆ ಕೊನೆಗೆ ಆಯಿತು ಇದು ಬರಿ ಕನಸೆ
ಮಲೆನಾಡಲ್ಲಿ ನಿನ್ನ ಮಡಿಲಲಿ ಮಲಗುವಾಸೆ
ಕರುನಾಡಲಿ ನಿನ್ನ ಜೊತೆ ತಿರುಗುವಾಸೆ
ಕಛೇರಿಯಲ್ಲಿ ಕಾಪಿ ಕುಡಿಯುವಾಸೆ
ಮನೆಯಲ್ಲಿ ನಿನ್ನದೆ ವರಸೆ ನನದು ಬರಿ ಆಸೆ
ತಂಗಾಳಿಯಲಿ ತೇಲಿ ಬಂತು ಕರೆಯೋಲೆ
ಬಯಸದೆ ಬಳಿ ಬಂದ ಬಾಲೆ
ಇಂದು ನನ್ನ ಮನೆಯೊಡತಿ ಮನದೊಡತಿ
ಎಲ್ಲವೂ ನೀನೆ........
ನಿನ್ನಿಂದಲೆ ಎಲ್ಲ.. ನೀನೆ ನನ್ನ ಬಲ...
- RoopaGowtham
23 May 2024, 07:29 am
"ಕಾಂಚಾಣ..... "
ಗುಡಿಸಲಿಗೆ ಹೆದರಿದ್ದು
ಗುಡಿಗಳಿಗೆ ಸೇರಿದ್ದು
ಜೋಪಡಿಯ ಹರಿದದ್ದು
ಅರಮನೆಯ ಹೊಕ್ಕಿದ್ದು
ಹಸಿದೊಡಲ ಒದ್ದದ್ದು
ಉಳ್ಳವರ ಮೆರೆಸಿದ್ದು
ಬಡತನವ ಕೆಣಕಿದ್ದು
ಸಿರಿತನವ ತಬ್ಬಿದ್ದು
ಕೇರಿಯಲಿ ಕಾಣದ್ದು
ಪೇಟೆಯಲಿ ತಿರುಗಿದ್ದು
ಹಗಲ ಬೆವರಿಗೆ ಸಿಗದದ್ದು
ಇರುಳ ರಾತ್ರಿಗೆ ಸುರಿದದ್ದು
ಕೈಗೆ ಸಿಗದ ಕಾಂಚಾಣ
ಮೈಗೆ ಸಿಗುವುದು ಕಾಣಾ....?!?
- Karigarana Kanavarikegalu
22 May 2024, 07:47 pm
ನಿನ್ನೆಯ ಕನಸಲಿ ಕಂಡ ಓ ನನ್ನ ಚೆಲುವೆ
ನಾ ಬಯಸುವೆ ನಿನ್ನಯ ಒಲವೆ
ನಿನ್ನ ಪ್ರೀತಿಯೆ ನನ್ನ ಒಡವೆ
ಅದಕೆ ಆಗಿದೆ ಈ ಮೊಡವೆ
ನಿನಗಾಗಿ ಕಾದಿದೆ ಈ ಹೃದಯ
ಎಂದು ಬಂದು ಸೇರುವೆ ಇನಿಯನ
ಇಬ್ಬನಿಯ ಹನಿ ಹನಿಯು ಮಾಡಿದೆ ನಿನ್ನದೆ ಪರಿಚಯ
ಹೃದಯದ ಪ್ರತಿ ಬಡಿತದ ಹಿಂದೆಯು ನಿನದೆ
ಪರಿತಾಪ
ಬಾರೆ ನನ್ನ ಚೆಲುವೆ
ನಿನಗಾಗಿ ಕಾದಿದೆ ಈ ಜೀವವೆ
ಬೆರೆಸು ನಿನ್ನ ಒಲವನ್ನು ನನ್ನೊಂದಿಗೆ
ಜೀವನವಾಗಲಿ
- RoopaGowtham
22 May 2024, 04:39 pm
ನೈದಿಲೆ ವದನದಲಿ ತಾರೆಯಂತಹ ಲೋಚನವು,
ನೇಸರದಂತೆ ಪ್ರಕಾಶಿಸುವ ರೂಪದಲಿ
ರಂಗು ಕಾಂಚನವು ,
ಶಶಿಯಂತೆ ಮುಗುಳುನಗುವ ಬಾಯ್ದೆಗಳು,
ನಿಷ್ಕಲ್ಮಶ ಮನದಲಿ ಕಂಪಿಸುವ ಕಾದಂಬರಿಗಳು,
ಚಲಿಸಿದರೆ ಚಂದನದ ಕಸ್ತೂರಿಯಂತೆ
ನೆಲೆಸಿದರೆ ಹರಸುವ ದಿವಿಜೆಯಂತೆ
ಬಣ್ಣಿಸಲು ಸಾಧ್ಯವಿಲ್ಲ ಗೀತೆಗಳ ಗುಚ್ಛದಲಿ
ಪ್ರಕೃತಿಯ ಉಡಿಯಲ್ಲಿ ಸಾಗುವೆ ವಾಹಿನಿಯಲಿ
ಧರೆಗೆ ಇಳಿದ ಹಿಮದಂತೆ, ತಮಾಲನ್ನು ವಿಪ್ಲವಿಸುವ ತೈಜಸದಂತೆ , ರೆಕ್ಕೆ ಇಲ್ಲದೆ ತೇಲುವ ವಿಹಂಗದಂತೆ,
ವಾಗ್ದೇವಿಯ ಮಿಸುನಿ ನೀ
ಕಾಳಿದಾಸನ ಕೃತಿಯು ನೀ,
ಸದ್ಗುಣಗಳ ಸುಮನಸವು ,ಹಚ್ಚ ಹಸಿರಿನಿಂದ ಕಂಗೊಳಿಸಲಿ ಮನವು.
- Rakshithkumar u.r
18 May 2024, 10:21 am