Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವ್ಯಥೆಯಲಿ

ಬರುತ್ತಿರುವ ಕೋಪಕಿಂದು ನೋವೆಂದು ಹೆಸರಿಡಲೇ ನಿಲ್ಲದೆ ಹರಿಯುತ್ತಿರುವ ಕಣ್ಣೀರ ಧಾರೇಗಿಂದು ನಗುವತುಂಬಿ ನಡಿಯಲೇ..............

ಅಪರಾಧಿ ನಾನಲ್ಲದಿದ್ದರು ಶಿಕ್ಷೆ ಯಾಕೆ ನನ್ನ ಮನಕೇ
ನೂರಾಸೆಯೋತ್ತು ಕುಳಿತು ನೋವಿನಲ್ಲೇ ಬದುಕಲೇ........

ನನ್ನವರು ಯಾರು ಇಲ್ಲಿ ಇತರರೆಂಬ ಭಾವಣೆಯಲ್ಲಿ
ಕಳೆದೊದೆ ನಾನು ಇಂದು
ಒಂಟಿತನದ ವ್ಯಥೆಯಲಿ...........

- ಚುಕ್ಕಿ

24 May 2017, 11:33 am

ಪ್ರೀತಿಯ ದೀಪ

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....!!!

- ರವಿಕುಮಾರ್

23 May 2017, 09:17 pm

ಚಿನ್ನ

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ......

- ರವಿಕುಮಾರ್

23 May 2017, 09:12 pm

ಗೆಳತಿ ನೀನೆಂದೂ ನನವಳೇ..........

ಹುಣ್ಣಿಮೆಯ ಬೆಳದಿಂಗಳು….
ಆ ನಿನ್ನ ಕಂಗಳು…!
ನೋಡಲೆಂದು ಬಳಿಗೆ ಬಂದಾಗ,
ಮೈಮರೆತು ಜೊತೆಯಲಿ ನಿಂತಾಗ!
ಸೆಳೆಯಿತು ಮನಸನ್ನ ಆ ನಿನ್ನ ಕಣ್ಣೋಟ.!!
ಆವರಿಸಿಕೊಂಡಿತು ನನ್ನನ್ನ ಆ ನಿನ್ನ ಮೈಮಾಟ..!!!

- Acchu love

23 May 2017, 08:54 pm

ಅವಳಿಗೂ ಇದೆ ಅವಳದೆ ಬದುಕು...

ಸೀತೆ ಉಂಡಳು ನೋವ ರಾಮ ರಾವಣನ ಹಗೆಯಲಿ
ಮಾಡಿದ ರಾಮ ಅವಳ‌ ಕಾಡು‌ಪಾಲು ಅಗಸನ ಮಾತನು‌ ಒಪ್ಪಿ ಧರ್ಮ ಸಂಕಟದಲಿ
ಸೇರಿದಳವಳು ಕಾಡ ಮಗುವ ಹೊತ್ತು ಗರ್ಭದಲಿ
ಹೇಳಲೂ ಆಗದೆ ಅವಳ ರೋದನವ ಅವನಲಿ

ದ್ರೌಪದಿಯ ಜನನಕೂ ಕೂಡ ಕಾರಣವು ಮನ ತುಂಬಿದ ಹಗೆ
ಜನನ ಕಾಲದಲ್ಲಿ ನುಡಿದಿತ್ತಂತೆ ಕುಲ ನಾಶಕ್ಕೆ ಇವಳೆ ನೆಪದ ಸೋಗೆ
ಹೆಣ್ಣ ಕೆಣಕಿ ಮಾಡಿ ತಪ್ಪ, ಸೇರಿದರು ಮಣ್ಣ ಒಳಗೆ
ಆದರೂ ನಿಲ್ಲಲಿಲ್ಲ ನೋವು ನಾಶಕ್ಕೆಲ್ಲ ಹೆಣ್ಣೆ ಕಾರಣವೆಂದು ಸಾರುವ ಹೊಗೆ

ಆ ಮೇನಕೆ‌, ಶಾಕುಂತಲೆ‌ ನೋವೇನು ಇದಕ್ಕಿಂತ ಭಿನ್ನವಲ್ಲ
ಮೇನಕೆಯಾದಳು ತಪಸ್ವಿಯ ದಾಸಿ , ಎತ್ತಲಾಗದೆ‌ ಇಂದ್ರನೆದುರು ಸೊಲ್ಲ
ತನ್ನೂರ ರಾಜನ ಆಜ್ಞೆಗೆ ಹೆದರಿ ಹೆತ್ತ ಮಗಳನ್ನು ತ್ಯಜಿಸಬೇಕಾಯಿತಲ್ಲ‌
ತಾಯಿ ತಂದೆಯರೂ ಇಲ್ಲದೆ‌ ಯಾವುದೊ ಆಟಕೆ ಬಲಿಯಾಯಿತು ಪತಿಯ ನೆನೆಪಿನಲ್ಲೂ ಉಳಿಯದೆ ಶಾಕುಂತಲೆ ಬದುಕೆಲ್ಲ

ಅಂದಿಗೂ ಇಂದಿಗೂ ಹೆಣ್ಣ ಮೇಲಿನ ಶೋಷಣೆ ನಿಂತಿಲ್ಲ
ರಾಜ್ಯ ಯುದ್ಧಗಳ ಗೆಲ್ಲಲು ಹುಡುಕುವರು ಅವಳ ಮೇಲಿನ ಅತ್ಯಾಚಾರವನೆ ಮೂಲ
ತಮ್ಮ ತಪ್ಪ ಅರಿತು ಬದುಕಲು ಬಿಟ್ಟು ಬದುಕುವ ಮನಸು ಯಾರಿಗೂ ಇಲ್ಲ‌
ಶತಶತಮಾನಗಳೇ ಕಳೆದರು ಜೀವನದ ವ್ಯಾಖ್ಯಾನವೆ ಬದಲಾದರು ಹೆಣ್ಣಿನ ಸ್ಥಿತಿ ಬದಲಾಗದಾಯಿತಲ್ಲ

ಪರರ ನಗು‌ ಗೆಲುವು ಕುಹಕಕ್ಕೆಲ್ಲ‌ ಹೆಣ್ಣಾದಳಲ್ಲ ಸರಕು
ಅರಿಯಿರೊ ಅವಳಿಗೂ ಇದೆ ಅವಳದೆ ಆದ ಬದುಕು
ಸಾಕು ಬಿಡಿರೋ ಮನದಲಿ ಮರವಾದ ಕೆಟ್ಟ ಚಟದ ಕುಹಕ
ಅವಳ ಮೇಲೆ ಅತ್ಯಾಚಾರವೆಸಗಿ ಪಡೆದದ್ದಕೆಲ್ಲ‌ ಪಡೆಯಲೆ ಬೇಕು ನೋವಿನ ನರಕ

- ಶ್ರೀಕಾವ್ಯ

23 May 2017, 08:31 pm

ನಿನ್ನೀ ಬರುವಿಕೆಯಿಂದಾಗಿ:-

ನನ್ನೀ ಹ್ರುದಯ ನಿನ್ನ ನೆನಪುಗಳಿಂದ, ನೊಂದು ಬೆಂದು ಚಿದ್ರ ಚಿದ್ರವಾಗಿ ಹೊಡೆದು, ನುಚ್ಚು ನೂರಾದರೂ, ಈ ಮನಸೆಲ್ಲಾ ಕರಗಿ ನೀರಾದರೂ, ಆ ನೀರು ಹರಿದು ಕಡಲು ಸೇರಿದರೂ, ನನ್ನೀ ದುಃಖ ತಡೆಯಲಾರದೆ ಕತ್ತಲೆಯೂ ಸಹ ಕಣ್ಣೀರು ಸುರಿಸಿದರೂ, ನಿನ್ನಯ ಮನಸ್ಸು ಕರಗುವುದಿಲ್ಲವೇನೋ ಎಂದು ನಿರಾಸೆಯಾಗಿ ಹೋಗಿದ್ದೆ ಗೆಳೆತಿ. ಆದರೆ ನನಗಿಂದು ಅರ್ಥವಾಯಿತು,,, ನಿನಗೂ ಒಂದು ಮನಸ್ಸಿದೆ ಅನ್ನೋದು. ಭಗವಂತನು ಪರೀಕ್ಷೆ ಮಾಡಿ ಭಕ್ತನಿಗೆ ಪ್ರತ್ಯಕ್ಷ ಕೊಟ್ಟಂಗಾಯಿತು, ನಿನ್ನೀ ಬರುವಿಕೆಯಿಂದಾಗಿ!!

- rajanikanth

23 May 2017, 08:24 pm

ತುಂಬಿದ ಹ್ರುದಯ

ಅದೆಷ್ಟು ಸುಂದರವೋ ಗೆಳತಿ ನೀನು ನೋಡಿರುವ ನೋಟ. ಮಾತಿನಲ್ಲಿ ಹೇಳಲಾರೆನು...... ಕವಿತೆಯಲ್ಲಿ ಬರೆಯಲಾರೆನು..... ನನ್ನ ಮೈದುಂಬಿಸಿರುವೆ ನೀನು,,, ಬಣ್ಣ ಬಣ್ಣಗಳಿಂದ ಕೂಡಿದ ಆ ರಂಗುಗಳಲ್ಲಿ ನವಿಲಂತೆ ನಾ ನಲಿವೆಯೇನು...? ಕೋಗಿಲಂತೆ, ಧ್ವನಿಯೆತ್ತಿ ನನ್ನ ಸಂತೋಷ ಮುಗಿಲಿಗೆ ತಾಕುವಂತೆ ನಾ ಹಾಡಲೇನು...? ನಾನು ಏನು ಮಾಡಲಿ ನೀನೇ ಹೇಳು,,, ಎಲ್ಲೋ ಬತ್ತಿ ಹೋಗಿದ್ದ ನನ್ನೀ ಕಣ್ಣೊಳಗಿನ ಕಣ್ಣೀರು, ಆನಂದ ಬಾಷ್ಪಗಳಾಗಿ ಆಕಾಶದಿಂದ ಧರೆಗಿಳಿದಂತಾಗಿದೆ. ನೋಡೇ ನನ್ನೀ ಸಂತೋಷ, ನಿನಗೆ ಕೊಂಚವಾದರೂ ಅರ್ಥವಾಯಿತೇನೇ....?

- rajanikanth

23 May 2017, 08:03 pm

ಮನದ ಮಂದಿರದಲ್ಲಿ ...

ಮನದ ಮಂದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು......
ಹ್ರುದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು .....
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು ........
ನೆನಪಿರಲಿ ಪ್ರೀಯೆ....
ದೀಪ ಆರದಿರಲಿ ,ಮುತ್ತು ಒಡೆಯದಿರಲಿ ,ಪುಷ್ಪ ಬಾಡದಿರಲಿ .........

- Acchu

23 May 2017, 03:55 pm

ಗೃಹಲಕ್ಷ್ಮೀ

ತೂಗು ಉಯ್ಯಾಲೆಯಲ್ಲಿ ಲಾಲಿ ಜೋಗುಳ ಹಾಡಿ
ಗರಿಮುದುಡಿ ಮಲಗಿರುವ ಗುಬ್ಬಚ್ಚಿಯ ಕದತಟ್ಟಿ ಕರಿಯೋಣವೇ ಪ್ರಕೃತಿಯ ಮನದಂಗಳಕೆ
ಶುಭೋದಯವಾಯಿತೆಂದು.................

ಸುಪ್ರಭಾತ ಗೀತೆ ಹಾಡಿ ಅದಿತ್ಯನ ಕರೆಕೇಳಿ
ಬೇಗೆದ್ದ ಕೋಳಿ ಕೂಗನು ಆಲಿಸಿ ಎದ್ದು ಹೋದಳು ಮನೆಯೊಡತಿ ಅಂಗಳಕ್ಕೆ ರಂಗೋಲಿ ಹಾಕಲೆಂದು ಹತ್ತು ಬಣ್ಣಗಳೊತ್ತು ತನ್ನ ಕೈಯಲ್ಲಿ............

ಹೊಸಲು ತನ್ನ ತಾಯಿಯೆಂದು ನಮ್ಮ ಮನೆ ಮಹಾಲಕ್ಷ್ಮಿ ಹಚ್ಚಿದಳು ಅರಿಶಿನವ ಇಟ್ಟಲದಕೆ
ಸಿಂದೂರವ ...................

ಮಿಂದು ಮಾಡಿಯೊತ್ತು ದೇವರಮನೆಸೇರಿ ಪೂಜೆಗೈದು ಮನೆಯಮಂದಿಯಲ್ಲ ನಗುತಿರಳು ಬೇಡಿದಳು ದೇವರಲ್ಲಿ ನಮ್ಮ
ಅದೃಷ್ಟಲಕ್ಷ್ಮಿ ...............

ಊಟ ತಿಂಡಿಮಾಡಿಟ್ಟು ತಲೆಮೇಲೆ ಸೆರೆಗೊತ್ತು
ನಡೆದಳು ಧನ್ಯಲಕ್ಷ್ಮೀ ಹೊಲಕ್ಕೆ ಉಳುಮೆಮಾಡಲು ಜಾನಪದ ಗೀತೆಹೇಳಿ ನನ್ನ ಸ್ನೇಹಿತೆಯರೊಡನೆ ಕೂಡಿ..........

ಸಂಧ್ಯಾವೇಳೆ ಮನೆಸೇರಿ ಮಕ್ಕಳ ನಗುಮುಖವ ನೋಡಿ ತಾನು ಪಟ್ಟ ಕಷ್ಟವೆಲ್ಲಾ ಕ್ಷಣದಲ್ಲಿ ಮರೆತಳಾ ಸೌಭಾಗ್ಯವತಿ ಆ ಸಂತಾಣಲಕ್ಷ್ಮೀ................

ವ್ಯಾಪಾರದಲ್ಲಿ ಸಂಪಾದನೆ ಸಾಲದೆಂದು ನೊಂದ ಪತಿಗೆ ನಾಲ್ಕು ಧೈರ್ಯದ ಮಾತಾನೇಲಿ ಪ್ರೀತಿಯಿಂದ ಊಟ ಬಡಿಸಿ ತಾನು ನೋಂದಲಾ
ಆ ಧೈರ್ಯಲಕ್ಷ್ಮಿ

ಹಾಯಾಸದಿ ಮಲಗಿದಳು ಮನೆಗೆಲಸವೆಲ್ಲಾ ಮುಗಿಸಿ ನಾಳೆಯ ದಿನಕೆ ನೂರು ಕನಸೊತ್ತು
ತನ್ನ ಕಣ್ಣಲ್ಲಿ ನಮ್ಮ ಗೃಹಲಕ್ಷ್ಮೀ ............

- ಚುಕ್ಕಿ

23 May 2017, 09:45 am

*ನಮ್ಮ ಧಕ್ಷ ವೀರಸೇನೆ*

*ನಮ್ಮ ಧಕ್ಷ ವೀರಸೇನೆ*

by.*ಮಂಜುನಾಥ.ಸಿ*

"ಕಂಡಿರಣ್ಣ ಕಂಡಿರ ನಮ್ಮ ಧಕ್ಷ ವೀರ ಸೇನೆಯೆನ್ನೇನಾದರು ಕಂಡಿರ ."?

"ಮಳೆ,ಗಾಳಿ, ಸುಡಬಿಸಿಲಿನರಿವಿಲ್ಲದೆ ಮುನ್ನೆಡೆಯುವ ನಮ್ಮ ಧಕ್ಷ ವೀರ ಸೇನೆಯೆನ್ನೇನಾದರು ಕಂಡಿರ ."?

"ಮನೆಮಡದಿಯ ಮರೆತು ತಾಯಿತಂದೆ ಸಂಪರ್ಕ ತೊರೆದು ಮಕ್ಕಳಪರಿವಿಲ್ಲದೆ
ಭಾರತೀಯ ಮಕ್ಕಳನೇನಾದರು ಕಂಡಿರ ಕಂಡಿರ."?

"ಸಾವಿರಾರು ಮೈಲು  ಕೊರಿಯುವ ಹಿಮಪಾತದಲ್ಲಿ ಕಾಲ್ ಸುಡುವ ಮರಳುಗಾಡಲ್ಲಿ ನಮಗಾಗಿಕಾಯುವ
ನಮ್ಮ ಧಕ್ಷ ವೀರ ಸೇನೆಯೆನ್ನೇನಾದರು ಕಂಡಿರ ."?

"ಶತ್ರುಗಳ ಗುಂಡಿಗೆ ದ್ದಿಟ್ಟ ಉತ್ತರಕೊಡುತ್ತ 
ಎದೆಗುಂದದೆ ಪ್ರಾಣವನ್ನೆ ಅರ್ಪಿಸುವ
ನಮ್ಮಧಕ್ಷ  ವೀರ ಸೇನೆ ಕಂಡಿರ ?..""

*ಮಂಜುನಾಥ.ಸಿ*

- Manjunatha.c

23 May 2017, 07:21 am