ಸುಮ್ಮನಿರು ಕಣ್ಣೀರೆ ...ಸುಮ್ಮನಿರು
ನಿನ್ನ ನೋವು ಅರ್ಥ ಮಾಡಿಕ್ಕೊಳ್ಳುವ ಇನ್ನೊಂದು ಮನಸ್ಸಿಲ್ಲ ಇಲ್ಲಿ.....
ನಿನ್ನ ಅಳು ವ್ಯರ್ಥ ಸುಮ್ಮನಿರು......
ಮುಗಿಲು ಮುಟ್ಟಲು ಹೋದ ಪ್ರೀತಿ ಇಂದು ಕಳಚಿ ಪಾತಳ ಸೇರಿದೆ ...
ನಿನ್ನ ಅಳುವಿನಿಂದ ಮರಳಿ ಬಾರದು ಸುಮ್ಮನಿರು....
ನನ್ನಲ್ಲಿ ನಾ ಇಂದು ಕೊರಗಲು ಕಾರಣ ಮನಸ್ಸೆ ಹೊರತು..ನಿನ್ನಲ್ಲ ಸುಮ್ಮನಿರು....ಕಣ್ಣೀರೆ ನೀ ಸುಮ್ಮನಿರು......................................ಸುರೇಶ್ ಸೂರಿ ದಾವಣಗೆರೆ
ಖುಷಿಯಲಿ ತೇಲಾಡಿದೆ ಮನವಿಂದು,
ನನಗೂ ಮನಸ್ಸಿದೆ ಎಂದು ತಿಳಿದವ
ನೀನೆ ಏನು ?
ತಿಳಿಯದೆ ಆದ ಸ್ನೇಹವಿದು,
ಯಾವುದೊ ಜನುಮದ ಬಂಧವಿದು,
ಕೂರಿಸಿದೆಯಲ್ಲೊ ಸ್ನೇಹದ
ಗೋಪುರದ ಮೇಲೆ,
ನೆಲೆಸು ಬಾರೊ ನನ್ನ ಗೆಳೆಯ,
ಸ್ನೇಹದ ಸನ್ನಿಧಿಯೊಳಗೆ….
ಸ್ಥಳ ಒಂದೇ ಆದರು ಎಷ್ಟು ಅಂತರ,
ಜೊತೆಯಿರೆ ಸಾಕು ನಮ್ಮ ಸ್ನೇಹ
ಜನುಮ ಜನುಮಾಂತರ….
ಮನಸ್ಸು ಭಾರ ವಾಯ್ತು.
ಹೃದಯಕ್ಕೆ ನೋವಾಯ್ತು.
ಸ್ವಾಭಿಮಾನಕ್ಕೆ ದಕ್ಕೆಯಾಯ್ತು.
ಹೀಯಾಳಿಸುವ ಜನಕ್ಕೆ ಸಾಧಿಸಿ ತೋರಿಸುವ ಛಲವಾಯ್ತು
ಜೀವನವೆಂಬ ರಣರಂಗದಲಿ ಚರಿತ್ರೆ ಸೃಷ್ಠಿಸುವ ಕಾಲ ಬಂದಾಯ್ತು
ಚರಿತ್ರೆಯ ಪುಟ ಪುಟದಲ್ಲೂ ಮಿಂಚುವ ರೋಷ ಉಕ್ಕಾಯ್ತು
ಇದೋ ನಿನ್ನ ಸಂಪತ್ತಿಗೆ ಈ ಸ್ವಾಭಿಮಾನಿಯ ಸವಾಲ್ !
ಹೋಗುವಾಗ ದಾರಿಯಲ್ಲಿತ್ತೊಂದು ಚಿಟ್ಟೆ.
ಹಿಡಿಯಲು ಹೋಗಿ ಮುರಿದುಕೊಂಡೆ ನನ್ನ ರಟ್ಟೆ.
ವೈದರು ಹಾಕಿದರು ನನಗೆ ಬಿಳಿಯ ಬ್ಯಾಂಡೇಜ್ ಬಟ್ಟೆ,
ಅದನ್ನು ನೋಡಿದ ನನ್ನ ಗೆಳೆಯ ನಕ್ಕ ಸಿಕ್ಕಾಪಟ್ಟೆ.
ಅದರಿಂದ ಕೋಪಗೊಂಡ ನಾನು ಅವನ ಕಪಾಳಕೆ ಒಂದು ಕೊಟ್ಟೆ.
ಒಮ್ಮೆ ಗಮನಿಸು ಗೆಳತಿ ಈ ನಿನ್ನ ನಗುವನ್ನು,,, ಹಸಿರು ಚಿಗುರೆಲೆಯ ನನ್ನೆದೆಯಲ್ಲಿ, ರಂಗು ರಂಗಿನ ಬಣ್ಣದ ನನ್ ಹ್ರುದಯ ಅಂದದ ಹೂಗಳಲ್ಲಿ, ನಿನ್ನಯ ಸವಿ ನೆನಪುಗಳನ್ನು ಸವಿಯುತ್ತಾ,,, ನನ್ನನ್ನೇ ಮರೆತು, ಪರಿಮಳ ಬೀರುವ ನಿನ್ನ ಮನಸಿನ ತೋಟದಲ್ಲಿ ಮುಳುಗಿ,,, ಕನಸಿನ ಕವನದೊಂದಿಗೆ ಹೊರಟಿದ್ದ ಕಾಲು ದಾರಿಯಲ್ಲಿ ನನಗೆ, ' ನೀ ಎದುರು ಬಂದು ನಿಂತು,ಮುಗ್ದ ಮನಸ್ಸಿನಿಂದ ನೀ ಕಂಡಿರುವ ಕನಸನ್ನು ನನಸಾಗಿಸಲು ಬಂದಿಹೇನು ನೋಡು ಒಮ್ಮೆ , ಎಂದು ಹೇಳಿದಂತಾಯಿತು ಗೆಳತಿ.... ನಿನ್ನೀ ಸಿಹಿ ನೋಟ!
ನೀನಾದೆ ನನ್ನ ಜೀವನ
ಅದಕೆ ವಂದನೆಗಳು
ನಿನ್ನ ಲೋಕವಾದೆ ನಾ
ಅದಕೆ ಚಿರ ಋಣಿ
ನಿನ್ನ ಮುದ್ದು ನಗೆಯಲಿ
ಅಡಗಿದೆ ನನ್ನ ಕಣ್ಬೆಳಕು
ಕಣ್ರೆಪ್ಪೆಯಲಿ ಮುಚ್ಚಿಟ್ಟು ನೀ ಕಾಪಾಡುವೆ
ನನ್ನ ಎದೆಗೂಡಲಿ ಮಿಡಿವೆ
ಜಲಧಾರೆಯ ಸರಿಗಮವು
ಈ ನಿನ್ನ ನಗುವು
ನಿನ್ನ ಮನದ ಕೈತೋಟದಲಿ
ಅರಳಿವೆ ಸಂತಸದ ಹೂಗಳು
ಪ್ರತಿಕ್ಷಣವು ಬಂಧನ
ನೀ ದೂರ ಇರುವಾಗ
ಪ್ರತಿಹೆಜ್ಜೆಯು ಭಾರ
ನೀ ಜೊತೆ ನಡೆಯದಾಗ
ನೆಮ್ಮದಿಯು ಮಾಗಿದೆ ಹಣ್ಣಾಗಿ
ನಿನ್ನಾಸರೆಯ ಮರದಲ್ಲಿ
ದೀಪವು ಆರುವುದು ಎದೆಯಲ್ಲಿ
ನೀನಿಲ್ಲವಾದ ಕ್ಷಣದಲ್ಲಿ...