Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನೀ ಸಿಹಿ ನೋಟ

ಒಮ್ಮೆ ಗಮನಿಸು ಗೆಳತಿ ಈ ನಿನ್ನ ನಗುವನ್ನು,,, ಹಸಿರು ಚಿಗುರೆಲೆಯ ನನ್ನೆದೆಯಲ್ಲಿ, ರಂಗು ರಂಗಿನ ಬಣ್ಣದ ನನ್ ಹ್ರುದಯ ಅಂದದ ಹೂಗಳಲ್ಲಿ, ನಿನ್ನಯ ಸವಿ ನೆನಪುಗಳನ್ನು ಸವಿಯುತ್ತಾ,,, ನನ್ನನ್ನೇ ಮರೆತು, ಪರಿಮಳ ಬೀರುವ ನಿನ್ನ ಮನಸಿನ ತೋಟದಲ್ಲಿ ಮುಳುಗಿ,,, ಕನಸಿನ ಕವನದೊಂದಿಗೆ ಹೊರಟಿದ್ದ ಕಾಲು ದಾರಿಯಲ್ಲಿ ನನಗೆ, ' ನೀ ಎದುರು ಬಂದು ನಿಂತು,ಮುಗ್ದ ಮನಸ್ಸಿನಿಂದ ನೀ ಕಂಡಿರುವ ಕನಸನ್ನು ನನಸಾಗಿಸಲು ಬಂದಿಹೇನು ನೋಡು ಒಮ್ಮೆ , ಎಂದು ಹೇಳಿದಂತಾಯಿತು ಗೆಳತಿ.... ನಿನ್ನೀ ಸಿಹಿ ನೋಟ!

- rajanikanth

24 May 2017, 03:02 pm

ನೀನಿಲ್ಲವಾದ ಕ್ಷಣದಲ್ಲಿ..

ನೀನಾದೆ ನನ್ನ ಜೀವನ
ಅದಕೆ ವಂದನೆಗಳು
ನಿನ್ನ ಲೋಕವಾದೆ ನಾ
ಅದಕೆ ಚಿರ ಋಣಿ

ನಿನ್ನ ಮುದ್ದು ನಗೆಯಲಿ
ಅಡಗಿದೆ ನನ್ನ ಕಣ್ಬೆಳಕು
ಕಣ್ರೆಪ್ಪೆಯಲಿ ಮುಚ್ಚಿಟ್ಟು ನೀ ಕಾಪಾಡುವೆ
ನನ್ನ ಎದೆಗೂಡಲಿ ಮಿಡಿವೆ
ಜಲಧಾರೆಯ ಸರಿಗಮವು
ಈ ನಿನ್ನ ನಗುವು
ನಿನ್ನ ಮನದ ಕೈತೋಟದಲಿ
ಅರಳಿವೆ ಸಂತಸದ ಹೂಗಳು

ಪ್ರತಿಕ್ಷಣವು ಬಂಧನ
ನೀ ದೂರ ಇರುವಾಗ
ಪ್ರತಿಹೆಜ್ಜೆಯು ಭಾರ
ನೀ ಜೊತೆ ನಡೆಯದಾಗ
ನೆಮ್ಮದಿಯು ಮಾಗಿದೆ ಹಣ್ಣಾಗಿ
ನಿನ್ನಾಸರೆಯ ಮರದಲ್ಲಿ
ದೀಪವು ಆರುವುದು ಎದೆಯಲ್ಲಿ
ನೀನಿಲ್ಲವಾದ ಕ್ಷಣದಲ್ಲಿ...

- Indushekar Chinivar

24 May 2017, 02:31 pm

ಸುರೇಶ್ ಸೂರಿ ದಾವಣಗೆರೆ

ಹೃದಯದ ಮಾತಲ್ಲೇ
ಕನಸಿನ ಕಂಬನಿ ನಿನಾದೆ
ಹೃದಯದ ಪುಟದಲ್ಲಿ
ಹಾಡುವ ಉಸಿರು ನಿನಾದೆ
ನಿನ್ನ ನೆನಪಲ್ಲೆ ನೆನಯುವ ಮನವು ನಾನದೆ. Sorry fell my love

- sureshsuri@gmail.com

24 May 2017, 01:59 pm

ವ್ಯಥೆಯಲಿ

ಬರುತ್ತಿರುವ ಕೋಪಕಿಂದು ನೋವೆಂದು ಹೆಸರಿಡಲೇ ನಿಲ್ಲದೆ ಹರಿಯುತ್ತಿರುವ ಕಣ್ಣೀರ ಧಾರೇಗಿಂದು ನಗುವತುಂಬಿ ನಡಿಯಲೇ..............

ಅಪರಾಧಿ ನಾನಲ್ಲದಿದ್ದರು ಶಿಕ್ಷೆ ಯಾಕೆ ನನ್ನ ಮನಕೇ
ನೂರಾಸೆಯೋತ್ತು ಕುಳಿತು ನೋವಿನಲ್ಲೇ ಬದುಕಲೇ........

ನನ್ನವರು ಯಾರು ಇಲ್ಲಿ ಇತರರೆಂಬ ಭಾವಣೆಯಲ್ಲಿ
ಕಳೆದೊದೆ ನಾನು ಇಂದು
ಒಂಟಿತನದ ವ್ಯಥೆಯಲಿ...........

- ಚುಕ್ಕಿ

24 May 2017, 11:33 am

ಪ್ರೀತಿಯ ದೀಪ

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....!!!

- ರವಿಕುಮಾರ್

23 May 2017, 09:17 pm

ಚಿನ್ನ

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ......

- ರವಿಕುಮಾರ್

23 May 2017, 09:12 pm

ಗೆಳತಿ ನೀನೆಂದೂ ನನವಳೇ..........

ಹುಣ್ಣಿಮೆಯ ಬೆಳದಿಂಗಳು….
ಆ ನಿನ್ನ ಕಂಗಳು…!
ನೋಡಲೆಂದು ಬಳಿಗೆ ಬಂದಾಗ,
ಮೈಮರೆತು ಜೊತೆಯಲಿ ನಿಂತಾಗ!
ಸೆಳೆಯಿತು ಮನಸನ್ನ ಆ ನಿನ್ನ ಕಣ್ಣೋಟ.!!
ಆವರಿಸಿಕೊಂಡಿತು ನನ್ನನ್ನ ಆ ನಿನ್ನ ಮೈಮಾಟ..!!!

- Acchu love

23 May 2017, 08:54 pm

ಅವಳಿಗೂ ಇದೆ ಅವಳದೆ ಬದುಕು...

ಸೀತೆ ಉಂಡಳು ನೋವ ರಾಮ ರಾವಣನ ಹಗೆಯಲಿ
ಮಾಡಿದ ರಾಮ ಅವಳ‌ ಕಾಡು‌ಪಾಲು ಅಗಸನ ಮಾತನು‌ ಒಪ್ಪಿ ಧರ್ಮ ಸಂಕಟದಲಿ
ಸೇರಿದಳವಳು ಕಾಡ ಮಗುವ ಹೊತ್ತು ಗರ್ಭದಲಿ
ಹೇಳಲೂ ಆಗದೆ ಅವಳ ರೋದನವ ಅವನಲಿ

ದ್ರೌಪದಿಯ ಜನನಕೂ ಕೂಡ ಕಾರಣವು ಮನ ತುಂಬಿದ ಹಗೆ
ಜನನ ಕಾಲದಲ್ಲಿ ನುಡಿದಿತ್ತಂತೆ ಕುಲ ನಾಶಕ್ಕೆ ಇವಳೆ ನೆಪದ ಸೋಗೆ
ಹೆಣ್ಣ ಕೆಣಕಿ ಮಾಡಿ ತಪ್ಪ, ಸೇರಿದರು ಮಣ್ಣ ಒಳಗೆ
ಆದರೂ ನಿಲ್ಲಲಿಲ್ಲ ನೋವು ನಾಶಕ್ಕೆಲ್ಲ ಹೆಣ್ಣೆ ಕಾರಣವೆಂದು ಸಾರುವ ಹೊಗೆ

ಆ ಮೇನಕೆ‌, ಶಾಕುಂತಲೆ‌ ನೋವೇನು ಇದಕ್ಕಿಂತ ಭಿನ್ನವಲ್ಲ
ಮೇನಕೆಯಾದಳು ತಪಸ್ವಿಯ ದಾಸಿ , ಎತ್ತಲಾಗದೆ‌ ಇಂದ್ರನೆದುರು ಸೊಲ್ಲ
ತನ್ನೂರ ರಾಜನ ಆಜ್ಞೆಗೆ ಹೆದರಿ ಹೆತ್ತ ಮಗಳನ್ನು ತ್ಯಜಿಸಬೇಕಾಯಿತಲ್ಲ‌
ತಾಯಿ ತಂದೆಯರೂ ಇಲ್ಲದೆ‌ ಯಾವುದೊ ಆಟಕೆ ಬಲಿಯಾಯಿತು ಪತಿಯ ನೆನೆಪಿನಲ್ಲೂ ಉಳಿಯದೆ ಶಾಕುಂತಲೆ ಬದುಕೆಲ್ಲ

ಅಂದಿಗೂ ಇಂದಿಗೂ ಹೆಣ್ಣ ಮೇಲಿನ ಶೋಷಣೆ ನಿಂತಿಲ್ಲ
ರಾಜ್ಯ ಯುದ್ಧಗಳ ಗೆಲ್ಲಲು ಹುಡುಕುವರು ಅವಳ ಮೇಲಿನ ಅತ್ಯಾಚಾರವನೆ ಮೂಲ
ತಮ್ಮ ತಪ್ಪ ಅರಿತು ಬದುಕಲು ಬಿಟ್ಟು ಬದುಕುವ ಮನಸು ಯಾರಿಗೂ ಇಲ್ಲ‌
ಶತಶತಮಾನಗಳೇ ಕಳೆದರು ಜೀವನದ ವ್ಯಾಖ್ಯಾನವೆ ಬದಲಾದರು ಹೆಣ್ಣಿನ ಸ್ಥಿತಿ ಬದಲಾಗದಾಯಿತಲ್ಲ

ಪರರ ನಗು‌ ಗೆಲುವು ಕುಹಕಕ್ಕೆಲ್ಲ‌ ಹೆಣ್ಣಾದಳಲ್ಲ ಸರಕು
ಅರಿಯಿರೊ ಅವಳಿಗೂ ಇದೆ ಅವಳದೆ ಆದ ಬದುಕು
ಸಾಕು ಬಿಡಿರೋ ಮನದಲಿ ಮರವಾದ ಕೆಟ್ಟ ಚಟದ ಕುಹಕ
ಅವಳ ಮೇಲೆ ಅತ್ಯಾಚಾರವೆಸಗಿ ಪಡೆದದ್ದಕೆಲ್ಲ‌ ಪಡೆಯಲೆ ಬೇಕು ನೋವಿನ ನರಕ

- ಶ್ರೀಕಾವ್ಯ

23 May 2017, 08:31 pm

ನಿನ್ನೀ ಬರುವಿಕೆಯಿಂದಾಗಿ:-

ನನ್ನೀ ಹ್ರುದಯ ನಿನ್ನ ನೆನಪುಗಳಿಂದ, ನೊಂದು ಬೆಂದು ಚಿದ್ರ ಚಿದ್ರವಾಗಿ ಹೊಡೆದು, ನುಚ್ಚು ನೂರಾದರೂ, ಈ ಮನಸೆಲ್ಲಾ ಕರಗಿ ನೀರಾದರೂ, ಆ ನೀರು ಹರಿದು ಕಡಲು ಸೇರಿದರೂ, ನನ್ನೀ ದುಃಖ ತಡೆಯಲಾರದೆ ಕತ್ತಲೆಯೂ ಸಹ ಕಣ್ಣೀರು ಸುರಿಸಿದರೂ, ನಿನ್ನಯ ಮನಸ್ಸು ಕರಗುವುದಿಲ್ಲವೇನೋ ಎಂದು ನಿರಾಸೆಯಾಗಿ ಹೋಗಿದ್ದೆ ಗೆಳೆತಿ. ಆದರೆ ನನಗಿಂದು ಅರ್ಥವಾಯಿತು,,, ನಿನಗೂ ಒಂದು ಮನಸ್ಸಿದೆ ಅನ್ನೋದು. ಭಗವಂತನು ಪರೀಕ್ಷೆ ಮಾಡಿ ಭಕ್ತನಿಗೆ ಪ್ರತ್ಯಕ್ಷ ಕೊಟ್ಟಂಗಾಯಿತು, ನಿನ್ನೀ ಬರುವಿಕೆಯಿಂದಾಗಿ!!

- rajanikanth

23 May 2017, 08:24 pm

ತುಂಬಿದ ಹ್ರುದಯ

ಅದೆಷ್ಟು ಸುಂದರವೋ ಗೆಳತಿ ನೀನು ನೋಡಿರುವ ನೋಟ. ಮಾತಿನಲ್ಲಿ ಹೇಳಲಾರೆನು...... ಕವಿತೆಯಲ್ಲಿ ಬರೆಯಲಾರೆನು..... ನನ್ನ ಮೈದುಂಬಿಸಿರುವೆ ನೀನು,,, ಬಣ್ಣ ಬಣ್ಣಗಳಿಂದ ಕೂಡಿದ ಆ ರಂಗುಗಳಲ್ಲಿ ನವಿಲಂತೆ ನಾ ನಲಿವೆಯೇನು...? ಕೋಗಿಲಂತೆ, ಧ್ವನಿಯೆತ್ತಿ ನನ್ನ ಸಂತೋಷ ಮುಗಿಲಿಗೆ ತಾಕುವಂತೆ ನಾ ಹಾಡಲೇನು...? ನಾನು ಏನು ಮಾಡಲಿ ನೀನೇ ಹೇಳು,,, ಎಲ್ಲೋ ಬತ್ತಿ ಹೋಗಿದ್ದ ನನ್ನೀ ಕಣ್ಣೊಳಗಿನ ಕಣ್ಣೀರು, ಆನಂದ ಬಾಷ್ಪಗಳಾಗಿ ಆಕಾಶದಿಂದ ಧರೆಗಿಳಿದಂತಾಗಿದೆ. ನೋಡೇ ನನ್ನೀ ಸಂತೋಷ, ನಿನಗೆ ಕೊಂಚವಾದರೂ ಅರ್ಥವಾಯಿತೇನೇ....?

- rajanikanth

23 May 2017, 08:03 pm