Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಿಕ್ಕಮ್ಮ

ಗೆಳತಿಯಲ್ಲದ ಗೆಳತಿ ನೀನು ಚಿಕ್ಕಮ್ಮ
ಹೊತ್ತಿಲ್ಲ ನವಮಾಸಗಳು ನನ್ನ ನಿನ್ನ ಒಡಲಲ್ಲಿ
ಆದರೂ ಇಟ್ಟಿರುವೆಯಲ್ಲ ನನ್ನನ್ನು ನಿನ್ನ ಹೃದಯದ ಮಡಿಲಲ್ಲಿ ಮಗಳಾಗಿ.............

ನೋವೆಂದ ತಕ್ಷಣ ನಗುವಾಗಿ ನನ್ನ ಮುದ್ದಾಡುವೆ
ನಾ ಕಂಡ ತಕ್ಷಣ ಬಂಗಾರ ಎಂದು ಬೀಗಿದಪ್ಪಿ
ಪ್ರೀತಿಯಿಂದ ಮಾತಾಡಿಸುವೆ...........

ನಾನು ಮೆಚ್ಚಿದ ವಸ್ತುಗಳನ್ನು ಕೇಳದೇನೆ
ಖರೀದಿಸಿ ತಂದುಕೊಡುವೆ ಬೆಲೆಯೆಂದು ಕೇಳಿದರೆ
ನಿನ್ನ ಮುಖದಲ್ಲಿರುವ ನಗುವಿನ ಮುಂದೆ ಇದರ ಬೆಲೆ ಸಣ್ಣದೆಂದು ಪ್ರೀತಿಯ ತೋರುವೆ............

ಪದಗಳು ಸಾಲವು ನನಗೆ ನಿನ್ನ ಮೇಲಿನ ಪ್ರೀತಿ ತೋರಲು .........
ಅಮ್ಮನಲ್ಲದ ಅಮ್ಮ ನೀನು ನನ್ನ ಪ್ರೀತಿಯ ಚಿಕ್ಕಮ್ಮ ನೀನು ಅಮ್ಮ..........

ದೇವರು ಒಂದು ತಾಯಿಯ ಪ್ರೀತಿ ನನಗೆ ಸಾಲದೆಂದು ಇಬ್ಬರು ತಾಯಂದಿರನ್ನು ವರವಾಗಿ ನೀಡಿದ್ದಾನೆ ಈ ಮುದ್ದು ಮಗಳ ಆರೈಕೆ ಮಾಡಲೆಂದು........

- ಚುಕ್ಕಿ

29 May 2017, 09:15 pm

ಆನಂದಜ್ಯೋತಿ

"ಆನಂದ"ವ ತಂದಿರಿ ನೀವು ನನ್ನ ಬಾಳಲ್ಲಿ
"ಜ್ಯೋತಿ"ಯಾಗುವೆ ನಾ ನಿಮ್ಮ ಬದುಕಲ್ಲಿ
ಶಾಶ್ವತವಾಗಲ್ಲಿ ನಿಮ್ಮ ಹೆಸರು ನನ್ನ ಉಸಿರಲ್ಲಿ
ಆ ಉಸಿರು ಇರುವವರೆಗು ಬದುಕುವೆ ನಿಮ್ಮ ಜೋತೆಯಲ್ಲಿ..

- ಜ್ಯೋತಿ

29 May 2017, 08:22 pm

ಮಂಡಹಾಸದ ಹಾಗೆ .....

ನನ್ನ ಜೀವ ಮತ್ತೊಂದು ಹೆಸರಾಯಿತು
ನಿನ್ನ ಭೇಟಿಯಾದ ಮೇಲೆ........
ಆ ಕ್ಷಣವೇ ಮನದಲ್ಲಿ ಬಚ್ಚಿಟ್ಟೆ ನಿನ್ನ
ಎಂದಿಗೂ ಮರೆಯಲಾರದೆ........

ಎಂದು ನಾನು ಸನಿಹದಲ್ಲಿ ನೋಡಿಲ್ಲ
ನಿನ್ನನು ಏಕೆಂದರೆ ನನ್ನಿಂದ ಮತ್ತೆ ದೂರವಾದರೆ
ಸಹಿಸಲಾರೆ ನಾನು ಆ ಒಂದು ನಿಮಿಷದ ನೋವಾದರೂ ನೀನಿಲ್ಲದೆ...........

ನನ್ನ ಎದುರು ನಿಲ್ಲಬೇಡ ನೀನೆಂದು ಹತ್ತಿರವಾಗಿ
ಏಕೆಂದರೆ ನನ್ನ ಹೃದಯದಲ್ಲೇ ನಿರಂತರ
ಹಾಯಾಗಿ ನೆಲೆಯಾಗಿರುವೆ ನೀನು ನನ್ನ ಉಸಿರಾಗಿ.......

ನಿನ್ನ ಜೊತೆ ಕಳೆದ ಕಾಲವನ್ನು ಮರೆಯಲಾರೆ ಮರಣಕ್ಕೆ ಹತ್ತಿರವಾಗುವವರೆಗೂ ಏಕೆಂದರೆ ಅದೇ
ನನ್ನ ಜೀವನದ ಸಿಹಿಯಾದ ಕ್ಷಣಗಳಲ್ಲವೇ........

ಪ್ರತಿ ಕ್ಷಣವೂ ಮಾತಾಡಿಸುವೆ ಸುತ್ತಲಿರುವ ಗಾಳಿಯ ಹಾಗೆ ಮರುಕ್ಷಣವೇ ನನ್ನ ಸೆರುವೆ
ನೆನಪಲ್ಲಿ ಮಂದಹಾಸದ ಹಾಗೇ........

- ಚುಕ್ಕಿ

29 May 2017, 08:11 pm

ಹನಿ..

ನೀಲಾಂಬರಿಯ ನೀಳ
ಜಡೆಯ ಅಲಂಕರಿಸಲು
ಮುಂಗಾರಿನ ಮಲ್ಲೆ ಮೋಡಗಳು
ನಲಿಯುತ ಸಾಗುವ ಸಂಜೆ...

- Indushekar Chinivar

29 May 2017, 06:27 pm

ಕಡಲ‌ ತೀರವ‌ ಸೇರಬಲ್ಲೆನು.....

ಸಾಗಬಲ್ಲೆನು ನಾನು ಏಕಾಂಗಿಯಾಗಿ
ಬಹುದೂರ ಪ್ರಯಾಣದ ಆಕಾಂಕ್ಷಿಯಾಗಿ
ಬಾಳ ನೌಕೆಯ ಸಾಗಿಸಬಲ್ಲೆನು
ಎಂತ ಬೀರುಗಳಿಯು ಬೀಸಿದರು
ನೌಕೆಯನೆ ಮುಳುಗಿಸುವ ಅಲೆಗಳೆ ಬಂದರು
ಕಡಲ ತೀರವ ನಗುತಲೇ ಸೇರಬಲ್ಲೆನು

ಜೊತೆಗಾರರೆ ತೊರೆದದ್ದನು ಕಂಡಿರುವೆನು
ಅರಿಯದವರು ಜೊತೆಗೆ ಸೇರಿದನು ಒಪ್ಪಿಕೊಂಡಿರುವೆನು
ನಗುತಲೆ ಹಲವರು ಅಳಿಸಿದನು
ಅತ್ತಾಗ ಹಲವರು ಕಣ್ಣೀರ ಒರೆಸಿದನು ನೋಡಿರುವೆನು
ಅನುಭವಿಸುತಲೆ ಕಡಲ ತೀರವನು ಸೇರಬಲ್ಲೆನು

ಪ್ರೀತಿಯ ಸುಖವನ್ನು ಅನುಭವಿಸಿರುವೆನು
ದ್ವೇಷದ ನೋವನ್ನು ಉಂಡಿರುವೆನು
ಎಲ್ಲರಿಗೂ ಪ್ರೀತಿ ಹಂಚಿ ಸಂಭ್ರಮಿಸಿರುವೆನು
ನಾ ಪಡೆದ ಪ್ರೀತಿಯಲಿ ಮೋಸವ ಕಂಡು ನೊಂದಿರುವೆನು
ಮೋಹ ಮದ ಮಾತ್ಸರ್ಯಗಳ ಹಾಗೂ ಹೋಗುಗಳ ಅರಿತಿರುವೆನು
ಸರಿ ದಾರಿಯಲೆ ಕಡಲ ತೀರವ ಸೇರಬಲ್ಲೆನು

ಕಂಡಿರುವೆನು ನೌಕೆಯಲಿ ಏಳು ಬೀಳನು
ಸ್ವೀಕರಿಸಿರುವೆನು ಸೋಲು ಗೆಲುವಿನ ಸಿಹಿ ಕಹಿಯನ್ನು
ಅರಿತಿರಲು ಸೋಲಿನ ಪಾಠವನ್ನು
ನೋಡಿರಲು ಗೆಲುವಿನ ಹಿತವನ್ನು
ಅರಿತು ಕಡಲ ತೀರವ ಸೇರಬಲ್ಲೆನು

- ಶ್ರೀಕಾವ್ಯ

29 May 2017, 04:11 pm

ಮಳೆ

‌ಮಳೆಯಾಗಿ ಬಾ ಇಳೆಯ ಮನ ತಣಿಸಲು
ಸುಖ‌ದ‌ ಸೆಲೆಯಾಗು ಬಾ ನ‌ನ್ನ‌ ಬಾಳ‌ ಬೆಳ‌ಗ‌ಲು
ಕ‌ನ‌ಸುಗ‌ಳ‌ಲ್ಲಿ ಕಾಡ‌ದೆ ನ‌ನ‌ಸುಗ‌ಳ‌ಲ್ಲಿ ಬೇಡ‌ದೆ
ಸ‌ದಾ ನ‌ನ್ನ‌ ಜೋತೆಯಾಗಿರು ನ‌ನ್ನ‌ ಉಸಿರಾಗಿರು
ನ‌ನ್ನ‌ ಜೀವ‌ನ‌ ಪ‌ಯ‌ಣ‌ದ‌ ಸ‌ರಿ ಸ‌ಮ‌ವಾಗಿರು.

- ಶಶಿಧರ ಹೆಚ್ ಎನ್

29 May 2017, 10:45 am

ಕಣ್ಣ ಹನಿ

ನಿನ್ನ ನೆನಪಲ್ಲಿ ನಾ ಅಳುತ್ತಿರಲು
ಕಣ್ಣ ನೀರು ಹನಿ ಹನಿಯಾಗಿ ಸುರಿಯುತ್ತಿರಲು
ಬಿದ್ದ ಹನಿಗಳಿಗೂ ಮರಳಿ ಕಣ್ಣನು ಸೇರುವಾಸೆ
ನಿನ್ನ ಮನಸು ಹನಿಗಳಿಗಿಂತಲು ಕಟುಕವಾಯಿತ್ತೆ?

- ಜ್ಯೋತಿ

28 May 2017, 11:48 pm

ಕಾಲಗ್ಗೆಜೆ

ನನ್ನ ಬಾಳಂಗಳದಲ್ಲಿ
ಪೀತ್ರಿಯ ಕೇರಿಯಲ್ಲಿ
ಪಕ್ಷಿಗಳ ಕಲರವದಲ್ಲಿ
ನೆನಪೊಂದು ಮನದಲ್ಲಿ
ಮುಡಿತ್ತಿಂದು ನಲಿವಿನಲ್ಲಿ
ಆ ನೆನಪನೆ ಹೊಸೆದು
ನಿನ್ನ ಕಾಲಗ್ಗೆಜೆಯ ಪ್ರತಿ ಮನಿ ಮನಿಗಳಿಗೊಂದೋಂದು ಕಟ್ಟಿರುವೆ,
ಜೋಪಾನವೆ ಗೆಳತಿ....!!!!

- ಜ್ಯೋತಿ

28 May 2017, 11:27 pm

ಏನಾಗಬೇಕು ನಾ ನಿನಗೆ.....????

ಹೇಳಲಾಗುತಿಲ್ಲ ಮನಸಿನ ಮಾತು,
ಹೇಳದೆ ಹೇಗಿರಲಿ ನಿನ್ನಲ್ಲಿ ಸೋತು..
ಪ್ರಯತ್ನಿಸಿದೆ ಹಲವು ಬಾರಿ,
ಮುಚ್ಚಿಡಲು ನನ್ನ ಪ್ರೀತಿಯ..
ಮಾತು ಹೇಳದ ಸಂಗತಿಯ,
ಕಣ್ಣೆ ಹೇಳಿಬಿಟ್ಟಿವೆ ಮನದ ಸ್ಥಿತಿಯ..
ಹೇಗೆ ತಿಳಿಯಿತೋ ನಾ ಕಾಣೆ,
ಕೇಳಿಯೆ ಬಿಟ್ಟ ನನ್ನಾಣೆ..
“ಏನಾಗಬೇಕು ನಾ ನಿನಗೆ”,
ಮೂಕಾದೆ ಆ ಕ್ಷಣದಲಿ..
ಹೇಗೆ ತಾನೆ ಹೇಳಲಿ,
ನನ್ನವ ನೀನೆ ಈ ಜಗದಲಿ..

- Acchu love

28 May 2017, 09:47 pm

ರಂಗುರಂಗಿನ ನಕ್ಷತ್ರಗಳು

ಆಕಾಶದ ತುಂಬೆಲ್ಲ ಸೊಗಸಾದ
ನಕ್ಷತ್ರಗಳು ಹೊಂಬೆಳಕು ಚೆಲ್ಲುತ್ತಿಲ್ಲ
ರಂಗುರಂಗಿನ ತಾರೆಗಳು ಇಂದ್ರಾಚಾಪೆ
ಹೊದೆಸಿದಂತೆ ಕಾಣುತ್ತಿವೆ...........

ನನ್ನ ನಯನದ ನೋಟಕ್ಕಲ್ಲ ಅದು
ನಿನ್ನ ಜೊತೆಗಿರುವ ಹರುಷದಲ್ಲಿ
ಇಡೀ ಗಗನದಲ್ಲಿ ನಿನ್ನ ಪ್ರೀತಿಯ
ಭಾವನೆಗಳು ಹರಡಿವೆ..........

ನಗುವು ತುಂಬಿ ನಿಂತ ನೂರಾರು
ಬಣ್ಣಗಳು ಭುವಿಯಲ್ಲಾ ತುಂಬಿವೆ
ಹಸಿರಿನಲ್ಲಿ ಬೆರೆತು ಕೆಂಪಲ್ಲಿ ಹೋದಗಿ
ಅರಳಿದ ಗುಲಾಬಿಯಂತೆ..........

ನನ್ನ ಮೇಲಿನ ಪ್ರೀತಿಯನ್ನೆಲ್ಲಾ
ಒಂದೊಂದು ಘಳಿಗೆ ಒಂದೊಂದು
ನಕ್ಷತ್ರ ಮಾಡಿ ಕೊಟ್ಟರೆ ನೀನು.......

ನಿನ್ನ ಎದೆಯಲ್ಲಿ ನೀ ಮಾಡಿದ
ಗೊಂಬೆಯಾಗಿರುವೇ ನಿನ್ನ
ಉಸಿರಲ್ಲಿ ಬೆರೆತ ನನ್ನ ಉಸಿರಾ
ಒಡವೆ ತೊಟ್ಟು ನಗುವ ಚೆಲ್ಲುತ್ತ ನೆಲೆಯಾಗಿರುವೆ....

- ಚುಕ್ಕಿ

28 May 2017, 05:59 pm