Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾಡು -ಕಾಡು

ನಾಲ್ಕು ಜನ ಮಧ್ಯೆ ಇದ್ದು
ನೊಂದು ಸಾಯುತ್ತ ಬದುಕುವ
ನಾಡಿಗಿಂತ...................

ಯಾರು ಇಲ್ಲದೆ ನಗುತ್ತಾ
ಸಾಯುವ ಕಾಡು ಉತ್ತಮ...............

ನೂರು ಮಾತನಾಡಿ ಬೆಸೆತ್ತು
ನಮ್ಮಲ್ಲೇ ನಾವು ನರಳುವುದಕ್ಕಿಂತ............

ಒಂದು ಮಾತನಾಡದೆ ಮೌನದಲ್ಲಿ
ಮನಸ್ಸಿನ ಜೊತೆ ಮಾತನಾಡುವುದು
ಅತ್ಯುತ್ತಮ..........

ನೋವನ್ನು ಎಲ್ಲರ ಜೊತೆ ಹಂಚಿಕೊಂಡು
ಮನಸ್ಸು ಹಗುರ ಮಾಡಿಕೊಂಡು ಅವರ
ಕರುಣೆಗೆ ಪಾತ್ರರಾಗುವುದಂಕಿಂತ......

ನಮ್ಮಲ್ಲೇ ಇಟ್ಟು ಕಣ್ಣೀರಿನ ಜೊತೆ
ಹೇಳಿಕೊಳ್ಳುವುದು ಶ್ರೇಷ್ಠ.........

ಏಕೆಂದರೆ ಕಂಬನಿಯು ನಮ್ಮಲ್ಲೇ
ಇರುವುದರಿಂದ ಅದಕ್ಕೆ ತಿಳಿಯುತ್ತೆ
ನಮ್ಮ ನೋವಿನ ಅನುಭವ........

ನಲಿವಿನ ಸಂಭ್ರಮ..........

- ಚುಕ್ಕಿ

31 May 2017, 11:44 am

ನನ್ನವಳೇ ನನ್ನ ಕನ್ನಡಿ

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ನಿನ್ನ ನಗುವ ಕಂಡು
ನನ್ನ ನೋವು ಮರೆತೆನೇ
ಆ ನಗುವು ಕೂಡ ಬಾನಿಗೆ ಹಾರಿತೆ
ನಾ ಸೋತಲೆಲ್ಲಾ
ಆ ಕಣ್ಣಲ್ಲಿ ಕಂಬನಿ ಜಾರಿತೆ
ಈ ಕಂಬನಿಯೇ ನನ್ನ ಸ್ಪೂರ್ತಿಯಾಯಿತೆ
ಆ ಸ್ಪೂರ್ತಿ ಕೂಡ ಇಂದು ಕಾಣದಾಯಿತೆ
ನನ್ನ ಮೌನವೆಲ್ಲಾ ನೀನು ತಿಳಿದುಕೋಂಡೆಯೇ
ನಿನ್ನ ಮಾತು ನನ್ನ ಖುಷಿಯ ಪಡಿಸಿತೇ
ಆ ಮಾತೇ ಇಂದು ನನ್ನ ದೂರ ತಳ್ಳಿತೇ
ರೂಪದಲ್ಲಿ ನನ್ನ ಬಿಂಬ ಅವಳು
ಮಾತಿನಲ್ಲಿ ನನ್ನ ಜವಳಿ ಅವಳು
ಇಂದು ನನ್ನವಳೇ ನನ್ನ ಬಿಟ್ಟು ಹೋದಳೇ

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ನೀನು ನನ್ನವಳು ಎಂಬ ಆಸೆಯೋಂದು
ಕನಿಸಿನಲ್ಲಿ ಚಿಗುರು ಹೋಡೆಯಿತೇ
ಮನದಲ್ಲಿ ಹೂವು ಅರಳಿತೇ
ಆ ಹೂವ್ವಿಗೇನೆ ಕೋಳ್ಳಿಯಿಟ್ಟು
ನನ್ನವಳು ಹೋರಟು ಹೋದಳೇ

ಸಾವು ಬಂದು ತಲೆಯ ಮೇಲೆ ಕುಂತಿದೆ
ಆ ಸಾವಿಗೇನೆ ಹೇಳಿಬಿಡಲೇ
ಒಮ್ಮೆ ನನ್ನವಳ ಬಳಿ ಹೋಗಿಬರುವೆ
ಆ ಸಾವು ಕೂಡ ಬಿಟ್ಟು ಕೋಟ್ಟಿತೇ
ನನ್ನವಳೇ ನನ್ನ ಬಳಿ ಬರದೇ ಹೋದಳೇ
ಸಾವಿನ ಜೋತೆ ಇಂದು ನಾನು ಹೋಗಿ ಬಿಡಲೇ.....

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ......

- ಅಗಸ್ತ್ಯ

31 May 2017, 10:08 am

ಸಿಹಿ

ಚಂದ ದ ಈ ಜನ್ಮಕ್ಕೆ
ನಗುವೆಂಬ ದೀಪವ ಹಚ್ಚೀ
ಚಂದ ದ ಈ ಹೃದಯ ಕ್ಕೆ
ಪ್ರೀತಿ ಏಂಬ ದೀಪವ ಹಚ್ಚೀ
ಮರೆಯದಿರಿ ಸ್ನೇಹ ವ
ಮರೆಯದಿರಿ ನನ್ನ ಕವನವ....

ಸುಮಂತ್ ಆರ್ಯ...

- ಸುಮಂತ್ಆರ್ಯ

31 May 2017, 12:33 am

ತಿಥಿ

ಎಲ್ಲಾ ಸೇರಿ ನನ್ನ ಹೆಸ್ರಲಿ
ಹಾಲು ತುಪ್ಪ ಬಿಡ್ತಾವ್ರೆ ಅನ್ಸಯ್ತೆ

ಅಣ್ಣ ಆಡಿದ್ ಮಾತು ಬಂದು
ಎದೆಗೆ ನಾಟಿ ಚುಚ್ಚುತೈತೆ.

ಅವ್ವ ನಿನ್ನ ಮೌನ ನಂಗೆ
ಚುಚ್ಚಿ ಚುಚ್ಚಿ ಸಾಯಿಸ್ತೈತೆ.

ಚುಚ್ಚೋದ್ ಸ್ವಲ್ಪ ಜೋರಾಯ್ತೇನೋ . .
ಯಾಕೊ ವಸಿ ನೋಯ್ತಾಯಿದೆ . .

ಎರಡು ಕಣ್ಣು ತುಂಬಿಕೊಂಡು
ಮಂಜು ಮಂಜಾಗ್ ಆಗುತೈತೆ.

ಯಾವನುಗ್ ಬೇಕು ಪ್ರೀತಿ ಪ್ರೇಮ
ನೆಮ್ಮದಿ ಇಲ್ದಂಗ್ ಆಗೈತೆ.

ಯಾವ್ದು ಬೇಡ ಹಳ್ಳಿಗ್ ಹೋಗಿ
ಕ್ಯಾಮೆ ಗೀಮೆ ನೋಡವ ಅನಿಸೈತೆ


little edited
by

ವ ರಾ ಚ

- ವ.ರಾ.ಚ

30 May 2017, 10:20 pm

ಎಂಥದೋ ಒ ಮನುಸಾ

ಬೆಳಕಿಲ್ಲದೆ ಕತ್ತಲೆಲ್ಲಿದೆ
ಕತ್ತಲಿಲ್ಲದೆ ಬೆಳಕೆಲ್ಲಿದೆ
ತಾಯಿಯಿಲ್ಲದೆ ಜೀವವೆಲ್ಲಿದೆ
ಜೀವವಿಲ್ಲದೆ ಬದುಕೆಲ್ಲಿದೆ
ಬದುಕಿಲ್ಲದೆ ಸಾವೆಲ್ಲಿದೆ
ಸಾವು ಬಂದರೆ ನೀನು ಎಲ್ಲಿಹೆ ?
ಅದು ತಿಳಿಯದ ನಿನ ಬದುಕು
ಎಂಥೋದು ಒ ಮನುಸಾ....

ಬೇರಿದ್ದರೆ ಮರವುಂಟು
ಮರವಿದ್ದರೆ ಕೋಂಬೆಯುಂಟು
ಕೋಂಬೆಯಿದ್ದರೆ ಎಲೆ ಉಂಟು
ಎಲೆಯಿದ್ದರೆ ಹೂವು ಉಂಟು
ಹೂವುಯಿದ್ದರೆ ಕಾಯಿ ಉಂಟು
ಕಾಯಿಯಿದ್ದರೆ ಹಣ್ಣು ಉಂಟು
ಹಣ್ಣುಯಿದ್ದರೆ ಬೆಲೆ ಉಂಟು
ಈ ಬೆಲೆಗಾಗಿ ಹೋರಾಡುವ ನಿನ ಬದುಕು
ಎಂಥದೋ ಒ ಮನುಸಾ.....

ವಿದ್ಯೆಯಿದ್ದರೆ ಜ್ನಾನ ಉಂಟು
ಜ್ನಾನವಿದ್ದರೆ ಕೆಲಸ ಉಂಟು
ಕೆಲಸವಿದ್ದರೆ ದುಡ್ಡುಂಟು
ದುಡ್ಡಿದ್ದರೆ ಬಂದುಗಳು ಉಂಟು
ಬಂದುಗಳಿದ್ದರೆ ಖರ್ಚುಂಟು
ಖರ್ಚಿದ್ದರೆ ದುಡ್ಡಿನ ಆಸೆಉಂಟು
ಆಸೆಯಿದ್ದರೆ ಸ್ವಾರ್ಥ ಉಂಟು
ಆ ಸ್ವಾರ್ಥದ ನಿನ ಬದುಕು
ಎಂಥದೋ ಒ ಮನುಸಾ........

ನೆಲೆಯಿದ್ದರೆ ಕಾಳುಂಟು
ಕಾಳುಯಿದ್ದರೆ ಕೂಳೂಂಟು
ಕೂಳುಯಿದ್ದರೆ ಆಳುಂಟು
ಆಳುಯಿದ್ದರೆ ದರ್ಪ ಉಂಟು
ದರ್ಪಯಿದ್ದರೆ ಅಹಂ ಉಂಟು
ಅಹಂಬಿಟ್ಟರಂ ನೀನುಂಟು
ನೀನುಯಿದ್ದರೆ ಸ್ನೇಹ ಉಂಟು
ಸ್ನೇಹಯಿದ್ದರೆ ಸೇವೆ ಉಂಟು
ಸೇವೆಯಿದ್ದರೆ ನಿನ್ನ ಹೆಸರುಂಟು
ಆ ಹೆಸರು ಮಾಡದ ನಿನ ಬದುಕು
ಎಂಥದೋ ಒ ಮನುಸಾ...

ಬೆಳಕಿಲ್ಲದೆ ಕತ್ತಲೆಲ್ಲಿದೆ
ಕತ್ತಲಿಲ್ಲದೆ ಬೆಳಕೆಲ್ಲಿದೆ
ತಾಯಿಯಿಲ್ಲದೆ ಜೀವವೆಲ್ಲಿದೆ
ಜೀವವಿಲ್ಲದೆ ಬದುಕೆಲ್ಲಿದೆ
ಬದುಕಿಲ್ಲದೆ ಸಾವೆಲ್ಲಿದೆ
ಸಾವು ಬಂದರೆ ನೀನು ಎಲ್ಲಿಹೆ ?
ಅದು ತಿಳಿಯದ ನಿನ ಬದುಕು
ಎಂಥೋದು ಒ ಮನುಸಾ....

- ಅಗಸ್ತ್ಯ

30 May 2017, 09:07 pm

ಹೊರಟಿರುವೆ ದೂರ ನೀನು....

ಹೊರಟಿರುವೆ ತುಂಬಾ ದೂರ ನೀನು
ಕೈ ಸೇರಿದ್ದ ಪ್ರೀತಿ ಜಾರಿ ಹೋಯಿತೇನು
ಹೊರಟಾಗ ಕೂಗಿ ಕರೆಯಲು ಮಾತೆ ಬಾರದಾಯಿತಲ್ಲ
ನೀ ಹೊರಟ ಮೇಲೆ ಮನಸಿನ ನೋವು ಹೇಳಿತೀರುವುದಲ್ಲ

ನುಡಿದೆ ಮಾತು ಅರಿಯದೆ ಮನಸ
ಮಾತಲ್ಲೆ ಕೊಂದೆಯಲ್ಲ ನನ್ನೆಲ್ಲ ಕನಸ
ಮನಸ ಅರಮನೆಗೆ ಅರಸಾದವನು ನೀನೆನೆ
ಅಲ್ಲಿ‌ ಈಗ ಇರುವುದೆಲ್ಲ ಸ್ಮಶಾನ ಮೌನನೆ

ಸೋತ ಮನಸು ಮತ್ತೆ ಕರೆಯದೆ ಬೀಳ್ಕೊಟ್ಟಿದೆ ನಿನ್ನನು
ನಿನ್ನೆಲ್ಲ‌ ನೆನಪುಗಳು ಎಡಬಿಡದೆ‌‌ ಕಾಡುತಿವೆ ನನ್ನನು
ತಿರುಗಿ ನೋಡದೆ ಜಾರುತಿದ್ದ ಕಣ್ಣಹನಿಯ ಕಾಣದೆ ಕುರುಡಾದೆ ನೀನು
ನನ್ನೆಲ್ಲ ಭಾವವ ತಿಳಿಸಿ ಹೇಳಲಾಗದೆ ಮೂಕಿಯಾದೆ ನಾನು

ನೀ ಸಾಗುವಾಗ‌‌ ಮನಸು ಕಂಡ ನೋವಿಗೆದರಿ‌ ಕಲ್ಲಾಯಿತಲ್ಲ
ನೀನಿರದೆ ಈ ಜೀವವು ಕ್ಷಣಕ್ಷಣಕು ಬರಡಾಗುತಿದೆ ನಲ್ಲ
ನಿನ್ನಲೂ‌ ತುಂಬಿದೆ ಈ ಬೀಳ್ಕೊಡುಗೆಯ ನೋವು
ಬರಬಾರದಿತ್ತೆ ನಗುತ ನಾವು ಜೊತೆ ಇದ್ದಾಗಲೆ ಆ ಸಾವು

ಕಾಯುತಿರುವೆನು ಕಾಲ ‌ಸರಿದರು‌ ನಿನ್ನ ಹಾದಿಯನೆ ನಾನು
ಮತ್ತೊಮ್ಮೆ ತಿರುಗಿ ನೆನೆದು ಇತ್ತ‌‌‌ ಬಂದು ಬಿಡು ನೀನು
ಒಡೆದ ಮನಸುಗಳು ತಿಳಿಯಲಿ‌‌ ದೂರ‌ ಇರುವ ನೋವು‌‌
ಇನ್ನೆಂದು ದೂರ ಸರಿಯದಂತೆ ಇರಲಿ ನಮ್ಮ ಮನವು
ಮತ್ತೆ ಸೇರಿ ಜೊತೆಯಾಗಿ ಬಾಳುವ ಕರೆಯುವರೆಗೆ ಸಾವು

- ಶ್ರೀಕಾವ್ಯ

30 May 2017, 07:36 pm

ಮಮತೆ

ಮಾತು ತೋರದೆ ಮಮತೆ ನಿನ್ನ
ಕೈತುತ್ತು ತೋರುತ್ತದೆ ಅಪ್ಪ

ಕಣ್ಣು ತೋರದ ಮಮತೆ ನಿನ್ನ
ಹೆಗಳಮೇಲೆ ಕುಳಿತಾಗ ನನ್ನ
ಧೈರ್ಯ ತೋರುತ್ತದೆ ಅಪ್ಪ

ಕೈಹಿಡಿದು ನಡಿದಾಗ ಕಿರುಬೆರಳು
ತುದಿಯು ನಿನ್ನ ಮನಸ ತೋರುತ್ತದೆ
ಅಪ್ಪ ......

ನವಮಾಸಗಳು ಹೊತ್ತ ಅಮ್ಮ
ಪ್ರೀತಿತೋರಿ ಮಮತೆ ತಿಳಿಸಿದರೆ
ನಿನ್ನ ಹೃದಯ ಬಡಿತ ಪ್ರತಿಕ್ಷಣ
ನನ್ನ ಮೇಲಿನ ಮಮತೆ ತೋರುತ್ತದೆ ಅಪ್ಪ

- ಚುಕ್ಕಿ

30 May 2017, 05:49 pm

ಇಳಿ ಸಂಜೆ

ಸುಂದರ ಇಳಿ ಸಂಜೆಯಗೆ
ಮನಸೋತ ಹಕ್ಕಿಗಳು ಗೂಡು
ಸೇರಿವೆ ಕೆಲವೇ ಕ್ಷಣಗಳಲ್ಲಿ ಕಾಣುವ
ತಾರೆಗಳ ನೋಡಲೆಂದು ........

ಮಿನುಗುವ ತಾರೆ ಆಕಾಶದಲ್ಲಿ
ಅಡಗಿಲ್ಲ ಆ ಸೊಗಸ ಸವಿಯುವ
ಕಣ್ಣಲ್ಲಿ ಅಡಗಿದೆ .......

ಇರುಳುನ್ನು ಬೆಳಗಿಸುವ ಚಂದಿರನ ಮನಕದಿಯುವ ಚೋರಾ ನಿನಾಗು
ಜನ ಮೆಚ್ಚುವ ಮನಸ್ಸುಳ್ಳ ಮಾನವನಾಗು.....

- ಚುಕ್ಕಿ

30 May 2017, 04:50 pm

ವಿರಹ

ಹೋಗಿದ್ದೆಲ್ಲಿಗೆ ಕಾಣದ
ದೂರದೂರಿಗೆ
ಈಗ ಬರುವೆನೆಂಬ
ಸುಳ್ಳು ಪೊಳ್ಳು ಬೇರೆ,
ನಿನಗೆಲ್ಲಿ ತಿಳಿದಾತು
ಈ ಹಸುಗೂಸು ಚೇತನದ
ಒದ್ದಾಟ..!!!

ಇಷ್ಟು ದಿನ ನೀ ಬಯಸಿದ್ದ ಮಿಂಚು
ನನ್ನ ನಯನ ಹೊನಲಲ್ಲಿತ್ತು,
ಹಠಾತ್ತನೆ ಈಗೇನಾಯಿತೋ?
ದೂರದೂರ ಮಿಂಚುಹುಳವೂOದು
ನಿನ್ನನ್ನೂಯ್ದು ರಮಿಸಿತ್ತೋ?
ಅದಾವ ಮೋಹನ
ರಾಗಕ್ಕೆ ಮರುಳಾದಿಯೋ..!!!

ಹಣೆತುಂಬ ಮುತ್ತುಗರೆದೆ,
ಬಾಂದಳದ ಸುಖವನಿತ್ತೆ,
ಅಪ್ಪುಗೆಯ ಶಾಕವಿನ್ನು
ಸಹಜ ಸ್ಥಿತಿಗೆ ತಲುಪಿಲ್ಲ
ಅಷ್ಟು ಬೇಗ ಹೊರಟೆಯಲ್ಲ,
ದೂರದೂರ ರಮಣನನರಸಿ
ಕೊನೆಯ ಮುತ್ತಲಿ ನಂಜು ಬೆರೆಸಿ..!!!

ಹೋದೆ ಸರಿ
ನೆನಪುಗಳ ಬುತ್ತಿ ಇಲ್ಲೇ ಬಿಟ್ಟದ್ದು ಏಕೆ?
ವಿರಹದೀಟಿ ಹೃದಯದೊಳಗೆ ನುಗ್ಗಿ
ನೋವನುಣಿಸುತ್ತಿರುವುದೇಕೆ?
ಎದೆಹೂವ ಹಿಚುಕಿ
ಶೋಕ ಶಾಖ ಹರವಿ
ದೂರದೂರಿಗೆ ಹೊರಟೆಯೇಕೆ?

-ಕನ್ನಡ ಭಕ್ತ

- ಕನ್ನಡದ ಭಕ್ತ

30 May 2017, 04:42 pm

ನೆನಿಯದಿರು

ನೀನಿಲ್ಲದೆ ಕಳೆದ ಕಹಿಯಾದ
ಕಾಲವನ್ನು ಸಿಹಿಯಾಗಿ ಮರಿಯೆಂದು
ನೀ ತಿಳಿಸಿಲ್ಲ ನನ್ನ ಮನಕೇ..........

ನಿನ್ನ ಜೊತೆಗಿರುವಗ ಒಂದು ನಿಮಿಷವೂ
ಅದನ್ನು ನೆನಿಯದಿರೆಂದು ನೀ ಹೇಳಿಕೊಟ್ಟೆ
ನನ್ನ ಹೃದಯಕ್ಕೆ...........

ಹಾಗೆ ನಾನಿರಬೇಕಾದರೆ ನೀನಿರು
ಜೀವನ ಪೂರ್ತಿ ನನ್ನ ಜೊತೆ ನಗುವಾಗಿ
ನನ್ನ ನಗಿಸುತ್ತಾ ನೆರಳಾಗಿ......

ನೆನೆಪಾದರೆ ಕಹಿ ನೆನಪುಗಳನ್ನು ಮೆಲಕು
ಹಾಕುವ ಮುನ್ನ ನಿನ್ನ ತೋರಿಸಿ ತಿಳಿಸುವೇ
ಅವುಗಳಿಗೆ ನನ್ನ ಸಂತೋಷವಿಲ್ಲಿದೆ ನೀವಿನ್ನು ನನಗೆ ಬೇಡವೆಂದು ..........

- ಚುಕ್ಕಿ

30 May 2017, 06:42 am