Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನ ಬಾಳಂಗಳದಲ್ಲಿ
ಪೀತ್ರಿಯ ಕೇರಿಯಲ್ಲಿ
ಪಕ್ಷಿಗಳ ಕಲರವದಲ್ಲಿ
ನೆನಪೊಂದು ಮನದಲ್ಲಿ
ಮುಡಿತ್ತಿಂದು ನಲಿವಿನಲ್ಲಿ
ಆ ನೆನಪನೆ ಹೊಸೆದು
ನಿನ್ನ ಕಾಲಗ್ಗೆಜೆಯ ಪ್ರತಿ ಮನಿ ಮನಿಗಳಿಗೊಂದೋಂದು ಕಟ್ಟಿರುವೆ,
ಜೋಪಾನವೆ ಗೆಳತಿ....!!!!
- ಜ್ಯೋತಿ
28 May 2017, 11:27 pm
ಹೇಳಲಾಗುತಿಲ್ಲ ಮನಸಿನ ಮಾತು,
ಹೇಳದೆ ಹೇಗಿರಲಿ ನಿನ್ನಲ್ಲಿ ಸೋತು..
ಪ್ರಯತ್ನಿಸಿದೆ ಹಲವು ಬಾರಿ,
ಮುಚ್ಚಿಡಲು ನನ್ನ ಪ್ರೀತಿಯ..
ಮಾತು ಹೇಳದ ಸಂಗತಿಯ,
ಕಣ್ಣೆ ಹೇಳಿಬಿಟ್ಟಿವೆ ಮನದ ಸ್ಥಿತಿಯ..
ಹೇಗೆ ತಿಳಿಯಿತೋ ನಾ ಕಾಣೆ,
ಕೇಳಿಯೆ ಬಿಟ್ಟ ನನ್ನಾಣೆ..
“ಏನಾಗಬೇಕು ನಾ ನಿನಗೆ”,
ಮೂಕಾದೆ ಆ ಕ್ಷಣದಲಿ..
ಹೇಗೆ ತಾನೆ ಹೇಳಲಿ,
ನನ್ನವ ನೀನೆ ಈ ಜಗದಲಿ..
- Acchu love
28 May 2017, 09:47 pm
ಆಕಾಶದ ತುಂಬೆಲ್ಲ ಸೊಗಸಾದ
ನಕ್ಷತ್ರಗಳು ಹೊಂಬೆಳಕು ಚೆಲ್ಲುತ್ತಿಲ್ಲ
ರಂಗುರಂಗಿನ ತಾರೆಗಳು ಇಂದ್ರಾಚಾಪೆ
ಹೊದೆಸಿದಂತೆ ಕಾಣುತ್ತಿವೆ...........
ನನ್ನ ನಯನದ ನೋಟಕ್ಕಲ್ಲ ಅದು
ನಿನ್ನ ಜೊತೆಗಿರುವ ಹರುಷದಲ್ಲಿ
ಇಡೀ ಗಗನದಲ್ಲಿ ನಿನ್ನ ಪ್ರೀತಿಯ
ಭಾವನೆಗಳು ಹರಡಿವೆ..........
ನಗುವು ತುಂಬಿ ನಿಂತ ನೂರಾರು
ಬಣ್ಣಗಳು ಭುವಿಯಲ್ಲಾ ತುಂಬಿವೆ
ಹಸಿರಿನಲ್ಲಿ ಬೆರೆತು ಕೆಂಪಲ್ಲಿ ಹೋದಗಿ
ಅರಳಿದ ಗುಲಾಬಿಯಂತೆ..........
ನನ್ನ ಮೇಲಿನ ಪ್ರೀತಿಯನ್ನೆಲ್ಲಾ
ಒಂದೊಂದು ಘಳಿಗೆ ಒಂದೊಂದು
ನಕ್ಷತ್ರ ಮಾಡಿ ಕೊಟ್ಟರೆ ನೀನು.......
ನಿನ್ನ ಎದೆಯಲ್ಲಿ ನೀ ಮಾಡಿದ
ಗೊಂಬೆಯಾಗಿರುವೇ ನಿನ್ನ
ಉಸಿರಲ್ಲಿ ಬೆರೆತ ನನ್ನ ಉಸಿರಾ
ಒಡವೆ ತೊಟ್ಟು ನಗುವ ಚೆಲ್ಲುತ್ತ ನೆಲೆಯಾಗಿರುವೆ....
- ಚುಕ್ಕಿ
28 May 2017, 05:59 pm
ಯಾರೇ ನೀನು ತುಂಟಲಗಿತ್ತಿ,
ಬಂದೆ ಹಿಂದೆ ಬೆನ್ನ ಹತ್ತಿ…!
ಮಾಡ್ತಿಯ ನೀನು ನನ್ನ ಪ್ರೀತಿ,
ನಾಚುತಾ ಹೇಳ್ತಿದೆ ಮೂಗಿನ ಮೂಗುತಿ…!!
ಸುಮ್ಮನೆ ನೀನು ಯಾಕೆ ನಗುತಿ,
ನನ್ನನೇ ನೋಡುತಾ ಬಳಕುತ ನುಲಿತಿ…!
ಮನಸಿಗೆ ತಳಮಳ ಮಾಡೇ ಬಿಡುತಿ,
ನೀನೇ ಅಲ್ಲವೆ ಭಾವಿ ಒಡತಿ…!!
ದಿನಾಲು ರಾತ್ರಿ ಕನಸಲಿ ಬರುತಿ,
ಸತಾಯಿಸ್ತಿಯಲ್ಲೇ ನನ್ನ ಮುತ್ತಿ ಮುತ್ತಿ…!
ಸಂಜೆ ಹೊತ್ತಲಿ ಒಬ್ಬಳೆ ಸಿಗುತಿ,
ನಿನ್ನ ಸೇರುವಷ್ಟರಲ್ಲೆ ಹೊರಟೇ ಬಿಡುತಿ…!!
ಯಾಕೆ ಇಷ್ಟು ನನ್ನಾ ಕಾಡುತಿ,
ಅಪ್ಪಿಕೊಳ್ಳು ಬಾರೇ ಒಂದು ಸರತಿ…!
ಕೇಳೆ ನನ್ನ ಜೀವದ ಗೆಳತಿ,
ಆಗುವೆಯಾ ನನ್ನ ಬಾಳ ಸಂಗಾತಿ…!!
- Acchu love
28 May 2017, 03:00 pm
ಅದು ಏಷ್ಟೂ ಭಾವನೆಗಳು ಕ್ಷಣ-ಕ್ಷಣಕು ಕಾಡುತ್ತೀದವು.
ಅದು ಏಷ್ಟೊ ಬಯಕೆಗಳು ನಗುತ್ತಾ ನಿಂತಿದವು.
ಅದೇನೆನೂ ಕನಸ್ಸುಗಳು ಕಣ್ಣಲ್ಲಿ ಮಿಂಚಾಗಿದವು.
ಅದು ಏಷ್ಟೋ ಮುನಿಸ್ಸುಗಳು ಸಾಲಾಗಿಕಾಯುತ್ತೀದವು.
ಅದು ಏಷ್ಟೋ ಹಠಗಳುˌ ಕಣ್ಣೀರಿನ ಕವನಗಳುˌ ಸಮರ್ಥನೆಗಳು.ತುಂಟಾಟಗಳು.........
ಅದು ಯಾವ ಬಿರುಗಾಳಿ ಬಿಸಿತ್ತೂ ಮನವೇಲಾ ಬರಿದಾಗಿದೆ.
ಮನಸ್ಸೇಲಾ ಖಾಲಿ-ಖಾಲಿ .........
ನನ್ನಗೆ ತಿಳಿಯದೆ ಮನಸ್ಸು ಸತ್ತು ಗೋರಿ ಎಂದು ಸೇರಿತೋ ನಾ ಕಣೆ!
ಸತ್ತಿರೂ ಮನಸ್ಸಲ್ಲಿ ಭಾವನೆಗಳು ಹುಟ್ಟೂಕೆ ಹೇಗ ಸಾಧ್ಯೆ!
Lacchu.d.s
- Lacchu
28 May 2017, 12:31 pm
ಹೆಲೊ ಹೆಲೊ ನೀನೆ ನನ್ನ ಮುದ್ದು ರನ್ನ
ಓಡಿ ಬಂದು ಅಪ್ಪಿಕೊ ಬಾರದೆ ಒಮ್ಮೆ ನನ್ನ
ಬಂದಿರುವೆನು ನಾನು ನಿನ್ನ ಹೃದಯಕ್ಕೆ ಹಾಕಲೆಂದು ಕನ್ನ
ತೋರು ಬಾರೆ ನಿನ್ನ ಮನಸಿನ ಮನೆಗೆ ದಾರಿಯನ್ನ
ನೀ ಮಾಡಿರುವೆ ಮನಸನ್ನು ಬಲೂನನ್ನ
ನಾ ತುಂಬಿರುವೆ ಪ್ರೀತಿಯ ಗಾಳಿಯನ್ನ
ಒಪ್ಪಿ ಬಂದು ಹಾರಿ ಬಿಡು ನನ್ನ ಹೃದಯವನ್ನ
ಒಡೆದಾಕ ಬೇಡ ನೀ ಚುಚ್ಚಿ ಗುಂಡುಪಿನ್ನ
ಯಾಕೆ ಇನ್ನು ನಿನ್ನದು ಇಂತ ದಿವ್ಯಮೌನ
ಇರಬಹುದೆ ನಿನಗೆ ನನ್ನ ಮೇಲೆ ಅನುಮಾನ
ನಾನು ತುಂಬಾನೆ ಒಳ್ಳೆ ಹುಡುಗ ಚಿನ್ನ
ಒಮ್ಮೆ ಕೇಳಿ ಬಾ ಊರಲ್ಲಿರೊ ಎಲ್ಲರನ್ನ
ಹಿಂದೆ ಬಿದ್ದಿರುವೆ ವರಿಸಲೆಂದೆ ನಿನ್ನ
ಒಪ್ಪಿಗೆ ಕೇಳಿ ಬರೋಣ ನಿನ್ನ ಅಪ್ಪ ಅಮ್ಮನ್ನ
ಬುಕ್ ಮಾಡಿರುವೆ ಕಲ್ಯಾಣ ಮಂಟಪವನ್ನ
ನಾ ಕಟ್ಟಿ ಬಿಡುವೆ ಈಗಲೆ ತಾಳಿಯನ್ನ
- ಶ್ರೀಕಾವ್ಯ
28 May 2017, 11:28 am
ಜಡಿ ಮಳೆ ಧರೆಗಿಳಿದು ಬಂದಿದೆ
ಘಲ್ಲು ಘಲ್ಲೆಂದು ಸದ್ದು ಮಾಡುತ್ತಾ......
ಸುಮಧುರ ಸಂಗೀತವ
ಹೊತ್ತು ತಂದಿದೆ ತನು ಮರೆಸಲು......
ಅನುಕಂಪದ ಮಳೆ ಬಂದಿದೆ
ಭುವಿಗೆ ಬರಗಾಲ ಓಡಿಸಲು .......
ಸೊಗಸಾದ ಮಂದಹಾಸವ ಎಲ್ಲರ
ಮುಖದಲ್ಲಿ ತುಂಬಿ ಹೋಗಳು........
ಬೆಳೆಗಳಿಗೆ ಮಳೆಗಾಗಿ
ಗಗನಕ್ಕೆ ಕೈಚಾಚಿ ಕುಳಿತಿದ್ದ
ರೈತನ ಹೊಟ್ಟೆ ತುಂಬಿಸಲು
ಬಂದಿದೆ ಅವಣಿ ಗೆ ಜಡಿಮಳೆ......
ತಲೆಮೇಲೆ ಸೆರೆಗೊತ್ತು ನೀರಿಗಾಗಿ
ಅಲೆದಾಡಿದ ಹೆಣ್ಣು ಮಗಳ
ಕಷ್ಟ ನೋಡಲಾಗದೆ ಬಂದಿದೆ
ಜಡಿಮಳೆ ಕೆರೆಗಳಿಗೆ ನೀರು ತುಂಬಲು......
ಸೂರ್ಯನ ಶಾಖಕ್ಕೆ ಮೊಡದಲ್ಲಿ
ಅಡಗಿದ್ದ ಜಲವನ್ನು ಪೃಥ್ವಿಯ
ಮಡಿಲು ಸೇರಿಸಲು ಬಂದಿದೆ
ಮುಂಗಾರು ಮಳೆ ನೂತನ ಆಸೆಗಳೊತ್ತು..........
- ಚುಕ್ಕಿ
28 May 2017, 10:13 am
ನಿನ್ನ ಮರಿಯಲು
ಮನಸನ ಕಲ್ಲು ಮಾಡಿದೆ
ಆದರೆನ್ನು ಮಾಡಲಿ ಗೆಳ್ತಿ
ಆ ಕಲ್ಲೇ ಶಿಲೆಯಾಗಿ
ಅದರ ಮುಖವೆ ನಿನ್ನದಾದರೆ
ಹೇಗೆ ಮರೆಯಲಿ ನಾ ನಿನ್ನ.....
- ಜ್ಯೋತಿ
28 May 2017, 09:02 am
ನನ್ನದೆಂಬ ಆತ್ಮಕೊಟ್ಟ ಭಗವಂತ
ದೇಹ ನನ್ನನ್ನೆತ್ತ ಪರಕಿಯರಿದೆಂದು ತಿಳಿಸಿಬಿಟ್ಟ.
ಸ್ವಾತಂತ್ರ್ಯವಿಲ್ಲದೇ ನನ್ನೊಳಗೆ ನಾ ನೊಂದುಕೊಳ್ಳುವ ಹಣೆ ಬರಹ ಬರೆದಿಟ್ಟ.
ಜ್ಯೋತಿಯ ಕೈಗಿಟ್ಟು ಇತರರ ಜೀವನ
ಬೆಳಗಿಸುವುದನ್ನು ಕಳಿಸಿಕೊಟ್ಟ.
ಅದೇ ಜ್ಯೋತಿಯನ್ನು ನನ್ನ ಜೀವನದವೆಂಬ
ಸಿರಿವನದ ತುದಿಯಲಿಟ್ಟು ಕಾಡ್ಗಿಚ್ಚಾಗಿ ಬಡಳಿಸಿಬಿಟ್ಟ.
ಸದಾ ನಿನ್ನ ನೆರಳಲ್ಲೇ ಇರುವೆನೆಂದು
ಮಾತುಕೊಟ್ಟ ಇರುಳುಬಂದು
ಸೇರುವಷ್ಟರಲ್ಲಿ ನನ್ನ ಮರೆತುಬಿಟ್ಟ.
ಕನಿಷ್ಠ ಕನಸಲ್ಲಾದರು ನಗು ಎಂದು
ವರವಕೊಟ್ಟ ನೋವಿಲ್ಲದೆ ನಗುವಷ್ಟರಲ್ಲಿ
ಬೆಳಕರಿಸಿ ಬಿಟ್ಟ.
- ಚುಕ್ಕಿ
28 May 2017, 06:37 am
ಎಷ್ಟು ಸುಂದರ ಸೃಷ್ಟಿ
ಪ್ರಕೃತಿ ದೇವತೆಯ ತಿಲಕ
ವಜ್ರಮೋಡದಿಂದುದುರುವ
ಮುತ್ತಿನ ಹನಿಯ ಮಾಲೆ..!!!
ಎಲ್ಲಿ ಒಮ್ಮೆ ಎಲ್ಲರೂ
ಚಪ್ಪಾಳೆ ತಟ್ಟಿ!!
ಮಳೆ ಹನಿಗಳು ಆಯೋಜಿಸಿರುವ
ಮೇಳಕ್ಕೆ..!!
ಭಾನು ಭೂಮಿಯ
ಪ್ರೇಮಾಂಕುರದ ಸಂಕೇತ,
ಚುಂಬಿಸಿ ಚಿಮ್ಮುವ
ಪುಳಕದಲೇನೋ ರೋಮಾಂಚನ..!!
ದಿಟ್ಟಿಸಿ ನೋಡಿರೊಮ್ಮೆ,
ವೃಕ್ಷಕ್ಕೆ ನೆತ್ತರ ನೀಡುವ ಪರಿ,
ಚಿಗುರುಗಳ ಚೈತನ್ಯ ಬಿಂದು,
ರೈತಭಂದು..!!
ಮಳೆ ಹಾಡುವ ಸುಪ್ರಭಾತಕೆ
ಎಲೆಗಳ ನಿದ್ರೆಯು ಹಾರಿ,
ತುದಿಯಲಿ ಹನಿಯ ತೊಟ್ಟುಗಳು ಜಾರಿ,
ಶುರು ಮಾಡುವವು ಆಮ್ಲದ ತಯಾರಿ..!!
-ಕನ್ನಡ ಭಕ್ತ
- ಕನ್ನಡದ ಭಕ್ತ
28 May 2017, 01:11 am