Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾದಿರುವೆ ನಿನಗಾಗಿ...!!!

ಏನು ನೆನೆಯಲಿ ಏನು ಬರೆಯಲಿ,
ಕನವರಿಸಿ ನಾ ಕೊರಗುತಿರುವೆ,
ನೀ ನೆನಪಾದಗಲ್ಲೆಲ್ಲ,
ಒಂದೊಂದು ಕವನವಾಗುವೆ
ಅರಿವೇ ಇಲ್ಲದ ಮೂಕ ಮನಸಿನಲಿ
ನನಸಾಗಿಸು ನನ್ನೆಲ್ಲ ಕನಸು
ಸಿಹಿಮುತ್ತುಗಳ ಮಳೆಸುರಿಸು
ಸಾಕಾಗಿದೆ ಈ ಬದುಕಿನ ಸಂಘರ್ಷ ..
ಕ್ಷಣ ಕ್ಷಣವೂ ಬೇಕಾಗಿದೆ ನಿನ್ನ ಹಿತ ಸ್ಪರ್ಶ
ಮನವೆಲ್ಲ ನಿನ್ನ ನೆನಪಿನಲೆಯ ತೊಯ್ದಾಟ..
ಕೊನೆಗೊಳಿಸು ಈ ಕಹಿ ವಿರಹದ ಪರದಾಟ.. ಇದೆಲ್ಲವೂ ಸಾಕಾಗಿದೆ ಓ ಹೃದಯ
ನನ್ನೆ ನಾ ಮರೆತು ನೀನಾಗಿರಲು
ಕೊನೆವರೆಗೂ ನಿನ್ನ ಜೊತೆಯಾಗಿರಲು.
ಕಾದಿರುವೆ ನಿನಗಾಗಿ ಓ ಹೃದಯ

- Pb

02 Jun 2017, 05:18 pm

ಕನ್ನಡಿಗರು

ಕನ್ನಡಿಗರು ನಾವು ಕನ್ನಡಿಗರು
ಎಂದೆಂದೂ ಬದಲಾಗದವರು
ಕನ್ನಡಿಗರು.
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದರಿತವರು ನಾವು
ಕನ್ನಡಿಗರು.
ಕರುನಾಡಿನ ಕುಡಿಗಳು ನಾವು.

- nagalingesha

02 Jun 2017, 03:55 pm

ಕಳೆದುಹೋದೆ ನೀ..

ನಿನ್ನ ಕೆಂದುಟಿಯ ಅಂಚಲಿ
ಅಡಗಿದೆ ಕಿರುನಗೆಯ ಚುಂಬಕ
ಕೆನ್ನೆ ಕುಳಿಯ ಸುಳಿಗೆ ಸಿಲುಕಿ
ದಿಕ್ಕು ತಪ್ಪಿದೆ ಮನದ ನಾವೆಯು

ಕ್ಷಣ ಕಲೆತ ಕಣ್ಣ ನುಡಿಗೆ
ಎದೆಯ ಗೂಡ ಮಿಡಿತ ಹೆಚ್ಚಿ
ಧಮನಿ ಹಿಗ್ಗಿ ನರಳಿದೆ
ಪ್ರೀತಿ ಹರಿವ ರಭಸಕೆ

ಮೊದಲ ನೋಟದ ಒಲವಲಿ
ಮೈಮರೆತೆ ಅದರ ಗುಂಗಲಿ
ಎಚ್ಚೆತ್ತ ಕ್ಷಣಕೆ,ತಿರುಗಿ ನೋಡಲು
ಕಳೆದುಹೋದೆ ನೀ...
ಗಡಿಬಿಡಿ ಸಂಚಾರದ ಸಂತೆಪೇಟೆಯಲಿ

- Indushekar Chinivar

02 Jun 2017, 10:39 am

ಸನಿಹ ಸೇರುತ್ತಿಲ್ಲ..........

ಮರೆಯಾದ ಮುಗುಳ್ನಗೆ ಎಷ್ಟು
ಹುಡುಕಿದರೂ ನನ್ನ ಸನಿಹ ಸೇರುತಿಲ್ಲ.........

ಕಣ್ಣಿಂದ ಜಾರಿದ ಕಂಬನಿಯು
ಮತ್ತೆ ನನ್ನ ನೋವಲ್ಲಿ ನಲಿವಾಗಿ ಸನಿಹ ಸೇರುತಿಲ್ಲ...........

ನಿನ್ನ ಒಲವಿನ ಜೊತೆಗೂಡಿ ನಾಲಿದಾಡಿದ
ಮನಸು ನೀನಿಲ್ಲದೆ ಮತ್ತೆ ನನ್ನ ಸನಿಹ ಸೇರುತಿಲ್ಲ.........

- ಚುಕ್ಕಿ

02 Jun 2017, 10:25 am

ಕವಿತೆ ಜನಿಸಿದೇ

ಒಲವ ಪುಟದಲಿ ಕವಿತೆ ಜನಿಸಿದೇ
ಹೃದಯಕೇ ನವಿರಾದ ಭಾಷೆಯ ಕಲಿಸಿದೇ
ಬರೆಯಬೇಕಿದೆ ಪ್ರೇಮದ ಭಾಷೆಯ
ಪ್ರಾಸ ಪಲ್ಲವಿಯ ಆನುವಾದದಲಿ

ಹೊಸಬಗೆಯ ಮಿಡಿತಕ್ಕೊಂದು
ಚರಣ ಪದ ಪ್ರಾಸವ ಬರೆದಂತಿದೇ
ಅವಳ ಭಾವ ಭಂಗಿ ನಗುಮೊಗ
ಕವಿತೆಗೆ ನವಭಾವದ ಚಿಗುರಂತಿದೇ

ನಾ ಬರೆದಂತೆ ಕವಿತೆ ನಿನ್ನದೇ ನೆನಪುಗಳಲಿ
ಅದು ಹೇಗೊ ಅಕರ್ಷಕ
ಕಂಗಳ ನೋಡುತ ಬರೆದ ಕವನ ಸ್ವಾಭಾವಿಕ
ನಿನ್ನದೇ ಹೆಜ್ಜೆಗಳ ಹಿಂಬಾಲಿಸಿ ಬರೆವ
ಈ ಕವಿ ನಿನಗೇ ಅನಾಮಿಕ

ಸುಪ್ರೀತ್ ಕಂಚಿಬೈಲ್

- ಸುಪ್ರೀತ್ ಕ೦ಚಿಬೈಲ್(ಸುಕ)

02 Jun 2017, 10:06 am

ಸಂಗೀತ ಕೈ ಹಿಡಿಯಿತು ನನ್ನ ಬದುಕಲಿ

*ನೆನಪಿನ್ ಮೋಡದಲಿ ಮಳೆ ಹನಿಗಳ ಆಗಮನ*
*ಕೈ ಚಾಚಿ ಕೇಳಿದೆ ಒಲವಿನ ಛಾವಣಿಯ ಬೇಡಿಕೆಯಾ*

*ಬೇಡಿಕೆಯನಿಗಿಸೋ ನೆಪದಲ್ಲಿ*
*ನೋವಿನ* *ಕೊಡೆಯ ಬಳುವಳಿಯಾಗಿ*
*ಹೊಮ್ಮಿತು ನನ್ನ ಮನದ ಸಾಲಿನ ಕೂಟದಲ್ಲಿ*

*ಈ ಇಳಿ ಸುಡೋ ಬಿಸಿಲಲಿ ಸನಿಹದಲ್ಲಿ*
*ಸತ್ತು ಸ್ವರಗಿರುವ ಸಮಯದಿ*
*ಸ್ವರ ಸಂಗೀತವೇ ಕೈ ಹಿಡಿಯಿತು*
*ನನ್ನ ಮನದ ಮನೆಯಲಿ*

    ✍✍ *ಪ್ರದೀಪ*✍✍

- ಪ್ರದೀಪ.ಮ.ಪಾಡಮುಖೆ

02 Jun 2017, 09:15 am

ಹನಿ..

ಮುಂಜಾವಲಿ
ನಿನ್ನ ಕೆನ್ನೆ ಕೆಂಪ
ರವಿ ಕದಿಯಲು
ಯತ್ನಿಸಿದ ಬೆಳಗು...

- Indushekar Chinivar

02 Jun 2017, 07:06 am

ಶಶಿಯ ಮನದರಸಿ

ರೋಹಿಣಿಯ ಸೊಗಸಿಗೆ ಮನಸೋತ
ಶಶಿಯೂ ಮಾತಿಲ್ಲದೆ ಕೇಳಿದನು ಅವಳನ್ನು
ಮದುವೆಯಾಗುವೇನೆಂದು............

ಚಂದಿರನ ಚೆಲುವಿಗೆ ಮರುಳಾಗಿ
ರೋಹಿಣಿ ಕೊಟ್ಟಳೊಂದು ಮಾತನು
ಈ ಕ್ಷಣದ ಅಂತ್ಯದಿಂದ ನಾನಿನ್ನವಳು ಎಂದು.......

ಕುತೂಹಲದಿಂದ ಆ ಚಂದಿರ ಕೇಳಿದನು
ಈ ಕ್ಷಣದ ಅಂತ್ಯದಲ್ಲಿಂದ ಏತಕೆ ನನ್ನವಳು
ಆದಿಯಲ್ಲೇ ಅಗಬಹುದಲ್ಲ ಎಂದನು.........

ಇದುವರೆಗೂ ನನ್ನ ಅಂದಕೆ ಮನಸೋತ
ರಾಜರನ್ನೆಲ್ಲ ಮನದ ನೆನಪಲ್ಲೂ ಉಳಿಸದೆ
ತಗದಾಕಬೇಕಲ್ಲವೇ ನಿನ್ನವಳಾಗಬೇಕಾದರೆ
ಎಂದಳು ಆ ಶಶಿವಧನೆ ರೋಹಿಣಿಯು...........

ಕಲ್ಪನೆಯಲ್ಲೂ ಕಾಣಲು ಸಾಧ್ಯವಿಲ್ಲದ
ಮಾತನ್ನು ಕೇಳಿ ಶಶಿಯೂ ಅವಳ ಪ್ರೀತಿಗೆ
ಶರಣಾದನು.......

ಸ್ವಾರ್ಥವಿಲ್ಲ ಪ್ರೀತಿಯ ಕಂಡ ಕರಗಿದ
ಚಂದಿರನು ನೊಂದು ಅಳುತ್ತಿರುವ
ರೋಹಿಣಿಯ ಕೈಹಿಡಿದು ಸಂತೈಸಿ
ನಸು ನಕ್ಕಿ ಮಾಡಿಕೊಂಡನು ಅವಳನ್ನು
ತನ್ನ ಮನದರಸಿಯಾಗಿ...........

- ಚುಕ್ಕಿ

02 Jun 2017, 01:43 am

ಚಂದಿರನೂ ಬರುವನು ನೋಡಲು‌ ನಿನ್ನ...

ಆ ಚಂದಿರನೂ ಬರುವನು ನೋಡಲು ನಿನ್ನ
ಹೊಟ್ಟೆಹುರಿ ಪಡುವನು ನೋಡಿ ನಿನ್ನ ಕಾಂತಿಯನ್ನ‌
ಅವನು ನಾಚಿ ನೀರಾಗುವನು ನೋಡಿ ನಿನ್ನ
ಕೊಡದಿರೆ ಯಾರಿಗೂ ನಿನ್ನ ನಗುವಿನ ಸಾಲನ
ಬಾಡಿಸದಿರು ನಿನ್ನ ಚೆಲುವಿನ ನಗುವನ್ನ
ಮುಗ್ದ ನಗುವಿಗೆ ನನ್ನೆ ಮರೆತೆನು ನಾ
ಮಾಡು ನಿನ್ನ ಮನಸನ್ನು ಜೋಪಾನ
ಮರೆಯದಿರೆ ನಿನ್ನೊಳಗಿರುವ ಮನಸಿನ ಮಗುವನ್ನ
ಮಗುವ ಮನಸ ನೋಡಿ ಪ್ರೇಮಿ‌ಯಾದೆನ
ಆ ಮುಗ್ಧತೆಯ ಚೆಲುವಿಗೆ ಯಾರಿಲ್ಲ‌ ಸರಿಸಾಟಿ ಚಿನ್ನ
ಮುಗ್ಧ ಸ್ನಿಗ್ಧ ಚೆಲುವಿಗೆ ಸೋತು ಸೇರಿದೆ ನಾನು ನಿನ್ನ
ನಿನ್ನಲ್ಲದೆ ನಾನೆನನು ಬೇಡೆನು ಆ ದೇವರನ್ನ
ನನ್ನ‌ ಕನಸಲೂ ಸದಾ‌‌ ನಿನ್ನದೆ‌ ಧ್ಯಾನ
ಕೊಡೆವೆಯ ನಿನ್ನ ಕನಸಿಗೆ‌ ಸೇರಲು ಅನುಮತಿಯನ್ನ
ಆ ಮೊದಲು ನೀ ಸೇರೆ ನಿದ್ರಾದೇವಿಯ ಮಡಿಲನ್ನ
ನೀ ಮಗುವಂತೆ ಮಲಗಿರುವದ ನೋಡುವುದೆ ಚೆನ್ನ
ಹೇಳೆ ಸಿಹಿಗನಸಿಗೆ ಜಾರುವ ಮುನ್ನ
ಬಂದೆ ಬರುವೆನು‌ ಕನಸಲಿ‌ ನೋಡಲು ನಿನ್ನ
ಕೊಡುವೆಯ ‌ಕನಸಲಿ ಬರಲು ಒಪ್ಪಿಗೆಯನ್ನ

- ಶ್ರೀಕಾವ್ಯ

01 Jun 2017, 10:06 pm

ಹನಿ..

ಮುಂಗಾರಿನ ಸಿಂಚನಕೆ ನೀರಾದ
ನಿನ್ನ ಮುದ್ದು ಗಲ್ಲವ
ಬೆಚ್ಚನೆ ಕರಗಳಲಿ ನೇಸರ
ತಾಕಿದ ಸಂಜೆ...

- Indushekar Chinivar

01 Jun 2017, 05:50 pm