Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಲ್ಪನೆಯ ಪ್ರೀತಿ

ನೀನು ನನ್ ಹತ್ರ ಮಾತಾಡಿದ್ರು,
ಮಾತಾಡಿಲ್ಲ ಅಂದ್ರು
ತುಂಬಾ ವ್ಯತ್ಯಾಸ ಏನು ಆಗೋದಿಲ್ಲ,
ಯಾಕಂದ್ರೆ ನಿನ್ ಜೊತೆ ಮಾತಾಡಿದ್ದಕ್ಕಿಂತ,
ಕಲ್ಪನೆಯಲ್ಲಿ ನಿನ್ನ ಊಹಿಸಿ ಕೊಂಡಿದ್ದೆ ಹೆಚ್ಚು,
ವಾಸ್ತವ ಏನು ಅಂತ ನನಗೆ ಗೊತ್ತಿದೆ..
ಆದ್ರೆ ಈ ಕಲ್ಪನೆ
ನನಗೆ ತುಂಬಾ ಸಂತೋಷಗಳನ್ನ ಕೊಟ್ಟಿದೆ
ಕಾರಣ ಅಲ್ಲಿ ಪ್ರೀತಿ ಮಾತ್ರ ಇರುತ್ತೆ...

✍️ ತನುಮನಸು

- Tanuja.K

11 Jun 2024, 10:28 pm

ಶಿವರಾತ್ರಿಗೆ ಮದ್ವೇ ಆಗೋಣ....

ಇನ್ನೇನು ಮೋದಿಜಿ ಅವರ ಪ್ರಮಾಣವಚನ ಮಾಡೊದು ಮುಗಿಯಿತು,
ನನ್ನ ನಿನ್ನ ಈ ವಿರಹದ ಪ್ರೀತಿಯನ್ನು ಸ್ವಲ್ಪ ಬದಿಗಿಟ್ಟು ಮನೆಯವ್ರನ್ನ ಒಪ್ಸೋಣ...!
ಅಮ್ಮನಿಗೆ ಹೇಳಿ ನನ್ನ ನಿನ್ನ ಜಾತಕ ತೆಗೆಯಿಸ್ತಿನಿ,
ಪಂಡಿತರನ್ನ ಪ್ರೀ_ಬುಕ್ ಮಾಡ್ಸಿ ಬರೋ ಶಿವರಾತ್ರಿಗೆ ಇಬ್ರು ಸಾಮುವಿಕ ಮದ್ವೇ ಆಗೋಣ...!!!
ಎಮ್.ಎಸ್.ಭೋವಿ...✍️

- mani_s_bhovi

10 Jun 2024, 06:45 pm

ಮಡಿಲು ನೀಡು

ಯಾರಲ್ಲೂ ಏನು ಬಯಸದವಳು ನಾನು ..
ನಿನ್ನ ಪ್ರೀತಿಗಾಗಿ ಹಂಬಲಿಸಿರುವೆನು ..
ಸಾಕಷ್ಟು ನೋವಿಗಳಿವೆ
ಒಮ್ಮೆ ಮಡಿಲು ನೀಡು ..
ಮನಸು ಹಗುರಾಗುವಂತೆ ಅಳಬೇಕಿದೆ
ಒಮ್ಮೆ ಬಿಗಿದಪ್ಪಿಬಿಡು ..
ಏನಿದ್ದರೇನು? ನೀ ಇಲ್ಲದಿರುವಾಗ
ನೀನೊಬ್ಬ ಸಾಕು ಜಗವನೆ ಮರೆಯುವೆ ನಾನಾಗ..
..
..

✍️ತನುಮನಸು

- Tanuja.K

09 Jun 2024, 09:55 pm

ನಾನೀಗ ಅವಳವನಲ್ಲ....

ನಾನು ಪ್ರತಿಬಾರಿ
ಹಾರೈಸುವ ಹಾಗೆ,
ನಗುವೆಲ್ಲವು ನಿನ್ನದಾಗಲಿ!,
ದುಖಃವೇನಿದ್ದರು ನನಗಿರಲಿ!,
ನನಗೆ ಪ್ರತಿಬಾರಿ
ಅನಿಸುವ ಹಾಗೆ,
ನಿನ್ನೊಳಗಿರುವ ಪ್ರೀತಿಯ
ನಿನ್ನವನೆ ಮರೆಸಲಿ...!
ನನ್ನೊಳಗಿರುವ ಪ್ರೀತಿಯು
ನನ್ನಲ್ಲಿಯೇ ಮಣ್ಣಾಗಲಿ..!!
ಎಮ್.ಎಸ್.ಭೋವಿ...✍️
.
.
.
.
.
.
.
.
..
..............

- mani_s_bhovi

09 Jun 2024, 01:05 pm

ನಮ್ದು ಒಂದು ಗಂಡು ಜನ್ಮ...

ಮಾರ್ಕೆಟ್ನಲ್ಲಿ ಕೋತ್ತಿಮರಿ ಸೊಪ್ಪಿಗೆ
ಮರ್ಯಾದೆ ಐತೆ,
ಥೂ! ನಮ್ಮ ಈ ಗಂಡು ಜನ್ಮ ಇಟ್ಕೊಂಡು ಎನ್ಮಾಡೋದು ನೀವೇ ಹೇಳಿ.
ಮಾತಡ್ಸಿದ ಹುಡುಗಿಯರೆಲ್ಲ
ಅಣ್ಣಾ ಅಂತ ಕರಿತಿದ್ರೆ, ಅದೆನೋ ಅಂತಾರಲ್ಲ,
ಡಿಪ್ಲೋಮೇಶನಗೆ‌ ಹೊಗ್ಬಿಟ್ರೆ,
ಏನ್ಮಾಡೋದು! ನೀವೆ ಹೇಳಿ...
ಎಮ್.ಎಸ್.ಭೋವಿ...✍️
.
.
.
.

- mani_s_bhovi

07 Jun 2024, 11:58 pm

ಬದುಕು

ಒಮ್ಮೆ ಸೋತಂತಿದೆ ಬದುಕು,
ಮತ್ತೂಮ್ಮೆ ಗೆಲ್ಲ ಬೇಕಿದೆ, ಗೆದ್ದೇ ಗೆಲ್ಲುವೆ,
ಜೀವನ ಈಗ ಬರಿದಾಗಿದೆ ,ಬಂದೆತೆ ಸ್ವೀಕರಿಸುವೇ,
ಏಕಾಂಗಿಯಾಗಿ ಬದುಕುವೆ,ಮತ್ತೆ ಗೆಲ್ಲುವೇ,ಮಗದೊಮ್ಮೆ ಗೆಲ್ಲುವೆ,ನನ್ನ ನಂಬದವರ ಮುಂದೇ,ನನ್ನ ಪ್ರೀತೀಸ ದವರ ಮುಂದೆ,ನನ್ನ ನೋಡಿ ನಸು ನಕ್ಕವರ ಮುಂದೆ,
ಗೆದ್ದೇ ಗೆಲ್ಲುವೆ ಒಂದು ದಿನಾ...

ಬಾಲಾಜಿ . ಜಿ

- Balaji

07 Jun 2024, 10:56 pm

ಮನವಿ

ಮನಸ್ಸಿನಲ್ಲಿ ಮನೆಯ ಮಾಡಿ
ಮನೆಯಲ್ಲಿ ದೀಪ ಬೆಳಗಿ
ನನ್ನ ಬಾಳು ಬೆಳಗಿದ ನನಗೆ
ಇದು ನಾನು ಹೇಳಿದೆ ಪ್ರೀತಿಯ ವಂದನೆ

ಕಷ್ಟಗಳನ್ನು ಕಂಡು ಕೂರಗಿದ್ದ ಮನಸ್ಸಿಗೆ
ನಿನ್ ಕಂಡ ಪ್ರೀತಿಯ ಸುಪ್ಪತ್ತಿಗೆ
ಕಷ್ಟ ಸುಖದಲ್ಲಿ ಜೊತೆ ಇರುವ ಎಂದಿಗೂ ಹೀಗೆ
ಬಯಸುವುದು ಈ ಜೀವ ಇರಲು ಎಂದಿಗೂ ನಿನ್ನೊಟ್ಟಿಗೆ

ಅಪ್ಪ ಅಮ್ಮನ ಪ್ರೀತಿ ಕೊಟ್ಟೆ ನೀನು
ನಿನ್ನ ಕಂಡು ಬೆರಗಾದೆ ನಾನು
ಮಗುವಿನಂತೆ ಹಾರೈಸಿದೆ ನನ್ನ
ನಾನಿರಲಾರೆ ಬಿಟ್ಟು ನಿನ್ನ

ಕಣ್ಣಿನ ಕಂಬನಿಯು ಮರೆಯಾಗಿದೆ ನಿನ್ನ ಪ್ರೀತಿಯಿಂದ
ಹೃದಯ ತುಂಬಿ ಬಂದಿದೆ ಸಂತೋಷದ ಛಾಯೆ ನಿನ್ನಿಂದ
ಇದೊಂದು ಕನಸಾಗದೆ ಇರಲಿ ಎಂದೆಂದಿಗೂ ನಿನ್ನ ಸಾಗಲಿ
ನನ್ನ ಪ್ರೀತಿಯ ಹುಡುಗ ಇದೇ ನನ್ನ ಆಶಯ ಇರಲಿ ನಿನ್ನ ಶುಭಾಶಯ

- RoopaGowtham

07 Jun 2024, 04:41 pm

ಹಚ್ಚ ಹಸಿರಾದ ಪ್ರಕೃತಿಯಲ್ಲಿ
ಹೊಚ್ಚ ಹೊಸದಾದ ಚಿಗುರು ಕಂಡೆ
ಪಚ್ಚ ಮಲ್ಲಿಗೆಯ ಪರಿಮಳ
ಸ್ವಚ್ಚ ಗಾಳಿಯಲ್ಲಿ ಬೆರೆತು
ಮುಚ್ಚಿದ ಮನವ ತೆರೆಯಿತು

- ashwini pujar

07 Jun 2024, 04:18 pm

❤️ ನನ್ನವನು❤️

ನನ್ನವನು ನನಗಾಗಿ ಏನು ಬೇಕಾದರೂ ಮಾಡುವವನು
ನನಗಾಗಿ ಬದುಕುವವನು
ನನ್ನ ಖುಷಿಗೆ ಕಾರಣವಾದವನು
ನನ್ನ ಉಸಿರಿಗೆ ಉಸಿರಾದವನು
ನನ್ನ ಬದುಕಿಗೆ ಬೆಳಕಾಗುವವನು
ನನ್ನ ಪ್ರೀತಿಗೆ ಪಾತ್ರರಾದವನು
ನನ್ನ ಹೃದಯದ ಸಾರಥಿಯಾಗಿ
ನನ್ನೊಂದಿಗೆ ಸದಾ ಇರುವವನು
ನನ್ನವನು......... ನನ್ನವನು........
ನಾ ಮೆಚ್ಚಿದವನು......❤️❤️
 

- ashwini pujar

07 Jun 2024, 04:14 pm

ಹೇ ಪ್ರಕೃತಿ ಜಗದಲ್ಲಿ ಯಾರಾದರೂ....

ಹೇ ಪ್ರಕೃತಿಯೇ ಸೋತಿದೆ ನನ್ನ ಮನ
ನಿನ್ನ ಸೌಂದರ್ಯದ ಸೊಬಗ ಕಂಡು
ನಾಚಿ ನೀರಾಗಿದೆ ನನ್ನ ತನು
ನಿನ್ನ ವೈಯಾರದ ಬೆಡಗ ಕಂಡು
ಸಕಲ ಜೀವರಾಶಿಯ ತಾಯಿಯೇ
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
 
ಮುಂಜಾನೆಯ ಮಂಜಿನಲ್ಲಿ
ತಂಪು ಗಾಳಿಸುಳಿದಾಗ
ಚಿಗುರಿದ ಎಲೆಗಳ ಹಸಿರಿನ ಮಡಿಲಲ್ಲಿ
ಹಕ್ಕಿಗಳ ಚಿಲಿಪಿಲಿ ಕಲರವ ಕಂಡು
ಸೋತಿದೆ ನನ್ನ ಮನ ಇಂದು
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
 
ಹರಿಯುವ ನದಿಯ ಜುಳು ಜುಳು ನಾದದಿಂದ
ಸಪ್ತ ಸ್ವರಗಳು ಹೊರಹೊಮ್ಮುವಂತೆ
ಎಲ್ಲೆಲ್ಲಿಯೂ ಹಸಿರು ಸೆರಗನ್ನು
ಹೊದಿಕ್ಕೆಯಾಗಿ ಮಾಡಿಕೊಂಡು
ವೈಯಾರದಿಂದ ನಾಚಿನಲಿಯುತ್ತಲಿರುವೆ
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
 
ಬಣ್ಣ ಬಣ್ಣ ಹೂಗಳ ರಾಶಿ
ವಿಧವಿಧ ರೀತಿಯಲ್ಲಿ ಮೈತಳೆದು ನಿಂತು
ಘಮ ಘಮ ಸುವಾಸನೆಯಿಂದ
ಜಗವೆಲ್ಲ ಕನಸಿನ ಲೋಕಕ್ಕೆ ಕರೆದೊಯ್ಯುವ
ಯಕ್ಷ ಕಣ್ಣಿಕೆಯಂತೆ ಇರುವ
ಹೇ ಪ್ರಕೃತಿ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
 
ನಿನ್ನ ಮಡಿಲಿನಲ್ಲಿ ಸಕಲ
ಜೀವರಾಶಿಗೆ ಆಶ್ರಯ ನೀಡಿದವಳೇ
ಭೇದಭಾವ ಮಾಡದೆ ಒಂದೇ ರೀತಿಯಲ್ಲಿ
ಕಾಣುವ ಗುಣ ಸ್ವಭಾವದವಳೇ
ತಾಯಿ ಮಕ್ಕಳನ್ನು ಸಲಹುವಂತೆ ಸಲಗುತ್ತಿರುವ
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
 
ಮನುಕುಲವು ನಿನ್ನ ನಾಶಕ್ಕೆಮುಂದಾಗಿಹರು
ಆದರೆ ಅವರಿಗೆ ತಿಳಿಯದೆ ಹೋಗಿತೆ
ನಿನ್ನನಾಶ ಅವರ ಅಂತ್ಯಕ್ಕೆ ದಾರಿ ಎಂದು
ನಿನಗೆ ಕೋಪ ಬಂದರೆ ಉಳಿವಿಲ್ಲ ಜೀವರಾಶಿಗೆ
ಎಲ್ಲವನ್ನು ಸಹಿಸಿಕೊಂಡ ಶಾಂತ ಸ್ವರೂಪಿಯಾದ
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
 
 

- ashwini pujar

07 Jun 2024, 03:51 pm