Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಾತೆಲ್ಲ ಮುಗಿದಮೇಲು
ಹೇಳಲು ಉಳಿದಿವೆ ಬಹಳಷ್ಟು ಸಾಲು
ಕೆಲವೊಮ್ಮೆ ಹೇಳದೆ ಕೂಡಿಡುವುದೆ ಮೇಲು....
ಮಾತು ಮುಗಿದರು
ಮೌನವು ಬಂದು ಬಿಗಿದಪ್ಪಿದರು
ನಿಲ್ಲದು ಮನಸಲೆ ಉಳಿದ ಮಾತುಗಳ ತಕರಾರು....
ಆಡಿದ ಮಾತು ನೂರಾದರು
ಮಾತಲಿ ಬರಲಾಗದವು ಸಾವಿರವಾದವು
ಮೌನವೆ ನಿಜವೆಂದು ನಂಬಿದರು
ಮನಸೊಳಗೇ ಉಳಿದ ಮಾತುಗಳು ಮರೆಯಾಗುವವು...
ಉಳಿದವು ಒಮ್ಮೊಮ್ಮೆ ಮೌನದಿಂದ ಹೊರಗೋಡಿ ಬರುವವು
ಮಾತಿನ ಮನೆಯ ಕದತಟ್ಟಿ ಒಳನುಸುಳಲು ನೋಡುವವು
ಮತ್ತೇನೊ ನೆನೆನೆನೆದು ಮತ್ತೆ ಮೌನದಲಿ ಸೇರಿ ಬೀಗಜಡಿದು ಕೂರುವವು
ಆಗಾಗ ಮಾತಲಿ ಬಂದು ನುಸುಳಲು ನೋಡಿ ಕಾಣೆಯಾಗುವವು
ಮಾತಲಿ ಬಾರದೆ ಅಳಿದುಳಿದವು ಮನಸಿನ ಖಜಾನೆ ಸೇರುವವು
ಹಾಗೊಮ್ಮೆ ಹೀಗೊಮ್ಮೆ ನೆನಪಾದಾಗ ದರುಶನ ತೋರಿ ಹಿಂದಿರುಗುವವು
ಆಗಾಗ ಬೇಡದವು ತುಂಬಿ ಕೆದಕಿ ಏನೋ ಹುಡುಕುವಾಗ ಕಾಡಿಸಿ ನೋಯಿಸುವವು
ಪಟ್ಟಿಡಿದು ಕುಳಿತಾಗ ಕಾಡಿದವೆಲ್ಲ ಒಂದೊಂದೆ ಖಾಲಿಯಾಗುವವು
ಒಂದಿಷ್ಟು ಸಂತೋಷದ ಮಾತು
ಮತ್ತೊಂದಷ್ಟು ನೋವುಗಳದೆ ಮಾತು
ಮಾತಲಿ ಬರಲಾಗದೆ ಭಾರವಾಗುವು
ಖಾಲಿಯಾದ ಜಾಗವ ಬಂದು ಸೇರುವವು
ಶುರು ಮತ್ತದೆ ಮಾತು ಮೌನದಾಟ
ಮಾತಲಿ ಹೇಳಿ ಮುಗಿಯದ ಪೀಕಲಾಟ
- ಶ್ರೀಕಾವ್ಯ
04 Jun 2017, 08:57 am
ತಂಪು ಕೆಂಪು ನೇಸರ
ಬಿಗಿದಪ್ಪಿ ನಿನ್ನ
ಕನಸು ಕಂಗಳ
ಮುದ್ದಿಸಿದ ಬೆಳಗು...
- Indushekar Chinivar
04 Jun 2017, 06:19 am
ನಿನ್ನ ಹೃದಯದ ಮೂಲೆಯಲ್ಲಿ ಬಚ್ಚಿಟ್ಟುಕೊಂಡು
ಹೊಸ ಕವನ ಬರೆಯುವಾಸೆ ನನಗೆ.
ನನ್ನ ಬಾಹುಗಳಲ್ಲಿ ನಿನ್ನ
ಮುಚ್ಚಿಟ್ಟುಕೊಂಡು ಹೊಸ ಕನಸ ಹೆಣೆಯುವಾಸೆ ನನಗೆ..
ಅಂಜೂ ನೀನು ನನ್ನ ಜೀವಾ
- Kiran Shinde
04 Jun 2017, 01:40 am
ಕಳೆದುಕೊಂಡು ಸಂತೋಷವ
ನೆನೆದರೆ............
ಉಳಿದ ಸಂತೋಷವು ನಮ್ಮನ್ನು
ತೊರೆದು
ಹೋಗುತ್ತದೆ........
ಬರಿದಾದ ಬಾಳಲ್ಲಿ
ನಗುವಂತೆ ಬಂದೆ
ನೀನು........
ಕನಸಂತೆ ಕಳೆದೆ ನಿನ್ನ
ಜೊತೆಗಿದ್ದ
ಪ್ರತಿಕ್ಷಣವೂ ನಾನು.........
ನನಸಾಗಿ ನನ್ನ ಜೀವನದಲ್ಲಿ
ನೀನಿರುವೆಯಾ.............
ಕಂಬನಿಯಾ ಛಾಯೆಯನ್ನು
ನನ್ನ ಸನಿಹವೂ ಸೇರಿದಂತೆ
ನೋಡಿಕೊಳ್ಳುವೆಯಾ.........
- ಚುಕ್ಕಿ
03 Jun 2017, 09:19 pm
ಮೌನವೆ ಜೋತೆಯಾಗಿ
ಮಾತುಗಳನ್ನು ಮರೆತೆ
ನಿನ್ನಿಲದ ಹಾದಿಯಲ್ಲಿ
ಹಳವನು ನಾನಾದೆ
ಮಳೆಯ ಹನಿಯಲ್ಲಿ
ಕಣ್ಣಿರು ಮರೆಯಾದರೆನು
ಹ್ರುದಯದ ನೊವು
ನೀರಲ್ಲಿ ಕೊಚ್ಚಿಹೋಗುವುದೆನು?
ದೂರಾದ ಗಳತಿಯೆ,
ನನ್ಶದೊಂದು ಕೊರಿಕೆ
ಒಂದೊಂಮೆ ತಿರುಗಿನೋಡು
ನನ್ಶ ಉಸಿರಾರುವ ಮುನ್ನ....!!
- ಜ್ಯೋತಿ
03 Jun 2017, 08:25 pm
ಗದರಿ- ಗರ್ಜಿಸುವ ಗಡಸು ಧ್ವನಿಯ
ಗಂಡ,ಅತ್ತೆಯ ಉಪಟಳ,ಮಾವನ
ಮೌನ,ಮಾತು- ಮಾತಿಗೆ ಕಣ್ಣೀರಲ್ಲಿ
ಕೈ ತೊಳೆಸುವ ಮೈದುನರು
ಓರಗಿತ್ತಿಯರ ಕೊಂಕು ನುಡಿಗಳ
ನಡುವೆ ,ಮಕ್ಕಳ ಮರೆಯಲ್ಲಿ
ನೂಕಿದಳು ದಿನಗಳ
ನೂರು ನೋವು ಮರೆಸುವ
ಸಂಜೀವಿನಿ ಮಗನೆ ಆದನು
ಆ ತಾಯಿಯ ಪಾಲಿಗೆ
ಶಾರಧ
- ಶಕುಂತಲಾ
03 Jun 2017, 06:57 pm
ಮಾತಿಲ್ಲದೆ ಮೌನಿಯಾದೆ ನಾನು
ನನಗಾಗಿ ನೀನು ಪದಗಳಲ್ಲಿ ಬೆರಸಿಕೊಟ್ಟ
ನನ್ನ ಮೇಲಿನ ಪ್ರೀತಿಗಿಂದು ಗೆಳಯಾ..............
ನಿನ್ನ ಮಾತನು ಕೇಳಿತ ಮರೆತೇ
ನಾನು ಜಗವನ್ನೇ ಈ ಕ್ಷಣ ನಿನ್ನನ್ನು
ನೋಡುತ್ತಾ ನನ್ನಲ್ಲಿ................
ಬರೆದು ಕೊಟ್ಟ ಪದಗಳೆಲ್ಲ ನಿನಗೆಂದ ಮೇಲೆ
ನಾನೆಗೆ ಅಗಳಿರಲಿ ನಿನ್ನನು ಎಂದು ನಿನಾಡಿದ
ಮಾತು ಮನತಟ್ಟಿತೋ ಇನಿಯಾ..........
ನಾನು ಜೊತೆಯಲಿ ಬರುವೆನು
ಹಿಂದಿರುಗಿ ನೋಡದೆ ನೀ ಈ ಜಗವ ಮರೆತ
ಮರುಕ್ಷಣವೆಂದು ನೀನಿಟ್ಟ ಭಾಷೆಗಿಂದು ನಾ
ಸೋತೆ ಮೌನಿಯಾಗಿ ನಿನ್ನ ಪ್ರೀತಿಗೆ.......
- ಚುಕ್ಕಿ
03 Jun 2017, 11:58 am
ಮೊದಲ ನೋಟದಲ್ಲೇ ಮನಸೋತೆ ನಿನ್ನ ಮುಗುಳ್ನಗೆಯ ನೋಡಿ ಪ್ರೇಯಸಿ..........
ಅದೇಗೆ ಕಳೆದೊದೆನೋ ನಿನ್ನ ಮಾತಿನ ಮೋಡಿಯಲ್ಲಿ ನನ್ನ ಪ್ರೀತಿಯ ರಾಕ್ಷಸಿ......
ಉಸಿರನ್ನೇ ಹಿಡಿದಿಟ್ಟೆಯಲ್ಲ ಕಣ್ಣನoಚಿನಲ್ಲೇ ಊರ್ವಶಿ...........
ತುಟಿಯಲ್ಲಿ ಬಿಗಿದಿಟ್ಟ ಮಾತೊಂದು ಹೇಳಿಬಿಡೇ ಮನಕದ್ದ ಮೋಡಿಗಾರ್ತಿ ನನಗಾಗಿ ನನ್ನ ಪ್ರೇಯಸಿ.
- ಚುಕ್ಕಿ
03 Jun 2017, 01:29 am
ಮುಗಿಲ ತುಂತುರು ತಂಪಿಗೆ
ನೇಸರನ ಸಂಧ್ಯಾ ರಾಗಕೆ
ಇಳೆಯು
ಹರುಷದಿ ನರ್ತಿಸಿದ ಸಂಜೆ...
- Indushekar Chinivar
02 Jun 2017, 06:51 pm
ಗರಿ ಗರಿ ನವಿಲುಗರಿಯ ತನನ ತನನ ನರ್ತನ...
ಕೊಳಲ ನಾದ ಇಂಪು ಪುಳಕ
ರಾಧೆಯೆದೆಯಲಿ ಕಂಪನ...
ಒಲವ ನಲಿವ ಸುಳಿವ ಸಿಕ್ಕು ನಕ್ಕು ನಲಿದ ಹರಸುತಾ...
(ಹರ ಸುತ=ಗಣಪ ,ಹಾರೈಸಿದ )
- Indushekar Chinivar
02 Jun 2017, 06:29 pm