Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹನಿ..

ನಲ್ಮೆಯ ನೇಸರನ
ಹಿತ ಸ್ಪರ್ಶಕೆ
ನಿನ್ನ
ಕಮಲ ನಯನಗಳು
ಅರಳಿದ ಬೆಳಗು...

- Indushekar Chinivar

05 Jun 2017, 05:48 am

ಸೆರೆಮನೆ

ಕಂಬಿಗಲಿಲ್ಲದ ಸೆರೆಮನೆಯಲ್ಲಿ ಬಂದಿ ನಾನು.
ಬಂದಗಳೆಂಬ ಸರಪಳಿಗಳಿಂದ
ಬಂದಿಸಿಟ್ಟ ಖೈದಿ ನಾನು......

ಉಸಿರಾಡಲು ಸ್ವಾತಂತ್ರ್ಯವಿಲ್ಲ
ಅದಕ್ಕೂ ಅನುಮತಿ ಪಡೆಯಬೇಕಾಗಿದೆಯಲ್ಲ.......

ಪಂಜರದಗೊಂಬೆ ನಾನಲ್ಲ ಸ್ವಾತಂತ್ರ್ಯ
ಪಡೆಯುವ ಹಕ್ಕು ನನಗೂ ಇದೆಯಲ್ಲಾ......

ನೋವುಕೊಟ್ಟ ಮನಸ್ಸಿಗೆ ನೋವಿನಲ್ಲೂ
ನಗುವೆ ಹಂಚುತಿರುವೆನಲ್ಲಾ ಆದರೂ
ನನ್ನ ಮೇಲಿನ ಅನುಮಾನ ಆ ಮನಸ್ಸಿಗೆ ತರವಲ್ಲ.............

ಸ್ವಾತಂತ್ರ್ಯ ನನಗೂ ಬೇಕಾಗಿದೆ ನನ್ನಂತೆ ನಾ
ಬದುಕಲು ಯಾರ ಅಡ್ಡಿ ಆಮಿಷಗಳಿಗೂ
ಒಳಗಾಗದೆ ಸೆರೆಮನೆಯ ಸಹವಾಸ ಸಾಕಾಗಿದೆ.........

- ಚುಕ್ಕಿ

05 Jun 2017, 12:33 am

ನಾ ನಾಚಲೇ.........

ಕಾತೊರೆಯುವ ಮನಕ್ಕೆ ಮಿನುಗುವ
ತಾರೆಗಳ ಬೆಳಕು ತುಂಬಿ ಗೀಚಿದ
ಚಿತ್ತಾರವ ನಾನೆಂದು ತೋರಲೇ............

ಇರುಳು ಕಪ್ಪನು ಕಣ್ಣಲ್ಲಿ ಕಾಡಿಗೆಯ
ಸೊಗಸಾಗಿ ನಾ ತೋರಲೇ..................

ಬಾಡೋದ ಜಾಜಿಮಲ್ಲಿಗೆಯ
ಕಣ್ಣೀರ ಒರೆಸಿ ನನ್ನ ನಗುವಲ್ಲಿ
ನೀನಿರುವೆಯೆಂದು ಮತ್ತೊಮ್ಮೆ
ಅದರ ಜೊತೆ ನಾ ನಗುತ್ತಾ ಕೂರಲೇ...........

ಕೆಂಪಾದ ನನ್ನ ಕೆನ್ನೆಗೆ ತಾಗಿದ ಗುಲಾಬಿ
ತಾ ನಾಚಿ ಹೋಯಿತು...............

ಅದರ ಕೆಂಪು ನಾನು ಕಾದ್ದೇನೆಂದು ಮುನಿಸಿಕೊಂಡು ಮುದ್ದಾದ ಗುಲಾಬಿಯನಿಂದು ಮುದ್ದಾಡುತ ಅದರಲ್ಲಿ ನಿನ್ನ ನೋಡುತ್ತಾ ನಾ ನಾಚಲೇ..............

- ಚುಕ್ಕಿ

04 Jun 2017, 11:12 pm

ಮಗಳೆ

ನಿನ್ನ ಕಾಲಗ್ಗೆಜೆಯ ನಾದ ಮನದಲ್ಲಿ
ನಿನ್ನ ನೆನಪೆಲ್ಲ ಅಂಗಳದಲ್ಲಿ
ನೂರಾರು ಪ್ರಶ್ನೆ ಮುಡಿಸಿವೆಯಿಂದು ನನ್ನಲ್ಲಿ
ಅಷ್ಟು ಬೇಗನೆ ಬೆಳೆದೆಯಾ ನೀ, ಮಗಳೆ?

ನನ್ನ ಹೆಗಲೆರಲಾರೆಯಾ ನೀ ಜಾತ್ರೆಯಲ್ಲಿ?
ಮತ್ತೆ ಬಂದು ಕಾಡಲಾರೆಯಾ ನೀ ಬೊಂಬೆಗಾಗಿ?
ಆ ಕಾಲ ಮರಳುವುದಿಲ್ಲವೆ ನನ್ನ ಬದುಕಲ್ಲಿನ್ನು?
ಮತ್ತೆ ಮಗುವಾಗು ಬಾ ನನ್ನ ಮಡಿಲಲ್ಲಿನ್ನು....

- ಜ್ಯೋತಿ

04 Jun 2017, 09:36 pm

ಹನಿ..

ಬಾನಂಚಲಿ ರವಿಯ ಕಂಡು
ಗೂಡು ನೆನಪಾಗಿ ಹಕ್ಕಿಗಳು
ಆಗಸಕೆ ಚಿಮ್ಮಿದ ಸಂಜೆ...

- Indushekar Chinivar

04 Jun 2017, 06:51 pm

ಸಮಿಪವಾಗುತ್ತಿರುವೆ.........

ಸಾಗುತ್ತಿರುವ ಸಮಯದ ಜೊತೆ
ದೂರ ಸಾಗಿದಂತೆ ಹೃದಯದ ಭಾರ
ಹೆಚ್ಚುತ್ತಿದೆ ಇನ್ನು ಅತಿಯಾಗುತ್ತಿದೆ.........

ನಿನ್ನಿಂದ ದೂರವಾಗುವ ಪ್ರಯತ್ನದಲ್ಲಿ
ಇನ್ನು ಸಮೀಪವಾಗುತ್ತಿರುವೆ ನಿನ್ನ ಇನ್ನು
ಹೆಚ್ಚಾಗಿ ಪ್ರೀತಿಸುತ್ತಿರುವೆ...........
ನನ್ನ ಹೆಜ್ಜೆಗಳು ನಿನ್ನಂದ ದೂರವಾದರು.........

ನಿನ್ನ ಪ್ರೀತಿ ನನ್ನ ಹೃದಯದಲ್ಲಿ ಮಧುವಾಗಿ
ಹೊರಹೊಮ್ಮುತ್ತಿದೆ ಉಸಿರಿಗೆ ಅಡ್ಡಿಯಾಕಿ
ನಿನ್ನ ಹೆಸರೇ ಮತ್ತೆ ಮತ್ತೆ ಕರಿಯೆನ್ನುತ್ತಿದ್ದೆ
ನನ್ನ ಕೂಗು ಎನ್ನುತ್ತಿದ್ದೆ................

ನೀನು ಹಿಂತಿರುಗಿ ನೋಡುವಷ್ಟರಲ್ಲಿ
ನಿನ್ನ ಸೇರು ಕಪ್ಪಾದ ನೆರಳಿಗೆ ಬಣ್ಣತುಂಬುವ
ಬೆಳಕಾಗಿ ಎನ್ನುತ್ತಿದೆ......

- ಚುಕ್ಕಿ

04 Jun 2017, 05:33 pm

ಗುಬ್ಬಿ ಗೂಡಿನ ಕತೆ

ಹಳ್ಳಿಯೊಂದರ ಬೇಲಿ ಗಿಡದ
ಪುಟ್ಟ ಗುಬ್ಬಿ ಮರಿ ನೀನಂದು
ದೆಲ್ಲಿ ಸದನದ ಗದ್ದಿಗೆ ಏರಿ
ಇಂದು ಜಗಕೆ ತೋರಿದೆ ನೀನಾರೆಂದು!

ತಾಯಿಯ ಉಸಿರಿಗೆ ಹೆಸರಾಗಿ
ತಾತನ ಹೆಸರನ್ನು ಹಸಿರಾಗಿಸಲು
ಪಣತೊಟ್ಟು,ಜವರಾಯನಿಗೆ
ಎದುರಾಗಿ,ಈಜಿ ದಡ ಸೇರಿದೆ!

ಕಲ್ಲು- ಮುಳ್ಳುಗಳನೆ ಮೆಟ್ಟಿ ನಡೆದೆ
ಸೋಲು- ಅಪಮಾನಗಳನೆ
ಮೆಟ್ಟಿಲು ಮಾಡಿಕೊಂಡು ಬೆಳೆದೆ
ನೀ- ಒಪ್ಪಿ ಅಪ್ಪಿಕೊಂಡವರೆ
ನಿನ್ನ ಕೊರಳಿಗೆ ಉರುಳಾದರು,
ಬದುಕೊಂದು ಬಿಸಿ ತುಪ್ಪವಾಯಿತು!

ಸಾಗರದಾಚೆಗು ಹರಡಿದೆ ಇಂದು
ನಿನ್ನ ವಿಜಯದ ಕಹಳೆಯು
ಊರೂರು ಅಲೆದೆ ನೀ- ಅಂದು
ಜೀವನ ನಡೆಸಲು, ಸಾಧನೆಯ ಬಿಸಿಲುಗುದುರೆ ಏರಿ!

ಜನಕನೆ ತಲೆಹಿಡುಕನಾಗಿ
ಇನಿಯನೆ ಅಸುರನಾಗಿ
ಮಡಿಲ ಸೇರಿದ ಹಸುಗೂಸಿಗಾಗಿ
ಅಲೆಯುವಾಗ,ನೀ ಕಾಣಲಿಲ್ಲ
ಈ ಜಗಕೆ!
ಉತ್ತಮೋತ್ತಮ ಪುರಸ್ಕಾರಗಳು
ನಿನ್ನ ನಾಮವನ್ನಲಂಕರಿಸುತ್ತ
ಬಾಗಿಲ ಬಳಿಗೆ ಬರಲು
ನಿನಗಾಗಿ ಬರುವರು ಹಿಡಿದು
ವಿಜಯ ಪತಾಕೆ!

ಜೀವನವೆಂಬ ಸಾಗರದಲ್ಲಿ
ಸಮಸ್ಯೆಗಳೆಂಬ ಅಲೆಗಳಲ್ಲಿ
ಬಂದಿಯಾಗದೆ,ಸೀಳಿ
ಮುನ್ನಡೆದೆ ವಿಮುಖಳಾಗದೆ
ಸಮಸ್ಯೆಗೆ ಹೆದರಿ,ಸಾವಿಗೆ
ಶರಣಾಗುವ ಮಹಿಳೆಯರಿಗೆ
ನೀನಾದೆ ಮಾದರಿ ಮಹಿಳಾಮಣಿ!
ಈ- ನಾಡೆಂದು ನಿನಗೆ ಚಿರ- ಋಣಿ!


ಶಾರಧ

- ಶಕುಂತಲಾ

04 Jun 2017, 05:14 pm

ಬಂದು ಹೋಗು ಒಮ್ಮೆ ನನಗಾಗಿ

ನಿನಗಾಗಿ ಗೀಚಿದೆ ನೋಡು ಒಂದು ಕವನ, ಹರಿಯದ ಹಾಳೆಯಲಿ, ಮುಗಿಯದ ಮಾತಿನಲಿ, ಕಣ್ಣಲ್ಲಿ ಕಣ್ಣಿಟ್ಟು, ಮನಸಲ್ಲಿ ಮನಸಿಟ್ಟು, ಅಂದ ಚಂದವನರಿತು, ಉಸಿರಲ್ಲಿ ಹೆಸರಾಗಿ, ಹೆಸರಿಂದ ಬೆಳಕಾಗಿ, ಬೆಳದಿಂಗಳಿಂದ ನಿಂತು ನೋಡುವೆ ನಿನಗಾಗಿ... ಬಂದು ಹೋಗು ಒಮ್ಮೆ ನೀ, ನನಗಾಗಿ...!

- rajanikanth

04 Jun 2017, 03:33 pm

ಸತ್ತಾಗ ಅರಿತರು

ಕಷ್ಟದಲ್ಲಿರುವಾಗ ಬರಲಿಲ್ಲ ಯಾರೊಬ್ಬರು
ಸಹಾಯ ಮಾಡಲೆಂದು,
ಸುಖದಲ್ಲಿರುವಾಗ ಬಂದರು
ಸಂಬಂಧಿಕರ ಭೇಟಿಗೆಂದು.

ಬಿದ್ದಾಗ ಮೇಲೆತ್ತಲು ಬರಲಿಲ್ಲ
ಯಾರೊಬ್ಬರ ಕೈ ಅಂದು,
ಗೆದ್ದಾಗ ಮುಗಿಬಿದ್ದರು
ಮೆರವಣಿಗೆ ಮಾಡಲೆಂದು.

ಅತ್ತಾಗ ಬರಲಿಲ್ಲ ಯಾವ ಕೈಗಳು
ಕಣ್ಣೀರ ಒರೆಸಲೆಂದು,
ಸತ್ತಾಗ ಅರಿತರು ಕಳೆದುಕೊಂಡದ್ದು
ಕಣ್ಣೀರೊರೆಸುವ ಕೈ ಎಂದು.

- ಅಕ್ಷತ

04 Jun 2017, 03:21 pm

*ನನ್ನ ಮನಸ್ಸು*

*ನನ್ನ ಮನಸ್ಸು*

By. *ಮಂಜು.ಸಿ*

ನನಗೇಕೆ ನಿನ್ನ ನೆನಪು ಕಾಡುತಿದೆ ಪರಿಪರಿಯಾಗಿ
ನನ್ನ ಮನಸ್ಸಿನಂಗಳದಲ್ಲಿ ? !!

ಬೆಳದಿಂಗಳು ಚಲ್ಲಿದ ಆ ನಿನ್ನ  ಮುಖದ ಕಾಂತಿ ಕಂಡೆ ನನಗೆ ಹೊಲುವೇಕೆ ಗೆಳತಿ !!
ನಿನ್ನ ಕುಡಿನೇೂಟದಲ್ಲೇನೊ ಕಾಣುತಿದೆ
ಕನಸ್ಸಿನ ಚಿತ್ತಾರ ! ನನ್ನ ಮನಸ್ಸಲೆಲ್ಲ ಆಗಿದೆ ಅಲ್ಲೇೂಲ ಕಲ್ಲೇೂಲ !!

ನನಗೇಕೆ ನಿನ್ನ ನೆನಪು ಕಾಡುತಿದೆ ಪರಿಪರಿಯಾಗಿ
ನನ್ನ ಮನಸ್ಸಿನಂಗಳದಲ್ಲಿ ? !!

ಗೆಳತಿ ನೆನಪಿದೆಯ ನಾವುಕಂಡ ಕನಸ್ಸು ಅಂದು ??
ಎಲ್ಲಿರುವೆ ನೀ ನನ್ನನಗಲಿ ಇಂದು ??
ನೀನಿಲ್ಲದ ಒಂದೊಂದು ಕ್ಷಣ ಕ್ಷಣ ಯುಗದಂತಾಗಿದೆ ನನ್ನಗೆ !! ಬಂದು ಬಿಡು ನೀ ನನ್ನ ಜೀವನದಲ್ಲಿ ಕಾಯುತ್ತಿರುವೆ ನಾ ಎಂದೆಂದು !!

ನನಗೇಕೆ ನಿನ್ನ ನೆನಪು ಕಾಡುತಿದೆ ಪರಿಪರಿಯಾಗಿ
ನನ್ನ ಮನಸ್ಸಿನಂಗಳದಲ್ಲಿ ? .....

*ಮಂಜುನಾಥ.ಸಿ*

- Manjunatha.c

04 Jun 2017, 11:29 am