Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೊಂದ ಕಂದಮ್ಮನ ಅಳಲು

ಸುಡು ಬಿಸಿಲಲ್ಲಿ ತನ್ನಪ್ಪನಿಗೆ
ನೆರವಾಗಿ ದುಡಿವಳು ತಾಯಿ
ಸುಂದರ ಮನೆಯ ನಿರ್ಮಾಣಕ್ಕೆ
ಅವರು ಕೊಡುವ ಕಾಸಿಗೆ

ಜೆಲ್ಲಿ-ಸಿಮೆಂಟು,ಇಟ್ಟಿಗೆಗಳೆ
ಗೆಳೆಯರಾಗಿ ಬಿಸಿಲಲ್ಲಿ
ರಸ್ತೆಯ ಇಕ್ಕೆಲಗಳಲ್ಲಿ
ನಯ- ನಾಜೂಕಿಲ್ಲದೆ
ಅಮ್ಮನ ತೋಳಿನ ಆಸರೆಗಾಗಿ
ಅಂಬಲಿಸುವ ಪುಟ್ಟ ಕಂದಮ್ಮನು ನಾನು,ಬಲ್ಲವರಾರು ನನ್ನ ನೋವನು?

ನಾ- ಅಮ್ಮನಿಗಾಗಿ ಹಟಮಾಡಿದಾಗ
ಅವಳು ನನ್ನ ಬಡಿದು ಗದರಿಸುವಳು
ಒಡೆಯನು ಏನೆಂದಾನೊ?
ಎಂಬ ಬೀತಿಯಲಿ.....
ನೀ ಯಾಕೆ ಬಂದೆಯೊ
ನನ್ನ ಒಡಲಲ್ಲಿ.......
ಎಂದು ಕಂಬನಿ ಸುರಿಸವಳು
ನೋವಿನಲಿ.....


ಶಾರಧ

- ಶಕುಂತಲಾ

06 Jun 2017, 02:52 pm

ನಿಸರ್ಗದ ಮಹಿಮೆ

ಸಾಗರವನ್ನೆ ಬರಿದು ಮಾಡಿದರು
ಭೂ- ತಾಯಿಯ ತಣಿಸಲಾರ
ಆಗಸದಿಂದ ಮಳೆ- ಹನಿ
ಧರೆಯ ತಾಗದ ಹೊರತು

ಮಳೆಯ ಸ್ಪರ್ಶದಿ ಇಳೆಯು
ತಾನಾಗುವಳು ಮದುವಣಗಿತ್ತಿ
ಕೊಚ್ಚೆಯಲ್ಲ ಕೊಚ್ಚಿಹೋಗಿ
ಹರಡುವುದು ಮಕರಂದ ಎಲ್ಲೆಲ್ಲಿಯು

ತಳಿರ ತೋರಣಗಳಿಂದ ಸಿಂಗಾರಗೊಂಡು,ಕಂಗೊಳಿಸುವೆ
ಕಾನನದ ಅದಿದೇವತೆಯಾಗಿ
ನರನು,ನಾಶಮಾಡದಿದ್ದರೆ
ಅವನ ಉಸಿರಿಗೆ ನೀ- ಹಸಿರಾಗಿ

ನೀ- ಹೊರತು, ನಾವಿಲ್ಲ
ಅರಿತಿರುವಿರಿ ಎಲ್ಲ
ಆಚರಣೆಯಲ್ಲೆ ಮುಗಿವುದೆಲ್ಲ
ಯಾರು ಅದ ಪಾಲಿಸುವುದಿಲ್ಲ

ಘೋಷಣೆಯ ಬಿಡಿ
ಕಾಯಕವ ಮಾಡಿ
ನಿಸರ್ಗವ ಉಳಿಸಿ!
ದೇಶವ ಉಳಿಸಿ!


ಶಾರಧ
( ಪರಿಸರ ದಿನಾಚರಣೆಯ ಶುಭಾಶಯಗಳು)

- ಶಕುಂತಲಾ

06 Jun 2017, 02:27 pm

ಗೆಜ್ಜೆ ನಾದ

ಅಡಿದಳು ಗಂಗೆ ಗಲ್ಲು ಗಲ್ಲುನೆ ಗೆಜ್ಜೆಕಟ್ಟಿ
ಪ್ರಣಯ ನರ್ತನೆ ಶಿವನ ನೆನೆಯುತ್ತಾ ತನ್ನ ಮನದಲ್ಲಿ ...............

ತನ್ನ ಪಾದಕ್ಕೆ ಪ್ರೀತಿಯೇನೆಂಬ ಗೆಜ್ಜೆಪೋಣಿಸಿ
ಆರಾಧನೆಯಂಬ ದಾರಕಟ್ಟಿ ನರ್ತಿಸುತಿಹಾಳು
ಆ ನೀಲವೇನು ಪರಶಿವನ ಸಾಂಗತ್ಯದಲ್ಲಿ.........

ಅವಳ ಗೆಜ್ಜೆಯನಾದಕಿಂದು ನಿಬ್ಬೆರಗಾಗಿ
ಮುರುಲೋಕಗಳು ಏಕಕಾಲಕ್ಕೆ ವಂದಿಸಿವೆ
ಗಂಗೆಗಿಂದು ಶರನೆಂದು ಭಕ್ತಿಪರವಶದಲ್ಲಿ...........

ಭುವಿಯಲ್ಲಿ ಹಾಹ್ಲಾದದಿಂದ ಹರಿದುಬಂದಳು
ಆಕಾಶಗಂಗೆ ವಿಶ್ವನಾಥನ ಪಾದ ಸ್ಪರ್ಶಿಸಲೆಂದು
ಹರಿದು ಕಾಶಿಗಂಗೆಯಾಗಿ ಪರ್ವತ ರಾಜನ ಪುತ್ರಿಯಾಗಿ..........

ತಲ್ಲಣಿಸಿದವು ಬೆಟ್ಟ-ಗುಡ್ಡಗಳು
ಕಾಡು-ಮೇಡುಗಳು ಗಂಗೆಯ ಚುಂಬನದಿ
ಹಸಿರಾಗಿ ಪ್ರಕೃತಿ ಪಾರ್ವತಿಯ ಮಡಿಲಲ್ಲಿ
ಸುಧೆಯಾಗಿ ವಸುದೆಯಾಗಿ..........

- ಚುಕ್ಕಿ

06 Jun 2017, 01:43 pm

ನಿನಗಾಗಿ...!!!

ಮನವಿದು ನಿನ್ನ ನೆನೆಯದ ಕ್ಷಣವಿಲ್ಲ ...
ಪರಿತಪಿಸುತಿರುವೆ ಒಲವೇ...
ನಿನಗಾಗಿ ನಿನ್ನ ಒಲವಿಗಾಗಿ...
ಸಹಿಸಲಾರೆ ನನ್ನುಸಿರೆ
ನೀನಿಲ್ಲದ ಈ ನೋವನ್ನ‌...
ನೀ ಇರುವೆ ನನ್ನಲಿ ಅದಕ್ಕೆಂದೇ 
ಇನ್ನು ಉಸಿರಾಡುತ್ತಿರುವೆ....

- Pb

06 Jun 2017, 08:35 am

ಹನಿ..

ಮೂಡಣ ಹೊಂಬೆಳಕಲಿ
ಜಾರುತ ತಾರೆಗಳು
ನೀನಿಡುವ ರಂಗೋಲಿಗೆ‌
ಚುಕ್ಕಿಗಳಾದ ಬೆಳಗು...

- Indushekar Chinivar

06 Jun 2017, 07:01 am

ಹನಿ..

ನಿಶೆಯ ಮಾಯಾ ಮಡಿಲಲಿ
ನೊಂದು ಹುದುಗಿದ ನಿನ್ನ
ಸಂತೈಸಲು ಚಂದಿರ
ಕೈಚಾಚಿದ ಇರುಳು...

- Indushekar Chinivar

05 Jun 2017, 10:24 pm

ನೋಯುತ್ತಿರುವ ಮನಸ್ಸು

ನಗುವೆಲ್ಲ ಅಳುವಾಗಿ, ಕನಸೆಲ್ಲ ಹಾಳಾಗಿ, ನೆನಪೆಲ್ಲ ಮರೆವಾಗಿ, ಕಾಲವೆಲ್ಲ ಬರಿದಾಗಿ, ಕಾಡುತಿದೆ ನೋವಾಗಿ, ಮನಸೆಲ್ಲ ಮಾಯವಾಗಿ, ಅಲೆದಾಡುತಿದೆ ನಿನ್ನ ಬರುವಿಕೆಗಾಗಿ.

- rajanikanth

05 Jun 2017, 08:37 pm

ವಿರಹಿ ರಾಧೆಗಾಗಿ..

ಇಂಚರ ನರ್ತಿಸಿದೆ
ಬೆರಳ ತುದಿಯಲಿ
ಶಾಮನ ಮಧುರ ಉಸಿರಲಿ
ಒಲವ ಧಾರೆಯಾಗಿ
ವಿರಹಿ ರಾಧೆಗಾಗಿ...

- Indushekar Chinivar

05 Jun 2017, 06:03 pm

ಭೂತಾಯಿ

ಹೊರುವಳು ಭೂಮಾತೆ
ನಮ್ಮ ಭಾರವನ್ನು ತನ್ನ ಮಕ್ಕಳೆಂದು
ಸಹಣೆಯಿಂದಲೇ ತಾನು ನೊಂದು........

ಜನನದಿಂದ ಮರಣದ ವರೆಗೂ
ತದನಂತರವೂ ತಾನು ಜನನಿ
ನಮ್ಮ ಭೂತಾಯಿ ವಸುದೆ ಕರುಣಾಮಯಿ.......

ತವರಿನೂರು ಹೆಸರಿಲ್ಲದ ಹಸಿರುವರ್ಣ
ಬಾಳ ಬಂಗಾರ ಇವಳು ತನ್ನಲ್ಲೇ ಬಚ್ಚಿಟ್ಟಳು
ಬೆಳ್ಳಿ ಬಂಗಾರ,ವಜ್ರ ವೈಡೂರ್ಯ........

ರೈತನಿವಳ ಹೆತ್ತ ಮಗನಲ್ಲ ಆದರೂ ತನ್ನ
ಒಡಲ ಸವಿ ಉಣಿಸುವವಳಲ್ಲ............
ಇಂತಹ ಅವಣಿಯ ಆಕ್ರೋಶ ಏತಕ್ಕೆ
ಕಳೆದುಕೊಂಡಳು ಪೃಥ್ವಿ ತನ್ನ ತಾಳ್ಮೆಯನಿಂದು.....

ಭೂಮಿ ತಮ್ಮದೆಂದು ತಾಣದರ
ಒಡೆಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುವವರು ಹುಚ್ಚು ಜನರು ಬಂದಾಗ ಹೊತ್ತು ತಂದಿದ್ದೇನು
ಹೋಗುವಾಗ ಹೊತ್ತೊಯ್ಯುವುದೇನು.....

ಅವಳ ಕೊರೆದು ಕೊರೆದು ಹಿಂಸೆಯ ಮಾಡುವುದು ಬಿಟ್ಟರೆ ..............
ಮೇಘರಾಯನು ನೋಡುತಿಹನು ಮೇಲಿಂದ
ಭೂಮಿ ಸಂಕಟ ಕಣ್ಣು ಮುಚ್ಚಿ ಕುಂತಿಹನು ಒಂದು ಹನಿಯ ಕಣ್ಣೀರು ಬೀಳದಂತೆ ಈ ಜನರ ಹೊಟ್ಟೆಗೆ..................

ಸಹನೆ ಕಳೆದುಕೊಂಡ ಭುವಿಯು ತೋರುತಿಹಳು ತನ್ನ ಕೋಪವನಿಂದು ಭೂಕಂಪದ ರೂಪದಲ್ಲಿ,
ಭೂಕುಸಿತದ ತಾಪದಲ್ಲಿ .
ಬಿರುಕು ಬಿದ್ದ ಭೂಮಿಯ ಬಿಂಬದಲ್ಲಿ
ನೀರಿಲ್ಲದೆ ಒಣಗಿದ ಮರುಭೂಮಿಯಲ್ಲಿ.......

ಕಟ್ಟಡಗಳ ಮಧ್ಯೆ ಉಳಿದ ಒಂದೆರಡು ಮರಗಳನ್ನು ನೋಡಿ
ಕಳೆದೊದ ಕಾನನದ ಅವಶೇಷಗಳು ನೋಡಿ.......

ಪ್ರಕೃತಿಯ ಉಳಿವಿಗೆ ಉಸಿರು ಮರಗಳು
ಹಚ್ಚ ಹಸಿರು ಹೆಚ್ಚು ಮಾಡಿ ಇನ್ನೊಂದು
ಜೀವಿಯ ಉಸಿರಿಗೆ ಹೆಸರಾಗಿ .............

ವಿಶ್ವ ಪರಿಸರ ದಿನದ ಶುಭಾಶಯಗಳು
ಸ್ನೇಹಿತರೆ..................

- ಚುಕ್ಕಿ

05 Jun 2017, 11:42 am

ಮನಸಿನ ಮಾತು

ನಿನ್ನ ಕಿರು ಬೆರಳಿಗೆ ಪರಿಚಯ ನಾನು,
ನನ್ನ ತೋಳಿನ ನೆನಪು ನೀನು,
ಮರೆತು ನೆನಪಾಗೋ ಒಲವು ನೀನು,
ಕನಸಲೂ ಬೆಚ್ಚಿಸೋ ಕತ್ತಲೇ ನೀನು,
ಪ್ರೀತಿಲಿ ಒಂಟಿ ನಾನು...

- ಮುತ್ತುರಾಜ್

05 Jun 2017, 10:42 am