Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆ ಹನಿಯೊಂದು...

ಮಳೆ ಹನಿಯೊಂದು ಬಂದು
ಭುವಿಗೆ ಬಿದ್ದಾಗ..

ಕಲ್ಲ ಪೊಟರೆಯಲ್ಲಡಗಿದ್ದ ಕಪ್ಪೆ
ಕುಪ್ಪಳಿಸಿತೊಮ್ಮೆ ಖುಷಿಯಲ್ಲಿ
ಕೆಮ್ಮಿ ಗಂಟಲ ಸರಿ ಪಡಿಸಿಕೊಂಡು
ಕಾರ್ಮುಗಿಲು ಭುವಿಯ ಕವಿದಿಹುದ ಕಂಡು
ತನ್ನ ಬಂದು ಬಳಗವ ಕರೆಯಲು
ತನ ತೋಮ್ ಎಂದೆನ್ನುವುದಕೆ
ತಯಾರಾಗಿತು ಆಗಲೇ..

ಎಂದೋ ಉದುರಿ ಹಕ್ಕಿಯುದರವ ಸೇರಿ
ಹೇಗೋ ಉರುಳಿ ಉಳಿದುಕೊಂಡಿದ್ದ ಬೀಜವು
ಮರಳಿ ಕೊನರಿ ಹೆಮ್ಮರವಾಗಲು
ಸಾವಕಾಶದಿ ಆಕಾಶ ನೋಡುತ
ನವಿರುಗೊಂಡಿತು ನೆಲದಲಿ...

ಬೆವರ ಸುರಿಸುತ ಬರಿಯ ಮೈಯಲ್ಲಿ
ಬರದಿ ಬಸವಳಿದಿದ್ದ ರೈತನ
ಬೆನ್ನ ಮೇಲೆ ಬಿದ್ದ ಹನಿಯದು
ಬದುಕು ಕೊಡುವೆನೋ ಎಂದಿತು.

- ಶ್ರೀಗೋ.

09 Jun 2017, 07:30 pm

ಇಂದಿನ ಮಕ್ಕಳು.....

ಅಮ್ಮನ ಕೈ ತುತ್ತಿನ‌ ಪ್ರೀತಿ ಗೊತ್ತಿಲ್ಲ
ಆ ಚೆಂದಮಾಮನ ತೋರಿ ತಿನ್ನಿಸುವವರಿಲ್ಲ
ಕಥೆ ಹೇಳುವ ಅಜ್ಜಿ ಅಮ್ಮಂದಿರನ್ನಂತು ನೋಡಿಯೆ ಇಲ್ಲ
ಬಾಲ್ಯದ ತುಂಟಾಟ ಖುಷಿಯ ಅನುಭವಿಸಿಲ್ಲ

ಚಿನ್ನಿದಾಂಡು ಲಗೋರಿಯನ್ನಂತು ಕಂಡವರೆ ಅಲ್ಲ
ಅಳಿಗುಳಿ‌ಮನೆ ಚೌಕಬಾರಗಳಂತು ಹೇಗಿರಬಹುದೆಂದು ತಿಳಿದಿರಲಿಕ್ಕಿಲ್ಲ
ಕುಂಟೆ ಬಿಲ್ಲೆ ಅಣ್ಣೆಕಲ್ಲಿನಂತ ಆಟಗಳನು ಮತೊಮ್ಮೆ ನೋಡಲಾಗುವುದಿಲ್ಲ
ಸ್ನೇಹಿತರ ಜೊತೆ ಊರ ಸುತ್ತಿ ಆಡಲಂತು ಇವರ ಬಿಡುವುದೇ ಇಲ್ಲ

ಮಣ್ಣಿನ ಪ್ರೀತಿಯ ಸಖ್ಯವ ಬಲ್ಲವರಲ್ಲ
ಮರಕೋತಿ ಆಟವನ್ನಂತು ನೋಡಿಯೆ ಇಲ್ಲ
ಮಣ್ಣಲಿ ಆಡಿ ಸಂತಸ ಪಡಲು ಮಣ್ಣೆ ಕಾಣುವುದಿಲ್ಲವಲ್ಲ
ಮರವೇರಿ ಆಟವಾಡಿ ಹುಬ್ಬಿ ಬೀಗಲು ಮರಗಳಿರಬೇಕಲ್ಲ

ಮಣಬಾರ ಪುಸ್ತಕ ಹೊತ್ತು ದಿನ ತಿರುಗುವರು
ಸಾಮಾನ್ಯ ಬದುಕಿನ ಜ್ಞಾನವ ಅರಿಯಲಾಗದವರು
ಅಕ್ಕ ಪಕ್ಕದ ಜನರನ್ನೆ ನೋಡಲಾಗದವರು
ಮನೆಯೊಳಗೆ‌ ಸೇರಿ ಸೊರಗುತಿರುವರು
ಸಣ್ಣ ನೋವು ಸೋಲಿಗು ನಲುಗಿ ಹೋಗುವರು
ಸಣ್ಣ ಖುಷಿಯ ಸವಿಯನು ಸವಿಯದೆ ಮಂಕಾಗುವರು
ಬದುಕಿನ ಸ್ವಾರಸ್ಯವ ಅನುಭವಿಸಲಾರದೆ ಹೋಗಿರುವರು
ಬಾಲ್ಯದ ಚೆಲ್ಲಾಟ ತುಂತಾಟ ಖುಷಿಯ ಕಾಣದೆ ಬದುಕುತ್ತಿರುವರು
ಬಾಳಿದು ಇಂದಿನ ಮಕ್ಕಳ ಬಾಳಿದು

- ಶ್ರೀಕಾವ್ಯ

09 Jun 2017, 07:06 pm

ನೀನು ಎಂದರೆ ಉಸಿರು...!!!

ಪ್ರೀತಿ ಎಂದರೆ ನೀನು...
ನಿನಗಾಗಿ ಕಾದಿರುವೆ ಅನುಕ್ಷಣವು
ನೀನು ಎಂದರೆ ಉಸಿರು...
ನಿನ್ನುಸಿರಲಿ ಒಂದಾಗಿ ಕಳೆಯುವೆ ಪ್ರತಿ-ಕ್ಷಣವು
ಎಂದು ಸೇರುವೆಯೋ ನನ್ನೊಳಗೆ ನೀನು...
ಕಾಯುತಾ ಕುಳಿತಿರುವೆ ನಿನಗಾಗಿ ನಾನು . . .  
ಕೇಳದ ಮನಸ್ಸು ಹಠವು  ಮಾಡುತಿದೆ
ಪ್ರಶ್ನೆಗಳು ಹಲವು ಮನವು ಕಾಡುತಿದೆ
ಮನ ಬಯಸುತಿದೆ ನಿನ್ನಯ ಸನಿಹ
ತಾಳಲಾರೆನು ಇನ್ನು ಈ ವಿರಹ

- Pb

09 Jun 2017, 06:51 pm

ಗೋವು..ಇದು ನನ್ನ ಬಾಳು...

ಎಲ್ಲರಂತೆ ಅರಳಿದೆ ಈ ಭುವಿಯಲಿ ನಾನು
ಮನೆಯ ಜನರಂದರು ಛೆ!!!
ಹೆಣ್ಣು ಹುಟ್ಬಾರ್ದಿತ್ತೆ.. ಹಾಲು ಕರೆಯೊದು..
ನನ್ನ ಜಗತ್ತಲ್ಲಿ ಗಂಡಾಗಿ ಹುಟ್ಬಾರ್ದು...
ನಾಲ್ಕು ದಿನ ಕಟ್ಟಿದರು ಮನೆಯಲಿ
ಮತ್ತೆ ಅಟ್ಟಿದರು ಬೀದಿಗೆ..ಕೂಳು ದಂಡ
ತಾಯಿ ಮಮತೆಯ ಹಾಲು ದೂರ...
ತೊಟ್ಟಿಯ ಕಸವೇ ಆಹಾರ...

ಹಗಲು ಸುತ್ತುವೆ ಪೇಟೆ ಬೀದಿಯಲಿ
ಕಾಯುವೆ..ನೀವೆಸವ ಕೊಳೆತ ಹಣ್ಣು ತರಕಾರಿಗೆ
ಉಣ್ಣುವೆ ತರಾತುರಿಯಲಿ ಪ್ಲಾಸ್ಟಿಕ್ ಚೀಲದೊಡನೆ...ಹಸಿವಲಿ
ಹೀಗೆ ಬೆಳೆದೆ ಬೀದಿ ಬಸವನಾಗಿ...

ಶುರುವಾಯಿತು ನನಗೂ ಶನಿಯ ಕಾಟ...
ಮನೆಯಲ್ಲಿ ಶುರುವಿಟ್ಟರು ವ್ಯಾಪಾರದ ಆಟ..
ಬರುವ ಹಣಕೆ ಆಸೆಪಟ್ಟು
ಪೇಟೆಯಲಿ ಸುತ್ತುವಾಗ‌..ಕಟುಕರ ಮಾರಿ ಕಣ್ಣು..

ಒಮ್ಮೆ ಹೀಗೆ..ಕತ್ತಲಾಗಿತ್ತು
ಆತುರದಿ ನಡೆದೆ ಮನೆಯ ಕಡೆಗೆ
ಯಾರೊ ನನ್ನ ಕರೆದರು ಮೆಲ್ಲನೆ...
ಒಮ್ಮೆಲೆ ನಿಂತೆ..ಅಷ್ಟೇ..
ಹತ್ತಾರು ಕೈಗಳು ಹಿಡಿದವು ಬಲವಾಗಿ
ಎತ್ತೊಯ್ದರು ನನ್ನ ವ್ಯಾನಲಿ..ಕ್ಷಣಮಾತ್ರದಲಿ...

ಮಾರನೆಯ ದಿನ...ನೇತಾಡುತ್ತಿದ್ದೆ ಅಂಗಡಿಯಲಿ..
ನಿತ್ಯದಂತೆ ಜನ ಚೌಕಾಸಿ ಮಾಡುತ್ತಿದ್ದರು
ನನ್ನ ಮಾಂಸಕ್ಕಾಗಿ...

- Indushekar Chinivar

09 Jun 2017, 06:36 pm

ಪ್ರೀತಿಯ ವ್ಯತ್ಯಾಸ

ಹೇ ಹುಡ್ಗಿ
ಈಗ ನನಗೂ ನಿನಗೂ
ವ್ಯ‌ತ್ಯ‌ಾಸ ಇಷ್ಟೇ..
ಲೇ
ನೀ ಮರೆತಿರುವೆ
ನಾ ಮರೆತಂತೆ ನಟಿಸುತ್ತಿರುವೆ.
ಮಿಟ್ಕಲಡಿ......

- anil

09 Jun 2017, 06:03 pm

ಹನಿ..

ಮೋಡಗಳು ತೋರುವ
ನಿರ್ಜಲ ಮಮತೆಯ
ಕಂಡು ಭುವಿಯು
ಮಂಕಾದ ಸಂಜೆ...

- Indushekar Chinivar

09 Jun 2017, 04:39 pm

ತಳಮಳ

ನೂರು ದೆವರುಗಳನ್ನು
ನೂರು ಬಾರಿ ಮನದಲ್ಲಿ ನೆನೆದು
ವೀರ- ಶೌರ್ಯ ರಸಗಳನ್ನು
ಕರಗತ ಮಾಡಿಕೊಂಡು
ಹೇಡಿ ತನವ ದೂರವಿರಿಸಿ
ಎಲ್ಲರ ಮೆಚ್ಚುಗೆ ಗಳಿಸಲು
ಎಲ್ಲರನ್ನು ಏಕಾಗ್ರತೆಯಲ್ಲಿ
ಬಂದಿಸುವ ಪಣ ತೊಟ್ಟು
ತರಗತಿಗೆ ತೆರಳಿದೆನು..........

ಅರಿಯದ ಮಾರ್ಗಗಳಿಂದ
ತೂರಿ- ಹಾರಿ ಬಂದು ನನಗು
ಮುನ್ನವೇ ತರಗತಿಯಲ್ಲಿ ತನ್ನ
ಪ್ರಭಾವವ ತೋರಿಸುತ್ತ
ನೀ ಎಷ್ಟೇ- ದೈವಗಳ ಬೇಡಿದರು,
ಎಷ್ಟೇ- ರಸಗಳ ಮೈಗೂಡಿಸಿಕೊಂಡರು
ನನ್ನಿಂದ ನೀ ದೂರಾಗಲು ಸಾಧ್ಯವೇ
ಅಯ್ಯೊ- ಮೂರ್ಖಳೆ!
ನಾನು ಎಲ್ಲರಲ್ಲು ಇರುತ್ತೇನೆ ತಿಳಿ!
ಎಂದಿತು ತಲೆಯ ಮೊಟಕುತ........

ನಾನು ನಡುಗುತ್ತ...,,,,
ನಡುಕ ನನ್ನಲ್ಲಿ ಒಂದಾಗುತ್ತ....,,,,
ಒಂದೆ ನಾಣ್ಯದ ಎರಡು
ಮುಖಗಳು ಎಂಬಂತೆ
ಮುಗಿಯಿತು ಅಂದಿನ ತರಗತಿ ...
ಕೊನೆಗು ತರಾತುರಿಯಲ್ಲಿ....


ಶಾರಧ

- ಶಕುಂತಲಾ

09 Jun 2017, 04:38 pm

ಗೋಮಾತೆ ............✍

ನಮ್ಮನ್ನೆತ್ತ ತಾಯಿಯಾದರು ಮಗುವಾಗಿದ್ದಾಗಳೇ
ತನ್ನೆದೆಯ ಹಾಲುಣಿಸಿ ಸಲಹುವಳು......
ಎಂದಿಗೂ ಬತ್ತುಹೋಗದಂತೆ ತನ್ನ ಒಡಲ
ಕ್ಷೀರಾಮೃತವನ್ನು ನಮಗೆ ಕುಡಿಸುವಳು............

ಗೋಮಾತೆ ಇವಳು ಮುಕ್ಕೋಟಿ ದೇವತೆಗಳ
ತನ್ನ ತನುವೆಲ್ಲಾ ತುಂಬಿರುವವಳು
ಸಹನಶಿಲೆ ಧರಣಿಯ ತವರಿನವಳು............

ಇವಳ ನಿಸ್ವಾರ್ಥ ಸೇವೆಗೆನೆಂದು ಹೆಸರಿಡಲಿ
ಹೊಲದಲ್ಲಿ ನೇಗಿಲು ಹಿಡಿದ ರೈತನಿಗೆ ಉಳುಮೆಯಲ್ಲಿ ಸಹಕರಿಸಿ ಬಂಗಾರದ ಬೆಳೆಯನ್ನು ತಂದುಕೊಡುವಳು................

ಗೋಮೂತ್ರ ಸೇವನೆಯಿಂದ
ರೋಗಗಳು ಬಾರದಂತೆ ತಡೆಗಟ್ಟುವವಳು........
ಕಡೆವರೆಗೂ ಶ್ರಮಿಸುವಳು ತಾಯಲ್ಲದ ತಾಯಾಗಿ
ಎಲ್ಲಾರ ದಣಿವು ತಿರುಸುವ ಅಮೃತಧಾರೆಯಾಗಿ...

ಇಳಿವಯಸ್ಸಿನಲ್ಲಿ ಮಾರಾಟವಾದಲೋ
ಈ ತಾಯಿ ತನ್ನ ಮಾಂಸ ಪ್ರಾಣ, ಚರ್ಮಗಳೆಲ್ಲಾ
ಕಟುಕರ ಹೊಟ್ಟೆ ತುಂಬಿಸಲು ಕ್ರೂರರ ಜೇಬಿನ ಭಾರ ಹೆಚ್ಚಿಸಲು...................

ಕಡೆದು ಹಾಕುವರು ಪಾಪಿಗಳು ತನ್ನನ್ನೇ ಎಂದು ತಿಳಿದು ಬೈಯಲಿಲ್ಲ ಕೋಪದಲ್ಲಿ ಹೊಡೆಯಲಿಲ್ಲ ತಲೆಬಾಗಿ ನಿಂತಳು ಗೋಮಾತೆ ತನ್ನ ಪ್ರಾಣ ಅರ್ಪಿಸಲು ಅವರ ಜೀವನಕ್ಕಾಗಿ...........

ಹೆತ್ತಯಾಯಿಯ ಕತ್ತು ಕೊಯ್ದು ಸಾಯಿಸುವ ಕ್ರೂರಿಗಳು ನಾವಲ್ಲದಿದ್ದರು ನಮ್ಮ ಜೀವನದುದ್ದಕ್ಕೂ ಜೊತೆಗಿದ್ದ ಗೋಮಾತೆಯ ಸಾವು ನಮ್ಮಿಂದೇಕೆ ಗೋ ಹತ್ಯೆಯ ಅನಾಚಾರ
ನಮ್ಮಲ್ಲಿ ಇನ್ನು ಉಳಿದಿರುವುದೇಕೆ..............

ಈ ಭುವಿಯ ಮೇಲೆ ಜನಿಸಿದ ಪ್ರಯೊಂದು ಜೀವಿಗೂ ಜೀವಿಸುವ ಹಕ್ಕಿದೆ ನಮ್ಮಾಗೆ
ಪ್ರತಿಯೊಂದು ಪ್ರಾಣಿಗಿರುವುದು ಪ್ರಾಣನೆ ಅದಕ್ಕಾಗುವುದು ನಮ್ಮಾಗೆ ನೋವೇನೇ........

- ಚುಕ್ಕಿ

09 Jun 2017, 02:50 pm

ಪ್ರೀತಿಗೆ ಸಾವಿದೇ ಗೇಳತಿ

ಒಂದು ಪ್ರೀತಿ ಸತ್ತಾಗಲೆ
ಮತ್ತೊಂದು ಪ್ರೀತಿ
ಹುಟ್ಟುವುದು
ಕೊನೆಗೆ ನೀ ನಿರೂಪಿಸಿದೆ
ಗೇಳತಿ
ಪ್ರೀತಿಗೆ ಸಾವಿದೆ ಎಂದು.........
............ಅನಿ

- anil

09 Jun 2017, 01:06 pm

"ಪ್ರೀತಿಯಿಂದ ಕೊಟ್ಟಿದ್ದು "

ಪ್ರೀತಿಯಿಂದ ಕೊಟ್ಟಿದ್ದು ಅನಿಸುತ್ತೆ
ಬೆರಳುಗಳ ಮಡಿಯಲ್ಲಿ ಕುಳಿತು
ಪಾದಗಳು ಇಳಿಬಿಟ್ಟಾಗ
ಹೆಜ್ಜೆ ಗುರುತಾಗಿ ಉಳಿಯುತ್ತದೆ

ಆ ಗುರುತುಗಳು ಎತ್ತಾದರೆ
ಎತ್ತು ತುಳಿದ ಹೆಜ್ಜೆ ಗುರುತಲ್ಲಿ
ಚಿಗುರೊಡೆದ ಪೈರಿನಂತೆ
ಚಿಗುರುತ್ತಿದೆ ಭಾವಗಳು

ಪ್ರೀತಿಯಿಂದ ಕೊಟ್ಟಿದ್ದು ಅನಿಸುತ್ತೆ
ಮೈ ಮನದಲ್ಲಿ ಕುಳಿತು
ಅವರ ನೆನಪುಗಳು ಇಳಿಬಿಟ್ಟಾಗ
ಕವನಗಳಾಗಿ ಉಳಿಯುತ್ತಿದೆ ಕಾಗದದಲ್ಲಿ

"ಪ್ರೀತಿಯಿಂದ ಕೊಟ್ಟಿದ್ದು ಏನೆಂದು ತಿಳಿಸುವಿರ"

- ಹೇಮಚಂದ್ರ

09 Jun 2017, 10:36 am