ಹೃದಯದೊಳಲಗೋಗಿ ಕೇಳಿದ ಒಂದು ಪದ ನಿನ್ನನು ಇದು ನಿನ್ನ ಹೃದಯವಾ ಎಂದು ಅಂದು ............
ನೀ ಮೌನಿಯಾದ ಕ್ಷಣ ಅದು ಹೇಳಿತು ನನಗೆ ಇಂದು ನಿನ್ನ ಮಾತಿಲ್ಲದೆ ನನ್ನ ಬಡಿತಸಾಧ್ಯವಿಲ್ಲವೆಂದು,ನಿನ್ನ ನಗುವಿಲ್ಲದೆ ನನ್ನ ಚಲನವಲನ ಸ್ಥಗಿತವೆಂದು ಹಾಗಾದರೆ ಅದು ನಂದೇನಾ ಅಲ್ಲಿರುವುದು ನಾನಾದರೆ ಇಲ್ಲಿ ನಿನ್ನಿಂದಾ ದೂರವೇಕೆ ಗೆಳೆಯಾ........
ಏಕೆಂದರೆ ಅಲ್ಲಿನ ನನ್ನ ಬಿಂಬ ಇಲ್ಲಿರುವ ನನ್ನ ಹೃದಯದಜೊತೆ ನಿನ್ನ ಹೃದಯ ಕಳೆದಸಮಯದಿಂದಲೇ ಅಲ್ಲವೇ ನನ್ನ ರೂಪ ನಿನ್ನ ಹೃದಯದ್ದಾಯಿತು.............
ನನ್ನ ಮನದ ಮನೆಯಲಿ ಮನೆ ಮಾಡಿ ನೀ ಕುತಂತೇ
ಹಸಿದ ಬಾಳಲಿ ಉಸಿರಾಗಿ ನೀ ಬಂದಂತೇ
ಮನದ ಮುಗಿಲಲ್ಲಿ ಮಳೆಹನಿಗಳ
ನೀ ಸುರಿದಂತೆ
ಜೇನಿನ ಗುಡಲಿ ಸಿಹಿಜೇನ ನೀ
ಸವಿದಂತೆ
ಸೋತ ಸಾಲಿನಲ್ಲಿ ಗೆಲುವಿಗೆ ನೀ ರುವಾರಿಯಾದಂತೆ.. ಈ ಪದಗಳ ಸಾಲುಗಳ ಪೋಣಿಸೋ
ಪೂರ್ಣಿಮ ನೀ ಬರೆದಂತೆ
ನನ್ನ ಬಾಳ ಬದುಕಿನಲಿ ನೀ ಜೊತೆ ಜೊತೆಯಾಗಿ ಹೆಜ್ಜೆ ಹಾಕಿದಂತೇ
ಅಂದಗಳ ಸಂಕೀರ್ಣ ಸಾವಿರ ಬೊಂಬೆಸಂಗ್ರಹದಿ ನೀ
ನೀ ಪಳ ಪಳ ಹೊಳೆದಂತೇ
ನನ್ನ ನೋವ ನಗಿಸೋ ಗುಳಿಕೆನ್ನೆ
ಕನ್ಯೆ ನೀ ನಾದಂತೆ
ಕನ್ನಡ ಕವನವಿದು ಉದಯೋನ್ಮುಖ ಬರಹಗಾರರ ತಾಣ
ಬರೆಯುವರೆಲ್ಲರು ಸುಂದರ ಕವಿತೆಗಳ ತೊಟ್ಟು ಪಣ
ಮನಸ ಭಾವ ಬಂಧನಗಳ ಬಿಡಿಸಿಡುವರು ಕವನಗಳಲೆ
ಯಾರು ಅರಿಯದವರ ಸುಖ ದುಃಖಗಳು ಹರಿದು ಬರುವವು ಪದಗಳಲೆ
ನಾನು ಸೇರಿ ಕಳೆದು ಹೋದೆನು ಕವನಗಳ ಮಧ್ಯದಲ್ಲೆ
ತುಂಬಿದಿರಿ ನನ್ನೊಳು ಬರೆಯುವ ಹಂಬಲ
ನಿಮ್ಮೆಲ್ಲರ ಸಹಕಾರ ಹುಟ್ಟಿಸಿತು ಬರೆಯುವ ಚಲ
ನಿಮ್ಮೆಲ್ಲರ ಸಹಕಾರ ಪ್ರೀತಿಗೆ ನಾನೆಂದು ಆಭಾರಿ
ನೀವೆಂದು ಬಾಳಲಿ ನಗುನಗುತ ಬಾಳಿರಿ
ನನ್ನೊಳಗಿನ ನನ್ನನು ಪರಿಚಯಿಸಿತು ಕನ್ನಡ ಕವನ
ನಿಮಗೆ ನನ್ನಯ ಮನಃಪೂರ್ವಕ ನಮನ
ಬರೆಯುವ ಕನಸು ನನಸಾದ ಜಾಗವಿದು, ಎಂದೂ ಮಾಡುವೆನು ಕವನದ ಮನನ
ಎಂದಿಗೂ ನಿಲ್ಲದೆ ಸಾಗುತಿರಲಿ ಕವಿಗಳ ಸೃಷ್ಟಿಸುತ್ತಿರುವ ಸಾಧನ
ಹೇಳೆಬೇಕೆನಿಸುತಿದೆ ಇಂದು ವಿದಾಯ
ಹೊತ್ತುಯ್ಯುತ್ತಿರುವೆನು ನೀವೆಲ್ಲ ನೀಡಿದ ಸದಾಷಯ
ನೀವೆಲ್ಲರು ತಿದ್ದಿದಿರಿ ನನ್ನ ನೀಡಿ ನಿಮ್ಮ ಅಭಿಪ್ರಾಯ
ಎಂದಿಗೂ ಜತನ ಮಾಡುವುದು ಅವುಗಳ ನನ್ನೀ ಹೃದಯ
ತುಂಬು ಮನಸಿನ ಧನ್ಯವಾದಗಳು ಎಲ್ಲರಿಗೂ
ನಿಮ್ಮ ಅಭಿಪ್ರಾಯ ಪ್ರೋತ್ಸಾಹಗಳೊಟ್ಟಿಗೆ ನನ್ನನ್ನು ಒಪ್ಪಿ ಸಹಕರಿಸಿದ್ದಕ್ಕೆ, ನಾನೆಂದು ಚಿರಋಣಿ....
ಗಾಳಿ ಜೋಕಾಳಿಗೆ ತೂಗುದೀಪವನಿಡುವೆ
ಮಂದಹಾಸದ ಅರಮನೆಯಲ್ಲಿ
ಅದನ್ನೀರುಸಿ ಬೆಳಗಿಸುವೆ ಬೆಳದಿಂಗಳ
ಬೆಳಕಿನಿಂದ ನನ್ನ ಪ್ರೀತಿಯ ಬತ್ತಿ ಹಚ್ಚಿ
ನಿನಗಾಗಿ..................
ನೀಬರುವ ದಾರಿಕಾಯುವೆ ಆ ದೀಪದ
ಬೆಳಕಿನಲ್ಲಿ ನಿನ್ನ ಗುಣಾಗಣವ ಮಾಡುವೆ
ಆ ದೀಪದ ಕಿವಿಯಲ್ಲಿ ಪಿಸುಮಾತನಾಡುತ
ಮುದ್ದು ಮುದ್ದಾಗಿ ನೀ ನನ್ನ ಜೊತೆಗಾಡಿದ
ಸೊಗಸಾದ ಮಾತುಗಳೇಳುತಲಿ...............
ಇಲಿಸಂಜೆ ವೇಳೆಯಲ್ಲಿ ಮನತಣಿಸಲು
ಬಂದ ನಿನ್ನ ನೆನಪು ಕಾಡುತ್ತಿತ್ತು ನನ್ನ
ನಿನ್ನ ಹೆಸರ ನೆನೆಸುತ್ತ ನನ್ನ ನಾಚಿಕಿಗೆ
ತಾನು ನಾಚುತ್ತಾ ..............
ಬೊಗಸೆಯಲ್ಲಿಡಿದ ತಿಳಿನಿರ ಸೆರೆಯಲ್ಲಿ
ನಗುತ ನಿಂತ ಚಂದಿರನು ಹೇಳುತ್ತಿರುವ
ನನಗೆ ನಿನ್ನ ನೋಡಿ ಮೇಲಿಂದ ನನ್ನ ನೆನೆದು ನೀ
ನನ್ನಾಗೆ ನಗುತ್ತಿರುಯೆಂದು ಗೆಳೆಯಾ...........
ಯಾರಾದರೂ ನನಗೆ ಕುರೂಪವಾಗಿ ಕಂಡರೆ
ನನಗನ್ನಿಸುವುದು,
ನನ್ನ ಮನವೇಕೆ ಇಷ್ಟೊಂದು ಕುರೂಪ?
ತೋರುತಿಹುದು ಎದುರಿನ ಮುಖದಲ್ಲಿ
ನನ್ನದೇ ನಿಜ ರೂಪ!
ಪ್ರತಿ ಮನುಜನ ಮುಖವೂ ಒಂದು ಕನ್ನಡಿ
ನಮ್ಮ ಮನದ ಭಾವನೆಗಳ ತೋರಿಸುವ ಕೈಪಿಡಿ
ಸುಂದರವಾಗಿದ್ದರೆ ನಮ್ಮ ಮನ
ಎದುರಿದ್ದವರ ಮುಖವೊಂದು ಹೂಬನ
ಕೊಳಕಾಗಿದ್ದರೆ ನಮ್ಮದೇ ಒಳ ಮನ
ತೋರುವುದು ಎದುರಿನ ಮುಖದಲ್ಲಿ
ತೊಳೆಯಲಾಗದ ನಮ್ಮದೇ ಕೊಳಕನ್ನ!
ತಿಕ್ಕಿ ತೊಳೆದಿಟ್ಟುಕೊ ನಿನ್ನ ಮನವ
ದಿನವೂ ತೊಳೆದಂತೆ ಹೊರ ಚರ್ಮವ
ಶುಭ್ರ ಮನದಲಿ ಹೊಳೆವುದು
ಎದುರಲ್ಲಿ ಕಾಣುವ ಪ್ರತಿ ಮುಖವು.