ಮೇಘಗಳ ತಿಳಿ ಸೆರಗಲ್ಲಿ
ನಕ್ಷತ್ರ ಕುಚ್ಚುಗಳ ಮೆರಗು
ತಂದಿದೆ ಸಂಭ್ರಮ...
ತಂಗಾಳಿಗು ತುಡಿತ
ಮೇಘಗಳ ಆಲಂಗಿಸಲು...
ತುಂತುರು ಹನಿಗಳ ಸಿಂಚನ
ಹಾಡಿದೆ ಸರಿಗಮ...
ಹಾಕಿದೆ ಹೆಜ್ಜೆ ಪುಳಕಿತ ಪ್ರಕೃತಿ
ಮೌನ ಮುರಿದು ಈ ದಿನ...
ಅಮ್ಮನ ಕೈ ತುತ್ತಿನ ಪ್ರೀತಿ ಗೊತ್ತಿಲ್ಲ
ಆ ಚೆಂದಮಾಮನ ತೋರಿ ತಿನ್ನಿಸುವವರಿಲ್ಲ
ಕಥೆ ಹೇಳುವ ಅಜ್ಜಿ ಅಮ್ಮಂದಿರನ್ನಂತು ನೋಡಿಯೆ ಇಲ್ಲ
ಬಾಲ್ಯದ ತುಂಟಾಟ ಖುಷಿಯ ಅನುಭವಿಸಿಲ್ಲ
ಚಿನ್ನಿದಾಂಡು ಲಗೋರಿಯನ್ನಂತು ಕಂಡವರೆ ಅಲ್ಲ
ಅಳಿಗುಳಿಮನೆ ಚೌಕಬಾರಗಳಂತು ಹೇಗಿರಬಹುದೆಂದು ತಿಳಿದಿರಲಿಕ್ಕಿಲ್ಲ
ಕುಂಟೆ ಬಿಲ್ಲೆ ಅಣ್ಣೆಕಲ್ಲಿನಂತ ಆಟಗಳನು ಮತೊಮ್ಮೆ ನೋಡಲಾಗುವುದಿಲ್ಲ
ಸ್ನೇಹಿತರ ಜೊತೆ ಊರ ಸುತ್ತಿ ಆಡಲಂತು ಇವರ ಬಿಡುವುದೇ ಇಲ್ಲ
ಮಣ್ಣಿನ ಪ್ರೀತಿಯ ಸಖ್ಯವ ಬಲ್ಲವರಲ್ಲ
ಮರಕೋತಿ ಆಟವನ್ನಂತು ನೋಡಿಯೆ ಇಲ್ಲ
ಮಣ್ಣಲಿ ಆಡಿ ಸಂತಸ ಪಡಲು ಮಣ್ಣೆ ಕಾಣುವುದಿಲ್ಲವಲ್ಲ
ಮರವೇರಿ ಆಟವಾಡಿ ಹುಬ್ಬಿ ಬೀಗಲು ಮರಗಳಿರಬೇಕಲ್ಲ
ಮಣಬಾರ ಪುಸ್ತಕ ಹೊತ್ತು ದಿನ ತಿರುಗುವರು
ಸಾಮಾನ್ಯ ಬದುಕಿನ ಜ್ಞಾನವ ಅರಿಯಲಾಗದವರು
ಅಕ್ಕ ಪಕ್ಕದ ಜನರನ್ನೆ ನೋಡಲಾಗದವರು
ಮನೆಯೊಳಗೆ ಸೇರಿ ಸೊರಗುತಿರುವರು
ಸಣ್ಣ ನೋವು ಸೋಲಿಗು ನಲುಗಿ ಹೋಗುವರು
ಸಣ್ಣ ಖುಷಿಯ ಸವಿಯನು ಸವಿಯದೆ ಮಂಕಾಗುವರು
ಬದುಕಿನ ಸ್ವಾರಸ್ಯವ ಅನುಭವಿಸಲಾರದೆ ಹೋಗಿರುವರು
ಬಾಲ್ಯದ ಚೆಲ್ಲಾಟ ತುಂತಾಟ ಖುಷಿಯ ಕಾಣದೆ ಬದುಕುತ್ತಿರುವರು
ಬಾಳಿದು ಇಂದಿನ ಮಕ್ಕಳ ಬಾಳಿದು
ಪ್ರೀತಿ ಎಂದರೆ ನೀನು...
ನಿನಗಾಗಿ ಕಾದಿರುವೆ ಅನುಕ್ಷಣವು
ನೀನು ಎಂದರೆ ಉಸಿರು...
ನಿನ್ನುಸಿರಲಿ ಒಂದಾಗಿ ಕಳೆಯುವೆ ಪ್ರತಿ-ಕ್ಷಣವು
ಎಂದು ಸೇರುವೆಯೋ ನನ್ನೊಳಗೆ ನೀನು...
ಕಾಯುತಾ ಕುಳಿತಿರುವೆ ನಿನಗಾಗಿ ನಾನು . . .
ಕೇಳದ ಮನಸ್ಸು ಹಠವು ಮಾಡುತಿದೆ
ಪ್ರಶ್ನೆಗಳು ಹಲವು ಮನವು ಕಾಡುತಿದೆ
ಮನ ಬಯಸುತಿದೆ ನಿನ್ನಯ ಸನಿಹ
ತಾಳಲಾರೆನು ಇನ್ನು ಈ ವಿರಹ
ಎಲ್ಲರಂತೆ ಅರಳಿದೆ ಈ ಭುವಿಯಲಿ ನಾನು
ಮನೆಯ ಜನರಂದರು ಛೆ!!!
ಹೆಣ್ಣು ಹುಟ್ಬಾರ್ದಿತ್ತೆ.. ಹಾಲು ಕರೆಯೊದು..
ನನ್ನ ಜಗತ್ತಲ್ಲಿ ಗಂಡಾಗಿ ಹುಟ್ಬಾರ್ದು...
ನಾಲ್ಕು ದಿನ ಕಟ್ಟಿದರು ಮನೆಯಲಿ
ಮತ್ತೆ ಅಟ್ಟಿದರು ಬೀದಿಗೆ..ಕೂಳು ದಂಡ
ತಾಯಿ ಮಮತೆಯ ಹಾಲು ದೂರ...
ತೊಟ್ಟಿಯ ಕಸವೇ ಆಹಾರ...
ಹಗಲು ಸುತ್ತುವೆ ಪೇಟೆ ಬೀದಿಯಲಿ
ಕಾಯುವೆ..ನೀವೆಸವ ಕೊಳೆತ ಹಣ್ಣು ತರಕಾರಿಗೆ
ಉಣ್ಣುವೆ ತರಾತುರಿಯಲಿ ಪ್ಲಾಸ್ಟಿಕ್ ಚೀಲದೊಡನೆ...ಹಸಿವಲಿ
ಹೀಗೆ ಬೆಳೆದೆ ಬೀದಿ ಬಸವನಾಗಿ...
ಶುರುವಾಯಿತು ನನಗೂ ಶನಿಯ ಕಾಟ...
ಮನೆಯಲ್ಲಿ ಶುರುವಿಟ್ಟರು ವ್ಯಾಪಾರದ ಆಟ..
ಬರುವ ಹಣಕೆ ಆಸೆಪಟ್ಟು
ಪೇಟೆಯಲಿ ಸುತ್ತುವಾಗ..ಕಟುಕರ ಮಾರಿ ಕಣ್ಣು..
ಒಮ್ಮೆ ಹೀಗೆ..ಕತ್ತಲಾಗಿತ್ತು
ಆತುರದಿ ನಡೆದೆ ಮನೆಯ ಕಡೆಗೆ
ಯಾರೊ ನನ್ನ ಕರೆದರು ಮೆಲ್ಲನೆ...
ಒಮ್ಮೆಲೆ ನಿಂತೆ..ಅಷ್ಟೇ..
ಹತ್ತಾರು ಕೈಗಳು ಹಿಡಿದವು ಬಲವಾಗಿ
ಎತ್ತೊಯ್ದರು ನನ್ನ ವ್ಯಾನಲಿ..ಕ್ಷಣಮಾತ್ರದಲಿ...
ಮಾರನೆಯ ದಿನ...ನೇತಾಡುತ್ತಿದ್ದೆ ಅಂಗಡಿಯಲಿ..
ನಿತ್ಯದಂತೆ ಜನ ಚೌಕಾಸಿ ಮಾಡುತ್ತಿದ್ದರು
ನನ್ನ ಮಾಂಸಕ್ಕಾಗಿ...
ನೂರು ದೆವರುಗಳನ್ನು
ನೂರು ಬಾರಿ ಮನದಲ್ಲಿ ನೆನೆದು
ವೀರ- ಶೌರ್ಯ ರಸಗಳನ್ನು
ಕರಗತ ಮಾಡಿಕೊಂಡು
ಹೇಡಿ ತನವ ದೂರವಿರಿಸಿ
ಎಲ್ಲರ ಮೆಚ್ಚುಗೆ ಗಳಿಸಲು
ಎಲ್ಲರನ್ನು ಏಕಾಗ್ರತೆಯಲ್ಲಿ
ಬಂದಿಸುವ ಪಣ ತೊಟ್ಟು
ತರಗತಿಗೆ ತೆರಳಿದೆನು..........
ಅರಿಯದ ಮಾರ್ಗಗಳಿಂದ
ತೂರಿ- ಹಾರಿ ಬಂದು ನನಗು
ಮುನ್ನವೇ ತರಗತಿಯಲ್ಲಿ ತನ್ನ
ಪ್ರಭಾವವ ತೋರಿಸುತ್ತ
ನೀ ಎಷ್ಟೇ- ದೈವಗಳ ಬೇಡಿದರು,
ಎಷ್ಟೇ- ರಸಗಳ ಮೈಗೂಡಿಸಿಕೊಂಡರು
ನನ್ನಿಂದ ನೀ ದೂರಾಗಲು ಸಾಧ್ಯವೇ
ಅಯ್ಯೊ- ಮೂರ್ಖಳೆ!
ನಾನು ಎಲ್ಲರಲ್ಲು ಇರುತ್ತೇನೆ ತಿಳಿ!
ಎಂದಿತು ತಲೆಯ ಮೊಟಕುತ........
ನಾನು ನಡುಗುತ್ತ...,,,,
ನಡುಕ ನನ್ನಲ್ಲಿ ಒಂದಾಗುತ್ತ....,,,,
ಒಂದೆ ನಾಣ್ಯದ ಎರಡು
ಮುಖಗಳು ಎಂಬಂತೆ
ಮುಗಿಯಿತು ಅಂದಿನ ತರಗತಿ ...
ಕೊನೆಗು ತರಾತುರಿಯಲ್ಲಿ....