ಅಪರೂಪಕ್ಕೂ ಪ್ರತಿರೂಪ ನೀನು
ಸಜ್ಜನಿಕೆಗೆ ಸಮಾನಾರ್ಥ ನೀನು
ಅಕ್ಕ ಅನ್ನೊ ಪದವಿಗೆ ಕಾರಣ ನೀನು
ಅಕ್ಕರೆಯ ಪ್ರೀತಿ ನೀಡುವ ಜೀವ
ಮಮತೆ ವಾತ್ಸಲ್ಯವ ಧಾರೆ ಎರೆವ ಅನುಜ
ಅಣ್ಣನಂತೆ ಸದಾ ಕಾಯುವ ಕಾವಲುಗಾರ
ನನ್ನ ಜೀವನದಲ್ಲಿ ಸಿಕ್ಕ ಅತ್ಯಮೂಲ್ಯ ಉಡುಗೊರೆ
ಯಾವ ಜನುಮದ ಅದೃಷ್ಟವೋ
ನೀ ನನ್ನ ಸಹೋದರನಾಗಿ ಬಂದದ್ದು
ಈ ಜೀವಕ್ಕೆ ಬೇರೆ ಏನೂ ಬೇಡಿಕೆಯಿಲ್ಲ
ಎಂದೆಂದಿಗೂ ನಮ್ಮ ಅನುಬಂಧ ಹೀಗೆ ಇರಬೇಕು
ಸದಾ ನೀ ನಗು ನಗುತಾ ಖುಷಿಯಾಗಿರಬೇಕು
ನೀ ನಡೆವ ದಾರಿಯಲ್ಲಿ ಏಳಿಗೆ ಯಶಸ್ಸು ತುಂಬಿರಲಿ
ನಿನ್ನ ಕಂಡ ಕನಸ್ಸೆಲ್ಲಾ ನನಸಾಗಲಿ
ಆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ
❤ಹುಟ್ಟು ಹಬ್ಬದ ಶುಭಾಶಯಗಳು ತಮ್ಮು❤
ಸಾಕಾಗಿದೆ ವಿರಹದ ಪಾಠ ನೀನ್ ಒಪ್ಪುವುದಾದರೆ ಸಿಹಿ ತುಂಬಿದ ತುಟಿಗಳಲ್ಲಿ ಸಾಕಾಗವಷ್ಟು ಚುಂಬನ ನೀಡುವೆ..
ನಮ್ಮಿಬ್ಬರ ಹುಚ್ಚು ಕಾಮಧಾರಣೆಯಿಂದ ಹೊರ ಬರುವ ಬೆವರು ಹನಿಗಳು ನದಿಯಾಗಿ ಹರಿಯಲಿ ಪ್ರತಿ ಸಲ ಬೇಕಂತಲೇ ಸೋತು ಮತ್ತೆ ಮತ್ತೆ ಗೆಲುವ ಆಟದಲ್ಲಿ ಹೋರಾಡಿ ಪ್ರಶಸ್ತಿ ನಮ್ಮದಾಗಿಸಿಕೊಳ್ಳುವ...!!
ಎಮ್.ಎಸ್.ಭೋವಿ...✍️ ತಪ್ಪಾಗಿದರೆ ಕ್ಷಮಿಸಿ...
ಕಳೆದ ಕ್ಷಣಗಳ ಮರಳಿ ಬಯಸಿದೆ
ಹೃದಯ..ಅದರ ತಪ್ಪೇನಿಲ್ಲ
ಜೊತೆಯಿರುವ ಕನಸ ಕಂಡ ಮನವು
ಈಗೇಕೊ ಸುಮ್ಮನಾಗಿದೆ..ಅದರ ತಪ್ಪೇನಿಲ್ಲ
ಕಾಣದಿದ್ದರೂ ಮತ್ತೆ ಮತ್ತೆ ನೋಡುವ
ಬಯಕೆ ಕಂಗಳಿಗೆ..ಅದರ ತಪ್ಪೇನಿಲ್ಲ
ಹುಡುಕಿ ಹುಡುಕಿ ನೆಪಗಳ ಕರೆದಿದೆ ನೆನಪು
ಹತ್ತಿರ ಬರಲು..ಅದರ ತಪ್ಪೇನಿಲ್ಲ
ಗೆಳತಿ ನಿನ್ನ ನಗುವ ಸದ್ದು ಗುನುಗಿದೆ
ಎದೆಯಲಿ..ನಂಗೇನೂ ಗೊತ್ತಿಲ್ಲ..!!
ಎಮ್.ಎಸ್.ಭೋವಿ...✍️