Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಜೀವನದ ಜೊತೆಯಲ್ಲಿ
ಬೆಳದಿಂಗಳ ಬೆಳಕಿನಂತೆ
ಸಾಗಲು ನನಗಿಷ್ಟ...........
ನಸುನಕ್ಕೂ ಗಗವೆಲ್ಲಾ
ತನ್ನ ನಗುವು ಚೆಲ್ಲುವ
ಚಂದಿರನ ಮುಗುಳ್ನಗೆಯಾಗಿರುವ
ತಾರೆಗಳ ಬೆಳಕು ಪಡೆಯಲು ನನಗಿಷ್ಟ.......
ಜೀವಕ್ಕೆ ಜೊತೆಯಾದ ಸಂಗಾತಿಯ
ಸಾಂಗತ್ಯದಲ್ಲಿ ಹಕ್ಕಿಯಂತೆ ಹಾರಡಲು
ನನಗಿಷ್ಟ.............
ಜೊತೆಯಲ್ಲಿ ಮಧುವಾಗಿ
ಸಿಹಿಯಂಚಿ ನಗುತಿರಳು ನನಗಿಷ್ಟ ನಾನಾಗಿ................
- ಚುಕ್ಕಿ
12 Jun 2017, 08:06 pm
ಒಂಟಿ ಮರದಿ ಎಲೆಗಳಿಲ್ಲ
ಒಂಟಿ ಕೋಗಿಲೆ
ನೀ ಮರದಿ ಕುಳಿತು
ಹಾಡಲದು ಚಿಗುರಲಾರದೇ!!
ಮೋಡದಲ್ಲಿ ಹನಿಗಳಿಲ್ಲ
ಮುದ್ದು ಗಿಣಿಗಳೇ
ನೀವು ಮುಗಿಲ ಮುಟ್ಟಿ
ಮುತ್ತನಿಡಲು ಮಳೆಯು ಸುರಿಯದೇ!!
ಕಡಲಿನಲ್ಲಿ ಅಲೆಗಳಿಲ್ಲ
ಓ ಜಲಚರಗಳೇ
ನೀವು ಹರುಷದಿ ಒಮ್ಮೆ
ಆಡಿ ಕುಣಿಯಲು ಅಲೆಯು ಬಾರದೇ!!
ಇರುಳಿನಲ್ಲಿ ಕಣ್ಣ ಮುಚ್ಚಿ
ಕುಳಿತರೆ ಏನಿದೇ
ಹಣತೆ ಹಿಡಿದು ನಿಂತ ಮೇಲೆ
ದಾರಿ ಕಾಣದೇ!!
ಬಾಳಿನಲ್ಲಿ ಒಂಟಿತನದ
ಗೋಳು ಅಡಗಿದೇ
ನೀ ಒಡನೆ ಬೆರೆಯೇ
ಒಂಟಿತನವು ದೂರ ಸರಿಯದೇ!!
- ಪಿ.ಜಿ.ಜ್ಯೋತಿ
12 Jun 2017, 08:04 pm
ಮಾತು ತಾನು ಇನ್ನ ನನ್ನ ಬಳಿ
ಮಾತನಾಡೆನೆಂದು ಮೌನದ ಜೊತೆಗೂಡಿ
ಮೌನಿಯಾಯಿತು ಈ ಕ್ಷಣ ತಾನೇಕೋ ತಿಳಿದಿಲ್ಲ ..............
ಮಾತಾಡಿ ಮೌನವಾಗಿರುವುದಕ್ಕಿಂತ
ಮೌನದಲ್ಲಿ ಮಾತನಾಡುವುದು ಉತ್ತಮ
ಏಕೆಂದರೆ ಯಾರಿಂದಲೂ ದೂರವಾಗುವ ಭಯವಿರುವುದಿಲ್ಲಾ...........
- ಚುಕ್ಕಿ
12 Jun 2017, 07:19 pm
ನಗೆಯ ಕೋಪದಿಂದ ಸುಮ್ಮನಾದ
ಮನಸು ಕಣ್ಣೀರು ಸುರಿಸುತ್ತಿದೆ
ನೀನಿಲ್ಲವೆಂದು.............
ಬಂದು ಬೆಳ್ಳಿತೆರೆಯಂತೆ ಬಂದು
ಹೋಗುತ್ತಿರುವೆ ನಗುವಾಗಿ
ನೀನು ನನ್ನಲ್ಲಿ.............
ಮೀಟಿನನ್ನ ಎದೆಯುಸಿರ
ಬಿಸಿಯೇರಿಸಿ ಅದರ ತಾಪಕ್ಕೆ
ನೊಂದು ನೀನೇ ಮಾರೆಯಾಗುತ್ತಿರುವೆ
ಮತ್ತೆ ಮಾತಿಲ್ಲದೆ ನನ್ನಲ್ಲಿನ ಮೌನವಾಗಿ.......
- ಚುಕ್ಕಿ
12 Jun 2017, 07:11 pm
ಹುಟ್ಟುವ ಕೂಸು ನೀನಾರೊ
ಬಲ್ಲವರಾರು......
ಆತಂಕದಲಿ ಕಾಯುವರು
ಬಂಧುಗಳು.......
ಅಲ್ಯಾರೊ ಕೂತು ಬೇಡುವರು
ವಾರಸುದಾರ ಬರಲೆಂದು
ಇಲ್ಲಿ ತಾಯಿ ಹೃದಯ ಬೇಡುವುದು
ನನ್ನ ಕಂದ ಆರೋಗ್ಯವಾಗಿರಲೆಂದು
ಒಡನೆಯೆ....ಮಗನೆ ಬೇಕೆಂದು!
ದೇವನು ದಯೆ ತೋರಿಸಲು
ಗಂಡು- ಹೆಣ್ಣಿನ ಜನನವಾಗಲು
ಆ- ತಾಯಿಯ ಕೋರಿಕೆ ಪಲಿಸಲು
ಮನದಲಿ ನುಡಿಯಿತು ಮಧುರ ವೀಣೆಯು.....ಇನಿಯನ ನಗುವಿನಲಿ
ಅತ್ತೆ- ಮಾವನ ಮೊಗದಲ್ಲಿ ಮಂದಹಾಸವು ಮೂಡಿತು
ಗಂಡು ಮಗುವಿನ ನೆರಳಲ್ಲಿ
ಹೆಣ್ಣು ಮಗುವಿನ ನೋವು ಮರೆಯಾಯಿತು.........
ಅಂತು ಒಬ್ಬ ಅಳಿಯ ಬಂದನೆಂದು
ಅತ್ತೆಯ ಮನವು ಸಡಗರದಿ
ತಾ ಓಲಾಡಿತು ಮೈದುಂಬಿ
ನಾಕವೆ ನಿಲಯವ ಆಶ್ರಯಿಸಿತು!
ಪುತ್ರ ವ್ಯಾಮೋಹಕ್ಕೆ
ಈ ಜನ ಸಿಲುಕಿರಲು
ಮೋಕ್ಷಕ್ಕಾಗಿ ಮೊರೆಹಿಡುವರು
ದುರಾದೃಷ್ಟವಶಾತ್
ಅವರೆ ಒಂದು ದಿನ ಬೀದಿಗಟ್ಟುವರು!
ಬಿಡಿರಿ ವ್ಯಾಮೋಹವ!
ಕಾಪಾಡಿ ಸಮತೋಲನವ!
ಶಾರಧ
- ಶಕುಂತಲಾ
12 Jun 2017, 06:19 pm
ಮನದೊಳಗಿನ ಮನೆಗೆ
ಎಲ್ಲಿಂದೆಲ್ಲೊ ಬಂದಿದ್ದಾರೆ
ಎಲ್ಲಿಂದೆಲ್ಲೊ ಕರೆದೊಯ್ಯುತ್ತಾರೆ
ನವಿಲು ನಾಟ್ಯದಂತೆ
ಯಾರಿವರು?
ಬಣ್ಣಗಳನ್ನು ಬಣ್ಣಿಸಿ
ಕಣ್ಣಿನ ಎಂಜಲು
ತರಿಸುತ್ತಿದ್ದಾರೆ ಅವಳ ಕುರಿತು
ಯಾರಿವರು?
ಕಾಲ್ಗೆಜ್ಜೆ ಸದ್ದಿಗೆ
ಮೈ ಜುಂ ಎಂದು
ಕೆರಳುಸುವರು ಯಾರು
ಯಾರಿವರು?
ಚಿಂತೆ ಇಲ್ಲದ ಚಿತ್ತ ಚಿತ್ರಿಸಿ
ಚಕ್ರದಂತೆ ತಿರುಗಿಸುತಿದ್ದಾರೆ
ಮರಳಿ ಹೊರಟುವರ
ಈ ಯವ್ವನದ
ಮನೆಯಲ್ಲಿ ತಿಳಿಯದ
ಜಿವಿಸುತ್ತಾರಿ ಯಾರವರು
ನನ್ನ ಮೈ ತುರಿಕಿಸಿಕೊಳ್ಳುವವರು!?
- ಹೇಮಚಂದ್ರ
12 Jun 2017, 04:11 pm
ಬದುಕಿನ ಬಯಲಾಟದಲ್ಲಿ
ಸೂತ್ರದಾರನ ಸೆರೆಯಲ್ಲಿ
ಪಾತ್ರದಾರಳಾಗಿ ಧರೆಯ
ತಾಗಿದಂದಿನಿಂದ..........
ದುಡಿಯುವ ಆಸೆ ಹೊತ್ತು
ದುಗುಡವ ಮನದಲ್ಲಿ ಹೂತು
ನಿರೀಕ್ಷೆಗಳ ಅಲೆಗಳಲ್ಲಿ
ಅಲೆಯುತಿಹೆನು...........
ನನ್ನೊಳಗಿನ ಪ್ರತಿಭೆಯು
ಹೊರ ಜಗತ್ತ ನೋಡಲು
ಹವಣಿಸುವುದು,ಇನ್ನೊಂದೆಡೆ
ನಡುಗುವುದು ಹೆದರಿ.........
ಏನಾಗುವುದೊ ಎಂಬ ಭಯದಲಿ......
ಬಾಳ ದೋಣಿ ಸಾಗಲು
ಬೇಡಿದೆ ಸದಾವಕಾಶ
ಆತೊರೆಯುತಿರುವುದು
ಅನುದಿನವು ಉಸಿರ ಬಿಗಿಹಿಡಿದು
ಕಲಿಸುತ- ಕಲಿಯಲು......
ಶಾರಧ
- ಶಕುಂತಲಾ
12 Jun 2017, 03:58 pm
ಒಂದು ತಿಂಗಳ
ಉಪವಾಸ
ಪ್ರತಿಯೊಬ್ಬ
ಮುಸ್ಲಿಮರಿಗೆ
ಕಡ್ಡಾಯ
ಪ್ರತಿ ತಿಂಗಳ
ಹಲವು ದಿನಗಳ
ಉಪವಾಸ
ಎಲ್ಲಾ ಧರ್ಮದ
ಬಡವರಿಗೆ
ಅನಿವಾರ್ಯ
 ಅಲ್ತಾಫ್ ಬಿಳಗುಳ.
- ಅಲ್ತಾಫ್ ಬಿಳಗುಳ
12 Jun 2017, 03:15 pm
( ಬಾರಯ್ಯ ಮಳೆರಾಯ )
ಬರಗಾಲದ ಬೇಸಿಗೆಯ ಧಗೆಯಲ್ಲಿ.
ಬರಿದಾಗಿರುವ ಬಂಜರು ಭೂಮಿಯಲ್ಲಿ
ಕುಡಿಯಲು ನೀರಿಲ್ಲ. ತಿನ್ನಲು ಗಂಜಿಗೂ ಗತಿಯಿಲ್ಲ.
ಕಾಡ್ಗಿಚ್ಚಿಗೆ ಬಲಿಯಾಗುತ್ತಿವೆ ಇ ಕಾಡೆಲ್ಲ.
ತಿನ್ನಲು ಅಹಾರವಿಲ್ಲದೆ ಕೊನೆಯುಸಿರನು ಎಳೆಯುತ್ತಿವೆ ಪ್ರಾಣಿಗಳೆಲ್ಲ .
ಎಲ್ಲಿರುವೆಯೊ ಮಳೆರಾಯ ಭೊರ್ಗರೆಯುತ ಭಾರಯ್ಯ .
ಇ ಭೂಮಿಯು ಮಸಣವಾಗುವ ಮುನ್ನ ಮಳೆಯಾಗಿ ಧರೆಗಿಳಿದು
ಹಸಿರೆಂಬ ಉಸಿರನ್ನು ಧರೆಯಲ್ಲಿ ನೀ ಚೆಲ್ಲಿ ಜಗವನ್ನು ಕಲ್ಪವ್ರುಕ್ಷವಾಗಿ ಪರಿವರ್ತಿಸಲು ಭಾರಯ್ಯ
ಉಯ್ಯೊ ಉಯ್ಯೊ ಮಳೆರಾಯ...
( ಸಂತೋಷ್ // ಜೀತು )
- ಸಂತೋಷ್//ಜೀತು
12 Jun 2017, 10:16 am
ಚಿಟಪಟ ಸೋನೆಗೆ ಕೈಚಾಚಿ
ಭುವಿಯು
ಉಲ್ಲಾಸದಿ ಅರಳಿದ ಬೆಳಗು...
- Indushekar Chinivar
12 Jun 2017, 08:49 am