Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾ ಕಂಡ ಬೇಂದ್ರೆ.

ದುಃಖವೆನಿದ್ದರೂ ನೋವು ಎಷ್ಟಿದ್ದರೂ
ಸುಕವನಷ್ಟೇ ಉಣಿಸಿದಿರಿ ನೀವೂ
ಒಡಲ ಬಡಬಾಗ್ನಿಯಲಿ ಬೆಂದು
ನೋವನ್ನೇ ಗಾನಕ್ಕೆ ತೆತ್ತು ಬೇಂದ್ರೆಯಾದಿರಿ

ಜೀವನದ ಸಿಹಿಕಹಿಗಳ
ನಾಕುತಂತಿಯಲಿ ಮೀಟಿ
ಯಾಕಾಗಿ ಬೇಕಾಗಿ ಸಾಕಾಗಿ ಕುಣಿಸುತ್ತಾ
ಉಯ್ಯಾಲೆಯಾಡಿಸಿ ನಗಿಸಿದಿರಿ

ಸಾದಕರೆಲ್ಲರ ಸಾದನಕೇರಿಗೆ
ಕೈಬೀಸಿ ಬಾ ಹತ್ತಿರ ಎಂದಿರಿ
ಕನ್ನಡಾಂಬೆಯ ಚೈತನ್ಯ ಪೂಜೆಯನ್ನು
ಜಗ ಹೋಗಳುವಂತೆ ಮಾಡಿದಿರಿ

ಜ್ಞಾನ ಪೀಠ ದ ಗರಿಯನ್ನು
ಸಾರಸ್ವತ ಲೋಕಕ್ಕೆ ಮುಡಿಸಿದಿರಿ
ಸಹಸ್ತ್ರ ಪದ್ಯಗಳ ಸರದಾರರಾಗಿ
ವರಕವಿಯಾಗಿ ಮಾನಸದಲ್ಲಿ ಉಳಿದಿರಿ

ನಕ್ಕು ನಗಿಸಿ ರಮಿಸುವ ರಸಿಕರಿಗೆ
ಕೊಟ್ಟಿರಿ ನೀವೂ ಸಖೀಗೀತ,ಕಾಮಕಸ್ತೂರಿ
ಶ್ರಾವಣ ಬಂತು ಶ್ರಾವಣ ನಾದಲೀಲೆಯಾಡಿ
ಮುಗಿಲಮಲ್ಲಿಗೆ ಅರಳಿಸಿದಿರಿ

ಪಾತರಾಗಿತ್ತಿ ಪಕ್ಕದಲಿ ಕೂತು
ಇಳಿದುಬಾ ತಾಯಿ ಎಂದು ಗಂಗೆಯ ಕರೆದು
ಹಿಂದ ನೋಡದ ಗೆಳತಿ ಎಂದು ಬರೆದು
ಕಾವ್ಯ ಪ್ರಭೆಯ ಬೆಳಗಿಸಿದಿರಿ
ಗೆಳೆಯರ ಗುಂಪಿನ ನಾಯಕರಾದ
ನಿಮಗೆ ನಮ್ಮ ನಮನ

ಶಾಸ್ತ್ರವಾಗಿ,ಧರ್ಮವಾಗಿ ಯೋಗಜ್ಞಾನವಾಗಿ
ಅರಳು ಮರಳಿನ ಸತ್ಯದರ್ಶನ ಮಾಡಸಿ
ಗಿಡ ಗಂಟೆಯ ಕೊರಳೊಳಗಿಂದ
ದ್ವನಿಯಾಗಿ ಹೋಮ್ಮಿದಿರಿ
ರಾಶಿ ರಾಶಿ ಮುತ್ತುಗಳ ಬಿಟ್ಟು
ಜೀವನ ಯಾತ್ರೆ ಮುಗಿಸಿದ
ನಿಮಗೆಇದೋನಮನ, ನಿಮಗೆಇದೋನಮನ

- ಅನಿಲಕುಮಾರ್.ಜಿ.

13 Jun 2017, 07:59 pm

ನೊಂದ ಮನಸ್ಸು

ಮನಸ್ಸಲ್ಲಿ ಬಚಿಟ್ಟೆ ನಿನನ್ನು
ಕನಸಲ್ಲಿ ತೆರೆದಿಟ್ಟೆ ನೋವನ್ನು
ನಿ ಬಂದು ಸೆರು ಮನಸ್ಸನ್ನು
ದುರಮಾಡು ನನ್ನ ನೋವನ್ನು

- Rajeshkiccha4

13 Jun 2017, 07:05 pm

ಸಾಲದ ಜೀವಿ

ಕಷ್ಟಗಿಳಿಗೆ ನೊಂದು ಕಣ್ಣೀರ ಸಾಗರ
ಜೀವನದ ಪಯಣವನ್ನು ದಾಟಳೆಂದು
ಹೊರೆತಿರುವೆ ಬಡ ಜೀವಿ ನಿನಿಂದು ಸಾಲಕಾಗಿ......

ಶ್ರೀಮಂತರ ಕಾಜಾಣ ಕಬ್ಬಿಣದ ಪೆಟ್ಟಿಗೆಯಲ್ಲಿ
ನಗುತ್ತಾ ಕುಳಿತಿರುವ ಲಕ್ಷ್ಮಿಯನ್ನು ಕೈಚಾಚಿ
ನೀ ಬೇಡುವೆ ಕಣ್ಣೀರ ಹೊರೆಸಲು ಬಾತಾಯೇ ಎಂದು ಸಾಲವಾಗಿ..........

ಬೆಂದ ಬಡಪಾಯಿಯ ನೋವು ನೋಡಲಾಗೆ
ಬಡ್ಡಿಯನ್ನು ಇನ್ನು ಹೆಚ್ಚು ಪಡೆದು ಉದ್ದಾರವಾಗಳು ಇನ್ನು ನಾಲ್ಕು ಜನರ ಕಣ್ಣೀರ
ಕುಡಿದು ಬದುಕಲು ಆಸೆಯಾಗಿ ಕೊಡುವರು ಲಕ್ಷ್ಮಿಯ ಮಕ್ಕಳು ತಮ್ಮಲ್ಲಿನ ಸ್ವಲ್ಪ ಹಣವನ್ನು ಸಾಲವಾಗಿ.................

ದುಡ್ಡು ನೋಡಿದ ದಲಿತರಂತೂ ನಗುಮುಖದ
ಸಂತಸಹೊತ್ತು ಮನೆಗೊಗುವಷ್ಟರಲ್ಲಿ
ಕಾದು ಕುಂತಿವೆ ನೂರು ಖರ್ಚು ಆ ಹಣವ ನುಂಗಲು...............

ಖಾಲಿಯಾಯಿತು ಕೈಯಂತೂ ಮತ್ತೆ ಮಾಮೂಲಿ ಯಥಾಸ್ಥಿತಿ ಅಂಗಳಾಚುವ ಪರಿಸ್ಥಿತಿ...........
ಬಂದರು ವಸುಳಿದಾರರು ತಿಂಗಳಯಿತೆಂದು
ಮನೆ ಬಾಗಿಲಿಗೆ ಕದ್ದು ಮುಚ್ಚಿ ತಾನಿಲ್ಲವೆಂದು
ಬಚ್ಚಿಟ್ಟುಕೊಂಡನು ಭಯದಿಂದ ಮನೆಯೊಳಗೆ..........

ತಾನು ನೋವನು ನಿಂಗುವುದು ಮರೆತು ಹೋದನು...........
ನೋವು ತನ್ನ ನುಂಗುತ್ತಿದ್ದರೆ ಕಣ್ಣೀರ ಮಡಿಲಲ್ಲಿ
ಮಲಗಿ ತಾನು ನೋಂದನು...........

- ಚುಕ್ಕಿ

13 Jun 2017, 03:31 pm

ಅದೇನೋ ಅವಸರ............

ಅದೇನೋ ಅವಸರ ನನ್ನ
ಮನಕೆ ನಿನ್ನ ನೋಡಿ ತಣ್ಣಗಾಗಲು
ತಾನು ನಿನ್ನ ನಗಿವಿನ ಹಾಗೆ..........

ಕುಂತು ನಿನ್ನ ಸನಿಹದಲ್ಲಿ
ಮಾತನಾಡಿ ಮನಸಿನಲ್ಲಿ
ಕೊಂಚ ನಿನ್ನ ಕಾಡಿ ಬೇಡಿ
ಮತ್ತೆ ನಿನ್ನ ಮಾತನಾಡಿ........

ಮಲಗುವಾಸೆ ನನಗಿಂದು ನಿನ್ನ
ಮಡಿಲ ಸ್ಪರ್ಶದಲ್ಲಿ ಬೆಚ್ಚನೆ
ಉಸಿರಿನಲ್ಲಿ...........

ಅದೇನೋ ಅವಸರ ನನಗೆ
ನಿನ್ನ ನೋಡುವ ತವಕದಲ್ಲಿ ನನ್ನ
ಮರೆಯುವ ಆಸೆಯಲ್ಲಿ.........

- ಚುಕ್ಕಿ

13 Jun 2017, 02:44 pm

ಅವಸಾನದಂಚಿನಲ್ಲಿ .... ಸುಪ್ತ ಪ್ರತಿಭೆಗಳು......

ಒಂದೇ- ಒಂದು ಹುಳಿ ಪೆಟ್ಟಿನಿಂದ
ಕಲ್ಲೊಂದು ಸುಂದರ ಶಿಲೆಯಾಗದು
ಒಂದೇ- ಒಂದು ಸಂದರ್ಶನದಿಂದ
ವ್ಯಕ್ತಿಯೊಬ್ಬನ ಪಾಂಡಿತ್ಯ ಅಳೆಯಲಾಗದು......

ಸುಂದರವಾದ ಉಪಹಾರ ನಿಲಯವು
ನೀಡುವುದೇ ರುಚಿಕರ ಉಪಹಾರ!
ಸಲಹಾಕಾರವೇ ಇಲ್ಲದ ಭೋಜನಾಲಯವು
ನೀಡಬಲ್ಲದು ಅದ್ಬುತ ರುಚಿಯ!

ಸುಪ್ತ ಪ್ರತಿಭೆ ಅರಿಯದು
ಮೆಚ್ಚಿಸುವ ಮಾರ್ಗ....
ಅವಕಾಶ ಸಿಕ್ಕರೆ ಮರೆಯದು
ದುಡಿಯುವ ಮಾರ್ಗ.....
ತೋರುವುದು ಎಲ್ಲರಿಗೂ
ಎಂದೆಂದೂ ಸನ್ಮಾರ್ಗ....


ಶಾರಧ

- ಶಕುಂತಲಾ

13 Jun 2017, 01:58 pm

ಹಂಬಲ

ಮನದೊಳಗಡೆ ಏನೋ ಒಂದು
ಸಿಹಿ ದುಗುಡವು ಅಡಗಿದೆ
ಮನ ಬಯಸುವ ಒಂದೇ..ಒಂದು
ಲಘು ಬೇಡಿಕೆ ಇಟ್ಟಿದೆ
ಕಾಣದೊಂದು ಮುಖವನೆಂದು
ನಾ ನೋಡುವೆ? ಎಂದಿದೆ
ಮುಖದ ಛಾಯೆ ನೆನೆದುಕೊಂಡು
ಹವಹವಿಸುವ ಹಾಗಿದೆ!

ಎಲ್ಲಿರುವೆ...? ನನ್ನ ಸಖಿ
ನಾ ತೊರೆದೆನು ಬಹಳ ದುಡುಕಿ!

ಕಡುಗತ್ತಲ ಕಪ್ಪು ಮಸಿ
ನಸು ನಗುವಿನ ನೋವು ಸೂಸಿ
ವಿರಹ ವಿನಃ ಕ್ಷಣಿಕ ಖುಷಿ
ಅಳು ಬರುತಿದೆ ಉಮ್ಮಳಿಸಿ...!

ಮನವು ವಿವಿಧ ಮುಖದ ಮನಸು
ಸೃಜನ ಭಾವ ಗಂಗೆಯಾಗಿ ಪವಿತ್ರ ನದಿಯಾಗಿರೆ
ನನ್ನ ಮನದ ದುಗುಡವನ್ನು ತೊಳೆವ ತಿಳಿ ಜಲವಾಗಿರೆ

ಬಾ ಬೇಗ ನನ್ನ ಮುದ್ದು ಸಖಿ
ನೀನೇ ನನ್ನ ಪ್ರಾಣ ಸಖಿ
- ದೇವ 'ನಾಯಕ' ಕಜ್ಜೇರ

- Dev

13 Jun 2017, 01:32 pm

"ಕರಿಕನ್ಯೆ"

ಕಪ್ಪು ಬಣ್ಣದ ಕರಿಕನ್ಯೆ
ಬಿಳಿ ಸೀರೆ ಉಟ್ಟು
ಕಾಲುಗಳಿಗೆ ಕಾಲ್ಗೆಜ್ಜೆ ತೊಟ್ಟು
ರಾತ್ರಿಯ ಸದ್ದು ಮಾಡುತ್ತಾ
ಹಾರಾಡುವ ಕೂದಲ್ಲಿ
ಹುಣ್ಣುಮೆ ಗಮಲಿನಂತ ಮಲ್ಲಿಗೆ
ಇಟ್ಟು ಸಿಂಗರಿಸಿಕೊಂಡಿದ್ದಾಳೆ
ಅಬ್ಬಾ.. ಕಪ್ಪು ಬಣ್ಣದಲ್ಲಿ
ಮಿಂಚುತ್ತಿರುವುದು ಹುಣ್ಣುಮೆ
ಚಂದ್ರನಾ...!!!!

- ಹೇಮಚಂದ್ರ

13 Jun 2017, 12:07 pm

ಕ್ಷಮಿಸಿ ಬಿಡು ನನ್ನ

ಕ್ಷಮಿಸಿಬಿಡು ನನ್ನ ನಿನ್ನ ಕಣ್ಣೀರು
ನೆಲಕ್ಕೆ ಜಾರುವ ಮುನ್ನ.........

ನಿನ್ನ ಮನದ ನೋಡನುಂಡು
ನಗಳು ನನ್ನಿಂದ ಆಗುತ್ತಿಲ್ಲ ಇನ್ನ..........

ಕೋಟಿ ಅಕ್ಷರಗಳು ಸಾಲುವುದಿಲ್ಲ
ನನ್ನಿಂದ ನೀನು ಪಡುತ್ತಿರುವ ನೋವು
ನೋಡಿ ನಾನನುಭವಿಸುತ್ತಿರುವ ವ್ಯಥೆಯ ತಿಳಿಸಲು ...................

ನನ್ನ ಅಂತರಂಗದಲ್ಲಿ ಹೇಳಲಾಗದ
ಮಾತು ನೂರಾರು ನೀನು ತೋರುವ
ಪ್ರೀತಿಗೆ ಸರಿದುಗುವುದಿಲ್ಲ ನಾನೋಡುವ ಮನುಜರ್ಯರು..........

ಕ್ಷಮಿಸಿಬಿಡು ನನ್ನ..............

- ಚುಕ್ಕಿ

13 Jun 2017, 01:44 am

ತುಂತುರು

----ಪರವಶವಾಗದು ಮನಸು ---

ಪ್ರೀತಿ ಹಸಿರಾಗಲಿ
ನಿನ್ನ ನೆನಪೇ ನನ್ನ ಉಸಿರಾಗಲಿ
ನೀ ಗೀಚಿದ ಪ್ರೇಮದ
ಮೊದಲ ಅಕ್ಷರ
ನನ್ನೆದೆಯ ಹಾಡಗಲಿ


ಕೂಡಿ ನಕ್ಕಿದ್ದು ಮರೆತರು ನಾ
ಹೇಗೆ ಮರೆಯಲಿ
ನಿನ್ನೆದೆಗೆ ಒರಗಿ ಅತ್ತ ಆ ಕ್ಷಣ
ಮೆರೆಯುವ ಪ್ರಯತ್ನಗಳು
ಸಾಕಗಿದೆಯಿನ್ನು
ಬೆರೆಯುವ ಘಳಿಗೆಗಳಿಗೆ
ಕಾದಿದೆ ಮನಸು

ಕಂಡು ಕಾಣದ ನೇನಪೊOದು
ನನ್ನಲೇ ನನ್ನ ರಮಿಸುತಿದೆ
ನೆನಪಿನ ಬೆಳ್ಳಿ ಎಳೇಗಳಿOದ ಬೆಸೆದು
ನಮ್ಮೋಲವಿಗಿOದು ಜೀವ ಕಳೆಯ ತಂದಿದೆ

ನೂರು ಆಸೆಗಳನ್ನರಳಿಸಿ
ಭಾವಗಳ ಓಲೆಗಳನೂ ಮನದಾಳದಲಿ
ಮುದ್ರಿಸಿ
ಮರತರೆ ಹೇಗೆ ?
ಹಟವೋoದೇ ನನ್ನದು
ಪರವಶವಾಗದು ಮನಸು.

- Chandni

13 Jun 2017, 12:18 am

ನೀನಿರಲು ನನ್ನ ಸನಿಹ....

ನೀನಿರಲು ನನ್ನ ಸನಿಹ
ಇನ್ಯಾರು ಬೇಡ ನಿನ್ನ ವಿನಹ
ಒಮ್ಮೆ ನನ್ನ ಸಮೀಪಿಸಿ ನೋಡು
ನನ್ನದೆಯ ತುಂಬಾ ನಿನ್ನದೆ ಹಾಡು.....

ನಿನ್ನದು ಕೊನೆಯಿರದ ಮೌನದ ಪ್ರಲಾಪ
ಎಂದಿಗೆ ತೋರುವೆ ನಿನ್ನ ಮಾತಿನ ಸಲ್ಲಾಪ
ನಿನ್ನ ಮಾತೆ ಆಗಲಿ ನನಗೆ ಕೊನೆಯಿರದ‌ ಆಲಾಪ
ತಿರುಗಿ ನೋಡು ಒಮ್ಮೆ ನನ್ನ ಮನಸಿನ ವಿಲಾಪ
ನೀನೆನೆ ನನ್ನ ಎಂದಿಗೂ ಮುಗಿಯದ‌ ಪ್ರೀತಿಯ ರೂಪ....

ನೀನೆದುರು ಬಂದರೆ ಏನೊ ಪುಳಕ‌
ಕನಸಿನೂರಲು ನಿನ್ನ ನೋಡಲು ನಿಲ್ಲದು ತವಕ
ನೀ ನನಗೆ ಕಾಣದಿದ್ದರೆ ನಾನಗುವೆ ಭಾವುಕ
ನಿನ್ನ ಜೊತೆಯಲಿ ಕಳೆಯುವ ಘಳಿಗೆಗಳೆ ನನಗೆ ರೋಚಕ
ಏತಕೆ‌‌ ನಾನೆಂದರೆ‌ ನಿನಗೆ ಇಂತ ಕುಹಕ‌
ನಿನ್ನ ನಗುವೆ ನನ್ನ‌ ಉಸಿರಾಟಕೆ ವಾಹಕ.......

ನಿನ್ನ ಒಲವಿನ ಹಾಡಿಗೆ ಆಗಲೇನು ವಾದಕ
ಒಪ್ಪಿ ಬಿಡಿಸು ನೀನಿರದ ನೋವು ನೀಡುವ ಬಾದಕ
ಬಂದರೆ ನೀನು ನಾನೆ ಆ ಖುಷಿಗೆ ಧನಿಕ
ನಾನು ನಿನ್ನ ಪ್ರೀತಿ‌ ಪೂಜಿಸೊ‌ ಆರಾಧಕ
ಇನ್ನ‌ೂ ನೋಡಬೇಡ ಒಪ್ಪಿ ಬರಲು ಜಾತಕ......

- ಭಾವನಿ...

12 Jun 2017, 11:08 pm