Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ವಸಂತಾಗಮನವಾಗಿದೆ
ಏಲ್ಲಿ ಮರೆತು ಮೆರೆಯಾದೆ
ತನ್ಮಯ ಮನವು ಸ್ಮರಿಸಿದೆ ನಿನ್ನೆನೇ
ಮರಳಿ ಬಾ ಗೂಡಿಗೆ
ಗುಟುಕಿಗಾಗಿ ಕಾದಿರುವೆ .
ನನ್ನ ನೀ ....ನಿನ್ನ ನಾ ಅರಿತಾಗ
ಭಾವಗಳ ಗೋಪುರ ಕಟ್ಟಿ ಸಂಭ್ರಮಿಸಿದೆ
ಮುಗಿಲೆತ್ತರಕ್ಕೆ ಮನಹಾರಿ ನಲಿದೆ
ಸ್ಪಂದಿಸು ಬಾ ನೀ ...ಈ ಸೂಕ್ಷ್ಮ ಮನಕೆ
ಸದಾ ನಿನ್ನದೇ ಕನವರಿಕೆ
ಹೂವಾಗಿ ಅರಳಿರುವ ಈ ಮನವು
ನಿನ್ನೋಲುಮೆಯ ಸ್ನೇಹವ ಕಾದಿದೆ
ಮೊಗ್ಗಿನ ಮನಕೆ ನೀ ಜಾರದಿರು
ಬೆಸೆದಿರುವ ಪ್ರೇಮವ ನೀ ದೂರದಿರು
ಇದುವೇ ನನ್ನಯ ಕೋರಿಕೆ ....
- Chandni
15 Jun 2017, 11:19 pm
ಮೂಡಣವ ನೋಡದ ಮುದ್ದಾದ
ಮನದೊಡತಿ ಕಣ್ಣೀರಲಿ ಮಿಂದು
ಬಾನಂಗಳಕೆ ಹರಿಸದಿರು ನಿನ್ನ ನೋವನ್ನು
ಕರಿಮೋಡ ಕವಿಯುವ ಹಾಗಿಂದು ನಿನೊಂದು............
ಕಣ್ಣೀರ ನನ್ನೊಳಗೆ ಕಲಿಸು ನಿನ್ನ ಸೊಗಸಾದ
ಕಣ್ಣಿಗೆ ಕಾಡಿಗೆಯ ಗೆರೆಯೆಳೆದು ನನ್ನ ಬಿಂಬವ
ನಾನಿರುವವರೆಗೆ ನಿನ್ನ ನಾಯನದಲ್ಲಿರಿಸು.............
ಕತ್ತಲಲ್ಲಿ ಸೆರೆಸಿಕ್ಕ ನೆರಳು ನೀನಲ್ಲ ನನ್ನೊಳವೆ
ಬೆಳಕಲ್ಲಿ ನಾನೋಡುವ ನೂರಾರು ಅಂದವಾದ
ಬಣ್ಣಗಳ ಹೊಳಪು ನೀನು ಮಾತಿಲ್ಲದ ಚೆಲುವೆ.......................
ಒಂದು ದಿನದಲ್ಲಿ ಬಾಡೋಗುವ ಹೂವಿನ ಅಲ್ಪಾಯಸ್ಸು ನಿನದಲ್ಲಾ ಬಂದಿಯಾಗದೆ ಮನವೇ....................
ನಿತ್ಯ ನೂತನ ಚೇತನಪಡೆಯುವ ಪ್ರಕೃತಿಯ ಉಸಿರು ನೀನು
ನನ್ನ ಪ್ರೇಮವೇ.........
- ಚುಕ್ಕಿ
15 Jun 2017, 06:31 pm
"ಈ ಸಂಜೆಯ ನನ್ನೊಳಗಿನ ಸವಿಗನಸು
ಮಾಡಲೊರಟಿತು ನನ್ನಾಸೆಯ ನನಸು
ಸರಸದ ಅರಸನಾದ ದಾರಿಯ ಸೊಗಸು
ಹೇಳಿತು, ಬರಿ ಬವಣೆಯ ಆಟ ಬಿಡು
ನಂಬುವುದು ಬೇಡ ಬೇರೆಲ್ಲಾ ಮೋಸ
ಒಳ್ಳೆಯದಾಗಲಿ. ನೀ ತೊರೆ ಮನಸ್ಸಿನ ಕಸ
ಒಂದಲ್ಲಾ ಒಂದು ದಿನ ನೀ ಮುಟ್ಟುವೆ ಆಗಸ....."
- ನಿಮ್ಮುಡ್ಗ ಆತ್ಮೀಯ Bore'S..!
- Ananth
15 Jun 2017, 06:02 pm
ನೀ ನಡೆಯುವ ಹಾದಿಯ ಮರದ ನೆರಳು ನಾನಾಗಬಾರದಿತ್ತಾ!!!
ನಿನ್ನ ಮೇಲೆ ಬೀಳುವ ಎಲೆಗಳು ನನ್ನ ಎದೆಯ ಸದ್ದಾಗಬಾರದಿತ್ತಾ......
ನೀ ಇಡುವ ಪಾದದ ಹೆಜ್ಜೆಯ ಕೆಳಗ ನನ್ನ ಮನದ ಹಾಸಿಗೆ.......
ತಂಪು ಗಾಳಿಯಲೆ ನನ್ನ ಜೀವದ ಅಪ್ಪುಗೆ...........
ತಾವರೆಯ ಹೊಲಪಲ್ಲಿ ಕೆಸರು ತುಂಬಿ ಹಸಿರು ಸೂಸುವ ನನ್ನ
ಮನದ ಮಲ್ಲಿಗೆ.........
ನಿನ್ನ ನೋಟದ ಹಿಂದಿರುವ ನಿನ್ನ ಮೈಮಾಟ ನೋಡಲೆಂದು ನನ್ನ ಮನದ ಸಂಕಟ.....
ನಿನ್ನ ಮನವ ಸೊಬಗ ನೋಡಿ ನಾ ಅದೃಷ್ಠವಂತನಾದೇ.........
ತುಳಸಿಯ ಪವಿತ್ರತೆಯ ಮಡಿಲಲ್ಲಿ ಮನಬೆಳಗುವ ದೀಪವಾದೆ...........
ನನಗಾಗಿ ನೀ ಬರೆದ ಕವನ ಮಂದಹಾಸವ
ಚಿಗುರಿಸಿತು ಮಾತಿಲ್ಲದೆ ನನ್ನ ಮೌನ ............
ದೂರದ ದಾರಿಯಲ್ಲಿ ನೀ ಬರುವ ದಾರಿಗಾಗಿ ಕಾದಿರುವುದು ನನ್ನ ಪ್ರಾಣ.........
- ಚುಕ್ಕಿ
15 Jun 2017, 04:23 pm
ಜನರ ಸಮಸ್ಯೆಗಳ
ಚರ್ಚಿಸಲು ಸದನಕ್ಕೆ
ಹಾಜರಾಗದ ಶಾಸಕರು...
ಮೋಜು, ಮಸ್ತಿ ,ಯಾತ್ರೆಗಳ
ಮಾಡುತ್ತ ಸಾಗುತ್ತಿದೆ
ಇವರ ದರ್ಬಾರು ....
ಇಂಥ ಪುಢಾರಿಗಳನ್ನು
ಮತ್ತೊಮ್ಮೆ ಆರಿಸಬಾರದು
ಪ್ರಜ್ಞಾವಂತರು...
ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
15 Jun 2017, 03:33 pm
ಮಾತನ್ನೊ ಗೆಳೆಯನ ಜೊತೆ
ಮೌನವೆಂಬ ಗೆಳತಿ ಇದ್ದರೆ
ಪ್ರೀತಿಯೇನೆಂಬ ಭಾವನೆ ಉಕ್ಕಿಬರುತ್ತದೆ......
ಭಾವನೆ ಉಕ್ಕಿಬರುವಾಗ
ಮೌನವೆಂಬ ಗೆಳತಿ
ಮಾತೆಂಬ ಗೆಳೆಯನಿಗೆ ಸ್ಪಂದಿಸಿದರೆ
ಸಂತೋಷ ತಾನಾಗಿ ಇವರಿಬ್ಬರ ಮಧ್ಯೆ
ನಗು ನಗುತ್ತಾ ತಾ ನಲಿಯುತ್ತದೆ...........
ನಗುತ್ತಿರುವ ಸಂತೋಷದ ಸಂತಸ ನೋಡಿ
ಎರಡು ಹೃದಯಗಳು ಆನಂದದಿಂದ
ಹರ್ಷವನ್ನು ವ್ಯಕ್ತಪಡಿಸುತ್ತವೆ............
ಮಾತೆಂಬ ಗೆಳೆಯನ ತುಂಟನಕ್ಕೆ
ಮನಸೋತು ಮೌನವು ಮಾತಾಗಿ
ಬದಲಾಯಿತು ಮಾತಲ್ಲಿ ಮರೆಯಾಯಿತು........
ಇವರಿಬ್ಬರ ಸಂಭಾಷಣೆಯಲ್ಲಿ ಚುಂಬನದ
ಸುರಿಮಳೆ ಎಲ್ಲರ ಮನಸೆಳೆಯಿತು ಪದಗಳಾಗಿ
ನಾ ಬರೆದ ಕವನದ ರೂಪವಾಗಿ...........✍
- ಚುಕ್ಕಿ
15 Jun 2017, 03:33 pm
ಕನ್ನಡ ಈ ನೆಲ
ನೆಲದ ಗಮಲಿನಂತೆ ಅರಳಿದೆ
ವರ್ಣ ಮಾಲೆ ಹೂವಿನಂತೆ
ಉದುರುತ್ತಿದೆ ನೆಲದಮೇಲೆ
ಸಾಹಿತ್ಯ ನೆಲದ ಒಳಗಿನ ಬೇರು
ಕಾವ್ಯ ಹಳೆ ಬೇರಿನ ಹೂಸ ಚಿಗುರು
ಕವಿತೆ ಕೊಂಬೆಯಂತೆ ಅರಳಿ
ಭಾವಗಳು ಎಲೆಯಂತೆ ಚಿಗುರಿ ನಂತಿದೆ
ಅಲ್ಲಲ್ಲಿ ಈ ಕವಿಗಳೆಂಬ ಪಕ್ಷಿಗಳು
ಕವನವೆಂಬ ಗೂಡುಕಟ್ಟಿ ಕೂಗುತ್ತಿವೆ
ಕಾವ್ಯಪ್ರೆಮಿಗಳು ಈ ಮರದ ಕೆಳಗೆ
ಕುಳಿತು "ಕನ್ನಡ ಕಸ್ತೂರಿಯಲ್ಲವೆ"ಎನ್ನುತ್ತಿದ್ದಾರೆ
- ಹೇಮಚಂದ್ರ
15 Jun 2017, 02:52 pm
ಪ್ರೇಮ ಪತ್ರ ಬರೆಯುತಿರುವೆ
ಪ್ರೇಮಿ ನಾನಲ್ಲ!
ಅನನ್ಯ ಪ್ರೀತಿ ವ್ಯಕ್ತ ಪಡಿಸುತ್ತಿರುವೆ
ನನ್ನ ಪ್ರೇಯಸಿಗಲ್ಲ
ಅನ್ಯ ಮನಗಳ ದಾರ ಹೊಸೆದು
ಸ್ನೇಹವೆಂಬ ತೈಲ ಹಾಕಿ
ಮಧುರ ಪ್ರೇಮದ ದೀಪ ಹಚ್ಚಿ
ಎರಡು ಮನಗಳನು ತೃಪ್ತಿ ಪಡಿಸುತಿರುವೆ
- Dev
15 Jun 2017, 02:23 pm
ಮಿಂಚಿನ ಓಟದಲಿ ಆ ನೇಸರಗಳು
ಹುಡುಕುತಿವೆ ಗೆಳತಿಯ...... ನಡುಗುತಿವೆ ಕೈ- ಕಾಲುಗಳು
ಮಾತನಾಡಿಸಲು ಭಯ.....
ಒಡನೆ ಹನ್ವಸ್ಥಿ ಬಿಸಿಯಾದೀತು
ಜೋಕೆ,ಎಚ್ಚರಿಸಿದನು ಗೆಳೆಯ....
ಪ್ರೀತಿ- ಪ್ರೇಮದ ಅರಿವಿಲ್ಲದ ಹುಡುಗಿ
ತಂದೆ- ತಾಯಿಯ ಒಲವಿನ ಬೆಡಗಿ
ತನ್ನ ಹಿಂಬಾಲಕ ರ ಹುಡುಕುತ
ಸಾಗಿದಳು ತನ್ನ.....
ಹೆಜ್ಜೆಗಳೊಂದಿಗೆ ಮೆಲುಕಾಕುತ.....
ಅವನು-ಅವಳ ನೋಡುವುದರಲ್ಲೆ
ಕಳೆದ ಎರಡು ವರುಷ.....
ಅವಳು ಮುಗಿಸಿದಳಷ್ಟರಲ್ಲೆ
ಪದವಿ ಪೂರ್ವದ ಎರಡು ವರುಷ....
ಮುಂದೆ ಕಾಡಿತು ಅವನಿಗೊಂದು
ಚಿಂತೆ......
ನೋಡಲಾಗದೆ ಅವಳನಿನ್ನೆಂದು
ನನ್ನ ಜೊತೆ....
ಅಕಸ್ಮಾತ್ತಾಗಿ ಎದುರಾಗಲು
ಅವಳೊಂದು ದಿನ...
ಪ್ರೀತಿಯ ಮೊಂಬತ್ತಿ ಹಿಡಿದು
ಧೈರ್ಯ ಮಾಡಿ ಹೊರಟ
ಮಾತನಾಡಿಸಲು ಈ ದಿನ.....
ಅವಳು ನುಡಿದಳು ನಿನಾರು?
ಅರಿಯೆನು ನಾನೆಂದು.......!
ಭಗ್ನ ಪ್ರೇಮಿಯ ಹೃದಯ ಜಾರಿ
ನಾ ಅಂದೆ ಮಾತನಾಡಿಸಿದಿದ್ದರೆ
ಅವಳಾಗುತಿದ್ದಳೇನೋ ......?
ನನ್ನ ಮಧನಾರಿ.......
ಆದರೆ ,ನಾನಾದೆ ಒಂದು
ಕುರಿ....!
ಶಾರಧ
- ಶಕುಂತಲಾ
15 Jun 2017, 11:55 am
ಅದೊಂದು ದಿನ ಮುಂಜಾನೆ ನಾ ಹೊರಟಿದ್ದೆ ,
ಸೂರ್ಯನೂ ಎದ್ದಿರಲಿಲ್ಲ,
ಅಂದಿನ ಚಳಿಗ ಹನಿ ನೀರು ಮಂಜಾಗುತ್ತಿತ್ತು ,
ಅರೆ ಯಾರೋ ನರಳುತ್ತಿದ್ದಂತೆ ಭಾಸ ,
ಆ ಶಬ್ದವನ್ನೇ ಹಿಂಬಾಲಿಸಿದೆ ,
ಇನ್ನೂ ಘಾಡವಾದ ಕತ್ತಲೆ ಸರಿದಿರಲಿಲ್ಲ ,
ಅಲ್ಲಿದ್ದದ್ದು ಪ್ರಾಣಿ ಎಂದು ಭಾವಿಸಿ,
ಹತ್ತಿರ ಹೋದೆ , ಭಯದಿಂದಲೆ,
ಏನಾಷ್ಚರ್ಯ ಅದು ನನ್ನಂತೆ ಮಾನವ,
ಒಂದು ತುಂಡು ಬಟ್ಟೆ ಬಿಟ್ಟರೆ
ಅವನಲ್ಲಿ ಏನೂ ಇಲ್ಲ ,
ಮರಕ್ಕಂಟಿದ ಬಳ್ಳಿಯಂತೆ ,ಮಾಂಸವೆಲ್ಲ
ಕರಗಿಹೋಗಿ ಅಳಿದುಳಿದ ಮೂಳೆಯಲ್ಲೆ
ಅವನ ದೇಹ ನಡುಗುತ್ತಿತ್ತು.
ನನ್ನೊಂದು ಪ್ರಶ್ನೆಗೆ ಅವನು ಕೊಟ್ಟ ಉತ್ತರಕ್ಕೆ ,
ಕಲ್ಲಿಗೂ ಕಣ್ಣೀರು ಬರಬಹುದು,
ಬೆಟ್ಟವೇ ಕರಗಿ ನೆಲಕಚ್ಚಬಹುದು,
ಆ ಒಂದು ಮಾತಲಗಲ್ಲೆ ಅಡಗಿತ್ತು ಅವನೆಲ್ಲ
ನೋವು , ಯಾತನೆ,ಅಸಹಾಯಕತೆ,ಭಯವೆಲ್ಲವು.......
ಅದುವೇ ಕ್ರೂರ ಹಸಿವು...!
ತುತ್ತಿಗಾಗಿ ಏಕೆ ಜಗಳ, ತುತ್ತೇ ನಮ್ಮೆಲ್ಲರ ಜೀವಾಳ,
ಮರೆಯಬೇಡವೋ ಮನುಜ ತುತ್ತಿನ ಮೂಲ,
ನೀನೆಸೆಯೋ ಒಂದು ತುತ್ತಲ್ಲೆ ಅಡಗಿದೆ ಒಂದು
ಜೀವ ......ಎಚ್ಚರ ...!
*ಅನ್ನದಾತ ಸುಖೀ ಭವ*
< ಶುಭೋದಯ >
-ಮನೋಜ್ -
- manoj kumar
15 Jun 2017, 06:31 am