Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೂಗುತಿ ಬೊಟ್ಟು

ಅವಳ ಮೊಗದಲಿ ಕಂಡ
ಹೊಳೆವ ಮೂಗುತಿ ಬೊಟ್ಟು
ಕಳೆದು ಹೋಯಿತು ಏಲ್ಲೋ
ಅವಳ ನಗುವಿನೊಡನೆ!!

ಮದದಿ ಬೀಗುತಲಿತ್ತು
ತಾನೆಂದೂ ಅವಳ ಸೊತ್ತು
ಹೇಳದೇ ಉದುರಿತು
ಎಲ್ಲೋ ಕಾಣದಂತೆ!!

ಹುಡುಕಿ ಹೊರಟಿಹೆ ನಾನು
ಕಳೆದ ಮೂಗುತಿ ಬೊಟ್ಟ
ಮತ್ತೆ ಮರಳದೇ ಹೊಳಪು
ಅವಳ ನಗುವಿನೊಡನೆ!!

- ಪಿ.ಜಿ.ಜ್ಯೋತಿ

16 Jun 2017, 07:59 pm

ತಿಂಗಳ ಬೆಳಕು

ತಿಂಗಳ ಬೆಳಕಲಿ
ಕಂಗಳ ಕಾಂತಿಯು
ಸೋರಿಕೆ ಆದವು
ನಿನ್ನಯ ಎದುರಲಿ!!

ಮನದಲ್ಲಿ ನೂರು
ಪದಗಳ ಸಾಲು ಗೀಚಿ
ಮೌನಿಯಾದೆ ನಾನು
ನಿನ್ನ ಉಸಿರು ಸೋಕಿ!!

ತಿರುಗೋ ಭೂಮಿ ತಾನು
ಬುಗುರಿಯಂತೆ ಸುತ್ತಿ
ತಂದು ನನ್ನನ್ನು ಇಲ್ಲಿ
ಸ್ತಿರವಾಯಿತು ಒಮ್ಮೆ ನಕ್ಕು!!

ತಂಪು ಗಾಳಿಯೀಗ
ಮಂದಹಾಸ ಬೀರಿ
ತನುವ ಸೋಕಿದಾಗ
ನಾ ನನ್ನ ತನವ ಮರೆತೆ!!

- ಪಿ.ಜಿ.ಜ್ಯೋತಿ

16 Jun 2017, 07:45 pm

ಹುಣ್ಣಿಮೆಯ ಜಾತ್ತೆ

ಇಂದು ಹುಣ್ಣುಮೆ ಜಾತ್ರೆ
ತೊಳೆದ ಹೊಸಿಲ ಮೇಲೊಂದು ಹಸಿರೆಲೆಯ ಪತ್ರಿ
ಎತ್ತು ಬಂಡಿಗೂ ಎರಡು ಕುಂಕುಮದ ಬೊಟ್ಟು
ಮಡಿಯಾದ
ಜಾಂಡಿಗ ಜಾಡಿಸಿದ ಸಂದೂಕದಲಿ
ಹುಗ್ಗಿಯ ತಪೇಲಿ,ಹೆರತ ತುಪ್ಪದ ಗಿಂಡಿಗೆ ವಿಭೂತಿ
ಪೂಜೆ

ಕಣ್ಣು ತುಂಬಿದ ನೊಟ
ಇಳಿ ಹೊತ್ತಿನಲ್ಲಿ ಹೊರಟ ಬಂಡಿ ಸಾಲು
ತಿರುವಿನಲಿ ಮರೆಯಾದ ಜಾತ್ರೆ ದೀಪ
ಸುತ್ತಲೂ ಸುರಿಯುತ್ತದೆ ಚಂದಿರನ ಬೆಳಕು

- ಹೇಮಚಂದ್ರ

16 Jun 2017, 04:58 pm

ಗುಲಾಬಿ

ಮುದ್ದಾದ ಗುಲಾಬಿಯ ಮುಖದಲ್ಲಿ
ನಗುವು ನೋಡಿ
ಮನಸೋತೆ ನಾನಿಂದು.......

ಕೆಂಪುನನ್ನ ಕೆನ್ನೆಯಲ್ಲಿ ನಿಂತೋಯಿತು
ನಾಚಿಕೆಯಾಗಿ ನಿನ್ನ ನೋಡುತ್ತಾ........

ಹಳದಿ ನನ್ನ ಎದೆಯಲ್ಲಿ ಚಿಗುರಿಸಿತು
ಅಚ್ಚಳಿಯದ ಸ್ನೇಹವಾಗಿ..........

ಕೇಸರಿಯು ನನ್ನ ಕೈಯಲ್ಲಿ ಕರಗೋಯ್ತು
ನಿನ್ನ ಕೈಹಿಡಿದಾಗ ನಮ್ಮಿಬ್ಬರ ಪ್ರೀತಿಯ ಬೆವರಾಗಿ..........

ಗುಲಾಬಿಯಲ್ಲಿ ಗುಲಾಬಿ ಬಣ್ಣವು ನಿನ್ನ
ಗುಂಗಲ್ಲಿ ನನ್ನ ಮರೆಸಿತು ನಿನ್ನ ಪ್ರೀತಿಯು ತಾನಾಗಿ...........

ಬಿಳುಪು ನನ್ನಲ್ಲಿ ಬೆಳಕಾಗಿ
ಮರೆಯಾಯಿತು ನಗುವಾಗಿ...........
ಬಿಳಿಯಲ್ಲಿ ಏಳು ಬಣ್ಣಗಳು ರೂಪ ಪಡೆಯುತ್ತವೆ ಆ ಏಳರಲ್ಲಿ ಕೋಟಿಬಣ್ಣಗಳು ತಮ್ಮ ಸೊಗಸ ತೋರುತ್ತವೆ ನಮ್ಮ ಜೀವನವಾಗಿ..............

ಎಲೆಗಳಲ್ಲಿನ ಹಸಿರು ಬಣ್ಣವು ನೀನಿರುವವರೆಗೂ ನಿನ್ನೊಡನೆ ಇರಲು ತಿಳಿಸಿತು ನಿನ್ನ ಹೃದಯದ ನೆರಳಾಗಿ ಅದರಲ್ಲಿನ ಮುದ್ದಾದ ಗುಲಾಬಿ ನಾನಾಗಿ..............

- ಚುಕ್ಕಿ

16 Jun 2017, 04:52 pm

ಮೂಢನಂಬಿಕೆ

ರಾತ್ರಿಯಿಡೀ ಓದಿ ಬೆಳಗ್ಗೆ ಮೈ ಮೇಲೆ
ಹಲ್ಲಿ ಬಿತ್ತೆಂದು ಪರೀಕ್ಷೆಗೆ ಹೋಗದೆ
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಶಿಕ್ಷಣವನ್ನು.

ಕಪ್ಪು ಬೆಕ್ಕೊಂದ ರಸ್ತೆಯಲ್ಲಿ ಕಂಡು
ಮೊದಲ ದಿನದ ಕೆಲಸಕ್ಕೆ ಹೋಗದೆ
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಕೆಲಸವನ್ನು.

ಮಡಿಯೆಂದು ಮಡದಿಯನ್ನು ಮನೆಯ
ಹೊರ ಕೂರಿಸಿದ್ದಕ್ಕೆ ಹೊರಟಳವಳು ತವರಿಗೆ,
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಹೆಂಡತಿಯನ್ನು.

ಕಷ್ಟ ಬಂತೆಂದು ಸಿಕ್ಕೆಲ್ಲ ಮಾಂತ್ರಿಕರ ಬಲಿ
ಪೂಜೆ-ಗೀಜೆ ಮಾಡಿಸಿ
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಹಣವನ್ನು.

ನಿಲ್ಲಲು ಆಗದೆ, ಹೊಟ್ಟೆಗೆ ಹಿಟ್ಟಿಲ್ಲದೆ,
ಇರಲು ಸೂರಿಲ್ಲದೆ, ಮೂಢನಂಬಿಕೆಯ ನಂಬಿ
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಜೀವವನ್ನು.

- ಅಕ್ಷತ

16 Jun 2017, 04:25 pm

ಕಳ್ಳಬೆಕ್ಕು

ಬಂತು ಬಂತು
ಕಳ್ಳ ಬೆಕ್ಕು
ನಮ್ಮನೆಯೋಳಗ

ಹಾಲು ಇಟ್ಟಕಡೆ 
ಅದು ಇಟುಕಿ
ನೋಡ್ತದ

ಅತ್ತ ಇತ್ತ
ಸ್ವಲ್ಪನೋಡಿ
ಹಾಲು ಕುಡಿತದ

ಕುಡಿದು ಛಂಗನೆ
ಹಾರಿ ಓಡಿ
ಹೋಗ್ತದ 

--ಶ್ರೀರಂಗ ಪುರಾಣಿಕ

- Shrirang Puranik

16 Jun 2017, 02:19 pm

ಮಳೆಗಾಲದ ಒಂದು ದಿನ...

ನಿಂತ ನೀರ ಮೇಲೆ
ಹನಿಯುವ ಹನಿ ನೀರಿನ ಬಿಂದು
ನೀರಿನೊಡನೆ ಬೆರೆತಾಗ ಅರಳುವ
ಕಾಮನಬಿಲ್ಲು.

ಚಿಲಿ-ಪಿಲಿ ಸದ್ದಿನಲ್ಲಿ
ಬಣ್ಣ-ಬಣ್ಣದ ಪತಂಗಗಳ ನರ್ತನ,
ಮೂಲೆಯಲ್ಲಿ ಮುದುಡಿ ಕುಳಿತಿರುವ
ಪ್ರಾಣಿಗಳು.

ರಸ್ತೆಯ ಬದಿಯಲ್ಲಿ
ಬೆಳೆದ ಗಿಡ-ಮರಗಳು ಮಳೆಯಲ್ಲಿ
ನೆನೆದು ಮರಳಿ ಪಡೆದಿದೆ ತನ್ನ
ನಿಜ ಬಣ್ಣ.

ಎಲೆಗಳೆಲ್ಲ ಉದುರಿ ಸಾಯುವ
ಮರವೊಂದು ಚಿಗುರು ಬಿಟ್ಟಿದೆ,
ಎತ್ತ ನೋಡಿದರತ್ತ ಮರಗಳೆಲ್ಲ
ಹಸಿರುಮಯ.

ಮಳೆಗಾಲದ ಈ ದೃಶ್ಯವ
ನೋಡಲು ಚಾತಕ ಪಕ್ಷಿಯಂತೆ
ಕಾದ ನನಗೆ ಈ ದಿನ
ಅದ್ಬುತ!!!!!!!!!!

- ಅಕ್ಷತ

16 Jun 2017, 01:30 pm

ನಮ್ಮ ಸೈನಿಕರು

ನಮ್ಮ ಸೈನಿಕರು

ನಮ್ಮ ಯೋಧರ ಬಗ್ಗೆ ಹೆಮ್ಮೆ ಇರುವವರಿಗಾಗಿ.
..ಈ ಕವನ...

ನಮ್ಮ ಸೈನಿಕ ನಮ್ಮ ದೇಶದ ಬಂಗಾರ.
ಶತ್ರುಗಳ ಹೊಡೆದುರುಳಿಸುವಲ್ಲಿ ಈತ ಬಲು ಚತುರ.!
ಅವರ ಕಷ್ಟದಿಂದಲೇ ಕಾಣುವುದು ನಮ್ಮ ದೇಶ ಸುಂದರ.
ಹಾಕಿರಿ ಕಂಡೊಡನೆ ಇವರಿಗೊಂದು ಜೈಕಾರ.!

ನೀಡುವರು ನಮ್ಮ ನಿಮ್ಮೆಲ್ಲರಿಗೂ ರಕ್ಷಣೆ
ತಪ್ಪುವುದಿಲ್ಲ ದಿನನಿತ್ಯ ಶತ್ರುಗಳೊಡನೆ ಘರ್ಷಣೆ.!
ಇವರು ಸಮವಸ್ತ್ರದಲ್ಲಿ ಕಾಣುವರು ಬಲು ಆಕರ್ಷಣೆ
ಅವರೇ ನಮ್ಮ' ನಿಜ ದೇವರು' ಕೇಳು ನನ್ನಾಣೆ.!

ಕಾಯುವರು ನಮಗಾಗಿ ಹಗಲಿರುಳು ಕಾವಲು
ನಮಗಾಗಿ ನಿದ್ದೆ ಕೆಡುವುದು ದಿನನಿತ್ಯ ಇವರಿಗೆ ಮಾಮೂಲು!
ಇವರು ಬಿಡರು ದೇಶದೊಳಗಡೆ ಅಕ್ರಮ ಶಸ್ತ್ರಾಸ್ತ್ರ ನುಸುಳಲು.!
ಬಿಡರು ಶತ್ರುಗಳ ಗಡಿಯ ಎಲ್ಲೆ ಮೀರಲು.!
ಇವರೇ.ನಮ್ಮ ವೀರ ಯೋಧರು...!
ಇವರೇ..ನಮ್ಮ ವೀರ ಯೋಧರು..!

ಕಾಣುವ ದೇವರು ಗುಡಿಯೊಳು ಕುಳಿತಿರಲು
ಕಾಣದ ದೇವರು ಗಡಿಯೊಳು ನಿಂತಿಹರು.!
ಕೊಡು ದೇವ ನೀ ನೂರಾನೆ ಬಲವ..ಆ ಕಾಣದ ದೇವರಿಗೆ
ನೀಡು ದೇವ ಆ ಕಾಣದ ದೇವರಿಗೆ.ನೂರ್ಕಾಲ ಆಯುರ್-ಆರೋಗ್ಯ .!
ಇವರಿಂದಲೇ ದೇಶಕೆ ಬೆಳಕು..ಇವರಿಂದಲೇ ದೇಶಕೆ ಹೊಳಪು.!

- ಪ್ರಕುಲ್

16 Jun 2017, 10:36 am

ಏಕಾಂತಕೆ ಬಲಿಯಾಯ್ತ ನನ್ನ..

ನೆನೆದು ನಿನ್ನ, ಭಾವ ನವಿರ
ಮನಕೆ ಬೇಸರ ನೀನಿರದೆ..ಹತ್ತಿರ

ಚಿಕ್ಕ ಮುನಿಸು, ಹುಸಿ ಕೋಪಕೆ
ಹಟ ತೋರಿ ನಡೆದೆ ನೀ..ದೂರಕೆ

ನೀನಿಲ್ಲದೆ ಸಾಗದು ಬಾಳ ನೌಕೆ
ಎದೆಯು ಭಾರ ಈ ನಿನ್ನ..ಮೌನಕೆ

ಹಗಲಿರುಳು ಉರುಳಿ ಕಳೆದು ವರುಷ
ಏಕಾಂತಕೆ ಬಲಿಯಾಯ್ತ ನನ್ನ..ಹರುಷ

ನಿನ್ನೊಲುಮೆ ನುಡಿಗಾಗಿ ನನ್ನ ನಿರೀಕ್ಷೆ
ಸಾಕು ಮಾಡು ಈ ನಿನ್ನ..ಪರೀಕ್ಷೆ

- Indushekar Chinivar

16 Jun 2017, 10:06 am

ಬೆಳಕರಿಯಿತೆಂದು..........

ನಿದ್ದೆಯಾಗೆ ಜಾರಿದ ಕಣ್ಣು
ಅದರಲ್ಲಿ ನೀನಿರುವುದು ನೋಡು
ತಗಿಯಲ್ಲ ಅಂತಿದೆ...............

ಕನಸಾಗಿ ನನ್ನ ಸೇರುವುದು ನಿನ್ನ ತಪ್ಪು ನಾನೇನು ಮಾಡಲಿ ನಿನ್ನ ಬಿಟ್ಟು ಒಂಟಿಯಾಗಿ ಅಲ್ಲಿ ಬರಲಾಗುತ್ತಿಲ್ಲ ನನ್ನಿಂದ ..........

ಬೆಚ್ಚಗಿನ ನಿನ್ನ ಮಡಿಲು ನಿದ್ದೆಯಲ್ಲಿನ ನಿನ್ನ ಮಾತುಗಳು ಹೇಗೆತಾನೆ ತಿಳಿಯಲಿ ನಾನು ಬೆಳಕರಿಯಿತೆಂದು.............

- ಚುಕ್ಕಿ

16 Jun 2017, 12:39 am