Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೆರೆಯ ತಾವರೆ ತಂದು
ಕಡಲಿನ ಆಸರೆ ಇಡಲು
ಬೆಳೆವುದೇ..... ?
ಆ ತಾವರೆಯ ಬಯಲು
ಉಳಿವುದೇ.....?
ಆ ತಾವರೆಯ ನೆರಳು!!
- ಪಿ.ಜಿ.ಜ್ಯೋತಿ
20 Jun 2017, 06:50 pm
ತೆರೆದ ಮನಸಿನ ಪುಟವ
ನೀ ಓದಲು ಅರಿಯದೇ ಹೋದೆ....
ತೆರೆದುಕೊಂಡಿಹುದು
ಈ ನನ್ನ ಮನಸು.........
ಹಿಂತಿರುಗಿ ಬಂದೊಮ್ಮೆ
ನೀ ನನ್ನ ಸ್ವೀಕರಿಸು......
- ಪಿ.ಜಿ.ಜ್ಯೋತಿ
20 Jun 2017, 06:41 pm
ಸ್ವಚ್ಛಂದ ಆಕಾಶ ರೇಖೆ
ಮಿಂಚೊಮ್ಮೆ ಮರೆಯಾದುದೇಕೆ!!
ಆ ಚುಕ್ಕಿ ಆ ಚಂದ್ರಗೆ ಇಂದು
ನನ್ನಲ್ಲಿ ಹುಸಿ ಮುನಿಸು ಏಕೆ!!
ತಂಗಾಳಿ ಜೊತೆಯಲ್ಲಿ ಏಕೋ
ಆ ಮೋಡಕೆ ಹೊಸದಾಗಿ ಒಲವು!!
ಕರಗಿ ಸುರಿದಿರಲು ಮಳೆ ಹನಿಯು
ಧರೆಯಲ್ಲಿ ತಂಪಾದ ಚೆಲುವು!!
ಚಿಗುರು ಹಸಿರೆಲೆಗಳಿಗೂ ಇಂದು
ಸರಿಗಮಗಳ ನುಡಿಸಿದ ಆನಂದ!!
ಕಾದಿರುಳ ಕರಿ ನೆರಳ ಈ ಗಳಿಗೆ
ಮಳೆ ಹನಿಗಳ ಚಟ ಪಟ ತರು ಲತೆಗೆ!!
ಮನ ತುಂಬಿ ಮೈದುಂಬಿ ಆನಂದ
ಈ ಹನಿಗಳ ಜೊತೆ ಚಲ್ಲಾಡಿದೆ ಅಂದ!!
ಆ ಮೋಡ ತಾ ಕರಗಿ ಮಳೆಯಾಗಿ
ಸುರಿದಿರಲು ಎಲ್ಲೆಲ್ಲೂ ಆನಂದ!!
- ಪಿ.ಜಿ.ಜ್ಯೋತಿ
20 Jun 2017, 06:29 pm
ಕನಸಲಿ ಮರೆತೊದ ಕಣ್ಣೀರ ಹನಿಯೊಂದು ನನಸಲ್ಲಿ ನನ್ನನುಡಿಕಿ ಬಂತು ನೀನಿಲ್ಲದ ಕ್ಷಣ................
ಕತ್ತಲಲ್ಲಿ ಮರೆಯಾದ ನೆರಳೊಂದು ಬೆಳಕ ಬದಿಗೆ ಬಂತು ನಾನು ಇರುವೆನು ನಿನ್ನ ಜೊತೆಗೂಡಿ ಎಂದು.............
ಮೌನದಲ್ಲಿ ಮರೆಯಾದ ಮಾತೊಂದು
ಮೌನವಾಗಿ ಮಾತನು ಸೇರಿತು ನೀನು
ನಾನು ಮೌನವಾಗೇನೆಂದು ನನಗೆ ತಿಳಿಸಿ.........
ಮೊಡದಲ್ಲಿ ಮಳೆಯಾಗಿ ಜೀವ ಪಡೆದ ಹನಿಯು ಮೇಘರಾಜನ ಮಡಿಲಲ್ಲಿ ಕುಂತು ಕೇಳಿತು ಅವನಿಯನು ನಿನ್ನ ಕಣ್ಣಲ್ಲಿ ನಿರಾಗಿ ನಿನ್ನಲ್ಲೇ ಇರಲೇ ಎಂದು......................
- ಚುಕ್ಕಿ
20 Jun 2017, 04:35 pm
ಬಂಧನಗಳ ಒಗೆದು,ದೂರಗಳ ಅಗೆದು
ಭಾವಗಳ ಭುವವೇರಿ ಹಾರಿ ಬಾ ಬಳಿಗೆ
ಬಾಂಧವ್ಯ ಅರಿತು, ಕಾಲಾಂತರ ಮರೆತು
ಆತ್ಮ ಶ್ರುತಿಗೆ ಕಿವಿಯಿಟ್ಟು ಓಡಿ ಬಾ ಗೆಳತಿ
ನೀ ಬರುವೆಯೆಂದು ಕಾದಿರುವೆನಿಂದು
ಮನದ ಅಂಗಳ ಗುಡಿಸಿ ಮನೆಯಂಗಳ ತೆರೆದಿರಿಸಿ
ಹೃದಯ ಬಾಗಿಲ ಎದುರು ದೀಪಗಳ ಉರಿಸಿ
ಆತ್ಮದಾರತಿ ಬೆಳಗಿ ,ಪ್ರೀತ್ಯಾದಾರಗಳ ಹರಸಿ
ಕಾಡುಗಳ ಕಡೆದು ಬಾ,ನಾಡುಗಳ ನೆಗೆದು ಬಾ
ಮೋಡಗಳನೇರಿ ಬಾ, ದಿಕ್ಕುಗಳ ತೊರಿ ಬಾ
ಬೆಳಕಿನ ಕಿರಣಗಳ ನೂಲೇಣಿ ಹಿಡಿದು ಬಾ
ಅಲ್ಲಿಂದ ಇಲ್ಲಿನ ನೇರಕ್ಕೆ ಜಿಗಿದು ಬಾ
- ಹೇಮಚಂದ್ರ
20 Jun 2017, 02:04 pm
ನೀ ಬಂಧಿಸಿದೆ ನನ‌್ನ ಕಣ್ಣಲ್ಲೆ
ಶರಣಾದೆ ನಾ ಆ..ಕ್ಷಣದಲ್ಲೆ
ಸಂಗಾತಿಯ ಭಾವ ತುಂಬಿದೆ ನಿಂತಲ್ಲೆ
ಇನ್ನು ಬಿಡುಗಡೆಯು ನಿನ್ನ..ಮಡಿಲಲ್ಲೆ
ಒಲವು ಮೂಡಲು ನಿನ್ನಲ್ಲೆ
ಮೃದುವಾದೆ ನಾ..ಮನದಲ್ಲೆ
ಬಯಸೆನು ಬೇರೆನು ಓ ನಲ್ಲೆ
ಆಗಿರು ನನ್ನೆದೆಯ..ಹೂಮಲ್ಲೆ
- Indushekar Chinivar
20 Jun 2017, 09:11 am
ಸೊಗಸಾದ ಮಂದಹಾಸದ ಮಧುವನದಲ್ಲಿ
ಬೊಗಸೆ ತುಂಬಾ ಮಲ್ಲಿಗೆ ತುಂಬಿ ನಿನ್ನ ಜೀವನದ ಆದಿಯಲ್ಲಿ ನಗುವಾಗಿ ಚೆಲ್ಲುವೆ ಚಿನ್ಮಯಿ........
ನಿನ್ನ ಪಾದವಿಟ್ಟ ಪ್ರಾತಿ ಹೆಜ್ಜೆಯೂ ಸದಾ
ಸಂತೋಷ ನೆಮ್ಮದಿಯಿಂದ ಕೂಡಿರಲಿ........
ನನ್ನ ಹೃದಯದಲ್ಲಿನ ಗುಲಾಬಿ ನೀನು
ಬಾಡದಿರು ಮುಂಬರುವ ಅಡೆತಡೆಗಳಿಗೆ ...............
ಹೆತ್ತ ತಾಯಿಯ ಮುದ್ದು ಮಗುವೇ
ಸಂಗಡಿಗರ ಅಚ್ಚುಮೆಚ್ಚಿನ ಸ್ನೇಹವೇ
ಹರುಷದಾಯಕವಾಗಿ ಸಾಗಲಿ ಪ್ರತಿನಿತ್ಯ ನಿನ್ನ ನಗುವಲ್ಲಿ.................
ನಗು ನಗುತಲಿ ಮುಂದೆ ಸಾಗು ನಗುವಂಚುತಲಿ
ಎಲ್ಲರ ಮನ ಗೆಲ್ಲುವ ಚಿನ್ಮಯಿಯಾಗು.........
ಹುಟ್ಟುಹಬ್ಬದ ಶುಭಾಶಯಗಳು
ಚಿನ್ನು............
- ಚುಕ್ಕಿ
20 Jun 2017, 07:21 am
ನೆನೆಯದಿರು ನನ್ನ ದಿನನಿತ್ಯ
ಬಿಡುವಿಲ್ಲದೆ ಗೆಳೆಯಾ.........
ನೀ ನೆನೆದ ಕ್ಷಣ ಗಾಳಿಯಲ್ಲಿನ
ನಿನ್ನ ಪ್ರೀತಿ ಬಡಿದೆಬ್ಬಿಸುವುದು
ನನ್ನ ನಿನ್ನ ನೋಡುವ ಬಯಕೆಯಾಗಿದೆ
ಗೆಳತಿ ಎಂದು................
ನನ್ನಲ್ಲಿನ ನಿನ್ನನ್ನು ಕೇಳುವೆ ನಾನು
ಅವಗವಾಗ ನನ್ನಲ್ಲಿ ನೀನು
ನೆಮ್ಮದಿಯಾಗಿ ಇರುವೆಯಾ ಎಂದು......
ನೀ ಕೊಟ್ಟ ಉತ್ತರ ಕೇಳಿ
ಸ್ತಬ್ಧಳಾದೆ ನಾನು.............
ನಾನಿರುವುದೇ ನಿನ್ನಲ್ಲಿ ಅಂದಮೇಲೆ
ನಿನ್ನ ನಗುವೇ ನನ್ನದಲ್ಲವೇ
ನಿನ್ನ ನೋವು ನನಾಗಿಲ್ಲವೇ ಗೆಳತಿ ಎಂದು.........
- ಚುಕ್ಕಿ
19 Jun 2017, 09:20 pm
ಅಮ್ಮ, ನೀನಿರುವಾಗ ಬರಲಿಲ್ಲ ನಿನ್ನ ನೆನಪು,
ನೀ ಬಿಟ್ಟು ಹೋದ ಮೇಲೆ ಕಾಡುತಿದೆ ನಿನ್ನ ನೆನಪು,
ನೀನಿರುವಾಗ ಅರಿಯಲಿಲ್ಲ ನಿನ್ನ ಮಹತ್ವ,
ಇಂದು ನೆನಪಾಗುತಿದೆ ನೀ ತಿಳಿಸಿದ ತತ್ವ,
ಬದುಕಿ ಬಾ ಇನ್ನೊಮ್ಮೆ ನೀನು ನನಗಾಗಿ,
ಸಲಹುವೆನು ಶ್ರಮಪಟ್ಟು ಎಂದೆಂದು ನಿನಗಾಗಿ.
- ರವೀಂದ್ರಬಾಪೂರ(GNL)
19 Jun 2017, 09:20 pm
ಸುರಿಯುತ್ತಿರುವ ಸೋನೆ ಮಳೆಯಲ್ಲಿ
ಮುತ್ತಿಡು ಒಮ್ಮೆ
ಸಿಡಿಲು ಮಿಂಚು ಗುಡುಗು
ಇವುಗಳ ಭಯವಿಲ
ನೀ ಜೊತೆಯಲ್ಲಿ ಇರುವಾಗ
ಪ್ರತಿ ಕ್ಷಣವೂ ನಿನ್ನೊ೦ದಿಗೆ ಇರುವೆ
- santhosh
19 Jun 2017, 09:14 pm