Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಆ ದೇವರಿಗೆ ತಿಳಿಯಲ್ಲವೇ ಈ ಭೂಮಿಯಲ್ಲಿ ಒಂದೊಂದು ಸಂಬಂಧ ಎಷ್ಟು ಪ್ರೀತಿಯಿಂದ
ಕಟ್ಟಿಕೊಂಡಿರುವವರೆಂದು............
ಅವನಾಡುವ ಆಟದಲ್ಲಿ ಹುಟ್ಟು-ಸಾವು
ಕೇಳದೇನೆ ಕೊಡುವನು ಹುಟ್ಟು ಕೇಳಿಕೊಂಡರು ಬಿಡದೆ ತಗೆಯುವುದು ಪ್ರಾಣ..........
ಅವರನ್ನು ಬಿಟ್ಟು ಉಳಿದವರು ಹೇಗೆ ಬದುಕುತ್ತಾರೆ ಎಂದು ತಿಳಿಯುವುದಿಲ್ಲವೇ ಅವನಿಗೆ.........
ನಮಗೆ ನಮ್ಮ ನೋವುಗಳಿಗಿಂತ ಜಾಸ್ತಿ ನಮ್ಮವರು ಅಂದ್ಕೊಲೋವರ ನೋವು ನೂರು ಪಟ್ಟು ಹೆಚ್ಚು ನೋವಿಗೆ ಗುರಿಮಾಡುತ್ತೆ ನಮ್ಮನ್ನು............
ಆ ದೇವ್ರತರ ಒಂದೇ ಕೇಳ್ಕೊತಿನಿ ಎಂದಿಗು ನನ್ನವರ ಸಾವು ನನ್ನ ಕಣ್ಮುಂದೆ ಬಾರೋ ಮುನ್ನ ನಾನು ಇಲ್ದೆ ಇರೋವಾಗೆ ಮಾಡು ತಂದೆ ಅಂತ......
ಬದುಕಿದ್ದಾಗ ಹಸಿದ ಹೊಟ್ಟೆಗೆ ಇಡದೆ ಇರೋ ಊಟ ಸತ್ತಮೇಲೆ ಇಟ್ಟರೇನು ಬಿಟ್ಟರೇನು
ಆ ದೇವರಿಗೆ ಕಾಣುವುದಿಲ್ಲವೇ ನಮ್ಮ ವ್ಯಥೆ ಎಂದಿಗೂ..............
ದೇವರಿಗೆ ತಿಳಿಯದ ಉತ್ತರಗಳು
ನಮ್ಮನ್ನು ಕಾಡುವ ಪ್ರಶ್ನೆಗಳು..............
- ಚುಕ್ಕಿ
23 Jun 2017, 10:31 am
ಬೆಳದಿಂಗಳ ಇರುಳಲ್ಲಿ
ಅಜ್ಜಿಯ ಮಡಿಲಲ್ಲಿ
ಮಲಗಿರಲು ನಾನಂದು....
ಮಿನುಗುವ ತಾರೆಗಳ ಜೊತೆಯಲ್ಲಿ
ನಲಿಯುತಿದ್ದನು ಚಂದಿರನು ಅಲ್ಲಿ
ನಡುವೆ ಕಂಡೆನು ವಿಮಾನವೊಂದು....
ಚಲಿಸುತಿತ್ತು ನಿಶ್ಯಬ್ದವಾಗಿ
ಸ್ವಚ್ಛಂದ ಆಗಸವ ಮಲಿನವಾಗಿಸದೆ
ತಾರೆಯೊಂದು ಇಲ್ಲಿಂದ- ಅಲ್ಲಿಗೆ
ಅತ್ಯಲ್ಪ ಚಲನದಂತಾಗಿ
ಅಕ್ಷಿಪಟಲವ ಅರಡಿಸಿದೆ
ಕುತೂಹಲ ತಾಳಲಾರದೆ.....
ಚಿತ್ತಾರವ ಬಿಡಿಸುತಿತ್ತು ಮನವು
ಸದ್ದಿಲ್ಲದೆ ಚುಕ್ಕಿಗಳ ಬಯಲಲ್ಲಿ
ಲೆಕ್ಕವಿಡುತಿತ್ತು ಕಂಗಳು
ದಿಟ್ಟಿಸಿ ನೋಡುತ್ತ ಬಾನಲ್ಲಿ
ಅಚ್ಚರಿಯು ಮೂಡಿತ್ತು
ಮನದ ಗೂಡಲ್ಲಿ....
ತಾರೆಯೊಂದು ಚಲಿಸಿತ್ತು
ಅಜ್ಜಿಯ ಕೇಳಿತು ಮನವು
ಚುಕ್ಕಿ ಹೊರಟಿಹುದು ನೋಡಲ್ಲಿ....
ಒಡನೆಯೆ ನುಡಿಯಿತು ಅಮ್ಮಮ್ಮ!
ಅದು ಅಲ್ಲ ಚುಕ್ಕಿ.......
ಅಲ್ಯುಮಿನಿಯಮ್ ಹಕ್ಕಿ.....
ಇದ ನೀ ತಿಳಿಯಮ್ಮ!
ಶಾರಧ
- ಶಕುಂತಲಾ
22 Jun 2017, 10:23 pm
ನನಗೆಂದು ಮುಗಿಯದು ಬರೆಯುವಾಸೆ
ಇಂದೇಕೊ ಖಾಲಿ ಎನಿಸುತ್ತಿದೆ ಭಾವನೆಗಳ ಮೂಸೆ
ಬಣಗುಡುತಿದೆ ಮೊಗೆದಾಗಲೆಲ್ಲ ಸಿಗುತ್ತಿದ್ದ ಪದಗಳ ಬೊಗಸೆ
ಎಲ್ಲಿ ಅಡಗಿರುವೆ ಪದಗಳ ಪೋಣಿಸಿ ಭಾವಗಳ ಸೇರಿಸುವ ಸೊಗಸೆ....
ಒಂಟಿಯಾದಗಲು ಪದಗಳೆ ಜೊತೆಯು
ಕೂಡಿದಾಗಲು ಇದರಲೆ ಹರಿಯುವುದು ಭಾವಗಳ ನದಿಯು
ಇದರಲೆ ಇರುವುದು ಹತಾಶೆಯ ಮುಳುಗಿಸುವ ಅಲೆಯು
ಇದರಲೆ ಹುಟ್ಟುವುದು ನಗುವಿನ ಸೆಲೆಯು
ಭಾವಗಳು ಪದಗಳ ಸೇರಿ ಸೃಷ್ಟಿಸುವ ಈ ಪಯಣಕೆ ಆಗಲೆ ಕೊನೆಯಿರದ ಪಯಣಿಯು.....
ಕನಸಿನ ಉಸ್ತುವಾರಿಗೊಂದು ಕವನ
ಮನಸಿನ ಶಾಯರಿಗೊಂದು ಕವಿತೆ
ನೋವಿನ ಅಮಲಿನ ಭಾವಕ್ಕೊಂದು
ಖುಷಿಯ ನಗುವ ಹರಡಲಿಕ್ಕೆ ಮತ್ತೊಂದು
ಕಂಡ ಕಾಣಲಾಗದದ್ದಕ್ಕೆಲ್ಲ ಮಗದೊಂದು
ಆದರೂ ಬರೆಯಲು ಏನು ತೋಚುತ್ತಿಲ್ಲ ನನಗಿಂದು.....
- ಶ್ರೀಕಾವ್ಯ
22 Jun 2017, 09:33 pm
ನಿನ್ನಿಂದ ದೂರವಾದರೆ ನಾನು
ಕಣ್ಣೀರು ಕೊಡಿ ಹರಿದು
ಆಗುವುದು ಕಡಲು
ಬಂದುಬುಡು ಒಮ್ಮೆ
ನನ್ನ ಕಣ್ಣ ದೊಣಿಯಲಿ ಕುಳಿತು
ತೆಲಿಬಿಡು ಆ ಕಡಲಿನಲ್ಲಿ
- ಹೇಮಚಂದ್ರ
22 Jun 2017, 04:39 pm
ಅಂದು ಎಡೆಬಿಡದೆ ಸುರಿದ ಮಳೆಯು
ನಿನ್ನ ನೆನಪಿನ ಪ್ರವಾಹ ಹರಿಸಿತು.
ಕಾಡುವ ನೆನಪುಗಳಿಗೆ ಲಗಾಮು ಹಾಕುವ ಪ್ರಯತ್ನದಲಿ ಮನ ಸೋತಿತು.
ಒಳಗೊಳಗೆ ಅತ್ತು, ಸೋತು ಹೋದ ಕನಸುಗಳು ಪುನಃ ಚಿಗುರುವುದೆಂದು ಮನ ಬಯಸಿತು.
ಕಲ್ಪನೆಯ ಗೂಡಿನಿಂದ ಹೊರ ಬಂದಾಗ ಬಯಸಿದೆಲ್ಲ ಕಣ್ಣೀರ ಹನಿಯಲ್ಲಿ ಸೇರಿಕೊಂಡಿತು.
- ಅಕ್ಷತ
22 Jun 2017, 02:00 pm
ಲಾವಣ್ಯವಾದ ಲಲನೆಯ ನೋಡುವ ಆಸೆಯಾಗಿ ಲಘುವಾದ ನನ್ನೆದೆಯ ಜಾರಿ ಬಿಟ್ಟೆ ಅವಳ ನೆರಳಲ್ಲಿ ನಾಜೂಕಾಗಿ ನನ್ನವಳ ನೋಡಿಕೊ ಎಂದೂ............
ರಂಜಿತಾಳ ರಂಜಿಸುವ ರಗಳೆಯಲ್ಲಿ ಅವಳ ಹೃದಯ ಸೇರುವ ರಾಜಮಾರ್ಗದಲ್ಲಿ ಭಾವನೆಗಳ ರಶ್ಮಿಯರಸಿ ರಮ್ಯವಾದ ರಾಗಗಳನ್ನು ರವಾನೆ ಮಾಡಿತಿರುವೆ ಮನಸ್ಸಿನಿಂದ...........
ರಶೀದಿ ಕೊಡುವಳೇ ಕೇಳಿ ನೋಡೇ ಹೃದಯವೇ ನಾ ಕೊಟ್ಟ ಪ್ರೀತಿಗೆ ಮತ್ತೆ ನನಗೆ ಹಿಂತಿರುಗಿಸುವಾಗ ಲೆಕ್ಕ ಸರಿಯಾಗಿ ಕೊಡಲು...........
ನಾನು ರಾಜೀವ ನಾನದೊಡೆ ರಾಜಹಂಸ ತಾಣಗುವಳಾ..........
ರಮಣಿಯವಾಗಿ ರಮಿಸಲು
ಮುದ್ದಾದ ಮಾತುಗಳಿಂದ ನಾನು..........
ನಿನ್ನ ಮನವ ನಾ ಕದ್ದೇನೆಂದು ನನ್ನ ಮೇಲೆ ಚಾಡಿಮಾತುಗಳ ಹೇಳದಿರು ನೀನು, ನಿನ್ನನ್ನೇ ಕದ್ದು ನೂರಾರು ನಜರಾಣೆಗಳನ್ನು ನೀಡುವ ಆಸೆ ನನಗೆ................
ಧವಳದಂತ ನಿನ್ನ ತುಟಿಯ ಉಭಯ ಕಡೆಗಳಿಗೆ ನನ್ನ ನಗುವಿನ ಬಣ್ಣ ಹಚ್ಚಲು ನನಗಾಸೆ ಹಚ್ಚಿ ನೋಡಲೇ ಚೆಲುವೆ ನಾನಿಂದು ನಿನ್ನ ನಗುವ ನೋಡಲು...........
- ಚುಕ್ಕಿ
22 Jun 2017, 12:52 pm
ಕವನ ಬರಿಯಲು
ಇಂಥದೇ ಕಾರಣ ಇರಬೇಕೆಂದೇನಿಲ್ಲ
ರಾತ್ರಿ ಕನಸು ಕಾಣಬೇಕೆಂದೇನಿಲ್ಲ
ಕವನ ಕೆಲಯೋಮ್ಮೆ ಏನು ಹೇಳುವುದಿಲ್ಲ
ಬತ್ತಿದ ಭತ್ತಯೋ ಸತ್ತ ಎಮ್ಮೆಯೋ
ಹೀಗೆ ಯಾವುದರ ಮೇಲಾದರೂ
ಬರಿಯ ಬಹುವುದು
ರಕ್ತ ಬತ್ತಿದ ಹೃದಯದಲ್ಲಿ
ಪ್ರೀತಿಯ ಚಿಲುಮೆ ಹುಟ್ಟಿಸಬಹುದು
ಹಸಿದ ಹೊಟ್ಟೆಯಲ್ಲಿ
ಕ್ರಾಂತಿಯ ಕಿಡಿ ಹೊತ್ತಿಸಬಹುದು
ಸದ್ಯಕ್ಕೆ ನಾನು
ಸಾಯುತಿರುವ ಸಸಿಯ
ನೀರಹಾಯಿಸಿ ಕಾಪಿಟ್ಟುಕೊಲ್ಲಬೇಕು
ಕವನ ಬರಿಯಲು ಕಾರಣ ಬೇಕೇ
ನಾನು ಒಪ್ಪಿಕೊಳ್ಳುವುದಿಲ್ಲ
ಕವನ ಬರಿಯಲು
ಕವನ ಬರಿಯಬೇಕಂದನಿಸಬೇಕಷ್ಟೇ
ಕವನ ಬರಿಯಬಹುದು
◆◆◆◆ಹರ್ಷ ಹೆಚ್ ಎಲ್
- HarshaHL
22 Jun 2017, 11:18 am
ನಾನು ನೀನು ಚಿಕ್ಕ ವಯಸ್ಸಲ್ಲಿ
ಕುಡಿ ಆಡಿದ ಆಟದ ನೇನಪಲ್ಲಿ
ಆಗೇ ಇದೆ ಗೇಳತಿ ಈಗ
ನನ್ನ ಮರೆತು ಏಕೆ ಹೋಗತಿ
ನೀ ಹೋದರೆ ಸಾವೇ ನನ್ನ ಗತಿ
- VEERU
22 Jun 2017, 11:02 am
ನಿನ್ನ ಸೊಗಸಾದ ರೂಪವ
ನೋಡದೆ ಬಾಡೋಗಿವೇ ನನ್ನ ಕಣ್ಣುಗಳು.........
ನನ್ನ ಹೃದಯ ತುಂಬಿದ ನಿನ್ನ ನೆನಪು
ಕಾಡಿದೆ ನನ್ನನಿಂದು............
ಉಳಿದೊದ ಮಾತುಗಳು ಕೇಳುತ್ತಿವೆ ನನ್ನ
ನಮ್ಮನ್ನು ತಿಳಿಸುವ ಆಸೆ ಇಲ್ಲವೇ ನಿನಗೆಂದು.....
ನಿನ್ನಕಡೆಗೆ ನಾನಾಕಿದ ಹೆಜ್ಜೆಗಳು ಹಿಂತಿರುಗಿ ನನ್ನ ಕೇಳುತ್ತಿವೆ ಪೂರ್ತಿಗೊಳಿಸು ನಮ್ಮನ್ನು ಗಮ್ಯ ಸೇರಿಸೆಂದು...........
- ಚುಕ್ಕಿ
22 Jun 2017, 09:52 am
ಮರಣದ ಬಾಗಿಲ
ತೆರೆದು ಹೋದವರು
ಇದುವರೆಗೂ ಮರಳಿ
ಬರಲಿಲ್ಲವೆಂದರೇ
ಮರಣದಲ್ಲೇನೋ
ಸ್ವಾದವಿರಬಹುದು !!!!!
ಸಾವನ್ನಪ್ಪಿದವರು
ಭೂಮಿಯಲ್ಲಿ
ಮಾಡಿದ
ತನ್ನ ಪಾಪ ಪುಣ್ಯಗಳ
ಲೆಕ್ಕವನ್ನೊಪ್ಪಿಸಿ
ಫಲಿತಾಂಶಕ್ಕಾಗಿ
ಕಾಯುತ್ತಿರಬಹುದೇನೋ ???
ಉನ್ನತ ಸ್ಥಾನಮಾನ
ಗಳಿಸುವ ಆಸೆಯಿಂದ..
ಇರಬಹುದು..!!!
ಇಲ್ಲದಿದ್ದರೇ
ಒಬ್ಬರಾದರೂ
ಮರಳಿ ಬರಬಹುದಿತ್ತು ....
ದೇವನ ಸನ್ನಿಧಿಗೆ
ತೆರಳುವವರಿಗೊಂದು
ಪಿಳ್ಳೆ ನೆಪಗಳು....
ಅಪಘಾತ, ಕೊಲೆ
ಆತ್ಮಹತ್ಯೆ, ಕಾಯಿಲೆ..
ಮತ್ತೆಂದು ಮರಳಿ
ಬಾರಾದ ಯಾತ್ರೆಯ ಕರೆ
ಬಂದಾಗ ಯಾರಿಗೂ
ತಿಳಿಸದೇ ಧಿಡೀರ್
ಹೊರಟುಬಿಡುತ್ತಾರೆ ....
ನೀವೆಲ್ಲರೂ ನನ್ನ
ಹಾದಿಯಲ್ಲೇ
ಬರಲಿದ್ದೀರಿ
ಎಂಬ ಎಚ್ಚರಿಕೆಯ
ಸಂದೇಶವ ಕೊಟ್ಟು ...
ಯಾತ್ರೆಗೊಂಡವರ
ಹಾದಿಯಲ್ಲಿ ಸಾಗಿ
ಮರಣದ ರುಚಿಯನ್ನು
ಪ್ರತಿಯೊಬ್ಬರೂ
ಅನುಭವಿಸಲಿಕ್ಕಿದೆ...
ಆಹಾ...
ನನ್ನ ಮರಣ
ನನ್ನ ಕಣ್ಣ ಮುಂದಿದೆ
ಅಂತಿಮ ಯಾತ್ರೆಯ
ಸರ್ವ ಸಿದ್ಧತೆ
ಮಾಡಿಕೊಳ್ಳಬೇಕಾಗಿದೆ...
- ಅಲ್ತಾಫ್ ಬಿಳಗುಳ
22 Jun 2017, 12:10 am