ಕನಸಿನ ಕಣ್ಮಣಿಯೇ .
ನೀನೆ ನನ್ನೆದೆಯ ಅರಗಿಣಿಯೆ.||
ನನ್ನ ಮನಸಿನ ಮನೋರಮೆಯೆ
ನಾನು ಸದಾ ನಿನ್ನ ಪ್ರೀತಿಗೆ ಚಿರರುಣಿಯೆ ||
ನನ್ನ ಬಾಳಿನ ಬೆಳದಿಂಗಳ ಬೆಳಕು ನೀನು.
ಆ ಬೆಳಕಿಗೆ ಕಾವಲುಗಾರ ನಾಗುವೆ ನಾನು||
ನನ್ನ ಹ್ರುದಯದ ಬಡಿತ ನೀನು.
ಅದರಲ್ಲಿ ಅಡಗಿರುವ ತುಡಿತ ನಾನು.||
ತುಡಿತದಿ ಅಡಗಿರುವ ಜೀವ ನೀನು
ಅದಕ್ಕೆ ಬೇಕಾದ ಆಸರೆ ನೀಡುವೆ ನಾನು ||
ನೀನು ನನ್ನ ಮನಸ್ಸಿನ ಭಾವನೆ .
ನಾನೇ ನಿನ್ನ ಕನಸಿನ ಕಲ್ಪನೆ .||
ಎಂದೆಂದೂ ನಿನಗಾಗಿ ನನ್ನ ಮನದ ಆಲಾಪನೆ.
ನಿನಗಾಗಿ ನನ್ನ ಹ್ರುದಯದಿ ಕಟ್ಟಿರುವೆ
ಅರಮನೆ || ನಲ್ಮೆಯ. ಮನವೇ.
ನಿನ್ನಯ ಪ್ರೀತಿ
ಇರಲು ಹೂವಿನ ರೀತಿ
ಮನಸಿಗೆ ಸಮ್ಮೋಹನ ಸ್ಥಿತಿ
ನನ್ನಲಿ ನನ್ನನೆ ಹುಡುಕುವ ಪರಿಸ್ಥಿತಿ
ಕೊನೆಯಿರುವುದೆ ಕಣ್ಣೊಳಗಿನ ಕನಸಿಗೆ ಮಿತಿ
ನುಡಿವ ಗಿಳಿಯಂತೆ ನಾನು
ಕೈ ಹಿಡಿದು ನಡೆಸಿರಲು ನೀನು
ಕಾದು ಕೊಲ್ಲುವ ಗಿಡುಗವಾದೆಯೇನು?
ಕತ್ತಲಲಿ ಕತ್ತ ಇಸುಕಿರಲು ನೀನು
ನಂಬಿ ಬಂದ ಉಸಿರಿಗೆ ಅರ್ಥ ಉಳಿಯುವುದೇನು
ನನ್ನದು ಎದೆಗವಚಿ ಕೂತ ಗುಬ್ಬಚ್ಚಿಯ ಮತಿ
ನೀನರಿಯಲಿಲ್ಲ ಎದೆಗೊರಗಿ ಕುಳಿತಾಗಿನ ಮನಸ್ಥಿತಿ
ಪ್ರೀತಿ ಪ್ರೇಮಕೆ ಇರಬೇಡವೆ ಒಂದು ನೀತಿ
ಜಾರಿ ಹೋದರೆ ಮನಸೆ ನಂಬಿದ ಪ್ರೀತಿ
ಸಾವು ಬಂದರು ಇರದು ಜೀವಕೆ ಭೀತಿ
ಜೀವನವೆಂಬ ದಾರಿಯಲಿ ಓಂಟಿಯಾಗಿ ನಡೆಯುತ್ತಿರುವೆ ಅದರ ನಡುವಿನಲಿ .
ಕಣ್ಣಿಗೆ ಕಂಡ್ಡದ್ದೆಲ್ಲ ಮರೆಯಾಯಿತಲ್ಲ.
ದೊರೆತ ಪ್ರೀತಿಯು ನಶ್ವರ ವಾಯಿತಲ್ಲ.
ಕತ್ತಲು ಕವಿದಿರುವ ಮನಸ್ಸಿನಲ್ಲಿ ಎಣ್ಣೆ ಬತ್ತಿ ಇಡಿದು ನನ್ನ ಜೀವನದಲ್ಲಿ ಬೆಳದಿಂಗಳ ದೀಪವನ್ನು ಹಚ್ಚಲು ಯಾರು ಇಲ್ಲ.
ನನ್ನ ಬಾಳು ಕತ್ತಲಿನ ಕೊಟೆಯಾಯಿತಲ್ಲ.
ನಾ ಕತ್ತಲಿನಲಿ ಕಣ್ಣಿದ್ದರು ಕುರುಡನಾಗಿ ಬದುಕುತ್ತಿರುವೆನಲ್ಲ.
ಕಾಲವೆಂಬ ಚಕ್ರದಲ್ಲಿ ಸುತ್ತುವ ಬುಗುರಿಯಾಯಿತಲ್ಲ ನನ್ನ ಈ ಜೀವನ