ಸೆಳೆದಿರಲು ನಗುತಲೆ ನೀನು ನನ್ನ ಮನಸು
ಚಿಗುರಿವೆ ಎದೆಯಲಿ ಹೊಸ ಹೊಸ ಕನಸು
ನಯನಗಳು ನಿನ್ನನೆ ನೋಡುತ ನನ್ನ ಮರೆತಿರಲು
ಶಿಲೆಯಾಗಿರುವೆನು ನಾನು ಆಗದೆ ಅಲುಗಾಡಲೂ
ನಿನ್ನ ಭಾವಗಳು ಎಂಥ ಸೊಗಸೆ
ನಿನ್ನಲೇ ನಾನು ಸೇರಿ ಹೋಗುವ ಆಸೆ
ನನ್ನ ತಿರುಗಿ ನೋಡಿ ಕೊಂಚ ಕನಿಕರಿಸೆ
ನನ್ನನೆ ಮರೆತಿರುವೆನು ತಿಳಿಯದೆ ಸಹಕರಿಸೆ
ಕಾಯುತಿರುವೆನು ಸೇರಿ ಹೋಗಲು ನಿನ್ನಲಿ ಸಮ್ಮತಿಸೆ
ಓ ನನ್ನ ಪ್ರಿಯ ಮನಸೆ
ನೀ ನನ್ನ ಬಾಳಿನ ಸವಿಗನಸೆ
ನನ್ನ ಮನಸಿನ ಪ್ರೀತಿಯ ಆದರಿಸೆ
ಸಾಯುತಿರುವೆ ಬಂದು ಉತ್ತರಿಸೆ
ತಿರುಕನ ಕನಸೆಂದಾದರು ಹೇಳಿ ತಿರಸ್ಕರಿಸೆ
ಕಾದಿರುವೆನು ಓ ಮನಸೆ ನೀನಾಗದಿರು ಬರಿ ಕನಸೆ
ಕರಗುತಿರಲು ಬೆಳದಿಂಗಳ ಚಂದಿರನು
ಉದಯಿಸುತಿರುವನು ಆ ನೇಸರನು
ಸರಿಸುತ ಮುಂಜಾವಿನ ಚುಮುಚುಮು ಚಳಿಯನು
ಪ್ರೀತಿಯಲಿ ಮುತ್ತಿಕುತ ಎಲೆಯ ಮೇಲಿನ ಹಿಬ್ಬನಿಯನು
ಆ ಹಿಬ್ಬನಿಯೂ ಕರಗಿದೆ ನೋಡಿ ಅವನ ಪ್ರೀತಿಯನು
ಹಸಿರು ನಾಚಿ ನಕ್ಕು ರಂಗೇರಿದೆ ಕಂಡು ಪ್ರೇಮದ ಸವಿಯನು ಸುರಿಯುತ ಬರುತಿರುವ ರವಿಯು ಭುವಿಗೆ ಎಳೆಯ ಬಿಸಿಲನು
ಮುಂಜಾವಿನ ಸೂರ್ಯ ರಶ್ಮಿ ಇಮ್ಮಡಿಸಿದೆ ಭೂಮಿಯ ಕಾಂತಿಯನು
ಕೋರುತಿವೆ ಸ್ವಾಗತ ಬೆಳಗಿಗೆ ಹಕ್ಕಿಗಳು ಹಾಡುತ ಇಂಚರವನು
ಕೈ ಕಟ್ಟಿ ತಣ್ಣನೆ ಉಸಿರೊಡನೆ
ಬೆಳ್ಳಂಬೆಳಗ್ಗೆ ಬೆಚ್ಚಗೆ ಚಳಿಯೊಡನೆ
ಹಕ್ಕಿ ಪಿಕ್ಕಿಗಳ ಹಾಡಿನೊಡನೆ
ಕರಗುವ ಹಿಬ್ಬನಿಯ ಪ್ರೀತಿಯೊಡನೆ
ಸವಿಯುವ ಮನಸಿರಲು ಭೂಮಿಯ ಸೌಂಧರ್ಯವನೆ
ಭುವಿಯೊಳು ನಿಜ ಧನ್ಯನು ಅವನೆ
ಇನ್ನು ಎಷ್ಪುದಿನ ಈ ಒಂಟಿತನ
ಕಾಯುತ್ತಿರುವೆ ನಾ ನೀನ್ನ ನೆನಪಲೆ ಪ್ರತಿಕ್ಷಣ
ನೀ ಮರೆತರು ನಾ ಮರೆಯುವುದಿಲ್ಲ
ನೀ ನಾಡಿದ ಮಾತುಗಳನ್ನ
ಈ ಜನ್ಮ ಒಂದೆ ಸಾಕು ನೀ ನನ್ನ ಜೀವ ಇನ್ನ
ನೀ ಬರುವ ವರೆಗೂ ಕಾಯುವೆ ನೀನ್ನ ನೆನಪುಗಳ ಸುಳಿಯಲಿ
ನೀ ಬೇಗ ಬರಲಿ ಎಂದು ನಾ ಬೇಡುವೆನು ಆ ದೇವರಲಿ.....
....by
.....Hanu.m.....