Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಜೊತೆಗಿರುವ ಸಮಯದಲ್ಲಿ...........

ಮಾತೊಂದು ಬಾರದ ಸಮಯದಲ್ಲಿ
ನಿನ್ನ ನೆನೆಯುತ್ತಾ ಕೂರುವೇ ನನ್ನಲ್ಲಿ.........

ಮಂಜಿನ ಹನಿಗಳ ಬೆವರಲ್ಲಿ ತೊಳೆಯೋಣವೇ
ನಮ್ಮ ನೋವಿನ ಕ್ಷಣಗಳನ್ನು...............

ಪಿಸುಮಾತುಗಳ ನೆಪದಲ್ಲಿ ನಿನ್ನನೊಂದು
ಮಾತು ಕೇಳಿ ನನ್ನ ಎದೆಯಬಡಿತ ನಿನ್ನ ಮನ ಆಲಿಸಿತೇ ನನ್ನ ಜೊತೆಗಿರುವ ಸಮಯದಲ್ಲಿ ಎಂದು.........

- ಚುಕ್ಕಿ

29 Jun 2017, 06:47 pm

ನಿವೇದನೆ!

ಮನದ ಮಾತುಗಳ
ಮೌನದಲ್ಲೆ ಆಲಿಸುತ
ನೀಡುತಿಹೆ ಸಂದೇಶಗಳ
ನಾನಿಹೆ ನಿನ್ನ ದರ್ಶನವ ಕಾಯುತ!

ಮಧುರ ಗಾನದಿ
ವೀಣೆಯ ನುಡಿಸಿ
ಸಪ್ತ- ಸ್ವರಗಳ
ಮಧುವ ಹರಿಸಿ
ಜಗವ ತಣಿಸಿದೆ!

ನನ್ನೆಲ್ಲ ನೋವು- ನಲಿವನು
ನಿನಗೆ ಅರುಹುತ್ತಾ....
ಏಕಾಂಗಿಯಾಗಿ ಚಲಿಸುವೆನು
ನಿನ್ನ ದರ್ಶನಕ್ಕಾಗಿ ಕಾಯುತ್ತಾ.....

ನಾವೇ ಮಾಡಿದ ಮೂರ್ತಿ ನೀನು
ನಿನ್ನ ,ಮುಂದೆ ನಿಂತಿರುವೆನು ನಾನು
ಕಾಯುವೆಯೇನು? ಕನಸುಗಳ
ಸರಮಾಲೆಯ ನನಸು ಮಾಡುತ!

ನೀನೆ ಮನದಿ ತುಂಬಿರಲು
ಆಗಸವ ನೋಡುತ ಸಾಗಲು
ನೂರು ಕಲ್ಪನೆಯು ಮೂಡಿ
ಬೆಳ್ಳಿಮೋಡವು ಸಾಗಲು
ನಿನ್ನ ಬಿಂಬವ ನೋಡಿ
ತಣಿಯಿತು ಮನವು ಹಾಡಿ!


ಶಾರಧ

- ಶಕುಂತಲಾ

29 Jun 2017, 06:21 pm

ಇನ್ನು ಎಷ್ಟುದಿನ ...

ಇನ್ನು ಎಷ್ಪುದಿನ ಈ ಒಂಟಿತನ
ಕಾಯುತ್ತಿರುವೆ ನಾ ನೀನ್ನ ನೆನಪಲೆ ಪ್ರತಿಕ್ಷಣ
ನೀ ಮರೆತರು ನಾ ಮರೆಯುವುದಿಲ್ಲ
ನೀ ನಾಡಿದ ಮಾತುಗಳನ್ನ
ಈ ಜನ್ಮ ಒಂದೆ ಸಾಕು ನೀ ನನ್ನ ಜೀವ ಇನ್ನ
ನೀ ಬರುವ ವರೆಗೂ ಕಾಯುವೆ ನೀನ್ನ ನೆನಪುಗಳ ಸುಳಿಯಲಿ
ನೀ ಬೇಗ ಬರಲಿ ಎಂದು ನಾ ಬೇಡುವೆನು ಆ ದೇವರಲಿ.....
....by
.....Hanu.m.....

- hanumeshm

29 Jun 2017, 05:53 pm

ಸೋಲುವ ಮನಕೆ....

ಸೋಲುವ ಮನಕೆ
ಎಲ್ಲರೂ ಕಾಡುವರು ಯಾಕೆ
ಅವರಿಗೂ ಇರಲಾರದೆ ಬಯಕೆ‌
ಎಂದು ತಿಳಿಯುವುದು ಮನಸು ಈ‌ ಜಗಕೆ...

ಎಲ್ಲರ ಮೊಗದಲು ನಗುವ ನೋಡ ಬಯಸುವುದೆ ತಪ್ಪೆ
ಬಯಸಿದ ತಪ್ಪಿಗೆ ಆ ಮನಸನೆ ಮಾಡಿ ಬಿಡುವರು ಸಪ್ಪೆ
ಅವಶ್ಯಕತೆ ಮುಗಿದ ಮೇಲೆ ಅವರೇನಿದ್ದರು ಕೇವಲ ಸಿಪ್ಪೆ
ತಂದಿಡುವರು ಸ್ಥಿತಿ ನೆಮ್ಮದಿಯಾಗಿ‌ ಮುಚ್ಚಿಲಾಗದಂತೆ ರೆಪ್ಪೆ..

ಮುಖವಾಡ ಧರಿಸಿ ಜೊತೆಗೆ ನಗುತ ಇದ್ದರೆ ಸಾಕೆ
ಮುಕ್ತ ಮನಸಿಗೆ ‌ಬೆಲೆ ಕೊಡರು ಯಾರು ಏತಕೆ
ಬದುಕೆಂದರೇನು ಕೇವಲ ಮಾತ್ರ ಆಡಂಬರ ತೋರಿಕೆ
ಒಮ್ಮೆ ಕೊಂದರೆ‌ ಮುಗ್ಧ ಮನಸ ಮತ್ತೆ ಸಿಗದು ಜೋಕೆ....

ಏನೆ ಆದರು ನೋಡಲಾಗದು ಯಾರದೆ ಕಣ್ಣೀರು
ಎಂದೆಂದೂ ಎಲ್ಲರ ಬದುಕಾಗಿರಬೇಕು ಪನ್ನೀರು
ನಗುತಲಿರುವ ಮನಸುಗಳೆ ಕಟ್ಟುವುದು ಬಾಳಿಗೆ ತಳಿರು
ಕಾಡಿಸಿದವರು ನಮ್ಮವರಲ್ಲದೆ ಮತ್ತೆ ಇನ್ಯಾರು
ಮತ್ತೆ ನಗಿಸಿ ನಕ್ಕು ಬದುಕಿಬಿಟ್ಟರಾಯಿತು ಶಾಶ್ವತವಾಗಿ ಭುವಿಯ ಮೇಲೆ ಉಳಿಯರು ಯಾರು

- ಶ್ರೀಕಾವ್ಯ

28 Jun 2017, 10:40 pm

ಮುದ್ದಿನ ತಮ್ಮ ತಂಗಿ

ನಾ ಬೆಳೆದೆ ಒಬ್ಬಂಟಿಗನಾಗಿ,
ತಂದೆ ತಾಯಿಯರ ಮುದ್ದಿನ ಮಗನಾಗಿ,
ನನಗೂ ಇದ್ದು ಸಾಕಾಗಿತ್ತು ಒಂಟಿಯಾಗಿ,
ಪ್ರೀತಿಯ ಜಗಳವಾಡುವವರಿಲ್ಲ ಜೊತೆಯಾಗಿ,
ಬಂದಿರಿ ನೀವು ಪ್ರೀತಿಯ ಚಿಲುಮೆಗಳಾಗಿ,
ಒಂಟಿಯಾದ ನನ್ನ ಜೊತೆಯಾಗಿ,
ಮಾತು ಕೊಡುವೆನು ನಾನು ನಿಮಗಾಗಿ,
ಇರುವೆನೆಂದು ಸದಾ ನಿಮ್ಮ ನೆರಳಾಗಿ,
ಬೇಡುವೆ ನಾ ಆ ದೇವರ ಶಿರಬಾಗಿ,
ಹೀಗೆಯೇ ಸಾಗುತಲಿರಲೆಂದು ನಮ್ಮ ಪ್ರೀತಿಯ ಭೋಗಿ,
ಪೂರ್ವ ಜನ್ಮದಾ ಪುಣ್ಯ ಕಾದಿತ್ತು ನನಗಾಗಿ,
ಪಡೆಯಲೆಂದು ನಿಮ್ಮನ್ನು ನನ್ನ ತಮ್ಮ ತಂಗಿಯರಾಗಿ.
----- tippu -----

- tippu

28 Jun 2017, 07:31 pm

ಕತ್ತಲೆ-ಬೆತ್ತಲೆ

ಕತ್ತಲೆ ಎಂದರೆ
ಅದೆಂಥ ಕತ್ತಲೆ..?!
ಕಣ್ಬಿಟ್ಟರೂ
ಕಣ್ಮುಚ್ಚಿದರೂ
ಒಂದೇ ವರ್ಣ.
ಬಣ್ಣನೆಗೆ ನಿಲುಕದ
ಬಣ್ಣ.
ವರ್ಣನೆಯೇ ಬೇಡ
ಕತ್ತಲೆಯೆಂದರೆ
ಬರೀ ಕತ್ತಲೆ
ಅಷ್ಟೇ...

ಬೆತ್ತಲೆ ಎಂದರೆ?!
...?!
ಮೈಯ ಹೊರಗೂ
ಮೈಯ ಒಳಗೂ
ಬಟ್ಟೆ ಇಲ್ಲದ
ಉಟ್ಟೇ ಇಲ್ಲದ
ಆ ಆಕಾರ.
ವಿಕಾರವಿಲ್ಲದ
ನಿರ್ವಿಕಾರ.
ಲಜ್ಜೆ ಇಲ್ಲದ,
ಮುಚ್ಚಿಕೆಯ
ವಜ್ಜೆ ಇಲ್ಲದ
ದೇಹಭಾವ.
ದೇಹಭಾರವಿಲ್ಲದ
ನಿರಭಾವ.
ಬಯಲಿಗಿಂತ
ಬೆರಗು.
ಬೆತ್ತಲೆಯೆಂದರೆ,
ಬರೀ ಬೆತ್ತಲೆ
ಅಷ್ಟೇ...

- Rajashekhar.C.Dombaramattur

28 Jun 2017, 04:19 pm

ನಿನ್ನ ಆಗಮನ

ಮಳೆಯ ಮೊದಲ ಹನಿಯ
ಭರವಸೆಯಂತೆ,
ಮುಂಜಾನೆಯ ಪ್ರಥಮ ಕಿರಣ ಹೊರ
ಸೂಸುವಂತೆ,
ತಂಪಾದ ಗಾಳಿ ಹಿತವಾಗಿ
ಬೀಸುವಂತೆ,
ನೀ ನನ್ನಲ್ಲಿ ಹೊಸ ಲೋಕವ
ಮೂಡಿಸಿರುವೆ.

- ಅಕ್ಷತ

28 Jun 2017, 02:28 pm

ಅಂಬರದ ಚೆಲುವೆ ನೀನೆ ನನ್ನ ಒಲವೆ

( ಅಂಬರದ ಚೆಲುವೆ)

ನೀ ಬರುವ‌ದಾರಿಯಲಿ ನಿನಗಾಗಿ ಕಾಯುತಲಿರುವೆವು ನಾವಿಲ್ಲಿ ಇ ಸುಂದರ ಸ್ಥಳದಲ್ಲಿ.
ನಿಮಗಾಗಿ‌ ನಾವು. ಪುಷ್ಪ ಮಳೆಗಯ್ಯಲು ಕಾದು ಕುಳಿತಿರುವೆವು ಇ ಸುಂದರ ಪ್ರಕ್ರುತಿಯ ನಡುವಿನಲಿ .|ಸ|

ಹಕ್ಕಿಗಳ ಇಂಪಾದ ನಾದ ನಿನಗಾಗಿ‌ ಗಾನ ಸುಧೆಯನ್ನು ಹರಿಸಲು ಸಾಲಾಗಿ ಕಾದು ಕುಳಿತಿವೆ‌‌ ಇ ಸುಂದರ ಬನದಲ್ಲಿ.
ಇ ತಂಗಾಳಿಯ ನಡುವಿನಲಿ ಇಂಪಾದ ನಿನ್ನ ಕಾಲ್ಗೆಜ್ಜೆಯ ಶಬ್ದ ಶ್ರುತಿಸೇರಿ ಹಾಡಿದಂತೆ‌ ಗೀಜುಗ ಗಿಜುಗುಡುವ ಶಬ್ದದ ನಡುವೆ ನನ್ನ ಮನದಿ ನಾಟುತ್ತಿದೆ ಮನವೆ.|ಸ|

ಆ ಅಂಬರದಿಂದ‌ ಕೆಳಗಿಳಿದು ಬರುತಿರುವೆ ನೀ. ನಿನ್ನ ಪಾದದ ಸ್ಪರ್ಷಕ್ಕಾಗಿ ಗರಿಕೆ ಕೂಡ ಹರುಷದಿ ಕಾದಿದೆ ಓ ನನ್ನ ಹ್ರುದಯವೇ.
ನಿನಗಾಗಿ ಇಂಪಾದ ಗಾಳಿಯನ್ನು ತಂಪಾಗಿ ಸವಿಯುತ ಕೆಂಪಾದ ನನ್ನ ತುಟಿಯಲಿ ನಿನ್ನ ಸ್ಮರಣೆ ಮಾಡುತ್ತ ನಾ ಕುಳಿತಿರುವೆ ಈ ಸುಂದರ ಪ್ರಕ್ರುತಿಯ ನಡುವಿನಲಿ |ಸ|

ಜಿನುಗುಡುವ ಮಳೆ ಹನಿಯು ತಣ್ಣನೆ ಮೈ ಸೊಕಿರಲು‌ ಝರಿಯಾಗಿ ಮಳೆ ಹನಿಯು ನದಿಯಾಗಿ ಹರಿದಿರಲು ಎಲ್ಲರೂ ಓಟ್ಟಾಗಿ ಕಾದಿವೆವು ನೀ ಬರುವ ದಾರಿಯಲಿ.
ಓ ನಲ್ಮೆಯ‌ ಅಂಬರದ ಚೆಲುವೆ..|ಸ|

( ಸಂತೋಷ್// ಜೀತು )

- ಸಂತೋಷ್//ಜೀತು

28 Jun 2017, 11:14 am

ಗೆಳತಿ....!!!!!!

ಇಂದು
ನೀ ನನ್ನ
ಅಗಲಿ ಹೋದರೂ..
ನಿನ್ನ
ನೆನಪುಗಳಿಂದ
ಮಾಸಿ ಹೋದರೂ..
ಎಂದಾದರೂ
ನಾ ನಿನ್ನ
ನೆನಪುಗಳಲ್ಲಿ
ಮೂಡಿದರೆ
ಹುಡುಕದಿರು ನೀನನ್ನ..
ಮತ್ತೆಲ್ಲಿಯೂ..
ನಾನಿನ್ನ
ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!

- Nashs

28 Jun 2017, 10:27 am

ಮುದುಡಿದ ಭಾವನೆ...

ಏನೊ ತಳಮಳ ಮನದೊಳಗೆ ಗೊಂದಲ
ಪ್ರೀತಿಯ ನೆನಪುಗಳ ಅಲೆಯಲಿ
ನೋವು ನಲಿವುಗಳ ಸುಳಿಯಲಿ
ಮನವು ಕಲ್ಲು ಬೊಂಬೆಯಾಗಿ...
ಮೌನವಾಗಿದೆ...
ಪದೇ ಪದೇ ಕಾಡೋ ಕನಸಿನ ಪುಟಗಳಲಿ
ಆಸೆಗಳು ನೂರಾರು...
ಕನಸುಗಳು ಹಲವಾರು...
ದಾರಿಗಳು ನೂರಾರು...
ಗೊಂದಲಗಳು ಸಾವಿರಾರು...
ಕಾಣದ ದಾರಿಯಲಿ...
ಮುದುಡಿದ ಭಾವನೆಗಳು...
ಕದಡಿದ ಜೀವನ...
ಮೌನವಾಗಿ ಕುಳಿತಿರೋ ಈ ಹೃದಯದ
ಕಣ್ಣ ಹನಿಯ ಕವಿತೆಯ ಸಾಲುಗಳ...
ನಾ ಬಣ್ಣಿಸಿ ಹೇಳಲೆ...!!!

- Pb

28 Jun 2017, 08:49 am