Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41
ಸಂಬಂಧ ಉಳಿಸಿಕೊಳ್ಳುವ ಮನಸ್ಸು, ತಮ್ಮ ಜೀವನ ಸರಿ ಪಡಿಸಿಕೊಳ್ಳುವ ಮನಸ್ಸು ಇಬ್ಬರಿಗೂ ಇರಬೇಕು, ಒಂದೇ ಕೈಯಿಂದ ಚಪ್ಪಾಳೆ ತಟ್ಟಲು ಹೇಗೆ ಸಾಧ್ಯವಿಲ್ಲವೊ ಹಾಗೇ ಒಬ್ಬರ ಪ್ರಯತ್ನದಿಂದ ಸಂಬಂಧ ಸರಿ ಹೋಗಲ್ಲ, ಇಬ್ಬರೂ ಪ್ರಯತ್ನಿಸಬೇಕು ಇಲ್ಲದಿದ್ದರೆ ಆ ಸಂಬಂಧ ಹೆಚ್ಚು ದಿನ ಉಳಿಯಲ್ಲ ಪ್ರತಿಯೊಬ್ಬರಿಗೂ ತಮ್ಮದೇ ಬದುಕಿರುತ್ತದೆ, ಸ್ವಾಭಿಮಾನ, ಆಸೆ, ಕನಸು ಎನ್ನುವುದು ಇರುತ್ತದೆ, ಪ್ರತಿ ಸಾರಿ ಅದಕ್ಕೆ ಪೆಟ್ಟು ಬಿದ್ದರೇ ಆ ವ್ಯಕ್ತಿ ಮನಸ್ಸು ಕಲ್ಲಾಗಿ ಆ ಸಂಬಂಧ ಕೊನೆಯಾಗುತ್ತದೆ?
✍️ ರಂಜು
- ರಂಜಿತ ಭಾವನೆಗಳ ಸುಳಿಯಲ್ಲಿ
10 Oct 2024, 11:25 pm
ನಗು ನಗು ಚಿಂತೆ ಎಲ್ಲಾ ದೂರ ಮಾಡಿ ಒಮ್ಮೆ ನೀ ನಗು?
ನಮ್ ನಗು ಅಳುವಿಗೆ ಕಾರಣ ನಾವೇ ಆಗಿರ್ತಿವಿ, ದುಃಖ ಕೊಡೊ ವಿಷಯಗಳನ್ನ ದೂರ ಮಾಡಿ, ಖುಷಿಯಿಂದ ಇರೋಣ, ಚಿಂತೆನಾ ಬಿಟ್ಟು, ನಮ್ ಕನಸಿಗೆ ನಾವೇ ಕಾವಲುಗಾರರಾಗಿ, ನಮಗಾಗಿ ನಾವು ನಗು ನಗುತಾ ಬದುಕೊಣ, ನೋವು ಕೊಡುವವರು ಯಾರೇ ಆಗಲಿ ಅದನ್ನೆಲ್ಲಾ ಮೀರಿ ನಗುವಿನಿಂದಲೇ ಗೆಲುವಿನ ಶಿಖರ ಹತ್ತಬೇಕು?
✍️ ರಂಜು
- ರಂಜಿತ ಭಾವನೆಗಳ ಸುಳಿಯಲ್ಲಿ
10 Oct 2024, 11:23 pm
ಹೇಳೋಕೆ ಆಗ್ದೆ ಇರೋ ಅಷ್ಟು ನೋವು ಎಷ್ಟೇ ತಡೆದರೂ ಉಕ್ಕಿ ಬರೋ ಕಣ್ಣೀರು, ನೋವನ್ನ ಕೇಳೋ ಹೃದಯ ಇಲ್ಲ, ಸಮಾಧಾನ ಮಾಡೋ ಕೈ ಗಳಿಲ್ಲ, ಎಲ್ಲಾ ಇದ್ದು ಯಾರು ಇಲ್ಲದೇ ಇರೋ ಏಕಾಂಗಿ ತರ ಆಗಿದೆ ಬದುಕು ✍️ ರಂಜಿತ ಸ್ನೇಹಜೀವಿ
- ರಂಜಿತ ಭಾವನೆಗಳ ಸುಳಿಯಲ್ಲಿ
10 Oct 2024, 11:21 pm
ಉಸಿರು ನಿಲ್ಲುವವರೆಗೂ ಪ್ರೀತಿಸುವ ಒಂದು ಜೀವ ಎಂದರೆ ಅದುವೇ ಅಮ್ಮ.. ♥️♥️