Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಂಟಿ ಬದುಕು

ಅಳಿಸಿಬಿಡಲೇ ನಿನ್ನ ಹೆಸರು
ಬಿಗಿ ಹಿಡಿದು ಈ ನನ್ನ ಉಸಿರು
ಮರೆತಂತ ನೆನಪು ಸಾಲಾಗಿ ನಿಂತಿದೆ
ಕನಸಲ್ಲಿ ಆಗಾಗ ಎದುರು
ಮನಸಲ್ಲಿ ನೀನಿನ್ನು ಹಸಿರು
ನೀ ಮಾಡಿ ಹೋದಂತ ಕತ್ತಲ ಬದುಕಿಂದ
ಅಳಿಸಿಬಿಡಲೇ ನಿನ್ನ ಹೆಸರು
ಬಿಗಿ ಹಿಡಿದು ಈ ನನ್ನ ಉಸಿರು


ತೊರೆದುಬಿಡಲೇ ಬೇಗ ನಿನ್ನ
ನೀ ಸನಿಹ ಬರುವ ಮುನ್ನ
ಕರೆದಂತೆ ನೀನು ದೂರದಿ ಎಲ್ಲೋ
ನನ್ನನ್ನೇ ಮತ್ತೆ ಮತ್ತೆ ಈಗ
ಕಾಣಿಸು ನೀ ಒಮ್ಮೆ ಬೇಗ
ಒಂಟಿಯಾಗಿ ಸಾಗುವ ಈ ನನ್ನ ಬದುಕಿಂದ
ತೊರೆದುಬಿಡಲೇ ಬೇಗ ನಿನ್ನ
ನೀ ಸನಿಹ ಬರುವ ಮುನ್ನ

ಮನ್ನಿಸಲೇ ನಾನೇ ಸೋತು
ಕೈ ಚಾಚಲೇ ಎಲ್ಲಾ ಮರೆತು
ಹಿಂತಿರುಗಿ ತೆಗೆದ ಪುಟಗಳಲ್ಲಿ ಮಲಗಿದೆ
ನನ್ನೆದೆಯ ಮೊದಮೊದಲ ಮಾತು
ಅಳುತ್ತಲಿದೆ ನೆನಪೊಂದು ಕುಳಿತು
ನೀ ಬಿಟ್ಟು ಹೋದಂತ ಕುಂಟು ಕನಸೊಂದನ್ನು
ಮನ್ನಿಸಲೇ ನಾನೇ ಸೋತು
ಕೈ ಚಾಚಲೇ ಎಲ್ಲಾ ಮರೆತು

- Jayanthi

06 Jul 2017, 07:19 am

ಆಕರ್ಷಣೆ...... ಪ್ರತಿಷ್ಠೆಯ.......

ರಜ ತುಂಬಿದ ಕೋಣೆ
ವಾರಗಳೆ ಕಳೆದಿದಿಯೇನೋ
ಮಜ್ಜನ ಮಾಡಿ ಆ ಕೋಣೆ,
ಆದರು ಅದು ವಿದ್ಯಾ ಕೋಣೆ!

ತಡವರಿಸಿದೆನು ನೋಡಿ
ಅಂದು......
ಇದೇನ ಮುಖ್ಯೋಪಾಧ್ಯಾಯರ ಕೋಣೆ ಎಂದು.....
ಆದರು ಕಲಿಕೆಗೇನು ಕೊರತೆಯಿಲ್ಲ!

ಇಲ್ಲಿ ಓದಿದವರು ನಿಲ್ಲಬಲ್ಲರು
ದೇಶದ ಮುಖ್ಯ ವಾಹಿನಿಯಲ್ಲಿ
ಖಾಸಗಿ ತನದ ನಯ- ನಾಜೂಕ
ಆಕರ್ಷಣೆಯ ಇವರೆಂದು ತೋರರು!

ಯಾರ ಮೆಚ್ಚುಗೆ ಗಳಿಸುವ
ಪ್ರಸಕ್ತತೆ ಅವರಿಗಿಲ್ಲ....
ಜನರ ಮರುಳಾಗಿಸಿ ಕಿಸೆ
ತುಂಬಿಸಿಕೊಳ್ಳುವ ಪ್ರಸಕ್ತತೆಯು ಇಲ್ಲ‌

ಜ್ಞಾನಾರ್ಜನೆಯ ಕೇಂದ್ರ
ಅಂದ- ಚಂದ ಕಾಣದ ಮಂದಿರ
ದುಡಿಯಲು ಸರ್ಕಾರಿ ಕೇಂದ್ರ
ಓದಲು ಬೇಕು ಖಾಸಗಿ ಮಂದಿರ!

ನಯನ ಮನೋಹರವಾದ ಕಟ್ಟಡ
ಆಟಾಟೋಪದ ಸಂಗಡ
ಮೈ ಜುಮ್ ಎನಿಸುವ
ಹೊತ್ತಿಗೆಗಳ ಭಾರ , ತೋರಿಸಿ
ಪಡೆವರು ಲಕ್ಷ - ಲಕ್ಷ ದೇಣಿಗೆಯ!

ಪ್ರತಿಷ್ಠೆಯ ಸಂಗತಿಯಾಗಿದೆ
ಕಲಿಕೆ ಕೆಳಮಟ್ಟದ್ದಾದರು....
ಕಲಿಕಾ ಕೇಂದ್ರದ ನಾಮ
ಪ್ರತಿಷ್ಠೆಯದ್ದಾಗಿರಬೇಕು!


ಶಾರಧ

- ಶಕುಂತಲಾ

05 Jul 2017, 11:03 pm

ಚಳಿಯಲ್ಲಿನ ಚಹಾ................

ಬೆಳಕರಿದು ಇಬ್ಬನಿಯ ಚಳಿಯಲ್ಲಿ
ನೀ ನಡುಗುತ್ತಿದ್ದರೆ ಆ ಚಳಿಯ ತಂಗಾಳಿಗೆ
ಚಾವಡಿಯಲ್ಲಿ ಚಹವಿಡಿದು ಕುಂತಾಗ ನಿನ್ನ
ಜೊತೆಗೆ ಕಂಬಲಿಯೋದ್ದು ಚಹಾವನ್ನು ಕುಡಿಯುವಾಸೆ ನನಗೆ................

ಬೆಚ್ಚಗೆ ನಿನ್ನ ಮಡಿಲಲ್ಲಿ ತಲೆಯಿಟ್ಟು ಮಲಾಗುವಾಸೆ ನಿನ್ನ ಉಸಿರ ಬಿಸಿಯಲ್ಲಿ ತುಂತುರು ಮಳೆಯ ಗಮ್ಮತ್ತಿಗೆ
ಸೋತ ನನ್ನ ಮನಕೆ.................

ಅರೇಬಿಚ್ಚಿದ ಕಣ್ಣಿಂದ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಚಳಿಯ ತಂಪಿಗೆ ಅದುರುತಿರುವ
ತುಟಿಗಳಿಗೆ ಚಹಾದ ರುಚಿಯ ಸವಿಸುತ್ತಾ ಮಲೆನಾಡ ಚೆಲುವನ್ನು ಆನಂದಿಸುವ ಆಸೆ ನನಗೆ..

ಎತ್ತ ನೋಡಿದರೂ ಉದ್ದನೆಯ ಮರಗಳು ಆಕಾಶದ ತುದಿ ಮುಟ್ಟಿ ನೆಲಕ್ಕೆ ಮುತ್ತಿಡುವಂತೆ
ಎದ್ದು ನಿಂತಿವೆ ಹಸಿರು ತುಂಬಿ ವಾರಂಗಣದ ತುಂಬೆಲ್ಲ...............

ಮಂಜು ಮುಸುಕಿದೇ ಸುತ್ತಲಿನ ಪರಿಸರವೆಲ್ಲಾ ನಾವು ನೋಡಬಾರದೆಂದು ತಾನು ಮೆಚ್ಚಿದ ಪ್ರಕೃತಿಯ ಮನೋಹರ ಸೊಗಸನ್ನು
ನಿನ್ನ ಪ್ರೀತಿಯ ವಿಸ್ತಾರದಷ್ಟು..............

ಕೈಯಲ್ಲಿನ ಹಬೆಯಾಡುವ ಚಹಾ ಮುಗಿಯುವಷ್ಟರಲ್ಲಿ ನಿನ್ನ ಸೇರಲೆಂದು ಹೊರಟಿರುವೆ ಗಾಳಿಯಿಂದ ಬೇರಾಗದ
ನೀರಿನಅಂಶ ನಾನಾಗುವಂತೆ..................

ಚಳಿಯಲ್ಲಿನ ಚಹಾ..................

- ಚುಕ್ಕಿ

05 Jul 2017, 08:05 pm

ಸಾಫ್ಟ್‌ವೇರ್ ಜೀವನ

ಸಾಫ್ಟ್‌ವೇರ್ ಜೀವನ
ಬ್ರೇಕ್ ಲೆಸ್ ವಾಹನ ...

ಕಣ್ಣಿಗೆ ನಿದ್ದೆ ಇಲ್ಲ
ಮನಸ್ಸಿಗೆ ನೆಮ್ಮದಿ ಇಲ್ಲ
ಮನುಷ್ಶರಿಗೆ ಸಮಯವಿಲ್ಲ
ಕಂಪ್ಯೂಟರ್ ದಿನವೆಲ್ಲಾ ..

ಬಸ್ಸಿಗಾಗಿ ಓಡು ಓಡು
ಹೆಸರಿಗಾಗಿ ಅವಕಾಶ ನೋಡು ನೋಡು
ದುಡ್ಡಿಗಾಗಿ ಕೆಲಸ ಮಾಡು ಮಾಡು
ದಿನವಿಡಿ ಕೀಬೋರ್ಡ್‌ನೊಂದಿಗೆ ಗುದ್ದಾಡು

ಪ್ರೋಗ್ರಾಮಿಂಗ್ ಭಾಷೆಗಳ ಚತುರನಾಗು
ಯೋಜನೆಗಳ ಅಭಿವೃದ್ಧಿ ಮಾಡು..
ಸೋಮವಾರ ಬಂದರೆ ಅಯ್ಯೋ! ಅನ್ನು..
ಬಡ್ತಿಗಾಗಿ ಪರದಾಡುವಂತಾಗು..

ಸಾಫ್ಟ್‌ವೇರ್ ಜೀವನ
ಸ್ಟ್ರಸ್ ಪುಲ್ ಜೀವನ..

- aish

05 Jul 2017, 07:53 pm

ನಿನ್ನ ನೋಡುವ ಅವಕಾಶ............

ನಿನಗಾಗಿ ಒಂದು ಕವನ ಈ ಕ್ಷಣ
ಬರೆಯುವ ಆಸೆಯಾಗಿದೆ ನನ್ನ ಮೇಲಿನ
ಪ್ರೀತಿಯ ನೋಡು ಗೆಳೆಯಾ.............

ಮಾತುಗಳು ಹತ್ತಾರು ಆಗಿರಬಹುದು
ಭಾವನೆಗಳು ನೂರಾರು ಕೂಡಿಟ್ಟಿರಬಹುದು
ಪ್ರೀತಿಯೇoಬ ಒಂದು ಪದಕೆ ಸರಿಯಾದ ಮಾತು ಅದ್ಯಾವುದೋ ನಿನ್ನ ಮುಂದೆ..............

ಮಾತಲ್ಲಿ ನಿನ್ನ ಹಚ್ಚಿಕೊಂಡಿದ್ದಾರೆ
ಮಾತಲ್ಲೇ ಹೇಳುತ್ತಿದ್ದೆ ನಿನ್ನ ಮೇಲಿನ
ಅಕ್ಕರೆಯನು.................

ಮನಸು ಕಂಡ ಅಪ್ರತಿಮ ಸ್ನೇಹ ನಿನ್ನದು
ಹೇಗೆತಾನೆ ಹೇಳಲು ಸಾಧ್ಯ ನಿನ್ನ ಪ್ರೀತಿಯ
ನಿಲುವನ್ನು ಮಾತಲ್ಲಿ...........

ನಿನ್ನ ಕದ್ದು ನನ್ನಲ್ಲಿ ಬಚ್ಚಿಡಲೇ
ಎಲ್ಲಿಗೂ ಬಿಡದಂತೆ ಯಾರು ನಿನ್ನ
ನೋಡದಂತೆ.........
ನಿನ್ನ ನಗುವಿನ ಮೇಲೆ ಕೋಪ ನನಗೆ
ನನ್ನ ಸ್ಥಾನ ಅದು ಕದ್ದಿವುದೆಂದು.........

ನಿನ್ನ ನೋಡುವ ಪ್ರತಿಯೊಬ್ಬರ ಮೇಲೂ
ಹೊಟ್ಟೆ ಕಿಚ್ಚಿ ನನಗೆ ಅವರ ಕಣ್ಣು ನಾನಾಗಿಲ್ಲವೆಂದು..................

ದಿನನಿತ್ಯ ನಿನ್ನ ನೋಡುವ ಅವಕಾಶ ನನಗುಲ್ಲವೆಂದು.........

- ಚುಕ್ಕಿ

05 Jul 2017, 07:41 pm

ನನ್ನವಳು

ನಿನ್ನ ನಗು ಆಂದರೆ ಹಿಂಗೆ ಗಿಡದಿಂದ ಹೂ ಉದುರಿದಾಂಗೆ ನಿಂಗೆ ಆಳು ಬಂದರೆ ಹ್ಯಾಂಗೆ ಮುಂಗಾರಿನ ಮಳಿ ಹೊಡೆದಾಂಗ

- koushik

05 Jul 2017, 07:38 pm

ನನ್ನವಳು

ನಿನ್ನ ನಗು

- koushik

05 Jul 2017, 07:28 pm

ನನ್ನವಳು

ನಿನ್ನ ನಗು

- koushik

05 Jul 2017, 07:28 pm

ಬ್ಯಾಚುಲರಾಯ ನಮಃ.....

ಕೊಳ್ತೋಗಿರೋ ಟೊಮ್ಯಾಟೋ, ಹುಳ್ತೋಗಿರೋ ಬದನೆಕಾಯಿ,ಎತ್ತಿಡೊ ಇರೋ ಚಾಪೆ ದಿಂಬು,ಅಲ್ಲೊಂದು ಇಲ್ಲೊಂದು ಬಿದ್ದಿರೋ ಶೂ, ತಾಳ ಇಲ್ದಿರೋ ಟಾಯ್ಲಟ ಡೋರು, ಗೋಡೆ ತುಂಬ ಹೀರೋಯಿನ್ಸ ಫೋಟೋ, ಹ್ಯಾಂಗರಲ್ಲಿ ರಾಶಿ ಬಟ್ಟೆಗಳು, ಸಜ್ಜದ ಮೇಲೆಲ್ಲಾ ತುಂಬಿದ ಬಾಟ್ಲಗಳು, ಇವಗ್ಲ ಜೊತೆಗೆ ಅಂಟಕೊಂಡಿರೊ ನಮ್ಮ ಮೋಬೈಲ ಗಳು, ಕಿತ್ತೊಗಿರೊ ಇಯರ್ ಫೋನ್ ಗಳು, ಇಸ್ಟೆಲ್ಲಾ ಇರೊ ಬ್ಯಾಚುಲರ್ ಲೈಪಲಿ ಒಂದೆರಡು ಬ್ರೇಕಪ್ಸು , ನೆನಪಾದ್ರು ಅಳಕ್ಕಾಗ್ದಿರೊ ಅಮ್ಮ ನ ಸೆಂಟಿ ಮೆಂಟು, ಆದ್ರು ಬೇಜಾರು ಆಗ್ದೆ ಇರೊ ಹಂಗೆ ಡೈಲಿ ಕ್ರಿಕೆಟ್, ವಾರಕೊಂದು ಫಿಲ್ಮು, ತಿಂಗಳಿಗೊಮ್ಮೆ ಟ್ರಿಪ್ಪು, ಯಾವಾಗಲ್ಲು ರಿಜರ್ವ್ ಲಿ ಇರೊ ಬೈಕು, ಬೇಕ್ರಿ ಮುಂದೆ ಟಿ, ಹುಡುಗಿಯರ ಮೇಲೊಂದು ಕಣ್ಣು,

ಇದೆಲ್ಲಾ ಆದ ಮೇಲೆ ಅಪ್ಪ ಅಮ್ಮ ನಮ್ಗೆ ಅಂತ ಒಂದ ಹುಡುಗಿನ ಗಂಟಾಕಿದ್ಮೆಲೆ ಸ್ಟಾರ್ಟ , ಆಯ್ತ ಹೊಸ ಜೀವನ ಅಂಥ ಉಸಿರು ಬೀಡೊ ನಮ್ಗೆ, ಬೆಳಿಗ್ಗೆ ಅದೆ ಚಿತ್ರಾನ್ನ, ಮಧ್ಯಾಹ್ನ ಅದೆ ಮೊಸರನ್ನ, ರಾತ್ರಿ ಅದೆ ತಂಗ್ಳನ್ನ ,
ಬ್ಯಾಚುಲರ್ ಗಂಡ್ಮಕ್ಲೆ ನೇನ್ಪಿಟ್ಟಕೊಳ್ಲಿ ಬ್ಯಾಚುಲರ್ ಬಾಳ್ನ ಬರೆದ ಇಟ್ಕೊಳ್ಳಿ, ಯಾಕಂದರೆ ನಿಮ್ಮ ಹೆಂಡತಿ ಜೊತೆ ಜಗ್ಳ ಆಡ್ಕೊಂಡು, ಬಾರಲ್ಲಿ ಹಳೆ ಫ್ರೆಂಡ್ಸ್ ಜೊತೆ ಕುಡ್ಕೊಂಡಾಂಗ ಅದೆ ಅವ್ನಿಗೆ ಹೇಳಳ್ಕಾದ್ರು ಬೇಕಲ್ವಾ ನಮಗೆ ಅಂಥ ಒಂದು ಬ್ಯಾಚುಲರ್ ಲೈಪ್

- Shiva.S.M...!

05 Jul 2017, 06:52 pm

ಕವನ..........✍

ಕೈಗೂಡಿ ಬಾರೆ ಕವನ ಅಚ್ಚರಿಯಂತೆ
ಪದಗಳನ್ನು ಕೊಂಡು ತಾರೆ ಎಲ್ಲರ ಮನ ಮೆಚ್ಚುವಂತೆ//

ಪ್ರಕೃತಿಯ ವರ್ಣಿಸುವ ಕಿಚ್ಚು ಹೆಚ್ಚಾಗಿದೆ ನನ್ನಲ್ಲಿ
ಹರಿಯುತ್ತಿದೆ ಕವನಗಳ ಹೊಳೆ ನನ್ನ ಮನದನ ಮಾಳಿಗೆಯಲ್ಲಿ//

ಎಲ್ಲಿಂದ ಈ ಬಡವಿಯ ಮನಸೇರಿದೆ ಕರೆಯಿಲ್ಲದೆ ಕವನ,ನಿನ್ನ ಆಗಮನದಿಂದ ನೂರಾರು
ಅನುಭವಗಳನ್ನು ನಾನೇ ತಿಳಿಯದ ನನ್ನನ್ನು ಪರಿಚಯಿಸಿದೆ ನನಗೆ//

ಭಾವನೆಗಳ ಸಂಚಲನ ನೀನು,
ಜೀವನಗಳ ಜಂಜಾಟ ನೀನು,ಮನಸ್ಸುಗಳ
ಮಾತು ನೀನು,ಏನೆಂದು ತಿಳಿಸಲಿ ಎನಿಲ್ಲವೆಂದು
ಹೇಳಲಿ ನಿನ್ನನ್ನು//

ನಿನಗೊಂದು ರೂಪ ಕೊಡಲೇ ನನ್ನಲ್ಲಿನ
ಉಸಿರು ತುಂಬಿ ಕಣ್ಣಲ್ಲಿ ನೋಡುವ ಸೊಗಸಾದ ದೃಶ್ಯಗಳಿಂದ ಹೀರಿದಸಾರ ನಿನ್ನ ಮಡಿಲಲ್ಲಿ ಮಡಗಿ//

ಯಾರಕಣ್ಣು ನಿನ್ನ ಹೊನ್ನು ಕದಿಯದಂತೆ
ಪದಗಳಲ್ಲಿ ಬಚ್ಚಿಡಲೇ ನಿನ್ನ ನೋಡಿ ಮೆಚ್ಚಿದವರ ಕಣ್ಣುಗಳ ಹೊಳಪು ನಿನ್ನ ಕರಗಿಸದಂತೆ ನನ್ನ ನಗುವಿನ ಪರದೆ ನಿನಗಿಂದು ಕಟ್ಟಲೇ ಕವನವೇ//

- ಚುಕ್ಕಿ

05 Jul 2017, 06:45 pm