ನೀ ಅಡಗಿ ಕುಳಿತಿರುವೆ ಈ ವನದಲ್ಲಿ. ಕತ್ತಲೆಯಿಂದ ಕೂಡಿರುವ ಸಮಯದಲ್ಲಿ.
ಎತ್ತ ನೊಡಿದರೂ ದಾರಿ ಕಾಣದಂತಾಗಿದೆ.
ಸುತ್ತಲೂ ಮಿಂಚುಳ್ಳಿ ಹುಳುಗಳು ಬೆಳಕನ್ನು ಚೆಲ್ಲುತಿವೆ .ಇ ಚಂದವ ತೊಟದಲ್ಲಿ.||
ಅಂಗೈಯಲ್ಲಿ ಮಿಂಚುಳ್ಳಿ ಇಡಿದು ಮಿಂಚಂತೆ ಹೊಳೆಯುವ ನಿನ್ನ ಮೂಗುತಿ ಬೆಳಕನ್ನು ಸ್ಪರ್ಷಿಸಿ.ಅದರ ಹೊಳಪನ್ನು ಹರಿಸಿ.
ಇ ಚಂದವನ ತೋಟದ. ಸುಂದರ ಮೈ ಮಾಟದ. ಸೌಂದರ್ಯದ ಸೊಬಗನ್ನು ಹೊರಚೆಲ್ಲುವುದು.ಚೆಲುವೆ.
ನೀನೆ ನನ್ನ ಚಂದನವನದಲ್ಲಿ ಅರಳಿರುವ ತಾವರೆಯ ಹೂವೆ.
ಕಣ್ಣಲ್ಲಿ ನಿನ್ನಿಟ್ಟು ನನ್ನ ಮಗುವಂತೆ
ಕಾಪಡಲೆಂದು ನಿರ್ಧರಿಸಿದ್ದೆ ನಾನು
ಪ್ರೀತಿಯೆಯ ಗೆಳತಿ............
ತಿಳಿಸಿದ್ದೆ ನನ್ನ ಮನಸು ನಿನ್ನ
ಮೌನಕ್ಕೆ ಮಾತು ಕೊಟ್ಟು ನನ್ನ
ಸ್ವೀಕರಿಸಲು ನಿನ್ನಲ್ಲಿ ಮೊರೆಯಿಟ್ಟಿದ್ದೆ..........
ನಿನ್ನ ತೊರೆದು ಹೋಗುವ ಆಸೆಯಂತೂ ನನಗಿಲ್ಲ ಕನಸಲ್ಲೂ ನಿನ್ನ ಕಣ್ಣಲ್ಲೇ ಕನಸಾಗಿ ಉಳಿಯಲು ನಾನು ಆಸೆ ಪಟ್ಟಿದ್ದೆ ನನ್ನೊಳವೆ ನಿನ್ನೊಳಗೆ...................
ನಿನ್ನ ನಿರಾಕರಣೆ ಕೇಳಿದ ಕಿವಿಗಳಿಂದ
ಅತ್ತು ನನ್ನ ಕಣ್ಣೀರು ನೊಂದಿಹುದು
ಆದರೆ ನೀನಿಲ್ಲವೆಂಬ ಕಟುವಾದ ಸತ್ಯವನ್ನು
ನಂಬದ ನನ್ನ ಹೃದಯ ಇಂದಿಗೂ ನಿನಗಾಗಿ ತಾನಿರುವೆನೆಂದು ಬಡೆದುಕೊಳ್ಳುತ್ತಿರುವುದೇ ಗೆಳತಿ............
ನನ್ನೊಳವಿನ ಸಂಗಾತಿ ಮರೆಯದಿರೆ ನನ್ನನೆಂದು ನಿನ್ನ ಕಾಳಕೆಲಗಿನ ಮಣ್ಣಾಗಿಯಾದರು ನೆನಪಿಟ್ಟುಕೊ ನನ್ನ ಮನಸು ಹಾಸಿದ ಪುಷ್ಪರಾಶಿಯ ಹೆದ್ದಾರಿಯಲ್ಲಿ ನಡೆದು ಕೋಣೆಗಾದರು ನನ್ನ ಸೇರಿ ಮುದ್ದಾದ ಗೆಳತಿ.......
ಹೊರಟಿರುವೆನಮ್ಮ ಹೊಸ್ತಿಲ ದಾಟಿ
ಎಲ್ಲರದೆಯಲ್ಲೂ ಬೀಳ್ಕೊಡುವ ನೋವ ಮೀಟಿ
ನಾ ಕಂಡ ತಾಯ ಮಡಿಲಾಗುವುದಿನ್ನು ಅಪರಿಚಿತ
ಎತ್ತಾಡಿಸಿದ ಅಪ್ಪನು ದೂರಾಗುವುದು ಖಚಿತ
ಈ ಎಲ್ಲ ನೋವುಗಳು ನಂಟಿನ ಹೆಸರಲಿ ನನಗೆ ಉಚಿತ
ಹೇಳಿರುವರು ಕೊಟ್ಟ ಹೆಣ್ಣು ಕುಲಕೆ ಹೊರಗೆಂದು
ತಾವು ಕಂಡ ಕೂಸೆ ನಮ್ಮವಳಲ್ಲವೆಂದು ನೊಂದು
ಪರರ ಮನೆಯ ಸೊತ್ತಂತೆ ಇನ್ನೂ ನಾನೆಂದು
ಆಡಸಿ ಬೆಳೆಸಿದವರೆ ಪರರಾಗುತಿರುವರು ನನಗಿಂದು
ಹುಟ್ಟಿದ ಮನೆಗೆ ಅತಿಥಿಯಾಗುವೆ ತಿಳಿಯೆನು ಯಾಕೆಂದು
ಉಡುಗೆ ತೊಡುಗೆ ಬದಲಾಗಬೇಕಿದೆ ಅಪ್ಪನ ಬೀಳ್ಕೊಡುಗೆಯಲಿ
ಇನ್ಯಾರೊ ಜೊತೆಯಾದವರ ಸಲಹಬೇಕು ಅಮ್ಮನ ಕಾಳಜಿ ಅಕ್ಕರೆಯ ನೆನಪಿನಲಿ
ಒಡಹುಟ್ಟಿದವರು ಕಾಣೆಯಾಗುವರು ಬೇರೆ ಮನೆಯ ಸ್ವತ್ತೆಂಬ ಆತಂಕದಲಿ
ನನ್ನೊಳಗಿನ ನನ್ನನೆ ಮರೆಯಬೇಕಿದೆ ಇನ್ಯಾರದೊ ಮನೆಯ ಸೇರುವ ನೆಪದಲಿ......