Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಗೆ ಹೊತ್ತು ಗೊತ್ತಿಲ್ಲ..

ಓ ನಲ್ಲೇ
ಈ ನಲ್ಲನ ನಿದ್ದೆ ಕದ್ದೆ
ಮೆಲ್ಲನೆ ಪಿಸು
ಮಾತಾಡಿ..

ಮಾತಿನ ಮೋಡಿಗೆ
ಮನದಲ್ಲಿ ಸಣ್ಣಗೆ
ಮೂಡಿತ್ತೊಂದು ಬಯಕೆ...
ಯಾವಾಗಲೂ ನೀನು
ನನ್ನವಳಾಗಿಯೇ ಇರಲೆಂದು
ದೇವರಿಗೆ ಕಟ್ಟಿದೆ ಹರಕೆ...

ಮಾತಾಡಿ ಮಾತಾಡಿ
ಹೋಗಿದ್ದೆ
ಗೊತ್ತಾಗಲಿಲ್ಲ
ಹೊತ್ತು...... !
ನಾನಾಗ
ನೋಡಿಕೊಂಡೆ
ನನ್ನ ಕೈಯ ವಾಚು
ಮೆಲ್ಲಗೆ ಸರಿದಿತ್ತು
ರಾತ್ರಿ 12 ರ ಹೊತ್ತು......!

ಆದರೂ ಮಾತನಾಡುವ
ಮಿಡಿತ-ತುಡಿತ
ಇನ್ನು ಹೆಚ್ಚಿಗೆ ಇತ್ತು.....
ಆದರೆ ಏನು ಮಾಡೋದು
ಈ ಪ್ರೀತಿಗೆ ಸಾಲದು
ಯಾವುದೇ ಹೊತ್ತು ಗೊತ್ತು...

ಪ್ರೀತಿಯಿಂದ...
ವಿಜಯ್....9741940305

- ವಿಜಯಾನಂದ

08 Jul 2017, 07:52 pm

.... ಹೆದ್ದಾರಿ ಹಂತಕ....

ಹಿಗೊಬ್ಬ ಕರಿ ಹಂತಕ
ಅವನು ಬರುವನೆಂದೆ ಅದೆಷ್ಟೋ ಮಾರಣಹೋಮ ಹೋಮ...

ಇವನು ಹಾದಕಡೆ
ಹೆಣಗಳು ರಾಶಿ ರಾಶಿ...
ಆ ಹೆಣವ ಮಾರಿ ತುಂಬಿಕೊಂಡರು
ಹಣ ಬಾಚಿ ಬಾಚಿ....

ಅದಕೇನು ಆ ದೇಹಗಳ ಮೇಲಾಸೆಯೊ
ಇಲ್ಲ ಜನರ ಮೇಲೆ ಪ್ರೀತಿಯೊ..
ಇಗೊ ಬಂದವನೆ ಕರಿ ಹಂತಕ
ಇವನೆ ಹೆದ್ದಾರಿ ಎಂಬ ಹಂತಕ...

ಒಂದೋಮ್ಮೆ ಇದ್ದವು ದಾರಿ
ಇಕ್ಕೆಲಗಳಲ್ಲಿ ಗಿಡಮರ ಬಳ್ಳಿ,
ಇಗ ಇರುವ ಹೆದ್ದಾರಿ
ಪಕ್ಕದಲ್ಲಿ ಗಿಡದ ಬುಡಸುಟ್ಟ ಬೂದಿ....

ಬಿಸಿಲಿಗೆ ಮಿಂಚುವ ಕರಿ ಟಾರು
ಮೇಲೆ ಪ್ರಯಾಣಿಕರ ಜೋರು
ಅಲ್ಲಿ ಇಲ್ಲ ವೇಗದ ಮಿತಿ
ಹೀಗಾಗಿ ಆಗಿರುವವು ಎಷ್ಟೋ ತಿಥಿ....

ಕಟಕಟೆ ಹತ್ತದ ಹಂತಕ ಏಕೈಕ
ಇವನೇ ಹೆದ್ದಾರಿ ಎಂಬ ಹಂತಕ....

..... ಪಿ ಅನಿ.....

- ಪಿ ಅನಿ...

08 Jul 2017, 07:08 pm

ಬದುಕು

ತಿಳಿ ನೀಲದಲ್ಲಿ
ಲೀನವಾಗುವ ಓ ಬದುಕೇ
ಬಯಸಿದೆಲ್ಲವೂ
ಪಡೆದುಕೊಳ್ಳುವ ತನಕ!!
ಅತಿ ಆಸೆಯಿಂದ ನೀ
ಬೆಳೆಸಿಕೊಂಡಿರುವ ಬದುಕು
ಈ ಭೂಮಿಯಲ್ಲಿ ನಿನ್ನ
ಉಸಿರು ಇರುವ ತನಕ!!

ಕ್ಷಣ ಮಾತ್ರದಲ್ಲಿಯೇ
ತನ್ನ ಪಾತ್ರ ಅಳಿಸುವ ಬದುಕು
ತಾ ಸೂತ್ರ ಹಿಡಿದು
ಹೊರಡುವುದು ಎಲ್ಲ ತೊರೆದು!!
ಬಿರುಗಾಳಿಯಲ್ಲಿ
ಜೋರಾಗಿ ಉರಿಯುವ ದೀಪ
ದಹಸಿದರೂ ಎಲ್ಲ
ಕೊನೆಗೆ ಆರಲೇ ಬೇಕಾದ ಶಾಪ!!

ಪಡೆದದ್ದು ಏನು
ಉಳಿಯಿತು ಎಂದು
ಯೋಚಿಸಲು ಸಮಯದಲ್ಲಿ
ನಿನ್ನ ಬದುಕಿನ ಕೊನೆಯು ಅಲ್ಲಿ!!
ಮಾಡಿರುವ ತ್ಯಾಗ
ನಡೆದಿರುವ ನಿಷ್ಠೆ
ಬರುವವು ನಿನ್ನ ಜೊತೆಗೆ
ಅದುವೇ ಉಳಿವುದು ಕೊನೆಗೆ!!

- ಪಿ.ಜಿ.ಜ್ಯೋತಿ

08 Jul 2017, 06:38 pm

ಮದುವೆ

ಮದುವೆ ಎಂದ ಮೇಲೆ
ವರ‌ನೇ ವರವು ಬಾಲೆ!!
ಬರುವ ಎಲ್ಲ ನಾಳೆ
ಅವನೇ ನಿನ್ನ ಬಾಳೆ!!

ಬದುಕು ಎಂದ ಮೇಲೆ
ಇರುವುದು ಏಳು ಬೀಳು!!
ಬರುವ ಕಷ್ಟ ಸುಖದಿ
ಇಬ್ಬರಿಗೂ ಸಮ ಪಾಲು!!

ಗಂಡು ಹೆಣ್ಣು ಎಂಬ
ಪದವು ಬೇರೆ ಬೇರೆ!!
ಬೆಸೆಯಲು ಈ ಬಂಧ
ಬಿಡಿಸದ ಅನುಬಂಧ!!

ಬಾಳಲಿ ಜೊತೆ ಇರಲು
ಸಂತಸ ಹಗಲು ಇರುಳು!!.
ಬದುಕಲಿ ಸಾರ್ಥಕತೆ
ತರುವುದು ಈ ಮದುವೆ!!

- ಪಿ.ಜಿ.ಜ್ಯೋತಿ

08 Jul 2017, 06:38 pm

ಕಪ್ಪು ನೆರಳ ಪ್ರೀತಿ..❤

ಕಾಣದ ಕಣ್ಣಿಗೆ ಸೋಕಿದೆ ಪ್ರೀತಿಯ
ಕರಿ ನೆರಳು.......

ಬೀಸುವ ಗಾಳಿಗೆ ನ ಅಂಟಿ ಕೂತಿರುವ
ಚಿಟ್ಟೆ ನಾನು....

ರಭಸದ ಗಾಳಿ ನನ್ನ ನಂಬಿಕೆ ಅಲ್ಲ
ನನ್ನ ರೆಕ್ಕೆಗಳು ನನಗೆ ನಂಬಿಕೆ.....

ಮಾಡಿದ ಸ್ನೇಹಕ್ಕೆ ಬದ್ಧಳಾಗಿ ನಂಬಿ ಮೋಸ
ಹೋದ ಗೆಳತಿ ನಾನು....

ಒಮ್ಮೆ ನೋಡು ಖಾಲಿ ಹೃದಯದಲ್ಲಿ
ನಿನ್ನ ಜಗವ ತುಂಬುವರರು....

ಇಂತಿ ನಿನ್ನ ಮುಗ ಮನಸು..... A

- ಅಂಜಲಿ

08 Jul 2017, 04:37 pm

ಎಲ್ಲೋದೆ ನೀನು..........

ಎಲ್ಲೋದೆ ನೀನು ನಾನು ನೀನಿಗಾಗಿ ಕಾದಿರುವೆನೆಂಬ ನೆನಪು ನಿನಗಿಲ್ಲವೇನು..........
ನಿನ್ನ ನೋಡದೆ ನನ್ನ ಮನಸು ತಳಮಲಕ್ಕೆ
ಒಳಗಾಗಿದೆ ನಿನ್ನ ಕರೆ ಕೇಳಬೇಕೆಂದು..........

ಮಾತದರೂ ಹೇಳದೆ ನನ್ನ ಮನಸ್ಸನ್ನು ಬಿಟ್ಟು ಹೊದೆಯೇನು ನಿನ್ನೊಡನೆ ಆಡಿದ ನೂರು ಮಾತು ನೀನಿಲ್ಲದಾಗ ನನ್ನ ಜೊತೆಗೆ ಬರುವುದೇನು..........

ಮೌನಕ್ಕೂ ನನ್ನೆಸರು ಮರೆತೊಗಿದೆ ನೀನಿಲ್ಲದೆ
ನನ್ನೊಡನೆ ಪ್ರೀತಿಯಿಂದ ಮಾತನಾಡಲು...........
ನಿನ್ನ ಉಸಿರಿನ ಪರೆದಾಟ ತಿಳಿಯೋ ಗೆಳೆಯ ಎಲ್ಲಿದ್ದರೂ ನನ್ನಲ್ಲಿಗೆ ಕ್ಷಣಾರ್ಧದಲ್ಲಿ ಸೇರೋ ಗೆಳೆಯ................

- ಚುಕ್ಕಿ

08 Jul 2017, 04:32 pm

ನೆನಪುಗಳು

ನೆನಪುಗಳೇ ಜೀವನ
ಮನಸ್ಸಿಗೆ ಕೈಗನ್ನಡಿ
ಮನದಿಂದ ಮಾಸದ ಹಾಗೆ
ಜೀವಿಸು ಜೀವವೇ
ಅದುವೇ ಸ್ಪೂರ್ತಿ
ಮುಂದಿನ ನಮ್ಮೀನಲಿವಿಗೆ

ಭಾವಭಾವನೆಗಳ ಓಕುಳಿ
ಪ್ರವಹಿಸಲಿ ಬಾಳಲಿ
ನಮ್ಮ ಜೀವನದ ಹಾದಿ
ಹಾಗೂ ಹೀಗೂ ಸಾಗಿಸುವ
ನಾವಿರುವವರೆಗೂ...

- sathyabapuji

08 Jul 2017, 03:34 pm

ಅನನ್ಯ ಬಂಧ

ನಮ್ಮ ದೇಹದ ಮನದ
ಅಂತರ್ಜಾಲ.. ಮನಸ್ಸು
ಪ್ರಮುಖ ಪ್ರಬಲ ಸಂಹವನ
ನಿಸ್ತಂತು ಪ್ರವಹಿಸಲು
ಪ್ರೀತಿ ಪ್ರೇಮದ ಮಾರ್ಗದ
ಮಧ್ಯದ ಅನನ್ಯ ಬಂಧ
ಬಿಗಿಯಾಗಿದ್ದರೆ ಮಾತ್ರ ಸಾಧ್ಯ
ಉತ್ತಮ ಸಂಬಂಧ

- sathyabapuji

08 Jul 2017, 03:31 pm

ಮನದ ರಾಗ

ಮೌನವಾಗಿ ಬಲೆ ಬೀಸದೆ ನುಡಿಸು ನಿನ್ನ ಮನದ ಪ್ರೀತಿಯ ರಾಗ ನವಿರಾಗಿ ಕಣ್ಣು ತೆರೆದೆ ಮೌನ ಮುರಿಯದ ಮರದ ಹಾಗೆ ಒಳಗಿನ ಮಾತು ನಿಲ್ಲಿಸಿ ಹೃದಯ ಕಾತರಿಸಿದೆ ನಿನ್ನ ಬರುವಿಕೆಗಾಗಿ .......................................................... ಬೀಸುವ ತಂಗಾಳಿಯಲ್ಲೂ ನಿನ್ನದೇ ಹೆಜ್ಜೆ ಸದ್ದು

- Jayanthi

08 Jul 2017, 02:13 pm

ನಾ ಕಲಿಸಿದ ಕಲಿಕೆ ಮರಳಿ ನನಗೆ

ನಾ ಕಲಿಸಿದ ಕಲಿಕೆ ಮರಳಿ ನನಗೆ
ಲೋಕದಲ್ಲಿರುವ ವಿಷಯಗಳನ್ನೆಲ್ಲ
ತುಂಬಿಸಿದೆ ಇದರ ತಲೆಗೆ..........

ಬುದ್ದಿಯಿಲ್ಲದ ಬುದ್ಧಿವಂತೆ ಇದು
ನಾವು ಕಲಿಸಿದ್ದು ಎಂದಿಗೂ ಮರಿಯಲ್ಲ
ಅದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ..........

ಶೂನ್ಯದಲ್ಲೇ ಕೋಟಿಕಲಿತಿದೆ ಒಂದರಲ್ಲೇ
ಮುಕ್ಕೋಟಿ ಕಲಿಸುತ್ತಿದೆ, ಕುಂತಲ್ಲೇ ಪ್ರಪಂಚವನ್ನು ಕ್ಷಣದಲ್ಲಿ ತೋರುತ್ತದೆ,ವಿದ್ಯುತ್ ಉಪಹಾರ ಪಡೆದು ಸಕಲವನ್ನು ಹೇಳಿಕೊಡಲು ಸಿದ್ಧವಾಗುತ್ತದೆ..................

ಅವನಿಯಲ್ಲೇ ಅಗ್ರ ಸ್ಥಾನ ಪಡೆದಿದೆ ತಂತ್ರಜ್ಞಾನವನ್ನು ತನ್ನಿಂದ ತಿಳಿಸಿ ಕಣ್ಮುಂದೆ ತೋರುತ್ತಿದೆ..............

ಜ್ಞಾನದ ಗಣಗಳನ್ನು ಒಳಗೊಂಡ ಗಣಕಯಂತ್ರವಿದು ಜಾಣ್ಮೆಯಿಂದ ಕೆಲಸಮಾಡುವ ಜಾದೂಗಾರನಿದು.........

- ಚುಕ್ಕಿ

08 Jul 2017, 01:45 pm