Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇ ಹೃದಯಾ

ದಿನಗಳು ಕಳೆದವು ಕಾರಣವಿಲ್ಲದೆ,
ಆದರೆ ರಾತ್ರಿ ಮಾತ್ರ ನೋವಿನಿಂದ ತುಂಬಿದ ಸಂತೆ.
ನೋವುಗಳು ಸಮಯದೊಂದಿಗೆ ಸರಿಯಾದವು,
ಆದರೆ ಗುರುತನ್ನು ಶಾಶ್ವತವಾಗಿಸಿದವು.
ಹಾಸಿಗೆ ಮೇಲೆ ಇರದ ವಿಶ್ರಾಂತಿ,
ಚಿತ-ಪಟ, ನಿದ್ರಿಸಲು ಮಾಡಿದ ಪ್ರಯತ್ನಗಳು ಹಲವಾರು.
ಆದರೆ ಚಿಂತೆಗಳು ತೆಲೆಹಿಂಡಿದವು.
ಆಳವಾದ ವಿಚಾರಗಳು ಮನಸ್ಸಿನಲ್ಲಿ,
ಆದರೆ ನೆನಪು ತನ್ನ ಬೆಳಕಿನ ಕಿರಣಗಳನ್ನು ಎಲ್ಲೆಡೆ ಚಲ್ಲಿದವು.
ಕಲಿಸಿದವು,ಅಳಿಸಿದವು,ಉಳಿಸಿದವು.
ಆದರೆ ನೆನಪಿನ ಕತ್ತಲು ಈ ಕತ್ತಲಲ್ಲೇ ಕಾಣತೊಡಗಿತು.
ಈಗ ಈ ಕತ್ತಲಿಗೆ ಧ್ವನಿ ನೀಡಬೇಕು.
ನನ್ನ ಹೃದಯದ ಜೋತೆ ಮಾತನಾಡಬೇಕು.......!!!

- shankarpaschapur@gmail.com

09 Jul 2017, 12:59 pm

ಪರಿಶುದ್ಧ ಪ್ರೀತಿ

ಕಾದು ಕುಳಿತಿರುವ ಸ್ನೇಹಕ್ಕೆ
ಮೋಸ ಮಾಡದಿರು...

ನೊಂದ ಮನಸಿಗೆ ನೋವಿಸದಿರು...

ಗಾಳಿಯ ಹಾಗೆ ಪರಿಶುದ್ಧ ಪ್ರೀತಿ
ನನ್ನದು....

ತಿಳಿದು ತಿಳಿಯದ ಮುನ್ನ ನನ್ನನಿಂದ
ದೂರವದೆ....

ನೀ ನೋಡದ ಪ್ರೀತಿಯ ಬಗ್ಗೆ ನಿನಗೆಗೆ
ತಿಳಿಸೋದು ಗೆಳೆಯ ....

ಇಂತಿ ನಿನ್ನ ಮುಗ ಮನಸು
ಆಂಜನೇಯ ಪುತ್ರಿ ಅಂಜಲಿ...

- ಅಂಜಲಿ

09 Jul 2017, 10:47 am

ಹೇ ಹೃದಯಾ

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....!!!

- shankarpaschapur@gmail.com

09 Jul 2017, 09:43 am

ಪ್ರೀತಿ

ನಗುಮುಖದ ಮೊಗ್ಗರಳಿ ನಕ್ಕ ಹಾಗೆ
ಪ್ರೀತಿ ಎಂಬ ತಾಜಾ ನಗೆ
ಕ್ಷಣಗಳುರುಳಿದಂತೆಲ್ಲಾ ನೆನಪುಗಳು ಕಾಡುವ ಬಗೆ
ಮನದಾಳದಲ್ಲಿ ಏಣಿ ಹಾಕುವ ಲಗ್ಗೆ
ಈ ಒಲುಮೆ ಎಂಬ ಮಹಾ ಸೋಗೆ


ಕತ್ತಲ ಹೊರಗೂ ಬೆಳಕ ಹರಿಸಿ
ಕತ್ತಲಲ್ಲೂ ಕಣ್ಣಾದ ಸಖ
ಪ್ರೀತಿಯಲ್ಲಿ ತೇಲಾಡಿಸಿ
ನನ್ನೊಳಗೆ ಅವನ ಬಿಂಬ
ಕಾಣಿಸುವ ಕನ್ನಡಿಯ ಮುಖ
ಒಲುಮೆ ಆಟಕ್ಕೆ ನಿಂತ ಸಾಕ್ಷಿ
ಆದಿ ಅಂತ್ಯವಿಲ್ಲದ ಈ ಪ್ರೀತಿಯೆಂಬ ಪಕ್ಷಿ


ಮುಗಿಲಗಲ ನೆಲದಗಲ ಜಗದಗಲದ
ಮಹಾಒಲವು
ಚಿತ್ತ ಚಾಂಚಲ್ಯವಿಲ್ಲದ ಶುಭ್ರ ಪ್ರಕಾಶದ
ಮಿನುಗು
ಪ್ರೀತಿಯನ್ನೆ ಧ್ಯಾನವಾಗಿಸಿ
ಬದುಕುವ ತಂತ್ರ
ತಾನುರಿದು ಬೆಳಗಿಯೂ ಕರಗದೆ
ಹೊಳೆಯುವ ಅಮೃತ ಮಂತ್ರ

- Jayanthi

09 Jul 2017, 08:05 am

ಕಾಣೆನಾ ನನ್ನಲಿ ನಾನಿಲ್ಲ ಈಗಿಗಾ..ಯಕಿಗಾ!?

ನನ್ನಲಿ ನಾನಿಲ್ಲ ಈಗಿಗಾ ...ಈಗಿಗಾ....
ಸುಳಿವು ಸುಳಿದಂತೆ ಕಾಣೇ ನಾ..
ಈಗಿಗಾ ಈಗಿಗಾ... ಯಾಕಿಗಾ...
ನಿನ್ನ ನೆನಪ ನೆಪದಲ್ಲಿ ಕಾಲ ಕಳೆದೆ 
ಈಗಿಗಾ ...ಈಗಿಗಾ.. .ಯಾಕಿಗಾ.ಯಾಕಿಗಾ..


ಮಳೆ ಹನಿಯ ಹನಿಯಲ್ಲೂ
ನಿನ್ನೆಸರಾ ಮುಡಿತಾ
ಈಗಿಗಾ ..ಈಗಿಗಾ..ಯಾಕಿಗಾ...
ಬಣ್ಣ ಮಾಸಿದ ಕಾಮನಬಿಲ್ಲು 
ಮುಡಿತಾ...ನನ್ನೆದೆಯ ಗಗನದಿ..ಗಗನದಿ...
ಬಿಳಿ ಹಾಳೆಯ ಮೋಡದಿ ಕರಿ ಮಶಿಯಾ ಬಿದ್ದಂತೆ ..

ನನ್ನಮನದ ಮರೆಯಲ್ಲಿ.... 
ಕಣ್ಣ ಕಡಲಲಿ  ಕೈಜಾರಿ ಹನಿಒಂದ ಜಾರಿತ..ಕಣ್ಣಂಚಲಿ..ಕಣ್ಣಂಚಲಿ..
ಈಗಿಗಾ...ಈಗಿಗಾ..  ಯಕಿಗಾ..ಯಾಕಿಗಾ..


ಆನೆಭಾರ ಬಿದಂತಾ ಒಲವಮನಕೆ
ಭಾವಾನಾ...ಸಾವನಾ......!?
ಸೋತ ಮನಕಿಗಾ ಸೋಲೋಂದೆ ಗೆಲುವಾಯಿತಾ..ನಲಿವಾಯಿತಾ!?


ಈಗಿಗಾ...ಈಗಿಗಾ...ಯಕಿಗಾ.. ಯಕಿಗಾ.......
 ನನ್ನಗನಿಸಿತಾ.....??...

- ಪ್ರದೀಪ.ಮ.ಪಾಡಮುಖೆ

09 Jul 2017, 01:20 am

ನನೋಳಗಿನ ನನೋಲವೆ

ನನ್ನೊಳಗಿನ ನನ್ನೊಲವೆ
ನನ್ನೆದೆಯೊಳಗಿನ ನನ್ನಕ್ಷರವ
ನನ್ನನುಭವದ ಪ್ರಕಾರ
ನಿನ್ನನಡಿಗೆಯ ಬಗ್ಗೆ
ನನ್ನೆರಡು ಮಾತುಗಳನ್ನ
ನಿಂಗ್ಹೇಳಿ ಬಿಡಲೇ...,

- PMPrakash

08 Jul 2017, 09:48 pm

ದೇಶದ ಪ್ರಗತಿ ನೀನು...........

ನಗು ಮುಖದಿ ಹೋರಾಡು ಎಂದು
ಬಿಳ್ಕೊಟ್ಟರು
ಬಿಟ್ಟು ಕೊಡಲಾಗುತ್ತಿಲ್ಲ ಕಣ್ಣ ಕೆಳಗಿನ ಹೊರೆಸಿಕೊಂಡ ಕಣ್ಣೀರಿಗೆ...........

ಮಗು ನಿನ್ನ ಹೆತ್ತ ತಾಯಿ ನಾನದರು
ನಮ್ಮ ದೇಶಕ್ಕೆ ಪ್ರಗತಿ ನೀನು
ನಿನ್ನ ನಿದ್ದೆಗೆಟ್ಟ ಕಣ್ಣಿಂದ ಈ ದೇಶ
ನಿದಿರುಸುತ್ತಿದೆ ಪ್ರತಿನಿತ್ಯ ನೀನಿರುವ ಧೈಯದಲಿ............

ಗರ್ವದಿಂದ ನಾ ಹೇಳಿಕೊಂಡರು ನನ್ನ ಮಗನು ವೀರ ಯೋಧನೆಂದು ನನ್ನೊಳಗಿನ ನಿನ್ನ ಕ್ಷೇಮದ ಚಿಂತೆ ತೊರೆದು ಹೋಗಲಾರದು ನಿನ್ನ ಮತ್ತೆ ನೋಡುವ ತನಕ ನನ್ನ ಕಣ್ಣಿಂದ.................

ಈ ದೇಶದೊಳಗೆ ದರೋಡೆ, ಕೊಲೆ,ಕುತಂತ್ರ ,ಮೋಸ ,ಮಾನಭಂಗ ಎಲ್ಲ ರೀತಿಯ ಭ್ರಷ್ಟಾಚಾರಗಳು ತುಂಬಿಕೊಂಡಿವೆ ಆದರೂ ನಿನ್ನ ಕಳುಸುತ್ತಿರುವೆ ಗಡಿ ಕಾಯಲೆಂದು
ಸ್ವಾರ್ಥವಿಲ್ಲದ ಪ್ರಕೃತಿಯಂತೆ ಎಲ್ಲರನ್ನು ರಕ್ಷಿಸೆಂದು................

ಜನರ ಮೊಸಗಳು ನಿನ್ನ ಮನ ಮೀಟದಿರಲಿ ಕಂದ ನಿನ್ನ ಮಾತೃಭೂಮಿಯ ಆರೈಕೆಯೇ ನಿನ್ನ ಗುರಿಯಾಗಲಿ ಕೊನೆಯುಸಿರು ಇರುವವರೆಗೂ
ನಿನ್ನ ಹೆಸರು ಆ ತಾರೆಗಳ ಬೆಳಕಂತೆ ಬೆಳಗುವವರೆಗೂ.................

ಎಲ್ಲಿದ್ದರೂ ನಿನ್ನ ನೆನಪು ನನಗೆ ಕಂದ ನಾನು ಮಲಗುವ ಮುನ್ನ ಯೋಚಿಸುವೆ ನೀನು ಮಲಗಿರುವೆಯ ಎಂದು , ನನ್ನ ಊಟದ ಮೊದಲ ತುತ್ತು ಬಾಯಿಗಿಟ್ಟ ಮೊದಲ ನಿಮಿಷ ಯೋಚಿಸುವೆ ನಿನ್ನ ಹೊಟ್ಟೆ ತುಂಬಿರುವುದೇ ಎಂದು...................

ಮಾತಿಲ್ಲದಿದ್ದರು ನಿನ್ನೊಡನೆ ನಿರಂತ ನನ್ನ
ಕರುಳಬಳ್ಳಿ ನಿನ್ನ ಹೃದಯದೊಡನೆ ಮಾತನಾಡುವುದು ಮಗುವೇ............

ಎಂತಹ ಪರಿಸ್ಥಿತಿಯಲ್ಲೂ ಹಿಂಜರಿಯದಿರು ನಾನಿರುವೆ ನಿನ್ನ ನೆರಳಾಗಿ ನಗು ನಗುತ್ತಾ ನೀ ಮರಳಿ ಬಾರೋ ಕಂದ................

- ಚುಕ್ಕಿ

08 Jul 2017, 09:32 pm

ಬೆಳ್ಳಕ್ಕಿಯ ಪಯಣ

ಬೆಳ್ಳಿಯ ಮೋಡದೆಡೆಗೆ
ಬೆಳ್ಳಕ್ಕಿ ಸಾಲ ಪಯಣ!!
ಆ ಚುಕ್ಕಿ ಸಾಲಿನೊಡನೆ
ಇಂದು ಈ ಹಕ್ಕಿಯ ಮಿಲನ!!

ಆ ನೀಲಿ ಬಾನಿನಲ್ಲಿ
ಮಿನುಗಿರುವ ಮಾಯೆ ಅಲ್ಲಿ!!
ಹಾಲು ಬೆಳದಿಗಳ ಕಂಪಲಿ
ಸಾಗುತಿರುವ ಛಾಯೆ ಇಲ್ಲಿ!!

ಈ ದಿನವೇ ತಲುಪು ನೀ ಹಕ್ಕಿ
ಆ ಮುಗಿಲಿನ ಒಳ ಹೊಕ್ಕಿ
ದೊರೆತಾಗ ಆ ಚುಕ್ಕಿ
ಕೊಂಡು ಬಾ ಅದನು ನೀ ಹೆಕ್ಕಿ!!

- ಪಿ.ಜಿ.ಜ್ಯೋತಿ

08 Jul 2017, 09:19 pm

ಹೃದಯ ದೀಪ

ನನ್ನ ಹೃದಯದ ಒಳಗೆ
ಉರಿವ ದೀಪವೇ ನಿನ್ನ
ನೆನಪ ಬೆಳಕಿನಲ್ಲಿಯೇ
ಕಳೆಯುವೆ ನಾ ನನ್ನ ಬದುಕ!!

ಗಾಳಿಯಲಿ ತೇಲುತಲಿ
ಮೋಡದ ಹಿಂದೆ ಅಡಗಿ
ನಗುತಲಿ ಇರುವೆಯಾ
ನೀನು ಬಾನ ಸೇರಿ!!

ಚಂದಿರನ ಬೆಳಕಿನಲಿ
ತಾರೆಗಳ ಬಳಗದೊಡೆ
ಬೆರೆತು ನಲಿವಾಗ ನೀನು
ಮರೆತೆಯಾ ಈ ಬಾಳ ದಾರಿ!!

ಬಾಳ ಅಂಕಣದಿ ಮರೆಯಾಗಿ
ಬಾನ ಅಂಗಳದಿ ಸೆರೆಯಾಗಿ
ಮರಳಿ ಬರದಾದೆಯ
ನೀ ನನ್ನ ಬಳಿಗೆ!!

ನೀನಿರದ ಈ ಬದುಕಿನಲಿ
ಒಂದೇ ಹಂಬಲ ನನಗೆ
ಮತ್ತೆ ಉರಿಯಲಿ
ಈ ಹೃದಯ ದೀಪ!!

- ಪಿ.ಜಿ.ಜ್ಯೋತಿ

08 Jul 2017, 09:14 pm

ಕಣ್ಣೀರ ಹನಿಯಲ್ಲಿ..........

ಕಣ್ಣೀರಹನಿಯಲ್ಲಿ ನನ್ನ ನೋವು ತಿಳಿಸುವುದಾದರೆ ಬರೆದು ಕಲಿಸುವೆ ನನ್ನ ಮನಸ ಹಾಳೆಯ ಮೇಲೆ
ಕನಿಕರವಿಲ್ಲವೇ ನಿನಗೆ ನನ್ನ ನೆರಳಾಗಿದ್ದ ನೀನು ನೋವಾಗಿ ಏಕೆ ಬದಲಾದೇ ಎಂದು ಪ್ರೀಯತಮೆ...........

ಮಾತಲ್ಲೇ ನನ್ನ ಮರೆಸುತ್ತಿದ್ದ ನೀನು ಮನಸ್ಸನ್ನು ಇಂದು
ನಿನ್ನ ಮೌನದಿಂದ ಏತಕ್ಕೆ ಜೀವವಿಲ್ಲದ ನಿರ್ಜಿವಿಯಾಗಿಸುತ್ತಿರುವೆ................

ನಿನ್ನ ತೊರೆದು ಬದುಕಬಲ್ಲೆನೆಂಬ ನನ್ನ ಹುಚ್ಚು ಧೈರ್ಯವನ್ನು ತಪ್ಪೆಂದು ತಿಳಿಸಿಬಿಟ್ಟೆ ನೀನೇ ನನ್ನ ನಗುವೆಂದು ಹೇಳಿಕೊಟ್ಟು ಈ ಕ್ಷಣ ನನ್ನ ಬಿಟ್ಟು ಹೋದರೆ ಯಾವ ರೀತಿಯ ನ್ಯಾಯ ನಿನ್ನ ಪ್ರೀತಿಗೆ ಇಂದು....................

ನನ್ನ ಕೆಲದೇನೇ ಈ ಹಾಳಾದ ಕಂಬನಿಯು
ನೆಲಕ್ಕೆ ವೇಗವಾಗಿ ಜಾರುತ್ತಿದ್ದೆ ಆದಷ್ಟು ಬೇಗ ನಿನ್ನ ಹುಡುಕಿ ನನ್ನ ಬಳಿಗೆ ತರಲೆಂದು...........

ಇಂತಹ ಭಾವನೆ ಯಾರು ಕಂಡು ಹಿಡದರೊ ಜೀವಹಿಂಡಿ ನರಕವನ್ನು ನನಗಿಂದು ತೋರುತ್ತದೆ
ಚಿರಪರಿಚಿತೆ ನಾನು ನಿನ್ನ ಪ್ರೀತಿಗೆ ಅಪರಿಚಿತೆ ಈ ಹೆಸರಿಲ್ಲದ ನೋವಿಗೆ ಗೆಳೆಯ ಒಮ್ಮೆ ನೋಡಿ ಹೋಗು ಬಾರೋ ನಿನ್ನ ಪ್ರತಿಬಿಂಬವ
ನನ್ನೆದೆಯೊಳಗೆ......................

- ಚುಕ್ಕಿ

08 Jul 2017, 08:29 pm