Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳೆತನ

ಗೆಳೆತನ ಮಾಡಲು ಜಾತಿ - ಮತವಿಲ್ಲ
ಗೆಳೆತನದಲ್ಲಿ ಮೇಲು - ಕೀಳಿಲ್ಲ
ಗೆಳೆತನದಲ್ಲಿದೆ ನೋವು - ನಲಿವು
ಗೆಳೆತನದಲ್ಲಿದೆ ಸೋಲು - ಗೆಲುವು
ಇದನ್ನರಿತು ಬಾಳುವ ಜನ ಹಲವು |

ಗೆಳೆತನವೆಂಬುದು ಸಮುದ್ರದ ಆಳ
ಈಜಲು ಬಲ್ಲವಗೆ ತುಂಬಾ ಸರಳ
ಗೆಳೆತನವೆಂಬುದು ಆಕಾಶದೆತ್ತರ
ಹಾರಲು ಬಲ್ಲವಗೆ ಬಹಳಾ ಹತ್ತಿರ
ಗೆಳೆತನವೆಂಬುದು ತುಂಬಾ ಸುಂದರ |

ಸುಳ್ಳು ವಂಚನೆ ಮೋಸದ ಗೆಳೆತನ
ಬರುವುದು ಮನುಜನ ಬಾಳಲಿ ಅನುಮಾನ
ತರುವುದು ಮನಸಲಿ ಕೆಟ್ಟ ಹಗೆತನ
ಕಂಬನಿ ವರೆಸುವ ನಿಜವಾದ ಸ್ನೇಹಿತ
ನೂರಾರು ವರುಷ ಬದುಕಲಿ ಶಾಶ್ವತ |

- A Akanksha

21 Jun 2026, 09:47 am

ಹೊಂಗಿರಣಾಕಾಶದೊಳಗೆ ರವಿಯು ಮೂಡಿದ

ಹೊಂಗಿರಣಾಕಾಶದೊಳಗೆ ರವಿಯು ಮೂಡಿದ...

ಹೊಂಗಿರಣಾಕಾಶದೊಳಗೆ ರವಿಯು ಮೂಡಿದ...
ನೀಲಿ ಆಕಾಶದೊಳ್ ಹೊನ್ನೂನೊತ್ತು ಕಿರಣ ಸುರಿದ
ಈ ಭೂಮಿಮೆ ಅಂದದೊಳಗೆ ತೆಲಿಸಿ ಹೂ ಅರಳಿಸಿದ
ಮಾಯಾಗಾರ ಶಿವನ ಪಾದದೊಳ್ಗೆ ಆಡಕಾವಾದ
ಬಿಳಿ ಮುಗಿಲಳೋಗೆ ಮಲ್ಲಿಗೆ ಹನಿ ಮಳೆ ಸುರಿದ...
ತುಂತುರು ಮಂಜಿನ ಮಳೆಹನಿ
ಎಲೆ ಮೇಲೆ ಎರಚಿ ಹೋದ ll

ಹೊಂಗಿರಣಾಕಾಶ್ದೊಳ...

ಬಣ್ಣ ಬಣ್ಣದ ಹೂದೊಳಗೆ ಚಿಟ್ಟೆಯ ಕೂರಿಸಿ
ಸೌಂದರ್ಯದ ಸೊಬಗು ತೋರಿದ..
ಅಂದಾಗರ ಈ ಸೂತ್ರದಾರ ನಿನ್ನ ಕರುಣೆ..
ಎನು ಮಾಯಾವೋ ಎನು ವಿಸ್ಮಯವೋ
ಕಡಲು.ನದಿ,ಸಾಗರ,ಸರೋವರ
ಮಾಡಿದೇ ನೀ ನಿನಗೆ ನಿನ್ನ ವರವೋ..
ಗಾಳಿ ನೀರಿ ನೊಳಗೆ ಬೆರೆತಿರುವೆ...ll

ಹೊಂಗಿರಣಾಕಾಶದೊಳ..

✍️ವೀರೇಶ್ ವಿ ಖೈರವಾಡಗಿ



- Veereshappa v khairawadagi

21 Jun 2026, 06:10 am

- Shivanand Dinni

20 Jun 2026, 07:41 pm

ಕನ್ನಡಮ್ಮನ ಹೃದಯಗೀತೆ

ಓ ಕನ್ನಡಮ್ಮನ ಹೃದಯ ಗೀತೆ

ಓ ಕನ್ನಡಮ್ಮನ ಹೃದಯ ಗೀತೆ..

ಸಾವಿರ ಭಾಷೆ ಕಲಿ ಕನ್ನಡವನ್ನೇ ನುಡಿ

ಇತಿಹಾಸ ಪುಟದಲಿ ಇರಲಿ ಕನ್ನಡ ನುಡಿ

ಕಲ್ಪವೃಕ್ಷ ಕನ್ನಡ ನಮ್ಮೆಲ್ಲರ ಅಂದದ ಗುಡಿ

ಕಾವೇರಿ ಈ ನೀರು ಸಿಹಿಕಬ್ಬಿನ ಹಾಲು

ತುಂಗೆ ಈ ನೀರು ಕನ್ನಡಮ್ಮನ ಎದೆಹಾಲು

ಕನ್ನಡದ ಮಗುವೇ ನಗುತಿರುವ ಸುಮವೇ...

ಲಾಲಿ ಹಾಡು ಜೋಗುಳದ ಹಾಡು ಕನ್ನಡ

ನಮ್ಮ ಜನುಮದಾತೆ ಕನ್ನಡ....

ನಮ್ಮೂಸಿರು ಮಾತೆ ಕನ್ನಡ....

ಪ್ರೀತಿಯಿಂದ ನುಡಿ..ಕನ್ನಡ
ಪ್ರೀತಿಯಿಂದ ನೆಡಿ..ಕನ್ನಡ
ಬಂಗಾರದ ನುಡಿ ಕನ್ನಡ..
ಶೃಂಗಾರದ ನುಡಿಗನ್ನಡ..

✍️ ವೀರೇಶ್ ವಿ ಖೈರವಾಡಗಿ









- Veereshappa v khairawadagi

19 Jun 2026, 11:45 pm

- tippu

19 Jun 2026, 08:52 pm

- Keertana Hegde

18 Jun 2026, 02:40 pm

ಯಾರೇ ಚೆಲುವೆ ನೀನು...

ಯಾರೇ ಚೆಲುವೆ ನೀನು ?
ಕಣ್ಣೋಟ ಕೆಣಕುವಂತಿವೆ ,
ಆ ನಿನ್ನ ಅಧರಗಳು ಈ ನನ್ನ ದಾರಿ ತಪ್ಪಿಸುವಂತಿವೆ,
ಕೆನ್ನೆ ಕೈ ಚಾಚಿ ಕರೆದಂತಿದೆ,
ಮುಂಗುರುಳು ಮೈ-ಮನ ಸೆಳೆಯುತಿದೆ,
ಕೇಶ ರಾಶಿ ಕನಸಲೂ ಕೈ ಬಿಡದೆ ಕಾಡುವಂತಿದೆ,
ಮುಡಿದ ಮಲ್ಲಿಗೆ ಬಿಡದೆ ಬಾ ಎಂದು ಕೂಗಿದಂತಿದೆ,
ಎಷ್ಟೇ ವರ್ಣಿಸಿದರೂ ಈ ಅಂದಕ್ಕೆ ಸಮನಾಗದಂತಿದೆ,
ಯಾರೇ ಚೆಲುವೆ ನೀನು,
ನನ್ನ ಮನದಿ ನಿನ್ನ ಬಿಂಬ ಮರೆತರು ಮರೆಯದಂತೆ ಮರು ಮೂಡಿಸುತಿರುವೆ...
--- tippu ---

- tippu

15 Jun 2026, 10:11 pm

ಊರ ಮುಂದಿನ ತೋಟಕೆ...

ಊರ ಮುಂದಿನ ತೋಟಕೆ ನನ್ನ ಚಲುವೆ ಬಾರೆ
ಅಂದ ಚಂದದ ತಾರೆ ಚಂದ ಚಲುವಿನ ತಾರೆ
ನನ್ನ ತೋಟಕೆ ಬಾರೆ ಹೂ ತೋಟಕೆ ಬಾರೆ ll ಪಲ್ಲವಿ ll
ತೆಂಗು ತೂಗುತ ಬಾಳೆ ಬಾಗುತ ಸ್ವಾಗತಿಸಿವೆ
ಬಾರೆ ಚಲುವೆ... ನನ್ನ ಮಂದಾರ ಪುಷ್ಪವೇ..
ಮಾವಿನ ತೋಟದಲಿ ತೂಗುಯ್ಯಾಲೆ
ತೂಗುತ ತೂಗುತ ಸವಿ ಹಣ್ಣು ತಿನ್ನು ಚಲುವೆ
ಸವಿಮಾತನು ಕೇಳಲು ಹಾಡುತ ಬಾ ಚಲುವೆ
ಹಾಡಲು ಬಾರೆ..ನನ್ನ ಹೃದಯದ ಹೂವೇ ll 1 ll

ಊರ ಮುಂದಿನ ತೋಟಕೆ.ನನ್ನ ಚಲುವೆ ಬಾರೆ

ಮಲ್ಲಿಗೆ ತೋಟದಲಿ ಮನಸಾರೆ ಹಾಡುವೇನು
ಕನಕಾಂಬರಿ ತೋಟದಲಿ ಹೂ ಸುರಿದು ಹಾಡುವೆ
ನಿನ್ನ ನಾ ನೋಡುತ ನಿನ್ನ ಪ್ರೀತಿ ತೆರಲಿ ಕೂರಿಸುವೆ
ನನ್ನ ಹೃದಯದ ಹಾಡು ಹಾಡುವೆ ನಾ ಕುಣಿವೆ
ನನ್ನಲಿ ನಿನ್ನನ್ನೇ ಕಾಣುವೆ.. ಓ ಸುಂದರಿ...

ಊರ ಮುಂದಿನ ತೋಟಕೆ ನನ್ನ ಚಲುವೆ ಬಾರೆ

✍️ವೀರೇಶ್ ವಿ ಖೈರವಾಡಗಿ


- Veereshappa v khairawadagi

14 Jun 2026, 07:29 pm

"ನನ್ನ ಮನ ಎನುತಿದೆ ಸವಿಗನ್ನಡ ಸಿಹಿಗನ್ನಡ "

ನನ್ನ ಮನ... ಏನುತಿದೆ.. ಸವಿ ಕನ್ನಡ.. ಸಿಹಿಗನ್ನಡ.....

ಈ ಕನ್ನಡ..ಈ ನಾಡ ಕನ್ನಡ..
ಸವಿ ನುಡಿ ಭಾಷೆ ನಮ್ಮ ಕನ್ನಡ
ಮೃದು ಭಾಷೆ, ಸುಮದುರ.ಭಾಷೆ
ತನು ತುಂಬಿದೆ, ಮನ ತುಂಬಿದೆ...
ಬೆಳ್ಳಿ ಚುಕ್ಕಿಯಂಗೆ ಹೊಳೆಯುವ ಭಾಷೆ..ಸುಂದರ ಸುವರ್ಣ ಭಾಷೆ...
ಕನ್ನಡ... ಕನ್ನಡ ... ಕನ್ನಡ... ಕನ್ನಡ.. ll ಪಲ್ಲವಿ ll
ಕನ್ನಡ ಮಕ್ಕಳು ದೇಹ ಗುಡಿಯಲ್ಲಿ.. ಹೊಳಪು, ಬಳಪದಲ್ಲಿ ರಾ ರಾಜಿಸಲಿ ಕನ್ನಡ...
ಪೂರ್ವದಲ್ಲಿ ಹೊಂಗಿರಣ ರವಿಯಂತೆ ಹೋಳಿಯಲಿ... ಹೊನ್ನುಡಿ..ಕನ್ನಡ... ಕನ್ನಡ
ಕನ್ನಡ.. ಕನ್ನಡ... ಕನ್ನಡ...llಪಲ್ಲವಿ ll

ಭಾರತ ಇತಿಹಾಸದಲಿ..
ಮೆರೆಯಲಿ...ಕನ್ನಡ... ಕನ್ನಡ
ಕೋಗಿಲೆ ದನಿಯಲಿ.. ತೆಲಿ ಬರಲಿ ಕನ್ನಡ... ಕನ್ನಡ.. ಕನ್ನಡ..
ನಮ್ಮ ಕವಿ ನುಡಿ.. ಕನ್ನಡ...
ಜೇನುನುಡಿನುಡಿ ಗನ್ನಡ...
ಹೂ ದುಂಬಿಯಲಿ.. ಹರಿದು.. ಬರಲಿ ಕನ್ನಡ.. ಕನ್ನಡ...ll2ll

ತುಂಗೆ, ಭದ್ರೆ, ಕಾವೇರಿ, ಶರಾವತಿ,
ಝಳು...ಝಳು ನದಿಯಲಿ..
ನಾದದಲಿ.. ಹರಿಯಲಿ.. ಕನ್ನಡ...
ಗುಲಾಬಿ, ಹೂ, ಮಲ್ಲಿಗೆ, ಹೂ, ಸೇವಂತಿಗೆ.. ಕನಕಾಂಬರಿ.. ಹೂ..
ಘಮ.. ಘಮ.. ಘಮಿಸಲಿ.. ಪರಿಮಳ.. ಬಿರಲಿ..ಕನ್ನಡ.. ಕನ್ನಡ.. ಕನ್ನಡ..ಕನ್ನಡ...ಎಂದೆಂದಿಗೂ..
ನಮ್ಮ... ಸಿರಿನುಡಿ.. ಭಾಷೆ...
ಕನ್ನಡ.. ಕನ್ನಡ...ಮಗುವಿನ.
ನಗುವಲಿ ತೆಲಿ ಬರಲಿ ಕನ್ನಡ...
ಕನ್ನಡ... ಕನ್ನಡ.. ಕನ್ನಡ.. ll2ll

✍️ವೀರೇಶ್ ವಿ ಖೈರವಾಡಗಿ.

- Veereshappa v khairawadagi

14 Jun 2026, 08:41 am

ಹೊಳಿತಾಳೆ ಚಂದದ ಚಲುವೆ

ಹೊಳಿತಾಳೆ...ಚಂದದ ಚಲುವೆ
ಹೊಂನ್ನಿನಂಗೆ..
ಮಿಂಚುತಾಳೆ.. ಚಂದದ ಚಲುವೆ
ಬೆಳ್ಳಿ ಚುಕ್ಕಿಯಂಗೆ
ಕುಣೀತಾಳೆ ಅಂದದ ಚಲುವೆ
ನವಿಲಿನ ನೃತ್ಯಾoಗಾನೇ..
ತಂಪಾದ ಗಾಳಿಯಲಿ ತೇಲಿಬಂತು
ಶ್ರೀಗಂಧದ ಸುವಾಸನೆ.... ll ಪಲ್ಲವಿ ll

ಹತ್ತಾರು ಊರು ಸುತ್ತಾಡಿ ಸುತ್ತಾಡಿ
ಸೋತೆನು ನಾನು
ಮನಬಯಸಿ ಸೈ ಎನಿಸಿದೆ ರತಿಯು
ನೀ ಸತಿ ನೀನು
ಬಾಯಾರಿಕೆಯಾಗಿ ಬಾವಿಗೆ ಹೋದೆ
ನಾ ನೀರಾಗಿ ಸಿಕ್ಕಿದೆ ನೀಲಾoಬಾರಿ ನೀ ll 1ll

ಮಲ್ಲಿಗೆ ತೋಟದಲಿ ಅರಳಿದ ಮಲ್ಲಿಗೆ
ಗಮ್ ಘಮಿಸುವ ಪರಿಮಳ.. ನೀ
ಯಾವ ಲೋಕದೊಳಗೆ ಅಡಿಗಿದೆ..
ನನಗಾಗಿ ಸ್ವರ್ಗ ಲೋಕದ ಸುಂದರಿ
ಸ್ವಪ್ನ ಲೋಕದ ಸುರ ಸುಂದರಿ ನೀ ll 2ll

✍️ವೀರೇಶ್ ವಿ ಖೈರವಾಡಗಿ





- Veereshappa v khairawadagi

13 Jun 2026, 04:11 pm