Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇ ಹೃದಯಾ

ಗೆಳತೀ...ನೀನೆಂದರೆ...?
ಕಾದು ಕಾವಲಿಯಾದ ಮನಸಿಗೆ..ಹೊಂಗೆ ತಂಪು....!!
ಇರುಳ ಕರಾಳತೆಯಲ್ಲಿ...ಕಳೆದು ಹೋಗುವ...ಕನಸು...!!
ಕಲ್ಪನೆ, ಪರಿಕಲ್ಪನೆ ಬದಲಾವಣೆ ! ನಾಳೆಯ ನಿರೀಕ್ಷೆ,..ಪ್ರತೀಕ್ಷೆ....!!
ಮುಂಗುರುಳು ಮುಂಜಾನೆಯ...ಮಂಜ ಹನಿ...!!
ಕೇಳಿದಷ್ಟೂ ಕೇಳಬೇಕೆನಿಸುವ...ಕಹಾನಿ...!!
ನನ್ನೊಳಗಿನ ತುಮುಲ...ಹೊಯ್ದಾಟ...!!
ತನ್ನ ಅಸ್ತಿತ್ವಕ್ಕಾಗಿ...ಮಾತಿನ ಮೊರೆ ಹೋದ..ಪರಾವಲಂಬಿ ಮೌನ....!!
ಭರವಸೆಯ ಆಲಿಂಗನ...ಕಣ್ಣೋಟದ ಸಿಹಿ ಚುಂಬನ…ಒಂಟಿ ಕತ್ತಲ ಏಕಾಂಗಿತನ....!!
ಮತ್ತೆ..ನನ್ನೀ ಜೀವನ..! !!

- shankarpaschapur@gmail.com

12 Jul 2017, 08:07 am

ಮೌನ ಕನಸು

ನನ್ನ ಎದೆಯಾಳದ ಕನಸುಗಳಿಗೆ ನೀನೆ ಒಡಯ
ನನ್ನ ಮೌನದ ಪ್ರೀತಿ ಕಾಣಲಿಲ್ಲವೆ
ಸಾಗಿದ ನೆನಪುಗಳ ಒತ್ತು ಒಂಟಿಯಾಗಿ ಸೋತೆನು
ಇಲ್ಲದ ಕನಸುಗಳ ಬಾನೆತ್ತರಕ್ಕೆ ಚಿಮ್ಮಿಸಿ
ವಸಂತಗೀತದ ಮೋಹಕ್ಕೆ.ಬಂದಿಯಾದೆನು
ಬಾ ಇನಿಯ ನಿನ್ನ ಬಿಗಿ ತೋಳುಗಳ ನಡುವೆ ಬಂದಿಸು
ನಿನ್ನ ಬಿಸಿಯುಸಿರಿಂದ ತುಟಿಗಳಿಗೆ ಚುಂಬಿಸು
ಕಾದ ಹೃದಯ ತಂಪಾಗುವ ಹಾಗೆ ಹಣೆಗೆ ಪ್ರೀತಿ ಮುತ್ತ ಸಿಂಪಡಿಸಿ ಎದೆಗೆ ಒರಗಿಸಿಕೊ..

- ರವಿಕುಮಾರ

12 Jul 2017, 07:59 am

ಶಬ್ದ

ಕೇಳಬಯಸುವೆ ನಾನು ಮಳೆನೀರ ಸದ್ದು
ಜಲಪಾತದ ತುದಿಯಿಂದ ಒಂದೊಂದು ಹನಿಯು ಧರೆಯೆಡೆಗೆ ಜಾರುವ ಸದ್ದು...................

ಹಕ್ಕಿಗಳ ಚಿಲಿಪಿಲಿಯ ರಾಗ ಅವು ಗಗನದೆಡೆಗೆ ಪಾಯನಿಸುವ ವೇಗ ಪ್ರತಿಯೊಂದರಲ್ಲಿ ವಿನೂತನ ಶಬ್ದ ಕೇಳಿವ ಮನಕೆ ಉಲ್ಲಾಸ...........

- ಚುಕ್ಕಿ

12 Jul 2017, 07:53 am

ತೋಚಿದ್ದು-ಗೀಚಿದ್ದು

ಭಾವನೆಗೊಂದು ಅರ್ಥ ನೀಡಿ ಭಾಂದವ್ಯ ಬೆಸೆಯುವವರು ಪ್ರೇಮಿಗಳು||
ಭಾವನೆಗೊಂದು ಅರ್ಥ ನೀಡಿ ಬರಹ ರಚಿಸುವವರು ಕವಿಗಳು||

- ಎಸ್.ಬಿ

12 Jul 2017, 07:12 am

ಹಾಗೇ ಗೀಚಿದ್ದು

ಬೆಳ್ಳಂಬೆಳಗ್ಗೆ ನಾ ಕಂಡೆ ಬಾನೆತ್ತರದಲಿ
ಬೆಳ್ಳಕ್ಕಿಗಳ ಸಾಲು.....
ಅದ ನೋಡಿ ನಾ ಬರೆದೆ ಕವನದ ಸಾಲು
ಸೂರ್ಯನ ರಶ್ಮಿಯೂ ಅಪ್ಪಳಿಸುತ್ತಿತ್ತು
ಬೆಳ್ಳಕ್ಕಿಯ ಪುಕ್ಕಕ್ಕೂ......
ನಳನಲಿಸುತ್ತಿತ್ತು ಗಗನವು
ನಾಚಿ ನೀರಾಯಿತು ಮೋಡವು

- ಎಸ್.ಬಿ

12 Jul 2017, 06:49 am

ಆತ್ಮೀಯರು...!!

ಅವಗವಾಗ ಅವಕಾಶಕ್ಕಾಗಿ
ಕಾದು ಕುಳಿತವರು.

ಕಷ್ಟ ಕಾಲಕ್ಕೆ ಮೆಸೇಜ್ ನಲ್ಲೆ ಸಮಾಧಾನಿಸುವವರು.

ಎಂದೆಂದಿಗೂ ನಾನಿದ್ದೆನೆಂದು
ಮರೆಯಾಗುವವರು

ಕಿಸೆ ಖಾಲಿಯಾಗುವಂತೆ ನೋಡುವವರು
ಅವಶ್ಯಕತೆ ಇಲ್ಲದಾಗ ಬ್ಯೂಸಿಯಾಗಿರುವವರು

ಒಟ್ಟಾರೆಯಾಗಿ
ನಮ್ಮ ಹಿಂದೆ-ಮುಂದೆ ತಿರುಗುತ್ತಿರುವವರು

- ಎಸ್.ಬಿ

11 Jul 2017, 09:38 pm

ಹಾಗೇ ಸುಮ್ಮನೇ ಗೀಚಿದ್ದು

ಮೂಡಣದಲಿ ಮೂಡಿದ ಸೂರ್ಯನು
ಪಡುವಣದಲಿ ಮುಳುಗುವ ಹೊತ್ತಲ್ಲಿ
ಮಳೆಯು ಇಂಪನ್ನು ಚಿಮ್ಮಿಸಿ
ಬೀಳ್ಕೊಡ್ತು....

ಚಂದಿರನ ಸ್ವಾಗತಿಸಲು
ಮೋಡವನ್ನೇ ಚದುರಿಸಿ ದಾರಿ ಮಾಡಿ ಕೊಡ್ತು
ಬೆಳದಿಂಗಳ ಬೆಳಕನ್ನು ನೀಡಲು
ಕಾತುರನಾಗಿಹನು ಚಂದಿರನು

- ಎಸ್.ಬಿ

11 Jul 2017, 06:31 pm

ಏಕಾಂಗಿ

ಮೌನವಾಗಿದೆ ಮನವಿಂದು
ಆತ್ಮೀಯತೆ ಹೆಸರಿನಲಿ ವಂಚಿಸಿದೆ ಸ್ನೇಹಿತರ ಗುಂಪೊಂದು
ಮಾತುಗಳೇ ಹಾಗೇ ಹಿಂದೊಂದು-ಮುಂದೊಂದು
ನಂಬಿ ಕೆಟ್ಟಾಗಿದೆ ನಾನಿಂದು
ಇನ್ನಾದರೂ ಇರಬೇಕು ನಾ ಒಂಟಿಯಾಗಿ
ಮನಸ್ಸನ್ನು ಹುಗುರವಾಗಿಸಿ
ಬದುಕ ಬೇಕು ನನ್ನಷ್ಟಿ ನಾನಿಲ್ಲಿ

- ಎಸ್.ಬಿ

11 Jul 2017, 06:07 pm

ಶಾಂತಿ ಕಾಪಡಿ...

ಕೋಮು-ಗಲಭೆಯ ನಡುವೆ
ಕೇಳಿಸಲೇ ಇಲ್ಲ ಶಾಂತಿಯ ಮಾತು
ಬೇಕಿಲ್ಲ ಕೆಲವರಿಗೆ ಶಾಂತಿ
ರಾಜಕೀಕ್ಕೆ ಇದು ಬಹುದೊಡ್ಡ ಆಸ್ತಿ
ಅವರಿಗಿದೆ ಬಹಳಷ್ಟು ಸೇಪ್ಟಿ
ಅಮಾಯಕ ಮಾತ್ರ ಇಲ್ಲಿ ಸಿಕ್ಕಿ ಬಿದ್ದ ಪಾಪಿ
ಅರ್ಥ ಮಾಡಿಕೊಳ್ಳಿ ಯುವಕರೇ
ನೀವು ಈ ದೇಶದ ಭವಿಷ್ಯದ ಆಸ್ತಿ
ಶಾಂತಿ ಕಾಪಡಿ ಭವಿಷ್ಯನ ಕಟ್ಟಿಕೊಳ್ಳಿ

- ಎಸ್.ಬಿ

11 Jul 2017, 04:23 pm

ಮನಸು

ಯಾಕೆ ಸೋಲುವೆ ಮನವೇ
ನಿನಗೆ ಸಿಗುವುದು ಬರಿಯ ನೋವೇ
ನಿನಗೆಂದು ಒಂದು ಹೂವಿಲ್ಲ
ಬಾಳ ಪಯಣದಲ್ಲಿ ಚೂರು ಸಿಹಿಯಿಲ್ಲ.

ಬಡತನದಲ್ಲಿ ಬೆಂದ ಹೃದಯ
ಬೂದಿ ಅಗದೇ ಉಳಿದ ಕರಿ ಇದ್ದಿಲು
ಪ್ರೀತಿ ಗಿಡಕೆ ಹಿಡಿದ ಗೆದ್ದಲು
ಅವಳೇಕೋ ಎಡಗಳಲ್ಲೇ ನಿನ್ನ ಒದ್ದಳು.

ಬಾಯಾರಿಕೆ ತೀರದ ಬೆಂಗಾಡಲ್ಲಿ
ಪ್ರೇಮ ಸಸ್ಯ ಚಿಗುರುವ ಮಾತೆಲ್ಲಿ
ಸೋತ ಎತ್ತಿಗೇ ಹೊಡೆತ ಹೆಚ್ಚು
ಸತ್ತರೂ ಆರಲೊಲ್ಲದು ಪ್ರೀತಿ ಕಿಚ್ಚು.

- ಶ್ರೀಗೋ.

11 Jul 2017, 03:59 pm