Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹಗಲಿನಲ್ಲಿ ಕಂಡ ಕನಸಿಗೆ
ಕಣ್ಣ ಹನಿಗಳ ಮುನಿಸು ಯಾತಕೆ ?
ಜಾರುತ್ತಿದೆ ಪ್ರೀತಿಯ ಒಲುಮೆ
ಹೇಳಿ ಹೋಗಬಾರದಿತ್ತೇ ನನ್ನ ಚಲುವೆ
ಭಾವನಾತ್ಮಕ ಮನಸ್ಸಿಗೆ ಪ್ರೀತಿಯ ವೈರಾಗ್ಯ ತಂದು
ಹಾರಿ ಹೋದಯ ನಲ್ಲೆ
ಏನೆಂದು ತಿಳಿಯುತ್ತಿಲ್ಲಾ ಪ್ರೀತಿಯ ಬಂಧನ ಬಿಡುತ್ತಿಲ್ಲ
ಇರಲಾರೆ ಚಲುವೆ ನಿನಗೆ ಶರಣನಾಗದೇ
ಹಾಗೆಂದೂ ಕೊರಗಲಾರದೇ
ಅರಿತೆ ಬಯಸಿದ ಬಯಕೆ ಸಿಗದು ಬಾಳಲ್ಲಿ
ಗೋರಿಯ ಮೇಲೆ ಮುನ್ನುಡಿ ಬರದೆ
ಹೂಸ ಬಾಳಿನ ಏಳಿಗೆ
ನಿನ್ನ ಪ್ರೀತಿಯೇ ಬುನಾದಿ....
- ಎ ಜಿ ಶರಣ್
10 Jul 2017, 07:31 pm
ಮನಸ್ಸೆಂಬ ಖಾಲಿ ಕಾಗದದ ಮೇಲೆ ನೀನಿಟ್ಟ ನೀಲಿ ಬಣ್ಣದ ಚುಕ್ಕಿ ಕಣ್ಣಿರಲ್ಲಿ ಒದ್ದೆಯಾಗಿ ಕಾಗದದ ತುಂಬಾ ಹರಡುವ ಮುನ್ನ ಬಂದು ಬೀಡು ಜೀವವೆ
- by
10 Jul 2017, 06:26 pm
ಕಾಣದಂತೆ ಕೆಳಗೆ ಜಾರಿದ
ಕಣೀರ ಹನಿಯಂತೆ
ಕರಗಿಯೇ ಹೋಯಿತೇ ಇನಿಯಾ
ಮನಸಲಿ ಹೇಳದೇ ಉಳಿದ
ನಿನ ಪರಿತಿಯಾ ಕವಿತೆ
- VinutaGirish
10 Jul 2017, 04:14 pm
ಒಳ್ಳೆಯವರಿಗಾಗಿ ನಾಲ್ಕು ಕಣ್ಣೀರ ಹನಿಗಳು ನೆಲಕ್ಕೆ ಜಾರುವುದರಲ್ಲಿ ತಪ್ಪೇನಿಲ್ಲ ಏಕೆಂದರೆ ಅವರ ಒಳ್ಳೆತನ ನಮ್ಮ ಹೃದಯ ಮಿಟಿರುತ್ತಲ್ಲಾ...........
ನಂಬಲಾರೆ ನಾನು ಒಂದು ಕಿರು ನಗೆಯಿಂದ ಪರಿಚಯವಾದವರು ಈ ಕಣ್ಣಲ್ಲಿ ನಿರಾಗಿ ಕಣ್ಮರೆಯಾದರ ಕಾಲಕ್ಕೆ ಬದ್ಧರಾಗಿ ವಿಧಿವಶರಾದರಾ...................
ಬಂಧನಗಳ ಬೇಲಿ ಕೊರಳಿಗೆ ಹಗ್ಗವಾಗಿ ಬಿಗಿಯುವ ಮುನ್ನ ಯಾವ ಕ್ರೂರ ನಿಶಾಚಾರಗಳಿಗೆ ಸಿಲುಕದೆ ದೇವರ ಪಾದಕ್ಕೆ ಪುಷ್ಪವಾಗಿ ಸೇರಿದರಲ್ಲಾ....................
- ಚುಕ್ಕಿ
10 Jul 2017, 07:29 am
ನನ್ನ ಮನಸು ಮಾಡಿದ ಮೊದಲ ಸಹಿ ನೀನು ನನ್ನ ಜೀವನ ಬಿಳಿಯ ಹಾಳೆಯಮೇಲೆ ಸುಂದರವಾದ ಅಕ್ಷರಗಳಿಂದ................
ನಿನ್ನ ಮಾತಿನ ನವನೀತ ಸವಿದ ನನ್ನ ಎದೆಗೆ
ಬಾಗಿನವ ಕೊಡು ಬಾರೆ ನಿನ್ನ ಉಸಿರಿನ ಸೊಬಗಲ್ಲಿ ನನ್ನ ಹೆಸರ ತುಂಬಿ..................
ಕಾಯಲಾರೆ ಚಂದನದ ಗೊಂಬೆ ನೀ ಬರುವ ಮುನ್ನವೇ ಮನಸಲ್ಲಿ ಅಚ್ಚಳಿಯದ ನಿನ್ನ ಚಿತ್ತಾರವ ಬಿಡಿಸಿರುವೆ ನನ್ನೊಳಗಿನ ಭಾವನೆಗಳ ಬಣ್ಣಗಳಾಗಿ ಹಚ್ಚಳೆಂದು...........
ನೂರು ಬಣ್ಣಗಳ ಬಳಿದರೂ ನಿನ್ನ ಚೆಲುವ ಸೊಗಸು ಕಾಣುತ್ತಿಲ್ಲ ಈ ನನ್ನ ನಾಯನಗಳಿಗೆ ತಿಳಿಸೆ ಗೆಳತಿ ಆ ಕೊರತೆ ನಿನ್ನ ನಗುವಿನ ಬಿಳುಪೆಂದು.............
ಕಣ್ಣಲ್ಲಿ ಬಚ್ಚಿಟ್ಟ ನಿನ್ನ ರೂಪವ ನವಿಲು ಗರಿಯ ಲೇಖನಿಯಿಂದ ನಾ ಗೀಚಿದೆ ನಿನ್ನ ಬಿಂಬವ ನೇನೇನು ನೆನೆದು ಮರೆಯಬಾರದೆಂದು ನನ್ನ ಮನಸಲ್ಲಿ..................
ಕನಸಲ್ಲೂ ನನ್ನೊಡನೆ ನೀನಿರಳು ಬಾರೆ ರೆಪ್ಪೆಯಾಗಿ ನೀ ನೋಡದ ಸುಂದರವಾದ ಪ್ರಪಂಚದ ಮೂಲೆ ಮೂಲೆಗಳನ್ನು ಸುತ್ತಿ ಬರೋಣ ಮನಸೇಂಬ ಮಾಯನಗರಿಯ ಕೊನೆಯಲ್ಲಿ................
- ಚುಕ್ಕಿ
10 Jul 2017, 07:15 am
ಅಮ್ಮ ನಿನಗೆ ಮುತ್ತು-ರತ್ನಗಳನ್ನು ನೀಡುವೆ
ನೀನು ನನಗೆ ತೋರಿದ ಪ್ರೀತಿ-ವಾತ್ಸಲ್ಯಕ್ಕೆ
ಅಮ್ಮ ನಿನಗೆ ವಜ್ರ-ವ್ಯೆಢರ್ಯಗಳನ್ನು ನೀಡುವೆ
ನೀನು ನನಗೆ ಕಲಿಸಿದ ಮೌಲ್ಯಗಳಿಗೆ
ಅಮ್ಮ ನಿನಗೆ ಮಾಣಿಕ್ಯ-ಗೋಮೇಧಿಕಳನ್ನು ನೀಡುವೆ
ನೀನು ನನಗೆ ಕಲಿಸಿದ ಒಳ್ಳೆಯ ನಾಗರಿಕತೆಗೆ
ಅಮ್ಮ ನಿನಗೆ ನೀಲ-ಪಚ್ಚೆ-ಹವಳಗಳನ್ನು ನೀಡುವೆ
ನೀನು ನನ್ನಲ್ಲಿ ತುಂಬಿದ ಧೈರ್ಯ-ಶಕ್ತಿಗಳಿಗೆ
ಅಮ್ಮ ನಿನಗೆ ಪುಷ್ಪರಾಗ-ನವರತ್ನಗಳನ್ನು ನೀಡುವೆ
ನಿನ್ನಲ್ಲಿರುವ ಹೃದರವಂತಿಕೆಗೆ
ಅಮ್ಮ ನಿನಗೆ ಸರ್ವವನ್ನೂ ಧಾರೆ ಎರೆಯುವೆ
ನೀನು ನನಗಾಗಿ ಮಾಡಿದ ತ್ಯಾಗ-ಬಲಿದಾನಗಳಿಗೆ
- Jayanthi
10 Jul 2017, 06:18 am
ಜಿನುಗುತ್ತಿರಲು ಪ್ರೀಯು ರಸ ಹೃದಯದಲ್ಲಿ
ಸ್ವರ ಗೀತೆಗಳು ಕಿವಿಗೆ ಕೇಳಿಸಿತು ಕಾವ್ಯರಾಗದ
ರೀತಿಯಲಿ....
ಪರಿಪರಿಯಾಗಿ ಬಿಚ್ಚಿಡುತ್ತಿದೆ ನನ್ನ ಹೃದಯದಲ್ಲಿ...
ರಸ ಗಳಿಗೆಯಲಿ ಮೌನ ತಾಳಿದವು ಮೋಹಗಳು
ಲಾವಣ್ಯ ತೋರಿ ನಿಂತಳು ಎದುರಲಿ....
ಜೀನುಗುತ್ತಿರುವುದು ಆಸೆ
ಪ್ರೀತಿಯ ರಸ ಬಾವನೆಗಳಲ್ಲಿ...
ಸೌಂದಯ೯ ಒಂದು ದೈವ ರಹಸ್ಯ ಸೃಷ್ಟಿಯಲಿ
ಪ್ಪೀತಿಯ ರಹಸ್ಯ ಬಯಲಾಗುವುದು
ಕಣ್ಣಿನ ನೋಟದಲ್ಲಿ....
ಚೆಂದದ ತಾವರೆಯು ವಿವಿದ ಸೌಂದಯ೯
ಆಕಷ೯ಣೆಯಲಿ....
ದೖವದ ಸೃಷ್ಟಿಯಲಿ ಕಲೆಗಾರನ ಕೃಷಿ
ಕವಿ ಮಾಡುವ ರಸ ಕವಿತೆಗಳ ಸೃಷ್ಟಿ
ಅವಳ ಕಂಡು ಬುಸುಗುಡುತೕಿದೆ ಹೃದಯ....
ಪಾರಿಜಾತವನ್ನು ಕೖಯಲ್ಲಿ ಇಡಿಯುವ ಬಯಕೆ....
- ak
09 Jul 2017, 10:01 pm
ಮರೆಯೋಕ್ಕಾಗದಷ್ಟು ಪ್ರೀತಿಸಿ
ಮರೆಯಲಾಗದೆ
ಕಣ್ಣೀರಿಟ್ಟು ಮರುಗುತ್ತಿದೆ ಜೀವ ...
ಎಷ್ಟು ಕಣ್ಣೀರಿಟ್ಟರು
ಕಣ್ಣೀರೆ ಸಾಲುತ್ತಿಲ್ಲವೆಂದು
ಆ ದೇವರ ಬಳಿ ಕಣ್ಣೀರ
ಸಾಲ ಕೇಳುತ್ತಿದೆ,
ಈ ನೊಂದ ಜೀವ ...!!
- shankarpaschapur@gmail.com
09 Jul 2017, 08:35 pm
ಓ ತಾಯೆ ನೀನೆಲ್ಲಿರುವೆ
ಕಾಣುವ ಕಾತರದಿ ನಾನಿರುವೆ!
ಮುಂಜಾನೆ ಮಂಜಿನಲಿ
ಮಡಿಯುಟ್ಟು ಗುಡಿಯಲಿ
ಭಜಿಸಲು ನಿನ್ನ ದರ್ಶನ ಸಾಧ್ಯವೆ
ಓ ತಾಯೆ ನೀ ಬಾರೆಯ!
ನನ್ನೆಲ್ಲ ಮನದ ಮಾತ ಉಸುರುವೆ
ನೀ ಆಲಿಸುತಿರುವೆ ಎಂದರಿತು
ಮಂದಹಾಸದಿ ಮೂಡಿರುವ
ಚಿತ್ರಪಟದ ಮುಂದೆ ನಿಂತು
ಓ ತಾಯೆ ನೀನೆಂದುಬರುವೆ!
ಕಂಡ - ಕಂಡ ಗುಡಿಯಲ್ಲು
ನೀನೆ ಇರುವೆಯೆಂದು
ಭಯದಿ ನೂರು ಬಾರಿ ಭಜಿಸುತ್ತ
ಭಕ್ತಿಯಲಿ ಹರಕೆ ಹೊರುತಿರುವೆನಿಂದು
ಓ ತಾಯೆ ಮೊಗವ ತೋರೆಯ!
ಇಹಲೋಕದ ಪುಣ್ಯ ಕ್ಷೇತ್ರಗಳಲ್ಲಿ
ಪಾಪ ತೊಳೆವ ಪವಿತ್ರ ನದಿಗಳಲ್ಲಿ
ನಿತ್ಯ ನಿನ್ನ ಪಠಿಸುವ ಆರವರಲ್ಲಿ
ನೀನಿರುವೆಯ ಓ ತಾಯೆ ಹೇಳೆಯ!
ನರರು ನಿರ್ಮಿಸಿದ ಕಟಕಟೆಯಲ್ಲಿ
ಶಿಲ್ಪಿ ಬೆವರ ಸುರಿಸಿ ಕೆತ್ತಿದ ಕಲ್ಲಿನಲ್ಲಿ
ಕಲ್ಮಶಭರಿತ ಮಂತ್ರಗಳ ಪಠಣೆಯಲ್ಲಿ
ಎಲ್ಲಿರುವೆ ನೀ ? ಓ ತಾಯೆ ಕಾಣೆಯ!
ಓ ತಾಯೆ ನೀನೆಲ್ಲಿರುವೆ
ಕಾಣುವ ಕಾತರದಿ ನಾನಿರುವೆ!
- ಶಕುಂತಲಾ
09 Jul 2017, 06:29 pm
ತಿರುಗೋ
ಈ ಭೂಮಿಯಲ್ಲಿ
ಬೊಗಸೆ ಪ್ರೀತಿಗಾಗಿ
ಅಲೆಮಾರಿಯಂತೆ
ಅಲೆದಾಡುತ್ತಿರುವ
ನನಗೆ..ನೀ ಬಂದೆ
ಚೈತ್ರ ಮಾಸದಿ
ಎಲೆಯುದುರಿ
ಹೊಸ ಚಿಗುರ
ಪಡೆದ ಮರದಂತೆ...
ಬಳಲಿ ಬಸವಳಿದ
ಈ ಹೃದಯಕ್ಕೆ
ನೀ ಬಂದೆ..
ಮರುಭೂಮಿಯಲ್ಲಿ
ತಿಳಿ ನೀರಿನ
ಒರತೆಯಂತೆ..
ಒಲವಿನಾ ಕೊರತೆಯ
ನೀಗಿಸಲು..
ವರುಷದಿ
ಹರುಷವನೆಲ್ಲಾವಾ ಕಂಡು..
ಹುಸಿ ಮುನಿಸುಗಳ
ತಾಪದಿ ಬೆಂದು....
ಒಡಲಾಲದಲ್ಲಿ
ನಾ ಬಲು ಮೊಹಗೊಂಡು..
ನಾನಾದೇ ಗೆಳತಿ
ಕಾಮನ ಬಿಲ್ಲಿಗಿಂತಾ ಬೆಂಡು...
ಸವಿದೆವು ಬೇವು-ಬೆಲ್ಲವನೆಲ್ಲವಾ
ಹರುಷದಿ-ಹೊಸ-ವರುಷದಿ..
ಪ್ರೇಮ-ಪಲ್ಲವಿ ನೀನಾಗಿ
ಚರಣ ನಾನಾಗಿ...
ಭಂದಿಯಾದೆವು
ಪ್ರೇಮ-ಬಂಧನದಲಿ...
ಹಿಂದಿನ ಚೈತ್ರ ಮಾಸದಿ
ಮರದ ರೆಂಬೆ-ಕೊಂಬೆಗಳಲ್ಲಿ
ಹೊಸ ಚಿಗುರಿನಿಂದ
ನಳ-ನಳಿಸಿದ
ಈ ಪ್ರೀತಿಯೆಂಬ
ಮರಕ್ಕೆ..ಇಂದಿನ
ಚೈತ್ರ ಮಾಸಕೂ
ಮುನ್ನವೇ
ಈ ಪ್ರೀತಿಯೆಂಬ ಮರದ
ರೆಂಬೆ-ಕೊಂಬೆಗಳಲ್ಲಿ
ಎಲೆಯುದುರುತ್ತಿರುವ ಅನುಭವ..
ಇದು ಚೈತ್ರ ಮಾಸಕೂ ಮುನ್ನವೇ
ನಡೆಯುವ ಸಹಜ ಪ್ರಕ್ರಿಯೆಯೂ...?
ಅಥವಾ ಈ ಪ್ರೀತಿಯೆಂಬ ಮರ
ಬರಡಾಗುತ್ತಿರುವ
ವಿನಾಶದ ಸೂಚನೆಯೂ...?
ಉತ್ತರವ ನೀನೇ ಹೇಳು ಗೆಳತಿ..
ಪ್ರೀತಿಯಿಂದ..
ವಿಜಯಾನಂದ..
9741940305
- ವಿಜಯಾನಂದ
09 Jul 2017, 06:07 pm