Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿದಿರೆಯಲಿ ಸುಂದರ ಸ್ವಪ್ನ
ನೀನಾಗಬೇಕು ಗೆಳೆಯ!!
ಸ್ಮರಣೆಯಲಿ ನಿನ್ನಯ ಸುತ್ತ
ನಾ ತಿರುಗಬೇಕು ಇನಿಯ!!
ಚಿಗುರಿನ ಎಲೆ ಎಲೆ ಮೇಲೆ
ಮುಂಜಾನೆ ಮಂಜಿನ ಪ್ರೀತಿ!!
ಕಡಲಿನ ಅಲೆ ಅಲೆಯಿಂದ
ಹೊರಬಂದ ಮುತ್ತಿನ ರೀತಿ!!
ಒಲವಿನ ಪದಗಳ ಕವಿತೆಗೆ
ಕೊರಳಾದ ಸುಂದರ ರಾಗ!!
ಚಲುವಿನ ಅರಿವನು ಮೂಡಿಸಿ
ಹೊಸತಾದ ಈ ಅನುರಾಗ!!
ದೊರೆಯಲು ನೀನು ನನಗೆ
ಹೊಸತಾದ ಜೀವನ ಬೆಸುಗೆ!!
ನವಿರಾಯ್ತು ಬದುಕು ಹೀಗೆ
ನಮ್ಮ ಈ ಒಲವು ಬೆರೆತ ಗಳಿಗೆ!!
- ಪಿ.ಜಿ.ಜ್ಯೋತಿ
15 Jul 2017, 09:02 pm
ಕರವ ಮುಗಿದು
ಕೇಳುವೇ ಗೆಳತಿ
ಹಗಲು ರಾತ್ರಿ ಎನ್ನದೆ
ನನ್ಯಾಕೆ ಕಾಡುತಿ...?
ನೆನಪು ಎಂಬ ನೆಪ ಮಾಡಿ
ಸವಿಗನಸುಗಳಿಗೆ ನನ್ನನು ದೂಡಿ..
ನೀ ಮಾಡಿದೆ ಗೆಳತಿ
ಒಲವೆಂಬ ಮೋಡಿ..
ಈ ನನ್ನ ಪ್ರೀತಿ ಹೂವಿನ ದಳದಲಿ
ಹೂಳೆವ ಮಂಜಿನ ಹನಿಯಂತೆ..
ನೀಲಿಯ ಬಾನಿಗೆ ರಂಗೇರಿಸಿದ
ಅಂದದ ಕಾಮನ ಬಿಲ್ಲಿನಂತೆ..
ಪ್ರೀತಿಯಿಂದ...
ವಿಜಯಾನಂದ...
9741940305
- ವಿಜಯಾನಂದ
15 Jul 2017, 08:09 pm
ಅದ್ಬುತ ಭೇಟೆಗಾರ್ತಿ
ಕಣೇ ನೀನು.....!
ಬಿಲ್ಲಿಗೆ ಹಣೆಗೊಡದೆ...?
ಭಾಣಕೆ ಗುರಿಯಿಡದೆ...?
ಎದೆಗೆ ಭಿಲ್ಲೆರಿಸದೆ...?
ನಿನ್ನ
ಭತ್ತಳಿಕೆಯಲ್ಲಿರುವ
ಯಾವುದೇ ಭಾಣಗಳನ್ನು
ಪ್ರಯೋಗಿಸದೇ...?
ಬರೀ ಪ್ರೇಮದ
ಬಲೆ ಬಿಸಿ ಹಿಡಿದೆ ಗೆಳತಿ
ಈ ಮಧಿಸಿದ ಆನೆಯನ್ನ...!
ಭೇಟೆಯಾಡದೇ ಭಂದಿಸಿದ
ಛಲಗಾರ್ತಿ ನೀನು....!
ಪ್ರೀತಿಯಿಂದ..
ವಿಜಯಾನಂದ..
9741940305
- ವಿಜಯಾನಂದ
15 Jul 2017, 08:03 pm
ಮನದ ದಾರಿಯಲ್ಲಿ
ನೀ ಬಂದು ಹೋದ ಮೇಲೆ
ನೆನಪಾಗಿ ಉಳಿದಿರುವುದೇ
ನೀ ನಡೆದ ಹೆಜ್ಜೆಯ ಗುರುತು!!
ಅದು ಅಳಿಸದೇ
ಹಾಗೆಯೇ ಉಳಿದು ಹೋಗಿದೆ
ನೀ ಹಿಂದಿರುಗಿ
ಬಾರದಿರುವುದನ್ನು ಅರಿತು!!
ಇಂದು ಈ ಮನದ ದಾರಿಯಲ್ಲಿ
ಶುರುವಾದ ಬಿರುಗಾಳಿ
ಶಾಂತವಾಗುವ ಮುನ್ನ
ಅಳಿಸಲಿ ನಿನ್ನ ನೆನಪಿನ ಗುರುತ!!
- ಪಿ.ಜಿ.ಜ್ಯೋತಿ
15 Jul 2017, 08:02 pm
ಹುಡುಗಿಯರ ಮನಸ್ಸು ಗುಲಾಬಿ ಹೊ ಹಾಗೆ ಮೂಟಿದರು ಬಾಡೋತೇ ಅದನ್ನು ಬಿಟ್ಟರು ಬಡುತೇ,...
- kmanju koujalagi
15 Jul 2017, 06:15 pm
ಬದುಕ ಬೇಕು ಒಂಟಿಯಾಗಿ
ಖರ್ಚು ಸ್ವಲ್ಪ ಕಡಿಮೆ ಮಾಡಿ
ಪಾರ್ಟಿ ಗೀರ್ಟಿಯಿಂದ ದೂರ ಸರಿದು
ಸಾಲ-ಶೂಲಗಳಿಗೆ ಅಂಕುಶವ ಬಿಗಿದು
ಬದುಕ ಬೇಕು ಹಣವಂತಿಕ್ಕೆಯಿಂದ
ಶ್ರೀಮಂತನಾಗಿ......
ಸಿಗುತ್ತೆ ಅಲ್ಲೆ ಮಾನ,ಮರ್ಯಾದೆ ನಿನಗೆ
- ಎಸ್.ಬಿ
15 Jul 2017, 03:21 pm
ನನ್ನ ಮನಸ್ಸಿನ ಬಾಗಿಲು
ತಟ್ಟುತ್ತಿರುವ ನೀನು
ಮರೆತೆಯಾ ಅದರ ಬೀಗ
ನಿನ್ನ ನಗುವೆಂದು..............
ರಾಜಮಾರ್ಗದಲ್ಲಿ ರಾಜನಂತೆ
ಬರುವ ಬದಲಾಗಿ ಏತಕ್ಕೆ ನಿನಗ
ಅವಸರ ಕಳ್ಳನಾಗಿ ನುಗ್ಗಿರುವೆ
ನನ್ನೊಳಗೆ ಅನುಮತಿ ಕೇಳದೆ.........
- ಚುಕ್ಕಿ
15 Jul 2017, 01:25 pm
ನೀ ಬಿಟ್ಟು ಹೋದ
ಸಾವಿರಾರು ಸವಿ ನೆನಪುಗಳು
ಜೊತೆಯಲ್ಲಿ ಇದ್ದರೂ
ನಾ ಇನ್ನೂ ಏಕಾಂಗಿಯಾಗಿರುವೆ...!
ಕನಸುಗಳ ಮಜಲಿನಲಿ
ಬಂದಿಯಾಗಿರುವೆ
ಬಿಡಿಸುವ ಬಗೆ ನಿ ಅರಿತಿರುವರೆ
ಆದರೆ ಬಂದಿಯಾಗಿರುವೆ ಸುಖ ನಾ ತಿಳಿದಿರುವೆ
ಎಲ್ಲವನ್ನು ಬಿಡಿಸಿ ಹೇಳಬೇಕೆಂದಿಲ್ಲ
ಬಿಡಿಸಿ ಹೇಳಲು ಈ ಕವನಗಳು ಸಾಲೊಲ್ಲ
- pavan
15 Jul 2017, 11:39 am
ನಿಮ್ಮ ಅಗಲಿಕೆಯ ನೋವು ಕಾಡುತಿದೆ,,
ಕಷ್ಟಗಳೇನೆಂದು ಅರಿಯದ ನನ್ನ ನೋವಿನ ಸಾಗರದಲಿ ಮುಳುಗಿಸಿದೆ,,,
ನನ್ನ ಜೊತೆ ನೆಡೆದಂತೆ ಆಜು-ಬಾಜು
ಬಿಟ್ಟರು ಬಿಡದಂತಹ ಈ ಗೋಜು
ಬೆಂಕಿ ಮಳೆಯಲಿ ತೊಯ್ದನಂತಹ ಅನುಭವ
ಈ ಮಳೆಗೆ ಒಬ್ಬಂಟಿಯಾಗಿದೆ ನೀವೇ ನೀಡಿದ ಈ ಜೀವ
ವರುಷಗಳು ಉರುಳಿದವು
ನೀವೆಲ್ಲದೆ ಅದೆಷ್ಟೋ ಹರುಷಗಳ ಕಳೆದೆವು
ಆದರೂ ನೀವು ನೀಡಿದ ನಂಬಿಕೆಯ ಸಸ್ಯ
ಬೆಳೆಯುತ್ತಿದೆ
ಆಗೊಮ್ಮೆ ಈಗೊಮ್ಮೆ ಸುರಿಯುವ
ನಿಮ್ಮ ನೆನಪಿನ ಮಳೆಯಲ್ಲಿ ಹಸನಾಗಿದೆ
ಹೆಮ್ಮರವಾಗುವತ್ತ ಯೋಚಿಸುತಿದೆ
- pavan
15 Jul 2017, 09:17 am
ಹಳೆಯ ನೆನಪುಗಳು ಸುಳಿದಾಗ
ಮನಸ್ಸು ಕನವರಿಸಿದಾಗ
ಜೀವನ ಆಯಿತು ಪಳೆಯುಳಿಕೆ
- ಎ ಜಿ ಶರಣ್
14 Jul 2017, 10:37 pm