Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸಿನ ಗುಡಿಸಲು

ಈ ಮನಸಿನ ಗುಡಿಸಿಲಿನೊಳಗೆ
ನೀ ಚಲ್ಲಿದೆ ಹುಣ್ಣಿಮೆ ಬೆಳಕು!!
ನಾ ನಗುತಲೇ‌ ಕಳೆಯಲು‌ ದಿನವ
ಮಾಸಿತೆ ಚಂದ್ರನ ಹೊಳಪು!!

ಆ ಕಳೆದು ಹೋದ ಬೆಳಕ
ನಾ ತರಲಿ ಹೇಗೆ ಹುಡುಕಿ!!
ನಾ ಕಾಯಲೇ ಬೇಕು
ಮರು ಹುಣ್ಣಿಮೆ ಬರುವ ವರೆಗೆ!!

ಈ ಹೃದಯದ ಹೂ ಬನದಲ್ಲಿ
ಅರಳಿದ ಪ್ರೀತಿಯ ಹೂವು!!
ತಾ ಘಮಿಸುವ ಮೊದಲೇ ಯಾಕೋ
ಬಾಡಿತು ಅದರ ಚಲುವು!!

ಆ ಬಾಡಿ ಹೋದ ಹೂವನು
ನಾ ಹೇಗೆ ಅರಳಿಸಲಿ ಈಗ!!
ನಾ ಕಾಯಲೇ ಬೇಕು
ಹೊಸ .ಹೂವು ಅರಳುವ ವರೆಗೂ!!

- ಪಿ.ಜಿ.ಜ್ಯೋತಿ

14 Jul 2017, 04:20 pm

ಹೊಸ ಬಗೆ

ಪ್ರೀತಿಸಿ ಬಿಟ್ಟೆನು ನಾ
ಯಾರನೂ ಕೇಳದೇ!!
ಮೋಹದ ಬಲೆಯಲಿ
ಬಿದ್ದೆನು ಏಳದೇ!!

ಬುದ್ದಿ ಮಾತು ಕೇಳದೇನೇ
ಹುಚ್ಚು ಮನವು ಬಯಸಿತಲ್ಲ!!
ನಿದ್ದೆ ಮಾಡಲಾರದೇನೇ
ಹಗಲು ಕನುಸು ಕಂಡೆನಲ್ಲ!!

ಯಾಕೆ ಹೀಗಾಯ್ತು ನನಗೆ
ಮಾತೇ ಮರೆತಂತೆ ಇಂದು!!
ಎಲ್ಲೆ ನಾ ಹೋದರೂನು
ಯಾರೋ ಬಂದಂತೆ ಹಿಂದೆ!!

ಏನಿದು ಹೊಸ ಮಾಯೆ
ಮುಸುಕಿದೆ ನನ್ನ ಸುತ್ತ!!
ನಾ ಏನನೂ ನೋಡಿದರೂ‌
ಹೊಸದಾದ ಆನಂದ!!

ಹೇಗಾದೆ ನಾನು ಹೀಗೆ
ಏನೆಂದು ಹೇಳಲಿ ಮನವೇ!!
ಮರೆತಿರುವೆ ನನ್ನನೇ ನಾನು
ನನ್ನೋಳಗೆ ಹೊಸದು ಈ ಬಗೆ!!

- ಪಿ.ಜಿ.ಜ್ಯೋತಿ

14 Jul 2017, 04:01 pm

ಒಬ್ಬಂಟಿ ಪಯಣ

ಬಾಳ ಈ ಪಯಣದಲ್ಲಿ
ನೀ ನನ್ನ ಒಬ್ಬಂಟಿ ಮಾಡಿ
ಹೊರಟು ಹೋದ ಮೇಲೆ
ನಾನು ಇಲ್ಲಿ
ಒಬ್ಬಂಟಿ ಪಯಣಿಗನಾಗಿಯೇ
ಸಾಗುತ್ತಲಿ ಇರುವೆ!!

ನೀ ಹೊರಟ ದಾರಿಯು
ಕಲ್ಲು ಮುಳ್ಳುಗಳಿಂದ ಕೂಡಿದ್ದರೆ
ಉರಿಬಿಸಿಲಿನಿಂದ ಸುಡುತ್ತಿದ್ದರೆ
ನಿನಗೆ ಹಿತವೆನಿಸದೇ
ಒಂಟಿ ಪಯಣ ಸಾಕೆನಿಸಿದರೆ
ದಯಮಾಡಿ ಬಂದು
ನನ್ನ ಜೊತೆಯಾಗು!!

ಬಾಳ ಈ ಪಯಣದಲ್ಲಿ
ನೀ ನಡೆವ ದಾರಿಗೆ ಹೂವಿನಂತೆಯೇ
ಉರಿಬಿಸಿಲನು ತಡೆವ ನೆರಳಿನಂತೆಯೇ
ನಿನಗೆ ಹಿತವೆನಿಸುವಂತೆ
ಒಂಟಿ ಪಯಣಕ್ಕೆ ನಾ ನಿನ್ನ
ಜೊತೆಯಾಗಿ ಇರುವೆ!!

- ಪಿ.ಜಿ.ಜ್ಯೋತಿ

14 Jul 2017, 12:49 pm

ಪ್ರೀತಿ ಪ್ರಪಂಚ

ನೀ ಜೊತೆಯಲ್ಲಿ ಇಲ್ಲದಾಗ
ಈ ಪ್ರಪಂಚದಲೆಲ್ಲ
ನಾ ನಿನ್ನನ್ನೇ ಕಾಣುತ್ತೇನೆ.....

ಅದೇ...

ನೀ ಜೊತೆಯಲ್ಲಿ ಇರುವಾಗ
ಈ ಪ್ರಪಂಚವನ್ನೆಲ್ಲ
ನಾ ನಿನ್ನಲ್ಲೆ ಕಾಣುತ್ತೇನೆ.....

"ಇದೇ ಪ್ರೀತಿ ಪ್ರಪಂಚ".....

- ಪಿ.ಜಿ.ಜ್ಯೋತಿ

14 Jul 2017, 12:18 pm

ನೀನು

ನನ್ನ ಮುಗ್ಧ ಮನಸಿನ
ನಿಲುವು ಕನ್ನಡಿಯ
ಪ್ರತಿಬಿಂಬ ನೀನು!!

ನನ್ನ ಅಂತರಾಳದ
ಭಾವ ಲಹರಿಯ
ಸವಿ ಕನಸು ನೀನು!!

ನನ್ನ ಕಲ್ಪನೆಗಳಲ್ಲಿ
ಬೇರೂರಿ ಕುಳಿರುವ
ಅಚಲ ಪ್ರೀತಿ ನೀನು!!

ನನ್ನ ನಿಸ್ವಾರ್ಥವಾದ
ಈ ಬದುಕಿನಲ್ಲಿ
ಅಡಗಿರುವ ಸ್ವಾರ್ಥ ನೀನು!!

- ಪಿ.ಜಿ.ಜ್ಯೋತಿ

14 Jul 2017, 11:49 am

ಪೆನ್ನು

ನಿನ್ನ ಹಿಡಿತವೊಂದು ಸಂಗೀತದಂತೆ
ನೀನೆ ನನ್ನ ತಾಳ
ನಿನ್ನ ಬರಹವೊಂದು ಸಾಹಿತ್ಯದಂತೆ
ಅದೇ ನನ್ನ ಅಂತರಾಳ
ನಿನ್ನ ಶಾಯಿ ಕೂಡ ಸೌಂದರ್ಯ ಲಹರಿ
ನೀನೇ ನನ್ನ ಬದುಕಿನ ಗಟ್ಟಿಮೇಳ
ನೀನೊಂದಿದ್ದರೆ ಸಾಕು ಎನಗೆ ಬರೆಯುವೆ ಸಾವಿರ ಪದಗಳನು ಪುಸ್ತಕದೊಳಗೆ

- ಎಸ್.ಬಿ

14 Jul 2017, 08:06 am

ಒಲವೆಂಬ ಮಕರಂದ...

ಮನಸಿನ ತಾಳಕೆ
ಪ್ರೀತಿಯ ರಾಗಕೆ
ಸ್ವರವಾಗಿ ಮಿಡಿದಿದೆ
ಈ ನನ್ನ ಹೃದಯ.....!

ನಾ ಬಂದೇ ದುಂಬಿಯಾಗಿ
ಒಲವಿನ ಮಕರಂದ ಹೀರಲು...
ಈ ಹೂವಿನ ಪರಾಗಸ್ಪರ್ಶಕೆ
ನನ್ನೇ ನಾ ಮರೆತೆ ಹಾರಲು...!

ನಿನ್ನ ನೋಡುತಲಿ
ಬಯಕೆಗೆ ಜಾರುತಲಿ
ಸವಿ ಚುಂಬನವ ನೀಡುತಲಿ
ನಾ ಮರೆತೇನೆಲ್ಲಾ ಜಗವಾ...!

ಮೋಹವೋ ನಾ ಕಾಣೆ
ದಾಹವೋ ನಾ ಕಾಣೆ
ನಿನ್ನೊಲವಾ ನಾನೆಂದಿಗೂ
ಮರೆಯಲಾರೆ ಜಾಣೆ....!

ಪ್ರೇಮವೋ ನಾ ಕಾಣೆ
ಕಾಮವೋ ನಾ ಕಾಣೆ
ಸರಸದಲಿ ಮಿಂದೆವು
ಸವಿ ಮಿಲನದಿ ಬೆಂದೆವು....

ಸಂಭ್ರಮದಿ ಬೆರೆತೆವು
ಸರಸ-ಸಲ್ಲಾಪದಿ ಮರೆತವು
ಪ್ರತಿ ದಿನಾ-ದಿನಾನೆ
ಆ ರತಿ-ಮನ್ಮತರೂ ನಾಚುವಂತೆ...

ಬಹುಶಃ ಅವರಿಗೂ ನಮ್ಮ ನೋಡಿ
"ಅಸೂಯೆ" ಬಂದಿರಬೇಕು......!
ಅದಕ್ಕಾಗಿಯೇ ಹಾಕಿರಬಹುದೇ
ನಮ್ಮ " ಪ್ರೀತಿಗೆ " ಕಡಿವಾಣ....?

ಪ್ರೀತಿಯಲಿ ನೊಂದ ಹುಡುಗ...
ವಿಜಯಾನಂದ..
9741940305

- ವಿಜಯಾನಂದ

14 Jul 2017, 08:03 am

ನಿನ್ನ ಬರುವಿಕೆ

ನಿನ್ನ ಬರುವಿಕೆಗಾಗಿ ಕಾದಿರುವ ನನ್ನ ಗಮನ ಸೆಳೆಯಿತು ನಿನ್ನ ಧ್ವನಿಯಲ್ಲಿನ ಮಧುರ ಮಾತುಗಳು...................

ಮುಗಿಬಿದ್ದ ಮನಸಲ್ಲಿನ ಭಾವನೆಗಳು ಕರೆಯುತ್ತಿದ್ದವು ನಿನ್ನ ಹೆಸರೇ ನನ್ನ ಕಿವಿಗಳಿಗೂ ಕೇಳಿಸದಂತೆ ನಿನ್ನ ಉಸಿರಿಗೆ ಮಾತೊಂದು ಹೇಳುವಂತೆ...................

ನನ್ನ ಕೈಗೆ ಸಿಕ್ಕ ನಿನ್ನ ಭಾವಚಿತ್ರವೊಂದು ನಿನ್ನಾಗೆ ನಗುತ್ತಿದೆ ನನ್ನನ್ನು ನೋಡಿ ನನ್ನಲ್ಲೇ ನಿನ್ನನ್ನಿಟ್ಟು ಮಾತಾಡುವಂತೆ.......................

ಸಾವಿರ ಮೈಲಿಗಳು ದೂರವಿದ್ದರು ನನ್ನ ನೆನಪ ಮನೆಯಲ್ಲಿ ಕುಳಿತು ನನ್ನನ್ನು ಅನುಕ್ಷಣ ನೋಡುತ್ತಿರುವೆ ನೀನು ಮಾತಿಲ್ಲದ ಕನಸಂತೆ..........

ನಿನ್ನ ಬರುವಿಕೆಯ ದಾರಿ ನೋಡುವ ಕಣ್ಣಿಗೆ
ನಿನಗೊಂದು ಪತ್ರ ಬರೆಯಲು ಆಸೆ ಪಟ್ಟಿತು ಮನಸ್ಸಿನಿಂದ..........

ಕಣ್ಣ ಕಾಂತಿಯ ಪದಗಳಂತೆ ಮಾಡಿ ನಗುವಿನ ಹೊಂಬಣ್ಣದ ಶಾಯಿಯಲ್ಲಿ ಮುಳುಗಿಸಿ ಕರೆಯೋಲೆ ಬರೆಯಿತು ನಿನ್ನ ಆಗಮನಕ್ಕೆ ನನ್ನ ಮನಸ ಕಾಣಿಕೆಯಾಗಿ ಕೊಡಲೆಂದು...................

- ಚುಕ್ಕಿ

13 Jul 2017, 11:32 pm

ಅಧರ ನೆನಪು

ಅವಳ ಸಂದೇಶ ಬಂದಾಗ ಆಗುವ ಸಂತೋಷ ವರ್ಣಿಸಲಾಸದ್ಯ,,,,
ಯಾಕೆಂದು ನನಗೂ ತಿಳಿದಿಲ್ಲ
ಖಂಡಿತ ಇದರಲಿ ಅಡಗಿದೆ ಏನೂ ವಿಷಯ,,,
ನಿನಗಾಗಿ ಮಿಸಲಿಡುವೆ ನನ್ನ ಅಮೂಲ್ಯ ಸಮಯ...

ಕನಸಿನ ಲೋಕಕೆ ಏಣಿ ಹಾಕುವೆ
ನೀ ಅಣಿಯಾಗು
ನಿನ್ನ ಮಡಿಲಲಿ ಮಗುವಾಗುವೆ
ನೀ ಯನ್ನ ತಾಯಾಗು
ನನ್ನ ನಿಷ್ಕಲ್ಮಶ ಪ್ರೀತಿಗೆ ನೀ ಅರಸಿಯಾಗು

- pavan

13 Jul 2017, 08:54 pm

ಜೇಬು...

ಖಾಲಿ ಜೇಬಿನಲ್ಲಿ
ಪ್ರೀತಿಯ ಕನಸುಗಳಿತ್ತು
ಸುಂದರವಾಗಿ ಅಚ್ಚಾದ
ಬಹುಮೌಲ್ಯದ ನೋಟುಗಳಂತೆ
ಆದರೆ...
ತುಂಬಿದ ಹಣದ ಜೇಬಿಗೆ
ಹರಿದು ಹೋಯ್ತು ಕನಸುಗಳು
ಅನಾಥ ಹೆಣದಂತೆ...

- ಕರಣ್ ಗಾವಡಾ

13 Jul 2017, 08:21 pm