ನೊಂದ ಜನರ ನೋವಿಗಿಂತ ಅದನ್ನು ಅನುಭವಿಸದೆ ನೋವೆಂದು ಮಾತಲ್ಲಿ ಹೇಳಿಕೊಳ್ಳುವವರೆ ಜಾಸ್ತಿ ಎಲ್ಲರಿಗೂ ನಿಜವಾದ ಕಷ್ಟಗಳ ಅರಿವು ಆಗಿರುವುದಿಲ್ಲ...............
ಸತ್ತ ಶವಗಳ ಪಕ್ಕದಲ್ಲಿ ಕುಳಿತು ತಾವೇ ಸತ್ತಂತೆ ನೋವು ನಟಿಸಿ ಎಲ್ಲರ ಕರುಣೆಗೆ ಮೆಚ್ಚುಗೆಗೆ ಪಾತ್ರವಾಗುತ್ತಾರೆ....................
ಸತ್ತವರ ನೋವು ಒಂದಿಷ್ಟು ತಿಳಿದಿಲ್ಲ ಎಲ್ಲರ ಬದುಕನ್ನು ಅಸ್ತವ್ಯಸ್ತ ಮಾಡಿ ತಮ್ಮದೇನು ತಪ್ಪಿಲ್ಲವೆಂದು ನೋಡುವವರ ದೃಷ್ಟಿಕೋಣ ಸರಿಯಿಲ್ಲವೆಂದು ನಟಿಸುವರು ಈ ನಟವಿಭೂಷಣರು....................
ರೂಪಿಸಿ ನನ್ನ ಕನಸಲಿ ನಿನಗಿದೆ ಶಾಮಿಲು,,
ನಿನ್ನ ನೆನಪೇ ಸಾಕು ಬೇಕಿಲ್ಲ ಬೇರೆ ಅಮಲು,,
ಕನಸಿನ ಅಂಗಳದಲ್ಲಿ ನಾ ಹಾಕಿರುವೆ ಚಿತ್ತಾರದ ರಂಗವಲ್ಲಿ,,,
ಮಧುರ ಅಧರ ನಿನ್ನ ತುಟಿಗಳಿಂದ ನೀ ಹಾಕು ನನಗೆ ಬೇಲಿ,,,
ನನ್ನ ತುಂಟ ಯೋಜನೆಗಳಿಗೆ ನೀ ಹಾಕು ರುಜುವಾತು,,
ಬಲು ಹಿತವು ಗೆಳತಿ ನಿನ್ನ ಮಾತು,,
ನಿನ್ನ ಪ್ರೀತಿ ದೊರೆತ ನಾನೊಬ್ಬ ದೊರೆ
ತೋಳ ತೆಕ್ಕೆಯಲಿ ನಿನಾಗು ಸೆರೆ,,
ನೀನೇ ನನ್ನ ಅದೃಷ್ಟ ದೇವತೆ
ಸುಪ್ರಭಾತ ಎಂದು ತಿಳಿದು
ಇಗೋ ನಾ ಬರೆದೆ ಕವಿತೆ
ನೊಂದವರು ಬದುಕುವರು ಅನುದಿನ ಕಾಡಿದವರ ಶಪಿಸಿ
ಕಣ್ಣೀರಿನ ಹೊಳೆಯನೆ ನೋವಿನ ಮೌನದಲಿ ಹರಿಸಿ
ಆ ಶಾಪವು ಕಾಡಿದವರ ಮತ್ತೆ ಕೊಲ್ಲದೆ ಕಾಡಿಸಿ
ನೋವುಂಡವರ ನೋವು ಸಿಗುವುದಿಲ್ಲವೆ ಕಾಡಿದವರಿಗೆ ಪುನರ್ವರ್ತಿಸಿ
ಕೊಲ್ಲಿ ಮನಸೊಳಗಿನ ಮದ ಮತ್ಸರಗಳಿಗೆ ಗುಂಡ ಹಾರಿಸಿ
ದ್ವೇಷ ಸ್ವಾರ್ಥ ಮೋಹಗಳ ಮನಸಿಂದ ಸರಿಸಿ
ಎಲ್ಲರಿಗೂ ಪ್ರೀತಿ ಪ್ರೇಮ ನಗು ಸಹಬಾಳ್ವೆಯ ಪಸರಿಸಿ
ಈ ಮನುಕುಲವ ರಕ್ಕಸ ಭಾವಕ್ಕೆ ಬಲಿಕೊಡದೆ ಉಳಿಸಿ
ನನ್ನೊಲವಿನ ಹುವಲ್ಲಿ ಬೇಡಿದ್ದು
ಹನಿಗವನದಷ್ಟೇ ಪ್ರೀತಿ
ಹಾಡಿ ಬಂದಳವಳು
ಇಡಿಯ ಕವನವಾಗಿ.
ಕವನಕ್ಕೆ ಮರುಳಾಗಿ
ಪ್ರೀತಿ ಮಾಗಿ ಮಿನಿ ಕತೆಯಾದೆ.
ಕಿರು ಕತೆಯ ಸಮ್ಮಿಲನ
ನೀಳ್ಗತೆಯ ಸಂವಹನ
ಕಾದಿದ್ದವಗೆ ಕಾದಂಬರಿಯಾದಳು..
ಕಾದಂಬರಿಯೊಳಗಿನ ನೂರು
ಪಾತ್ರಗಳ ನಡುವೆ ಒಬ್ಬಂಟಿಯಾಗಿ
ನಡೆದೂ ಹೋದಳು..
ಸಾಹಿತಿಯ ಸತ್ವಹೀನ ಘಟನೆಗಳ ನಡುವೆ
ಕಳೆದೂ ಹೋದಳು..
ಅರಿತಿದ್ದೇನಿಂದು ಅವಳಂತೆಯೇ
ಇಲ್ಲಿ ನಾನೂ ಒಂದು ಪಾತ್ರ!
ಆದರೂ ನಾನು ಆಶಾವಾದಿ..
ಕುರುಡು ಸಾಹಿತಿಯ
ಲೇಖನಿಯ ಶಾಯಿ ಇನ್ನೂ ಮುಗಿದಿಲ್ಲ..
ಕೊನೆಯ ಪುಟ ದೂರವಿದೆ
ಸೇರಿದರೂ ಸೇರಬಹುದು
ಮತ್ತೆ ನಾವು !!
ಅಮ್ಮನ ಒಡಲಲ್ಲಿ ರೂಪ ಪಡೆದು ಅವನಿಗೆ ಬಂದು ಅರಿತವರ ಅಂತರಂಗದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು ಅಗೋಚರ ಮನಸ್ಸನ್ನು ಅವಿಜ್ಞಾವಾಗಿ ಗೆದ್ದು ಅಂತ್ಯಕ್ರಿಯೆಯಾದ ಮೇಲೂ ಅಮರವಾಗಿ ಉಳಿಯುವುದು ಆ ಅಂಬರದಲ್ಲಿ ಅಚಲವಾದ ತಾರೆಯಾಗಿ ಹೊಳೆಯುವುದೇ ಒಂದಕ್ಷರದ ಜೀವನ.....................
ಹೇ ಮಳೆಯೇ ಬಂದು ನನ್ನ ನಿನ್ನ
ಸೊಗಸಿಂದ ಸೆಳೆಯುವೆ ದಿನನಿತ್ಯ.......
ನಿನ್ನಜೊತೆ ಆಡುವ ಬಯಕೆ ನನಗೆ ಅನುನಿತ್ಯ
ನೀನೇನೋ ಮಾಯವಾಗುವೆ ನನ್ನ ಜೊತೆ ಆಡಿದ ನಂತರ ಗಾಳಿಯಂತೆ..........
ಸಿಕ್ಕಿಬಿಳುವುದು ನಾನು ಅಮ್ಮನ ಕೈಯಲ್ಲಿ
ನನ್ನ ಬಾಯಲ್ಲಿನ ಐಸ್ ಕ್ರೀಮಿನ ಜೊತೆಯಲ್ಲಿ.........
ಅಮ್ಮನ ಅಕ್ಕರೆಯ ಬೈಗೊಳಗಳೆಲ್ಲ ಕೇಳಿ ಅವರ ಕೈಯ ಘಮ ಘಮಿಸುವ ಕಾಫಿಯನ್ನು ಕುಡಿದು ಮತ್ತೆ ನೀನು ನನಗಾಗಿ ಬಿಟ್ಟೋದ
ತಂಗಾಳಿಯೊಡನೆ ಮಾತನಾಡುತ್ತಾ ಕೂರುವೆ ಬೆಚ್ಚಗೆ ಕಂಬಲಿಯೋದ್ದು ಮತ್ತೆ ನಿನ್ನ ನೆನೆದು......
ಕಳ್ಳ ಮಳೆ ನೀನು ಮತ್ತೆ ನನ್ನ ಮೇಲಿಂದ ಕದ್ದು ನೋಡುವೆಯೇನು ಎಂದಿಗೆ ಮತ್ತೆ ನಿನ್ನ ಭೇಟಿ ಗೆಳತಿಯೆಂದು.................