Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊಂಗನಸ ಬಾಳಿಗೆ ಹೊಸ ಚಿಲುಮೆ ಚಿಮ್ಮಲಿ

ಹಸಿರಾಗಲಿ ಚಿಗುರೊ ಬಳ್ಳಿಯ ಬಾಳಲಿ
ತಿಳಿಆಗಸದಿ ನದಿಹರಿಯಲಿ ಸುಳಿಸಿಗದೇ ಝರಿ ಝರಿಯಾಗಿ ಪಸರಿಸಲಿ ನವಜೋಡಿಯ ಹೊಂಗನಸ ಹೊಸ್ತಿಲ ಹೊಂಬಾಳಲಿ

ಆ ಬಾನಂಗಳದಿ ಸುಡುತಿರಲಿ ಸೂರ್ಯಕಿರಣ್
ಈ ಭೂಮಂಡಲದ ಕಿರಣ ತಂಪೆರೆಯಲಿ ಸರು ಮನದ ಮನೆಯ ಅಂಗಳದಿ


ಜಿನುಗೊ ತುಂತುರು ಮಳೆ ಹನಿ ಹನಿಯ
ಅರಿವ ಬಾಳಲಿ ಬೆಳಗಲಿ ಜಿಟಿಮಳೆಯ ಬೆಳದಿಂಗಳವಾ 
ಇದೆಲ್ಲವ ಜರುಗಲಿ ನಿಮ್ಮಿಬರ  
ಶುಭ ಗಳಿಗೆಯ ದಿನದಿ

✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

15 Jul 2017, 11:05 pm

ಇಬ್ಬನಿ

ಇಬ್ಬನಿಯ ತಂಪಲ್ಲಿ ಇಣುಕಿಣುಕಿ
ನೋಡುತ್ತಿದ್ದಳು ನನ್ನವಳು ಜಾಜಿಮಲ್ಲಿಗೆಯಂತೆ
ಮುಂಜಾನೆ ಸೊಗಸಾದ ಸೂರ್ಯರಶ್ಮಿಯ ಬೆಳಕಲ್ಲಿ................

ನೋಡ ನೋಡುತ್ತಲೇ ಕೆಂದಾವರೆ
ಹೂವಾದಳು ನನ್ನ ನಾಯನದಲ್ಲಿ ನವ ನವೀನ ಚೈತನ್ಯ ಪಡೆದು ಕೇಸರoಟದ ಲಲಿತೆಯವಳು......

ನಸುಗೆಂಪು ಬಣ್ಣದವಳು, ಮೃದುವಾದ ಕೇಶ ರಾಶಿಯ ಹೊಂದಿರುವವಳು, ವಯ್ಯಾರದ ಮೈಮಾಟ ಉಳ್ಳವಳು ಮಾತಿನಲ್ಲೇ ಸಿಹಿ ಜೇನು ತುಂಬಿರುವವಳು ನನ್ನವಳು ಇಬ್ಬನಿಯ ಬಿಳುಪಿನಲ್ಲಿ ನನ್ನ ಮನಸ ಕದ್ದವಳು...............

ಅವಳ ಹಣೆಯಮೇಲೆ ಬಿದ್ದ ಮಂಜಿನಾ ತಿಳಿನೀರು
ಜಾರಿತೇ ಸಂಪಿಗೆಯಂತ ಮುಗಿನಮೇಲಿಂದ ತುಟಿಯಂಚಿನ ಬೆವರಜೊತೆಗೂಡಿ ಸೊಗಸಾದ ಕತ್ತನ್ನು ಮುದ್ದಾಡಿ ಮುಂಗುರಳ ಸರೆಸುತ್ತಿರುವ ಕೈಬೆರಳ ಕೈಹಿಡಿದು ಪಾದದ ಕಿರುಬೆರಳ ಮಧ್ಯೆಯಿಂದ ಭುವಿಯ ಸೇರಿತು ಬೇಗೆ ಕಳೆಯಲೆಂದು.......

- ಚುಕ್ಕಿ

15 Jul 2017, 10:27 pm

ಸ್ವರ್ಗ

ಓ ಸ್ವರ್ಗವೇ ನೀನೇಕೆ ಆಕಾಶದಷ್ಟು ಎತ್ತರ ಇರಬಾರದೇ. ಪಾತಾಳದ ಹತ್ತಿರ... ..... ಹುಡುಕುತ್ತ ಹೋದರೆ ನಿರುತ್ತರ......??

- Naveen

15 Jul 2017, 10:14 pm

ಒಲವಿನ‌ ಗೆಳೆಯ

ನಿದಿರೆಯಲಿ ಸುಂದರ ಸ್ವಪ್ನ
ನೀನಾಗಬೇಕು ಗೆಳೆಯ!!
ಸ್ಮರಣೆಯಲಿ ನಿನ್ನಯ ಸುತ್ತ
ನಾ ತಿರುಗಬೇಕು ಇನಿಯ!!

ಚಿಗುರಿನ ಎಲೆ ಎಲೆ ಮೇಲೆ
ಮುಂಜಾನೆ ಮಂಜಿನ ಪ್ರೀತಿ!!
ಕಡಲಿನ ಅಲೆ ಅಲೆಯಿಂದ
ಹೊರಬಂದ ಮುತ್ತಿನ ರೀತಿ!!

ಒಲವಿನ ಪದಗಳ ಕವಿತೆಗೆ
ಕೊರಳಾದ ಸುಂದರ ರಾಗ!!
ಚಲುವಿನ ಅರಿವನು ಮೂಡಿಸಿ
ಹೊಸತಾದ ಈ ಅನುರಾಗ!!

ದೊರೆಯಲು ನೀನು ನನಗೆ
ಹೊಸತಾದ ಜೀವನ ಬೆಸುಗೆ!!
ನವಿರಾಯ್ತು ಬದುಕು ಹೀಗೆ
ನಮ್ಮ ಈ ಒಲವು ಬೆರೆತ ಗಳಿಗೆ!!

- ಪಿ.ಜಿ.ಜ್ಯೋತಿ

15 Jul 2017, 09:02 pm

ಕರವ ಮುಗಿದು ಕೇಳುವೆ ಗೆಳತಿ...

ಕರವ ಮುಗಿದು
ಕೇಳುವೇ ಗೆಳತಿ
ಹಗಲು ರಾತ್ರಿ ಎನ್ನದೆ
ನನ್ಯಾಕೆ ಕಾಡುತಿ...?

ನೆನಪು ಎಂಬ ನೆಪ ಮಾಡಿ
ಸವಿಗನಸುಗಳಿಗೆ ನನ್ನನು ದೂಡಿ..
ನೀ ಮಾಡಿದೆ ಗೆಳತಿ
ಒಲವೆಂಬ ಮೋಡಿ..

ಈ ನನ್ನ ಪ್ರೀತಿ ಹೂವಿನ ದಳದಲಿ
ಹೂಳೆವ ಮಂಜಿನ ಹನಿಯಂತೆ..
ನೀಲಿಯ ಬಾನಿಗೆ ರಂಗೇರಿಸಿದ
ಅಂದದ ಕಾಮನ ಬಿಲ್ಲಿನಂತೆ..

ಪ್ರೀತಿಯಿಂದ...
ವಿಜಯಾನಂದ...
9741940305

- ವಿಜಯಾನಂದ

15 Jul 2017, 08:09 pm

ಅದ್ಬುತ ಛಲಗಾರ್ತಿ ಈ ಭೇಟೆಗಾರ್ತಿ..

ಅದ್ಬುತ ಭೇಟೆಗಾರ್ತಿ
ಕಣೇ ನೀನು.....!
ಬಿಲ್ಲಿಗೆ ಹಣೆಗೊಡದೆ...?
ಭಾಣಕೆ ಗುರಿಯಿಡದೆ...?
ಎದೆಗೆ ಭಿಲ್ಲೆರಿಸದೆ...?
ನಿನ್ನ
ಭತ್ತಳಿಕೆಯಲ್ಲಿರುವ
ಯಾವುದೇ ಭಾಣಗಳನ್ನು
ಪ್ರಯೋಗಿಸದೇ...?
ಬರೀ ಪ್ರೇಮದ
ಬಲೆ ಬಿಸಿ ಹಿಡಿದೆ ಗೆಳತಿ
ಈ ಮಧಿಸಿದ ಆನೆಯನ್ನ...!
ಭೇಟೆಯಾಡದೇ ಭಂದಿಸಿದ
ಛಲಗಾರ್ತಿ ನೀನು....!

ಪ್ರೀತಿಯಿಂದ..
ವಿಜಯಾನಂದ..
9741940305

- ವಿಜಯಾನಂದ

15 Jul 2017, 08:03 pm

ಹೆಜ್ಜೆಯ ಗುರುತು

ಮನದ ದಾರಿಯಲ್ಲಿ
ನೀ ಬಂದು ಹೋದ ಮೇಲೆ
ನೆನಪಾಗಿ ಉಳಿದಿರುವುದೇ
ನೀ ನಡೆದ ಹೆಜ್ಜೆಯ ಗುರುತು!!

ಅದು ಅಳಿಸದೇ
ಹಾಗೆಯೇ ಉಳಿದು ಹೋಗಿದೆ
ನೀ ಹಿಂದಿರುಗಿ
ಬಾರದಿರುವುದನ್ನು ಅರಿತು!!

ಇಂದು ಈ ಮನದ ದಾರಿಯಲ್ಲಿ
ಶುರುವಾದ ಬಿರುಗಾಳಿ
ಶಾಂತವಾಗುವ ಮುನ್ನ
ಅಳಿಸಲಿ ನಿನ್ನ ನೆನಪಿನ ಗುರುತ!!

- ಪಿ.ಜಿ.ಜ್ಯೋತಿ

15 Jul 2017, 08:02 pm

ಹುಡುಗಿಯರ ಮನಸ್ಸು

ಹುಡುಗಿಯರ ಮನಸ್ಸು ಗುಲಾಬಿ ಹೊ ಹಾಗೆ ಮೂಟಿದರು ಬಾಡೋತೇ ಅದನ್ನು ಬಿಟ್ಟರು ಬಡುತೇ,...

- kmanju koujalagi

15 Jul 2017, 06:15 pm

ಉಳಿತಾಯ

ಬದುಕ ಬೇಕು ಒಂಟಿಯಾಗಿ
ಖರ್ಚು ಸ್ವಲ್ಪ ಕಡಿಮೆ ಮಾಡಿ
ಪಾರ್ಟಿ ಗೀರ್ಟಿಯಿಂದ ದೂರ ಸರಿದು
ಸಾಲ-ಶೂಲಗಳಿಗೆ ಅಂಕುಶವ ಬಿಗಿದು
ಬದುಕ ಬೇಕು ಹಣವಂತಿಕ್ಕೆಯಿಂದ
ಶ್ರೀಮಂತನಾಗಿ......
ಸಿಗುತ್ತೆ ಅಲ್ಲೆ ಮಾನ,ಮರ್ಯಾದೆ ನಿನಗೆ

- ಎಸ್.ಬಿ

15 Jul 2017, 03:21 pm

ನನ್ನ ಮನಸ್ಸಿನ ಬಾಗಿಲು

ನನ್ನ ಮನಸ್ಸಿನ ಬಾಗಿಲು
ತಟ್ಟುತ್ತಿರುವ ನೀನು
ಮರೆತೆಯಾ ಅದರ ಬೀಗ
ನಿನ್ನ ನಗುವೆಂದು..............

ರಾಜಮಾರ್ಗದಲ್ಲಿ ರಾಜನಂತೆ
ಬರುವ ಬದಲಾಗಿ ಏತಕ್ಕೆ ನಿನಗ
ಅವಸರ ಕಳ್ಳನಾಗಿ ನುಗ್ಗಿರುವೆ
ನನ್ನೊಳಗೆ ಅನುಮತಿ ಕೇಳದೆ.........

- ಚುಕ್ಕಿ

15 Jul 2017, 01:25 pm