Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೀಸೆ ಮರೆಯಲ್ಲಿ ನೀನು ನಗುವಾಗ
ಓರೆ ಕಣ್ಣಿಂದ ನಾ ನೋಡಲೇನು!!
ಕಣ್ಣ ರಪ್ಪೇಗೂ ಏನೋ ಆನಂದ
ನಾಚಿ ನೀರಾಯಿತು ನಿನ್ನನ್ನು ಕಂಡು!!
ಬಳಿ ನೀನು ಬರುವಾಗ
ಮನಕೇನೋ ಆನಂದ!!
ನಿಂತು ಬಿಟ್ಟೆ ನಾನು ಇಲ್ಲಿ
ಅರಿವಿಲ್ಲದ ಹಾಗೆ!!
ಕಾಲ ಬೆರಳು ರಂಗೋಲಿ
ಬಿಡಿಸಿತು ನೆಲದಲ್ಲಿ!!.
ನನ‌್ನ ಮುಂಗುರುಳು ಕಾದಿಹುದು
ಹಂಬಲಿಸಿ ನಿನ್ನ ಬೆರಳ!!
ಅಂಗೈಯ ಮರೆಯಲ್ಲಿ
ಅದರವದು ತಡವರಿಸಿಹುದು!!
ಏನನ್ನೂ ಹೇಳಲಾರದೇ
ಸೋತಂತೆ ಆಗಿಹುದು!!
ನನ್ನ ಮೌನದ ಉತ್ತರವೇ
ನಿನ್ನ ಎಲ್ಲ ಪ್ರಶ್ನೆಗಳಿಗೂ!!
ಏನನ್ನೂ ಕೇಳದಿರು ನೀ
ಎಲ್ಲವೂ ಸಮ್ಮತಿಯೇ ನನಗೆ!!
- ಪಿ.ಜಿ.ಜ್ಯೋತಿ
19 Jul 2017, 02:17 pm
ತುಳುನಾಡಿನ ನಾಗಾರಾಧನೆ
ಅದೊಂದು ರೀತಿಯ ನಿಸರ್ಗರಾಧನೆ
ಈಗ ಎಲ್ಲಿದೆ ನಾಗನಿಗೆ ವನ-ಬನಗಳ
ಅರಮನೆ?
ಈ ಕಾಲದ ನಾಗನೂ ಇರುವುದು
ಬರೀ ಕಾಂಕ್ರಿಟ್ ಮನೆಯೊಳಗಡೆನೆ
- ಎಸ್.ಬಿ
19 Jul 2017, 12:43 pm
ಚಂದನಕೆ ಸಿರಿ ಚಂದನಕೆ
ಕಸ್ತೂರಿ ಕಂಪನದ ಬಂಧನವೇ!!
ಚಿಗುರಿನ ಎಲೆಗಳಿಗೆ
ವಸಂತ ತುಂಬಿದ ಸಂಭ್ರಮವು!!
ಹೂಗಳಿಗೆ ಹೂಬನದೊಳಗೆ
ಪರಿಮಳದ ಸರಿಗಮವೇ!!
ಶ್ರೀಗಂಧವೇ ಸುಗಂಧವೇ
ಘಮಿಸಿ ಹೊರಡಿಸು ಸಂಗೀತವ!!
ಆಲ ಬೇಲ ಮಾವು ಬೇವು
ಹಸಿರಿನ ನೀಡೋ ಮರಗಳೇ!!
ಹಸಿರಿನ ಈ ಉಸಿರಲಿ
ಬೆರೆತ ಜೀವದ ವರಗಳೇ!!
ಸಸಿ ನಡುತಿರೇ ನೀ ಖುಷಿಯಲಿ
ಕಸಿದು ಕೊಳ್ಳದ ಹರುಷವು!!
ವನ ಬೆಳೆಸಲು ಮನ ತಣಿವುದು
ನೀ ಪಾಲಿಸಬೇಕು ಬದುಕಲಿ!!
- ಪಿ.ಜಿ.ಜ್ಯೋತಿ
19 Jul 2017, 12:29 pm
ನಿದಿರೆಯಲಿ ಕನವರಿಕೆ
ಏನೋ ಚಡಪಡಿಕೆ!!
ಎದ್ದಾಗ ಮನವರಿಕೆ
ಕನಸಿನ ಚಟುವಟಿಕೆ!!
ಯಾರದೋ ನೆರಳಿನ
ಗೋಚರವು ಕನಸಲ್ಲಿ!!
ಎದ್ದಾಗ ಯಾರೆಂಬ
ಯೋಚನೆಯು ಮನದಲ್ಲಿ!!
ಸದ್ದಿಲ್ಲದಂತೆ ನಿದ್ದೆಯಲಿ
ಬಂದು ಹೋಗುವರಾರೋ!!
ಎದ್ದಾಗ ಎದುರಲ್ಲಿ
ಇಲ್ಲದಿರುವವರು ಯಾರೋ!!
ಏನು ಮಾಡಲೀ ಕನಸೇ
ಕಲುಕದಿರು ಮನಸನ್ನು!!
ಬರುವುದಾದರೆ ಬಂದು
ಕಾಣೊಮ್ಮೆ ನೀ ನನ್ನನ್ನು!!
- ಪಿ.ಜಿ.ಜ್ಯೋತಿ
19 Jul 2017, 12:25 pm
ಮಲ್ಲಿಗೆಯ ಮೈ ತೂಕದ
ಚೆಲುವೆಯು ಅವಳು!!
ಮೆಲ್ಲಗೆ ಬಂದು ನನ್ನೆದೆಯಲಿ
ಅಡಿಪಾಯ ಹಾಕಿದಳು!!
ಹಾಲು ಬೆಳದಿಂಗಳಿನ
ಓಕುಳಿಯಲಿ ಮಿಂದವಳು!!
ಬಳ್ಳಿಯ ಮೈ ಮಾಟದ
ಅಪರೂಪದ ಚೆಲುವೆ ಅವಳು!!
ನೀಲ ಮೇಘಗಳ ಕಂಡು
ಮೈ ಮರೆತವಳು!!
ಮಳೆಹನಿಗಳ ಸೆರಗ
ಹೊದ್ದು ನಗುತಿರುವವಳು!!
ಅಪರೂಪದ ಕನ್ಯೆ ನನಗಾಗಿ
ಅವನಿಯಲ್ಲಿ ಜನಿಸಿಹಳು!!
ಅವಳೇ ನನ್ನವಳು
ನನ್ನೆದೆಯ ಪ್ರತಿ ಮಿಡಿತ ಅವಳು!!
- ಪಿ.ಜಿ.ಜ್ಯೋತಿ
19 Jul 2017, 12:13 pm
ಮರೆತಿರುವ ವಿಷಯವೊಂದು
ಅಸ್ಪಷ್ಟ ಕನಸಿನಲಿ
ಮತ್ತೆ ನೆನಪಿಗೆ ಬರುವ
ರಣ ಪ್ರಯತ್ನ ನಡೆಸಿಹುದು!!
ಮರೆತು ಹೋಗಿರುವ
ಬಹಳ ಹಳೆಯ ವಿಷಯವದು
ಎಷ್ಟೇ ಪ್ರಯತ್ನಿಸಿದರೂ
ಮತ್ತದೇ ಅಸ್ಪಷ್ಟತೆಯ ಉತ್ತರ!!
ಏನು ಮಾಡಲಿ ಹೇಳು
ಹೇಗೆ ಹುಡುಕಲಿ ನಾ
ಮರೆತಿರುವ ಆ ಹಳೆಯ ನೆನಪಿನ
ಸ್ಪಷ್ಟತೆಯ ರೂಪ!!
ಕನಸಿಗಾದರೂ ಸರಿಯಾಗಿ
ಇಲ್ಲ ನೆನಪಾಗಿಯಾದರೂ
ಬಂದುಬಿಡು ಒಮ್ಮೆ ನೀ
ನಾ ಮರೆತಿರುವ ಹಳೆಯ ನೆನಪೇ!!
- ಪಿ.ಜಿ.ಜ್ಯೋತಿ
19 Jul 2017, 10:03 am
ಮಳೆಯ ಬರಿಸು ಮನುಜ
ನೀ ಬರವ ನೀಗಿಸು ಮನುಜ!!
ಮರವ ಬೆಳೆಸು ಮನವ ತಣಿಸು
ಧರಣಿಗೆ ನೀ ನೀರ ಉಣಿಸು!!
ಚಿಗುರೆಲೆಗಳಲ್ಲಿ ಆನಂದ
ಆ ಹರುಷದಿ ಮಳೆಯ ಆರಂಭ!!
ಗಿರಿ ವನಗಳಲ್ಲಿ ಹಸಿರು ತುಂಬಿ
ಹಸಿರಿನಲ್ಲಿ ಉಸಿರು ತುಂಬಿ!!
ನದಿ ತೊರೆಗಳೆಲ್ಲ ಪುಳಕಗೊಂಡು
ಮೈದುಂಬಿ ಉಕ್ಕಿ ಹರಿದು!!
ಧರಣಿಗೆ ಹೊಸ ಹರುಷವನ್ನು
ಬರುವ ನೀಗಿಸಿ ಕರೆತರಲಿ!!
ನವ ಉಲ್ಲಾಸದಿ ಬದುಕ ಕಟ್ಟಿ
ಬದಿಕಿಗೊಂದು ಮರವ ನೆಟ್ಟು!!
ವರವ ಕರುಣಿಸು ಮನುಜ
ನೀ ಮಳೆಯ ಬರಿಸು ಮನುಜ!!
- ಪಿ.ಜಿ.ಜ್ಯೋತಿ
19 Jul 2017, 09:42 am
ಕವನವೇ ಕವನವೇ
ಕವಿಯು ಬರೆದ ಕವನವೇ!!
ಕವಿಯ ಮನದ ಭಾಷೆ ಅರಿತು
ಪದಗಳಾಗಿ ಬಂದೆಯಾ!!
ಕವಿಯ ಕಲ್ಪನೆಯ ಕೂಸಿನಂತೆ
ನೀನು ರೂಪುಗೊಂಡೆಯ!!
ಕವಿಯು ನಿನ್ನ ಜನುಮ ದಾತ
ಅವನಿಗೇನು ಕೊಡುವೆ ನೀ!!
ಕವಿಯ ಉಸಿರ ಭಾಶೆಯೇ
ನೀ ಪದದಿ ಬೆರೆತ ಕವಿತೆಯೇ!!
ಕವಿಯ ಬದುಕಿನ ಚರಿತೆಯ
ನೀ ಸ್ವರದಿ ಕಲೆತ ರಾಗವೇ!!
- ಪಿ.ಜಿ.ಜ್ಯೋತಿ
19 Jul 2017, 09:31 am
ಯಾಕ ಬಂದಿ ನೀ ಸರದಾರ
ಏನ ಹೆಸರು ನಿಂದು!!
ಏನ ಕೇಳಿ ನಂಬಲಿ ನಾನ
ಈ ನಿನ್ನ ವರಸೆಯನ್ನ!!
ದುಂಡು ಮೊಗದ ಚಲುವಿನ
ಮ್ಯಾಲ ಚಿಗುರು ಮೀಸೆ ಕಾಣ!!
ನಟನಿ ಎಂದು ಉಹಿಸಲೇ ಬೇಕು
ನಿನ್ನ ನಗುವ ಕಂಡು!!
ನುಂಗಿ ಬಿಡುವ ನೋಟ ಯಾಕ
ಆಚೆ ಹೊರಳಿಸ ನಿನ್ನ ಕಣ್ಣ!!
ನಿಲ್ಲದಿರು ನೀನ ಇಲ್ಲಿ
ದೂರ ಸರಿದು ಹೋಗು!!
ಬೇಲಿ ಮ್ಯಾಗಿನ ಮುಳ್ಳಿನ ಗಿಡದ
ಹೂವಿನಂಗ ನಾನು!!
ನನ್ನ ಸಂಗ ಬಯಸಿದರ ನೀ
ನೋಯಬೇಕು ಚಲುವ!!
- ಪಿ.ಜಿ.ಜ್ಯೋತಿ
19 Jul 2017, 09:17 am
ಪುನಃ ನೀ ನನ್ನೋಡೆ ಸೇರಿ ಆಡಿದ ಮಾತು,,,
ಹಾಲು ಜೇನಿನಂತೆ ಹೃದಯದಲಿ ಬೆರೆತು,,,
ಉಲ್ಲಾಸ ಉತ್ಸಾಹದ ಚಿಲುಮೆಯೊಂದು ಜೀವ ಪಡೆದಿದೇ
ನನ ತುಂಟ ಯೋಜನೆಗಳಿಗೆ ಕಣ್ಣಲೇ ಸಹಿ ಬೇಕಿದೆ
ಕಿಲರುಬೆರೆಳಲೇ ನಿನ್ನ ಮೈಯ ಸೋಕಲೇ,,,
ಸೋತಿರುವ ಈ ಜೀವಕೆ ಉಷ್ಣ ನೀಡು ನಿನ ಬಿಸಿ ಉಸಿರಲೇ,,,
ಆಡದ ನೂರುಮಾತು ಕೇಳದ ಭಾವನೆಗಳ ವಿವರಿಸಿ ಹೇಳಬೇಕಿಲ್ಲ,,,
ನನ್ನಲಿ ನೀನು ನಿನ್ನಲಿ ನಾನು
ಇರುವಾಗ ಮೌನವೇ ಎಲ್ಲಾ,,
ಪುನಃ ನನ್ನೋಡೆ ಸೇರಿ ನೀ ಆಡಿದ ಮಾತು
ಹೊಸ ಕನಸ ಬಿತ್ತಿದೆ ಹೃದಯದಲೇ ಕೂತು
- pavan
19 Jul 2017, 08:06 am