Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಾಡು ಬಾ ಕೋಗಿಲೆ

ಹಾಡು ಬಾ ನೀ ಹಾಡು ಬಾ
ಕರುನಾಡ ಕೋಗಿಲೆ!!
ಅಂತರಂಗವು ನುಡಿದ
ಸವಿಮಾತಿನ ನವ ಪರಿಗಳ!!

ಹಾಡು ಬಾ ನೀ ಹಾಡು ಬಾ
ಕರುನಾಡ ಕೋಗಿಲೆ!!
ನಿಸರ್ಗದಲ್ಲಿ ಸ್ವರ್ಗವಿದೋ
ಈ ನಾಡಿದು ಕೋಗಿಲೆ!!

ಕತ್ತಲೆಯ ಕಾನನದಿ
ಹಾಡುತಿರುವ ಕೋಗಿಲೇ!!
ಮೂಡಣದಿ ತೆರೆದಿರುವುದು
ಬೆಳಕಿನ ಬಾಗಿಲು!!

ಎಚ್ಚರ ಇರುವಾಗ
ಭಯವೇತಕೆ ಕೋಗಿಲೆ!!
ಮೆಚ್ಚುಗೆಯ ಕರುನಾಡಿಗೆ
ನಾವೆಲ್ಲರೂ ಮಕ್ಕಳೇ!!

- ಪಿ.ಜಿ.ಜ್ಯೋತಿ

22 Jul 2017, 11:15 am

" ಊರು ಬಿಟ್ಟು ಬಂದವರು..! "

ಅವ್ವಾ,ಶುಭ- ಸಮಾರಂಭಗಳಲ್ಲಿ
ಅಕ್ಕ- ಪಕ್ಕದವರು
ನಮ್ಮನ್ನು ಜಾಸ್ತಿ ಕರೆಯಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಮ್ಮ ಕೆಲಸ,ನಮ್ಮ ಪಾಲಿಗೆ
ನಾವೇ ಅಂತ್,ಬದುಕಿದರೂ
ಜನರು ಆಡಿಕೊಳ್ಳತ್ತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಮ್ಮ ಜೀವನಶೈಲಿ ಸಹಿಸದವರು
ನಾವು ತಪ್ಪು ಮಾಡದಿದ್ದರೂ
ನಮ್ಮನ್ನೇ ಅಪರಾಧಿ ಸ್ಥಾನದಲ್ಲಿರುಸುತ್ತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ನಾವೆಲ್ಲರೂ ಬದಲಾಗಬೇಕು
ಊರು ಅಭಿವೃದ್ಧಿಯಾಗಬೇಕೇಂದ್ರೇ
ಅದನೆಲ್ಲಾ,ನಿಮ್ಮೂರಲ್ಲಿ ನಡೆಸಿ ಅಂತಾರಲ್ಲ ಯಾಕೆ?
ನಾವು ಊರು ಬಿಟ್ಟು ಬಂದವರು ಅದಕ್ಕೇನೂ..!

ಮಗನಿಗೆ ಉತ್ತರಿಸಿದ ತಾಯಿ,
ಹೌದಪ್ಪಾ,ಎಲ್ಲರೂ ಹೊಟ್ಟೆ- ಬಟ್ಟೆಗಾಗಿ
ಅರಸೀ ಬಂದವರೆ..
ಹೊನ್ನು,ಮಣ್ಣು, ಹೆಣ್ಣಿನಾಸೆಗಾಗಿ
ಒಂದೆಡೆ ನೆಲೆಸಿ ನಿಂತವರೇ.
ಅವರವರ ಮೂಲ ಆ " ಹ್ಯೆಳುವ" ಗೆ ಮಾತ್ರ ಗೊತ್ತು!

ಮತಯಾಚನೆಗೆ ಬರುವಾಗ
ಸಹಾಯವನ್ನು ಕೇಳುವಾಗ
ಸೇವೆಯನ್ನು ಪಡೆಯುವಾಗ
" ಊರು ಬಿಟ್ಟು ಬಂದವ್ರು" ಅಂದವರೇ
ಅದನ್ನೆಲ್ಲಾ ಮರೆತು ಬರ್ತಾರಲ್ಲ ಅದೇ ದೊಡ್ಡದು!

ಎಲ್ಲರೂ ಅವರವರ ಮೂಲನೆಲೆಗೆ ಹೋದ್ರೆ
ಇಲ್ಲಿ ಇರುವವರಾದರೂ ಯಾರು..?
' ಊರೆಂದು' ಕರೆಯಿಸಿಕೊಳ್ಳುವುದು ಹೇಗೆ?
ಒಂದೇ ಕೈಯಿಂದ ಚಪ್ಪಾಳೆ ತಟ್ಟುವವರಿಗೆ
ಇವನ್ನೆಲ್ಲಾ ಕೇಳೆಂದಳು ತಾಯಿ, ಮಗನಿಗೆ..!

- ಅಶೋಕ.ಜಿ.ಕಮತಗಿ ( ಶಾಂತಿಪ್ರಿಯ)

- "ಶಾಂತಿಪ್ರಿಯ"

22 Jul 2017, 10:03 am

ಬಯಸದೆ ಸಿಕ್ಕಿತು ಈ ಕಾಯ...

ಬಯಸದೆ ಸಿಕ್ಕಿತು ಈ ಕಾಯ
ಅದರೊಳಗೊಂದು ಮನಸೆಂಬ ಮಾಯ
ಕನಸ ಕಂಡು ಕುಪ್ಪಳಿಸುವುದು‌ ಇಲ್ಲದೆ ಲಯ
ಕಣ್ಣೀರ‌ ಸುರಿಸುವುದು ಮಾಡಿಗೊಂಡು ಗಾಯ

ಮಾನವ‌ಜನ್ಮ ಸಿಗಲು‌ ಮಾಡಿರಬೇಕಂತೆ ಪುಣ್ಯ
ಎದುರಿಸಿ ಗೆಲಬೇಕಂತೆ ಬಂದರು ಎಂಥದೆ ಕಷ್ಟ ಕಾರ್ಪಣ್ಯ
ಬದುಕಿ ತೋರಿಸಬೇಕು ಕಾಯವಾಗಬೇಕಾದರೆ ಸಾರ್ಥಕ
ನೊಂದು ನೋಯಿಸಿ‌ ಬದುಕಿದರೆ ಜೀವನವು ನಿರರ್ಥಕ

ಮನಸ ಸಂತಸದಿಂದಿರಿಸುವುದಂತೆ ನಿಜ ಬದುಕು
ನಗುವುದೇಗೆ ಮನಸೆ ಮುರಿದು ಆದರೆ ಒಡಕು
ಮತ್ತೆ ಹೇಳಿತು ನೊಂದ ಮನಸು ನಗುವಿಗೆ ಹುಡುಕು ದಾರಿ
ಸಂತಸದಿಂದಿರಲು ಪ್ರಯತ್ನಿಸುತಿರಲೆ ಬೇಕು ಬಾರಿ ಬಾರಿ

- ಶ್ರೀಕಾವ್ಯ

22 Jul 2017, 09:39 am

ನನ್ನ ಜೀವನ

ಬರೆದೆನೊಂದು ಪುಟ್ಟ ಕವಿತೆ
ಅದೊಂದು ಹಚ್ಚಳಿಯದ ನೆನಪುಗಳ ಸಂತೆ

ಓರೆಗಚ್ಚಿ ಬಿಟ್ಟ ಕನಸ ಹೆಕ್ಕಿ-ಹೆಕ್ಕಿ ತಂದ ನೆನಪು
ಇರುಳ ಮಾಮ ಆ ಕನಸಿಗೆಲ್ಲಾ ಹೆಚ್ಚಿಸಿದನು ಬೆಳ್ಳಿ ಹೊಳಪು

ಶುಭ ವೇಳೆಯಲಿ ನಡೆದ ಘಟನೆ ಮರೆವ ಘಳಿಗೆ
ಆದರೇಕೋ ಮನದ ಮೇಲೆ
ಮಳೆಯ ಸುರಿಸುವಾಸೆ ಆ ಕಾರ್ಮುಗಿಲಿಗೆ

ಕಹಿ ಘಳಿಗೆಯಲಿ ನಡೆದ ಮಾತೊಂದು
ಅದಕ್ಕೆ ಜೊತೆಯಾದ ಮಾತುಗಳು ನೂರೊಂದು
ಅವರ ಮಾತಿನ ವೀಣೆಯಲಿ
ಸಿಗಲಿಲ್ಲ ಇವರ ಮಾತಿಗೆ ಮನ್ನಣೆ

ಜೀವಗಳೆರೆಡೂ ಮುಖ್ಯ ಎಲ್ಲರ ಬಾಳಲ್ಲೂ
ಅದನುಳಿಸಲಿಕ್ಕಾಗಿ ಪ್ರತಿದಿನ ಹೋರಾಟ ಅವರವರ ಮನದ ಮೂಲೆಯಲ್ಲಿ
ಇವರಿರ್ವರ ಪ್ರೀತಿಗೆ ಮಾತ್ರ ಎಂದಿಗೂ ಮೋಸವಿಲ್ಲ

ಮನವ ಕಲಕುವಾಸೆಯಿಲ್ಲ ಇಲ್ಲಾರಿಗೂ
ತುಸು ಕೋಪ, ಈ ರೀತಿ ಮಾಡಿತು ಎರಡು ಮನಗಳಿಗೂ ಒಂದು ಮನ ಅದ ಸಂತೈಸಲೂ ಬಂದು ಬರಿಗೈಲಿ ಹೋಯಿತು

ಕೆಣಕದಿರು ಮನವೇ ಹಿಂದಿನ ಕಹಿಘಟನೆಗಳ ಅದರಿಂದ ಪ್ರಯೋಜನವಾದದ್ದು ಯಾರಿಗೂ ಇಲ್ಲ ತೆಗೆದು ನೋಡು ಇತಿಹಾಸದ ಪುಟಗಳ

ಮನವ ಕೆಡಿಸಿ ಸಂಬಂಧಗಳ ನಡುವೆ ಗೋಡೆ ಕಟ್ಟುವ ಬದಲು, ಸಂಬಂಧಗಳ ನಡುವೆ (ನಂಬಿಕೆಗೆ ಅರ್ಹರಾದವರಿಗೆ ಮಾತ್ರ) ಸೇತುವೆಯ ಕಟ್ಟು ಹೆಚ್ಚುವುದಾಗ ಪ್ರೀತಿಯ ಅಮಲು...

ಮುಗಿಯಿತು ನೆನಪುಗಳ ಸಂತೆಯ ಹೋರಣ
ಆ ನೆನಪಿನ ಮಾತಿಗೆ ಹುಡುಕಬೇಡಿ ಕಾರಣ
ಇರುವಷ್ಟು ದಿನ ಕಹಿ ಘಟನೆ ಮರೆತು ಹ್ಯಾಪಿಯಾಗಿರೋಣ
ಕನಸಿನೂರಿನ ಪಯಣಿಗ ಶಿವಾನಂದ.ಆರ್ ನಲ್ಲ ಶಿವು

- shivanandarnallashivu

22 Jul 2017, 08:29 am

ಅವನ ಯಾತನೆ

ಅವನು ಪಡುವ ನೋವಿನಿಂದ ಆತನನ್ನು ದೂರ ಎಳೆದಷ್ಟು ಆತ ಆ ಯಾತನೆಗೆ ಹತ್ತಿರವಾಗುತ್ತನೆ..ನನ್ನ ಶತ ಪ್ರಯತ್ನ ಸೋಲುತಿದೆ
ಆತನ ನೋವನ್ನು ನಾನು ಕರಗಿಸಿಕೊಳ್ಳಲೂ ಆಗುತ್ತಿಲ್ಲ
ಅವನ,ನೋವನ್ನು ಅವನು ಹೇಗೆ ಜೀರ್ಣಿಸಿಕೊಳ್ತನೋ ಎನ್ನುವುದು ನನ್ನ ಪ್ರತಿ ನಿಮಿಷದ ಕೊರಗು

- ಎಸ್.ಬಿ

21 Jul 2017, 11:26 pm

"ಬಿನ್ನಾಣದ ವೈಯ್ಯಾರಿ".

ಮಾಡಿದಳು ನನ್ನ ಜೊತೆ ಕುಶಲೋಪರಿ,
ಒಣ ಹವೆಯ ಹವಾಮಾನದಲ್ಲೂ
ಆದಳು ಕಣ್ಣೀರ ರುವಾರಿ,
ಹೃದಯವ ಚೂರು ಮಾಡಿದಳು
ಕೊಟ್ಟು ಪ್ರೀತಿಗೆ ಸುಪಾರಿ,
ಕಾರಣ ಕೇಳಿದರೆ ಅವಳಲ್ಲಿಂದ ಪರಾರಿ,
ಆದರೂ ಅವಳೇ ನನ್ನ ಬಂಗಾರಿ,
ಬಿಂಕದ ಸಿಂಗಾರಿ,

ಈ ಬಿನ್ನಾಣದ ವೈಯ್ಯಾರಿ...

Spb..@#

- Spb...@#

21 Jul 2017, 03:26 pm

ಬಾಳ ಪಂಜರ

ಬಾಳ ಪಂಜರದಲ್ಲಿ
ಒಂಟಿ ಹಕ್ಕಿಯ ಹಾಗೆ
ಬಂಧಿತ ವಾಯಿತೇ
ಈ ನನ್ನ ಬದುಕು!!

ನನ್ನವರು ಯಾರಿಲ್ಲ
ಕೂಗಿದರೂ ಕೇಳಲ್ಲ
ಕೊರಗೂ ಧನಿಯೇ
ಇಂದು ಮೂಕಾಯಿತೇ!!

ನೆರೆಯವರೂ ಏಕಿಲ್ಲ
ಸೆರೆಯೇ ಗತಿ ಆಯಿತಲ್ಲ
ಹಿತ ನೀಡುವ ಮನಸು
ಯಾರದೂ ಅಲ್ಲ!!

ಸುಖವಾಗಿ ನಾನಿದ್ದೆ
ಯಾಕಾಗಿ ಹೀಗಾದೆ
ಬಾಳ ಪಂಜರದಿ ನಾ
ಬಂಧಿ ಜೀವವಾದೆ!!

- ಪಿ.ಜಿ.ಜ್ಯೋತಿ

21 Jul 2017, 03:18 pm

ಪಂದ್ಯ

ಸೋತವನು ಯಾರೋ
ಇಲ್ಲಿ ಗೆದ್ದವನು ಯಾರೋ!!
ಬದುಕೆಂಬ ಪಂದ್ಯ ಮುಗಿಸಿ
ಎದ್ದು ನಡೆದವನು ಯಾರೋ!!

ಬದುಕೆಂಬ ಪಂದ್ಯದ
ಆಟಗಾರನು ಯಾರೋ!!
ಏಳು ಬೀಳು ಎಂಬ ಆಟ
ಆಡಿ ಮುಗಿಸಿದವನು ಯಾರೋ!!

ಸೋಲು ಎಂಬ ಭಯದಲ್ಲಿ
ಬಿದ್ದವನು ಯಾರೋ!!
ಈ ಬದುಕು ಎಂಬ ಪಂದ್ಯದಲ್ಲಿ
ಗೆದ್ದವನು ಯಾರೋ!!

- ಪಿ.ಜಿ.ಜ್ಯೋತಿ

21 Jul 2017, 03:14 pm

ನನ್ನ ಬಾಳಿನ ಸಂಗಾತಿ

(ಬಾಳ ಸಂಗಾತಿ )

ಹ್ರುದಯವೆಂಬ‌ ದೇವಾಲಯಕ್ಕೆ.
ಮೆಟ್ಟಿಲುಗಳು‌ ನಾನಾದೆ.
ನನ್ನ ಹ್ರುದಯದ‌ ಬಡಿತದ ಶಬ್ದಗಳಿಗೆ
ಗುಡಿಗಂಟೆಯಿಂದ ಬರುವ ಸ್ವರ ನೀನಾದೆ.

ಹುಣ್ಣಿಮೆ ಚಂದಿರನಂತೆ ಹೊಳೆಯುವ ನಿನ್ನಯ ಮೊಗಕೆ ಸಿಂಧೂರ ತಿಲಕ ನಾನಾದೆ.
ನನ್ನಯ ಮನದಲ್ಲಿ ಹುಟ್ಟಿದ ಪ್ರೀತಿಯೆಂಬ ಮೊಳಕೆಗೆ ಜೀವವು ನೀನಾದೆ.
ಅದರ ಭಾವವು ನಿನ್ನದೆಂದೆ !!ಸ!!

ನಕ್ಷತ್ರದಂತೆ ಹೊಳೆಯುವ ನಿನ್ನಯ ಕಣ್ಣಿನ ರೆಪ್ಪೆಗಳಿಗೆ ಕಾಡಿಗೆ ಎಂಬ ವರ ನಾನಾದೆ.
ಅಧ್ಬುತ ಕಣ್ಣಿಗೆ ಕುಕ್ಕುವಂತಹ ಶಿಲೆ ನೀನಾದೆ
ಅದನ್ನು ಕೆತ್ತಿದ ಶಿಲ್ಪಿ ನಾನಾದೆ !!ಸ !!

ನನ್ನಯ ಜೀವನದಲ್ಲಿ ಹಂತ ಹಂತವಾಗಿ ಮೇಲೇರಲು ಬೆಂಗಾವಲು ನೀನಾದೆ.
ನಿನ್ನ ಸರ್ವಸ್ವವನ್ನು ನನಗಾಗಿ ಧಾರೆ ಎರೆದೆ.
ನಿನ್ನ ಆಸೆಯನ್ನು ಪೂರೈಸಲು ನಿನ್ನ ಬಾಳಿನ ಬೆಳದಿಂಗಳ ಬೆಳಕು ನಾನಾದೆ.

ನಮ್ಮಿಬ್ಬರ ಜೀವನವೆಂಬ ಪಯಣಕ್ಕೆ ಹ್ರುದಯವೆಂಬ ಅರಮನೆಗೆ ಅದರಲ್ಲಿ ಅಡಗಿರುವ ನಮ್ಮಿಬ್ಬರ ಹ್ರುದಯದ ಮಿಡಿತವೆಂಬ ಮಿಲನಕ್ಕೆ ಸದಾ ನಾನು
ನೀನು ಅದಕ್ಕೆ ಚಿರರುಣಿಯಾಗಿ ಜೀವಿಸೋಣ ನನ್ನಯ ಮನವೇ ಸದಾ..ಸದಾ.ಸದಾ

( ಸಂತೋಷ್ / ಜೀತು )

- ಸಂತೋಷ್//ಜೀತು

21 Jul 2017, 02:37 pm

ಆಶ್ರಯ

ಅಲೆದು-ಅಲೆದು
ದಣಿದಿರುವೆ ನಾನು
ಆಶ್ರಯ ನೀಡಿ
ಆದರಿಸುವೆಯ ನೀನು!

ಕಾರಿರುಳು ಕವಿದಿರಲು
ಬಾಳಲ್ಲಿ
ಬೆಳ್ಕಿಂಡಿಯೊಂದು ಕಾಣಲು
ಎದುರಲ್ಲಿ!

ನೂರಾರು ಕಲ್ಪನೆಯು
ಮೂಡಲು ಮನದಲ್ಲಿ
ಕಣ್ಣಿಗೆ ಕಂಡದ್ದು ಕೈಗೆಟುಕದೆ
ಕಣ್ಮರೆಯಾಗುತಿಹುದು ನೋಡಿಲ್ಲಿ!

ಪ್ರಯತ್ನಕ್ಕೆ-ಫಲವಿಲ್ಲದಾಗ
ಪೂಜಾರಿಯ ಮೊರೆಹೋಗುವರಲ್ಲ
ದೋಷಗಳ ಸುರಿಮಳೆ ಸುರಿಸುವರಾಗ
ಪರಿಹಾರಕ್ಕಾಗಿ ಹಣ ತೆರಬೇಕಲ್ಲ!

ಬಯಸಿದ್ದೆಲ್ಲ ಬಳಿಬಂದರೆ
ನಿನ್ನ ನಂಬುವರೆಲ್ಲ
ಬಾಳಲ್ಲಿ ವಿಘ್ನಗಳೆದುರಾದರೆ
ಆರವರ ಬುಟ್ಟಿಗೆ ಬೀಳುವರೆಲ್ಲ!

ಸಹನೆಯಿಂದ ಕಾಯೋಣ.......
ಉತ್ತಮ ಫಲವ ಕಾಣೋಣ.....


ಶಾರಧ

- ಶಕುಂತಲಾ

21 Jul 2017, 01:18 pm