Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೂರಕ್ಷರದ ಮುದ್ದಾದ
ತಾರೆಯು ನೀನು
ಪಂಚೇಂದ್ರಿಗಳಲ್ಲಿ ಒಂದಾದ
ನಿನ್ನ ಆಶ್ರಯಿಸಿರುವೆ ನಾನು
ಚಿಗುರೊಡೆದ ತರು- ಲತೆಗಳ
ಚಂದನದ ವನ- ಬನಗಳ
ಸೌಂದರ್ಯ ಸವಿಯುವೆ
ನಿನ್ನಿಂದ ನಾ ನೋಡುತ್ತ
ಮಾಮರಗಳಲಿ ಮನೆಮಾಡಿ
ಬಳಗದವರೊಡಗೂಡಿ
ಆಡಿ ನಲಿವ ಪಕ್ಷಿ ಸಂಕುಲಗಳ
ಆನಂದವ ನೋಡಿ ನಲಿವೆ ನಿನ್ನಿಂದ
ಗತಕಾಲದ ಘಟನೆಗಳ
ಸಾರುವ ಶಿಲ್ಪಕಲೆಗಳ
ಇತಿಹಾಸ ಸಾರುವ ತಾಣಗಳ
ಸೌಂದರ್ಯ ಉಣಿಸುವೆ ನೀ ಎನಗೆ
ನೀನಿಲ್ಲದೆ ಈ ಬದುಕು ಶೂನ್ಯ
ನಿನಗೆ ನೀನೆ ಅನನ್ಯ
ನೀನೊಂದು ಅನಗ್ರ್ಯರತ್ನ
ನಿನ್ನ ರಕ್ಷಣೆಯತ್ತ ನಮ್ಮ ಪ್ರಯತ್ನ
ಶಾರಧ
- ಶಕುಂತಲಾ
23 Jul 2017, 12:49 pm
ಮನದ ಹಂಚಿನ ಮಾತೊಂದು ಮೌನವಾಗಿ
ನಿನ್ನ ಕರೆಯುತ್ತಿದೆ ಬಾರೋ ಗೆಳೆಯ ನಾನಿಂದು ಒಬ್ಬೊoಟಿ ನೀನಿಲ್ಲದೆ ಎಂದು.............
ಮಂಜನಂತೆ ಮನದಲ್ಲಿ ಕಂಡು ಮೊಡದಂತೆ ಮರೆಯಾಗುವೆ ಮಾತಿಲ್ಲದೆ ಮೌನಿಯಾಗಿ ಇನಿಯಾ...............
ಕರೆ ಕರೆದು ನಿನ್ನನ್ನಿಂದು ಮರೆಯಾಯಿತು ಮಾತಿನ ಮಾಲೆ ಅಕ್ಷರಗಳಲ್ಲಿ ಅರಳಿದ ಮಧುರವಾದ ಭಾವನೆ ನೀ ಬೇಕೆಂದು.........
- ಚುಕ್ಕಿ
23 Jul 2017, 12:35 pm
ಚೆಲುವ ಮೊಗದಲ್ಲಿ ಚಂದಮಾಮ ಹೊಳೆದಂತೇ
ನಿನ್ನ ಕಣ್ಣ ಕಡಲಲ್ಲಿ ಹುಣ್ಣಿಮೆಯ ಬೆಳಕು ಬಂದಂತೆ
ನಿನ್ನ ಕೇಶವು ಜೋಗದ ಝರಿ ಝರಿ ಹರಿದಂತೆ
ಮುಗ್ಗುತಿ ಮೂಗಿಗೆ ಗಿನಿರಾಯ ಹೋಲಿಸಿದಂತೆ
ನಿನ್ನಂದವೇ ನನ್ನ ಕಲ್ಪನೆಯ ಬರವಣಿಗೆ.....
ಜಿನುಗೊ ಮಂಜಿನಾ ಹನಿ ಹನಿಯಲು ನಿನ್ನ ಹೆಸರ ನಾ ಬರೆಯಲೇ
ನಿನ್ನ ಮಾತಿನಾ ಶೈಲಿ ಮುತ್ತುದುರಿ ಹೂವಾದಂತೆ
ನಿನ್ನ ತುಟಿಯ ಅಂಚಿನಲ್ಲಿ ಸಿಹಿಜೇನ ದಂಡು ಅಡಗಿದಂತೆ
ಅಂದದ ಅರಮನೆಯಲ್ಲಿ ಅಂದಾಮಿರೋ ಮಾಯಾಗತಿ ನಿನಾದಂತೆ
ನಿನ್ನಚೆಲುವು ನನ್ನ ಮೂಲ ಮಾದರಿಯ ಮೆರವಣಿಗೆ........
ಒಲವಕವಿ ಕಾಯ್ಕಿಣಿಯ ಪದಗಳಿಗು ನಿಲುಕದ
ಒಲವಿನ ಓಲೇ ನಿನಾದಂತೆ
ನಿನ್ನ ವ್ಯಯರಾ ಹಂಪೆ ಕಲ್ಲುಸಂಗೀತ ಕರಗಿಸೋ ಮಹಲಿನಂತೆ
ಕರಿಮೋಡ ಕವಿದಾಗ ಕರಗಿಸೋ ಕಾಮಾಕ್ಷಿ ನಿನಾದಂತೆ
ನಿನ್ನೊಲುಮೆ ನನ್ನ ಮನದ ಪದವಣಿಕೆ...
ಬಿರುಸಾದ ನನ್ನ ಮನವ ಜಾರಿತೋ
ಮೃದು ಭಾವನೆಯ ಸನಿಹ ನಾ...
ನಿನ್ನ ರೂಪದ ಕಲ್ಪನೆಯೇ ಇದಕೆಲ್ಲ ಕಾರಣ...
- ಪ್ರದೀಪ.ಮ.ಪಾಡಮುಖೆ
23 Jul 2017, 10:53 am
ನಿನ್ನ ಅಂಗೈಯಲೆ ನಾನು ಇರುವೆ
ಏತಕೆ ಎಲ್ಲೆಲೊ ನೀ ನನ್ನ ಹುಡುಕುವೆ
ನಿನ್ನೊಳಗೆ ನಾ ಸೇರಿ ಹೋಗಿರುವೆ
ನೀ ಕೊಟ್ಟ ರೂಪವನೆ ನಾ ಪಡೆಯುವೆ
ಏತಕೆ ನೀ ಕೊರಗಿ ಸೊರಗುವೆ ಓ ಜೀವವೆ
ನಿನ್ನೊಳಗೆ ನೀ ಕೊಟ್ಟ ರೂಪವು ನನ್ನದು
ನಾ ಪಡೆದ ರೂಪವೆ ಈ ಜಗಕೆಂದು ನಿನ್ನದು
ನೀ ನೋಡುವ ಬದುಕೆ ಪಾಠವು ನನಗೆ
ನಾ ಕಲಿತದ್ದೆಲ್ಲ ತಿಳಿಸಿ ದಾರಿ ತೋರುವೆ ನಾ ನಿನಗೆ
ನೀ ನಕ್ಕರೆ ನಾನೂ ನಗುವೆ
ನಿನಗೆ ಮುದ್ದು ಸಿಕ್ಕರೆ ನಾನು ಮಗುವೆ
ನೀ ಅತ್ತರೆ ನಾನು ಹೇಗೆ ನಗುವೆ?
ನಾನು ಎಂದಿಗೂ ನಿನ್ನ ಜೊತೆಯಿರುವ ನಿನ್ನ ಮನವೆ..
- ಶ್ರೀಕಾವ್ಯ
23 Jul 2017, 10:06 am
ಅಂದದ-ಚಂದದ
ಹೆಣ್ಣಿನ ಅಂಧ
ದುಪ್ಪಟ್ಟು ನಿನ್ನಿಂದ!
ನಾರಿಯ ಬೆನ್ನೇರಿ
ಸಾಗಲು ನಿನ್ನ ಅಂಬಾರಿ
ಸೌಂದರ್ಯವ ಸಾರಿ!
ಬಳುಕುವ ಬಳ್ಳಿಯ
ಟೊಂಕವ ಬಳಸುವ
ಹೆರಳೆ ನೀನೆಷ್ಟು ಅದೃಷ್ಟವಂತೆ!
ಶಿರಕೆ - ಶಿಖರವಾಗಿ
ಸೌಂದರ್ಯಕ್ಕೆ ಹೆಸರಾಗಿ
ಸಲಹುವರು ನಿನ್ನ ಪರಿಪರಿಯಾಗಿ!
ತಲೆಯಿಂದ ಜಾರಿ
ಉದರವ ಸೇರಿ
ಜೀವಕೆ ಬಲು ಅಪಾಯಕಾರಿ!
ಖಡ್ಗದಿ ಕೊಲೆಯಾಗೆ
ಕುದಿವ ನೀರಿಗು ಬಲಿಯಾಗೆ
ನೀನೆಷ್ಟೆ ಬಲಿಷ್ಟೆಯಾಗೆ
ಸೀದೋಗುವೆ ಬೆಂಕಿಗೆ!
ಜಾಣೆಯರ ಜಡೆಯಾಗಿ
ವೀರರ ಮುಡಿಯಾಗಿ
ಬೆಳೆವೆ ನೀ ನವಿರಾಗಿ!
ಶಾರಧ
- ಶಕುಂತಲಾ
23 Jul 2017, 06:49 am
"ಮೌನದ,ಮೂಕವೇದನೆಯನ್ನು ಬಿಚ್ಚಿಟ್ಟು
ಕಣ್ಣೀರಿಗೆ ಅನುವು ಮಾಡಿಕೊಟ್ಟ ದಿನ
- ಎಸ್.ಬಿ
23 Jul 2017, 12:23 am
ತೊಟ್ಟ ಬಟ್ಟೆಯಲ್ಲೆ ಮುಂಜಾನೆ , ಎದ್ದು ಅಪ್ಪನ ಹಿಂದೆ ಓಡುತ್ತಿದ್ದೆ
ಗದ್ದೆಯ ದಂಡೆಯ ನಡುವೆ, ಹುಲ್ಲು ಬೆಳೆದ ತೋಟದ ಒಳಗೆ...ಪಕ್ಕದಲ್ಲಿ ಹರಿಯುವ ತೋಡಿನ ಕಡೆಗೆ....ಅಲ್ಲೆ ತಣ್ಣೀರಲ್ಲಿ ಮಿಂದೆದ್ದು , ಬಾಲೆ ಎಲೆಯ ಮೇಲಿಟ್ಟ ಪೂಜಾ ಕಾರ್ಯಕ್ಕೆ ಕೈ ಮುಗಿದು.. ಹಣೆಗೆ ಗಂಧವನಿಟ್ಟ ಅಪ್ಪ...ಕೈ ಮುಗಿದು ನೀರ ಮೇಲೆ ಅದನ ತೇಲಿ ಬಿಟ್ಟ....!!
ತಿರುಗಿ ನೋಡದೆ ಸುರಿದ ಮಳೆಗೆ ಮೈಯೊಡ್ಡಿ ಮನೆ ಸೇರಿದಾಗ...ಅಮ್ಮ ರೆಡಿಯಾಗಿದ್ರು ಕಷಾಯ ಹಿಡಿದು..!!
ಕಹಿ ಎಂದೂ ಬೊಬ್ಬೆ ಹೊಡೆಯುವಂತಿಲ್ಲ ಕುಡಿಯ ಬೇಕು ಕಣ್ಣು ಮುಚ್ಚಿ...ಆ ಮೇಲೆ ಹೊಟ್ಟೆ .. ಉಪ್ಪಿಟ್ಟು, ಪುಂಡಿ ಗಸಿ... ಮನೆಯೊಳಗೆ ಎಲ್ಲ ಮುಗಿದ ಮೇಲೆ ಇಲ್ಲೆನಿದೆ ನಿನಗೆ ನಡಿ ದೇವರ ಸನ್ನಿಧಿಗೆ ಎಂದು ಸುಮ್ಮನೆ ನಡೆದು ಹೋಗುತ್ತಿದ್ದೆವು ದೇವಾಸ್ಥಾನಕ್ಕೆ...
ಓ.....ದೇವರೆ ಬರಬಾರದೆ ಮತ್ತೊಮ್ಮೆ ಆ ಬಾಲ್ಯದ ದಿನಗಳು....
ದರಿದ್ರ ಬದುಕಿನಲಿ ಬ್ಯೂಸಿಯಾದ ಕೆಲಸದಲ್ಲಿ ದೇವಾಲಯಕ್ಕೆ ಇರಲಿ ಮನೆಗೂ ಹೋಗಲಾಗಲಿಲ್ಲವಲ್ಲ....!!
- ಎಸ್.ಬಿ
22 Jul 2017, 11:22 pm
ಇನ್ನು ಸ್ವಲ್ಪ ಹೊತ್ತು ಇರು ನನ್ನ ಮುಂದೆಯೇ
ನಿನ್ನ ಕಣ್ಣ ತುಂಬಾ ನೋಡಿ ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇನೆ..............
ಮನಸು ನಿನ್ನ ಹುಡುಕಿದಾಗ ಕಣ್ಣಿಂದ ತೋರಲು ನನಗಿನಿತು ಸುಲಭವಾಗುವುದು ಚೆಲುವಾದ ನಿನ್ನ ನಗುವನ್ನು...............
ಎಷ್ಟೊತ್ತು ಕಣ್ಣ ರೆಪ್ಪೆ ಕೆಳಗಿಳಿಸದೆ ನೋಡಿದರೂ
ಎದೆಬಡಿತ ಎಡಬಿಡದೆ ಕೇಳುವುದು ನನ್ನ ಮತ್ತೆ ಮತ್ತೆ ನಿನ್ನ ತೋರಿಸೆಂದು..............
ನನ್ನ ಬಿಟ್ಟು ಹೋಗುವೇನೆಂದರೆ ನೀನು ತುಂಬಿರುವ ನನ್ನ ಮನಸು ನಿನಗನುಮತಿ ನೀಡುವುದಿಲ್ಲ..............
- ಚುಕ್ಕಿ
22 Jul 2017, 06:39 pm
ಅಪರೂಪದ ಅರಗಿಣಿ
ಮೂರೋತ್ತು ಅಳುತ್ತಿದೆ.
ಅಂತಸ್ತಿನ ಆಸೆ
ನನಗಿಲ್ಲ ಅಂತಿದೆ.
ಬಂಗಾರದ ಪಂಜರ
ತನಗೇತಕೆ ಅನ್ನುತ್ತಿದೆ.
ಅದರೊಳಗೆ ಕುಳಿತರೆ
ಉಸಿರಾಡುತ್ತಿಲ್ಲ ಎನ್ನುತ್ತಿದೆ.
ಆಕಾಶದೆತ್ತರಕ್ಕೆ ಆರುವ
ಆಸೆ ಅರಗಿಣಿಗೆ ಆಗಿದೆ.
ಸಂಗಡಿಗರೊಡನೆ ಆಟವಾಡುವ
ಬಯಕೆಯಾಗಿದೆ.
ವಸಂತದ ಚಿಗುರು
ಸವಿಯಲು ಸಿದ್ಧವಾಗಿದೆ.
ಸ್ವಾತಂತ್ರ್ಯ ಕೊಡಲೆಂದು
ಮಾಲೀಕನ ಬೇಡುತ್ತಿದೆ.
ಆಸೆ ಹಿಡೇರದ ಅಪರೂಪದ
ಅರಗಿಣಿ ತನ್ನ ಕೊನೆಯುಸಿರೆಳೆದು
ಆ ಬಂಗಾರದ ಪಂಜರಕ್ಕೆ ಬಲಿಯಾಗಿ ಹೋಗಿದೆ.
- ಚುಕ್ಕಿ
22 Jul 2017, 04:41 pm
ನೀ ಬರುವ ಮುನ್ನ ನಿನ್ನ ನೆನಪು
ಗಾಳಿಯಲ್ಲಿ ಸುಗಂಧವಾಗಿ ಸೇರಿತು ನನ್ನ...........
ನಾ ನಡೆದು ಬಂದ ದಾರಿಯಲ್ಲಿನ ನನ್ನ ಹೆಜ್ಜೆಗುರುತು ಕಾದು ನೋಡುತ್ತೆ ನಿನ್ನ
ಪಾದವನ್ನು ತನ್ನಲ್ಲಿ ಲೀನವಾಗಿಸಿಕೊಳ್ಳಬೇಕೆಂದು...............
ನಡೆದು ಬಾರೋ ಒಲವಿನ ಗೆಳೆಯ ನನ್ನ
ನೆನಪಿನ ಮನಸಿಂದ ನಿನ್ನೊ ನೋಡುವ ಕಣ್ಣಿನ ಕರೆಗೆ ಕಾಣಿಕೆಯಾಗಿ ಇನ್ನೆಂದು ತೊರೆದು ಹೋಗದಂತೆ...............
- ಚುಕ್ಕಿ
22 Jul 2017, 04:21 pm