Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

''ತೀರಿಸಲಾಗದ ಋಣ''

ಚಿಕ್ಕಂದಿನಲ್ಲಿ ನಾ ದ್ವೇಷಿಸುತ್ತಿದ್ದ ಅಪ್ಪ,
ಕೋಪದಿ ಏಟು ಕೊಟ್ಟ ಅಪ್ಪ,
ಪೇಟೆಯಿಂದ ನನಗಾಗಿ ತಿನಿಸು ತರುತ್ತಿದ್ದ ಅಪ್ಪ,ಹಣೆಗೆ ಮುತ್ತಿಟ್ಟ ಅಪ್ಪ,
ದಿನಾ ಐದು ಪೈಸೆ ಕೈಗಿಡುತ್ತಿದ್ದ ಅಪ್ಪ.

ಓದು-ಆಟದಲ್ಲಿ ಬೆನ್ನು ತಟ್ಟಿದ ಅಪ್ಪ,
ಪೆನ್ನಿನ ಕಡ್ಡಿ ಕೊಡಿಸಿದ ಅಪ್ಪ,
ಸಾಲದಿ ನನಗಾಗಿ ಸೈಕಲ್ ಕೊಂಡ ಅಪ್ಪ,
ಮುನಿಸಿಕೊಂಡಾಗ ಅನ್ನ ತಿನ್ನಿಸಿದ ಅಪ್ಪ.

ಅಕ್ಕ ಬಡಿವಾಗ ಬಿಡಿಸಿದ ಅಪ್ಪ,
ಕಣ್ಣ ನೀರ ಒರೆಸಿದ ಅಪ್ಪ,
ನನಗಾಗಿ ಹದಿನಾಲ್ಕು ವರ್ಷ ಜೀತ ಮಾಡಿದ ಅಪ್ಪ,
ಸಂಸಾರ ನೌಕೆಗೆ ಜೀವತೇದ ಅಪ್ಪ,

ಬಿತ್ತಿ ಬೇಸಾಯ ಮಾಡಿ ದುಡಿದ ಅಪ್ಪ,
ತಾನು ಹಸಿದು ನನಗೆ ಅನ್ನವಿಟ್ಟ ಅಪ್ಪ.
ಕತ್ತಲಲ್ಲಿ ಬೆಳಕಾಗಿ ಹೆಗಲ ಮೇಲೆ ಒತ್ತು ನಡೆದ ಅಪ್ಪ,
ಸುರಿವ ಮಳೆಯಲಿ ಬಾಚಿತಬ್ಬಿದ ಅಪ್ಪ,

ನಮ್ಮ ಮನೆಯ ನಂದಾದೀಪ ಅಪ್ಪ,
ನನ್ನ ಬಾಳಿನ ಬೆಳಕು ನೀನಪ್ಪ,
ಧನ್ಯನಾದೆ ನಿನ್ನ ಮಗನಾಗಿ ಅಪ್ಪ,
ನಾ "ತೀರಿಸಲಾರೆ ನಿನ್ನ ಋಣ" ಎಂದಿಗೂ ಅಪ್ಪ..


Spb..@#

- Spb...@#

25 Jul 2017, 12:13 am

ತಳಮಳ

ಒಂದಾಕರ್ಷಣೆ ಮೋಡಿ ಮಾಡಿದೆ
ಬಿಟ್ಟಿರಲಾರದಂತ ಸೇಳೆಥ ಹೂಡಿದೆ
ತಾಳಲಾರದಂತ ನೋವು ನೀಡಿದೆ
ಸಮಾಧಾನ ಇಲ್ಲದಂತೆ ಕಾಡಿದೆ

ಚಿತ್ತದಲ್ಲಿ ಚಿತ್ರವೋಂದು ಮೂಡಿಸಿದೆ
ಅದು ಕ್ಷಣಕೊಂದು ಪಾತ್ರ ನಡೆಸಿದೆ
ಭಾವನೆಗಳ ಸಂದೇಶ ಹೊರಡಿಸಿದೆ
ಪ್ರತಿ ಜೀವಕೋಶಕ್ಕೆ ದಾಹ ಹೆಚ್ಚಿಸಿದೆ

ಅಸ್ಪರ್ಶ ಶಕ್ತಿಯಿಂದ ಮಾಯೆ ಮೆಟ್ಟಿಸಿದೆ
ಕಳೆದು ಹೋದಂತೆ ಭ್ರಮೆ ಹಿಡಿಸಿದೆ
ಎಂದು ಆಡದ ಹೊಸತನದ ಆಟವಾಡಿಸಿದೆ
ಜೀವನದ ಹಂತಗಳನ್ನು ಕಲಿಸುತ್ತಿದೆ

ಬೇಕಾದಾಗ ತುಂಬಾ ನೆನೆಯುತ್ತದೆ
ಬ್ಯಾಡಾದಾಗ ದೂರವಾಗಲು ನೇವ ಒಡ್ಡೂತ್ತದೆ
ಬೇಕು ಬೇಡಗಳ ಮಧ್ಯೆ ವ್ಯಕ್ತಿಯನ್ನು ಮೌನವಾಗಿಸುತ್ತದೆ
ಹಿರೇಉಳ್ಳಿಗೇರಿ ಕರೆಮ್ಮಳ ಹತ್ರ ಪರಿಪರಿಯಾಗಿ ಬೇಡಲು ಹಚ್ಚುತ್ತದೆ !

- MB

25 Jul 2017, 12:12 am

ಹಾಯಿದೋಣಿ

ಹರಿಯುತ್ತಿರುವ ನದಿಯೊಂದು
ಎಂದೂ ನಿಲ್ಲದೆ ಓಡುತಿಹುದು
ಅದರ ಓಟದೊಳಗೆನ್ನ
ಹಾಯಿದೋಣಿ ಸಿಲುಕಿಹುದು||

ಎಲ್ಲೋ ತಿರುಗಿ, ಹೇಗೋ ಹೊರಳಿ
ಏಗುತ ತಾ ಮತ್ತೆ ಕೆರಳಿ
ಎತ್ತಿ ಕುಣಿಸಿ, ಮತ್ತೆ ರಮಿಸಿ
ಮುಂದೆ ಕೊಂಡೊಯ್ದದೂ||

ಅದೋ ನೋಡು ಮಿಂಚುಳ್ಳಿ
ಮೀನು ಹಿಡಿಯುವ ಮಹಾ ಕಳ್ಳಿ
ರೂಪವೇನೋ ಚೆಂದುಳ್ಳಿ
ಮನಸು ಮಾತ್ರ ಊಸರವಳ್ಳಿ||

ಬಂದೇ ಹೋಯ್ತು ಜೋಗದಾ ಗುಂಡಿ
ಸಿಗಲೇ ಇಲ್ಲ ಪ್ರೇಮದಾ ಕಿಂಡಿ
ಪ್ರೀತಿ ದೀಪ ಹೋಯ್ತು ನಂದಿ
ಪ್ರಪಾತದೊಳಗೆ ಬದುಕ ಬಂಡಿ||

- ಶ್ರೀಗೋ.

24 Jul 2017, 10:26 pm

ಅಂಬಿಗನ ಗಾನ

ಕಡಲಿನಲಿ ಸಾಗುತಿಹ
ದೋಣಿಯಲಿ ಅಂಬಿಗನು
ಹರಿಗೋಲ ತಾ ಹಿಡಿದು
ಹಾಡುತಲಿ ಸಾಗಿಹನು!!

ಬಾನಿನಲಿ‌ ಹಾರುತಿಹ
ಹಕ್ಕಿಗಳ ಸಾಲೊಂದು
ಅಂಬಿನ ಧನಿ ಕೇಳಿ
ತಲೆದೂಗಿ ಬಂದಿಹವು!!

ಸೂರ್ಯನ‌ ರಶ್ಮಿಯದು
ನೀರಿನಲಿ ಹೊಳೆಯುತಲಿ
ಸಾಗಿಹುದು ಅಂಬಿಗನ
ಪಯಣದಿ ಒಡಗೂಡಿ!!

ನೀರಿನಲಿ‌ ಮೀನುಗಳು
ಹರುಷದಿ ಬಳುಕುತಲಿ
ಆಡಿ ನರ್ತಿಸುತಿಹವು
ಅಂಬಿಗನ ಗಾನ ಕೇಳಿ!!

- ಪಿ.ಜಿ.ಜ್ಯೋತಿ

24 Jul 2017, 09:31 pm

ಮುಸ್ಸಂಜೆಯಲಿ ನನ್ನವಳ ನೆನಪು..

ನನ್ನವಳೆಂದರೆ ಮುಳುಗೋ ಸೂರ್ಯನ
ಕಿರಣಗಳ ಹಾಗೇ ಅತಿಯಾಗಿ ಮಿಂಚುತ್ತಾ
ಮದ್ದಾದ ಮನಸ್ಸುಗಳ ಸೆಳೆಯುತ್ತಾ..
ಸಂಚರಿಸಿ ಸಂಚರಿಸಿ ಕೊನೆಯಲ್ಲಿ
ಕಣ್ಮರೆಯಾಗುವ ಚಲುವೆ ನನ್ನವಳು..

ಮನದ ಗೂಡಲ್ಲಿ ನಿನ್ನದೇ ನೆನಪು..
..

- ಪ್ರೀತಿನೀಇಲ್ಲದೆ

24 Jul 2017, 07:19 pm

ಅದು ನನ್ನ ಹೃದಯ

ಅದು ನದಿಯ ತೀರ
ಅಲ್ಲಿ ಬರೆದೆ ನಿನ್ನ ಹೆಸರ
ಅಲೆಗಳೆದ್ದರೂ
ತೀರಕೆ ಅಪ್ಪಳಿಸಿದರೂ
ಅಳಸಿ ಹೋಗದು ನಿನ್ನ ಹೆಸರು
ಏಕೆಂದು ಹೇಳುವೆಯಾ?
ಏಕೆಂದರೆ ಆ ನದಿಯ ತೀರ, ನನ್ನ ಹೃದಯ!

ಅದು ಆಕಾಶದ ಅಂಗಳ
ಅಲ್ಲಿ ಕಂಡೆ ನಿನ್ನ ಕಂಗಳ
ಸಿಡಿಲೇ ಬಡಿಯಲು
ಗುಡುಗೇ ಬರಲು
ಕಾಣೆಯಾಗವು ನಿನ್ನ ಕಂಗಳು
ಏಕೆಂದು ಹೇಳುವೆಯಾ?
ಏಕೆಂದರೆ ಆ ಆಕಾಶದ ಅಂಗಳ, ನನ್ನ ಹೃದಯ!

ಅದು ಬೆಳದಿಂಗಳ ತಾವರೆ
ಅಲ್ಲಿ ಕಂಡೆ ಮುದ್ದಾದ ನಿನ್ನ ಚೆಹರೆ
ಬಿರುಗಾಳಿ ಬಂದರೆ
ಮುಂಗಾರು ಸುರಿದರೆ
ಕಳೆಗುಂದದು ನಿನ್ನ ಚೆಹರೆ
ಏಕೆಂದು ಹೇಳುವೆಯಾ?
ಏಕೆಂದರೆ ಆ ಬೆಳದಿಂಗಳ ತಾವರೆ, ನನ್ನ ಹೃದಯ!

ಅದು ಜೇನುಗಳೇ ತುಂಬಿರುವ ಕುಟೀರ
ಅಲ್ಲಿ ಕಂಡೆ ಮಧು ತುಂಬಿದ ನಿನ್ನಧರ
ಬೆರೆತರೂ ಬೇವು
ಸೋಕಿದರೂ ವಿಷವು
ಕಹಿಯಾಗದು ನಿನ್ನ ಅಮೃತದ ಅಧರವು
ಏಕೆಂದು ಹೇಳುವೆಯಾ?
ಏಕೆಂದರೆ ಆ ಜೇನುಗಳ ಕುಟೀರ, ನನ್ನ ಹೃದಯ!

- ಅಕವಿ

24 Jul 2017, 05:25 pm

ಜನರ ಹಸಿವು

ಕಾಮಧೇನು ಧರೆಗೆ ಬಂದರೂ
ಜನರ ಹಸಿವು ನೀಗದು!!
ಅವರ ಮನದ ದಾಹದ ಬುತ್ತಿ
ಎಂದು ಖಾಲಿ ಆಗದು!!

ಆಸೆ ಎಂಬ ಕೂಸು ಹೊತ್ತು
ಸಾಗುವವರೇ ಎಲ್ಲರೂ!!
ಕೂಸು ಬೆಳೆದು ದೊಡ್ಡದಾದರೂ
ಮರಳಿ ಆಸೆ ಪಡುವರು!!

ಏನಿದು ಯಾವ ಮೋಹದ
ಹಸಿವು ಜ‌ನರ‌ನು ಸುತ್ತಿಕೊಂಡಿದೆ!!
ಸಾವನ್ನು ಬೆನ್ನಿಗೆ ಕಟ್ಟಿಕೊಂಡರೂ
ಏಕೆ ಈ ಭಾವ ಅವರನು ಮುತ್ತಿದೆ!!

- ಪಿ.ಜಿ.ಜ್ಯೋತಿ

24 Jul 2017, 11:20 am

ಸಂತಸದ ಗಾಳಿ

ಸಂತಸದ ಗಾಳಿ ಬೀಸುವ ಗಳಿಗೆ
ದುಃಖವೆಲ್ಲ ತೂರಿ ಹೋಗಲಿ ದೂರಕೆ!!
ಮನದ ದುಗುಡದ ಮುಖವಾಡವು
ತಾ ಕಳಚಿ ಉರುಳಲಿ ನೆಲಕ್ಕೆ!!

ವಿಸ್ವಾಸದ ಸೇತುವೆಯ ಮೇಲೆ
ಸಾಗಿ ಮುನ್ನಡೆಯಲಿ ಬದುಕಿನ ನಡಿಗೆ!!
ನಂಬಿಕೆಯೇ ಆಧಾರ ಸ್ತಂಭವಾಗಿ
ಕೈ ಹಿಡಿದು ನಡೆಸಲೀ ಸದಾ ಹೀಗೆ!!

ಮನಕೆ ಹಿತ ಎನಿಸುವ ಬದುಕನು ಕಟ್ಟಿ
ಬಾಳ ಬಯಸುವ ಕನಸು ನನಸಾಗಲಿ!!
ಮುಗಿಲ ಎತ್ತರಕ್ಕೆ ಬೆಳೆದು ಬಳಲದೇ
ಎದ್ದು ನಿಲ್ಲುವ ಬದುಕು ಹಿತ ನೀಡಲಿ!!

- ಪಿ.ಜಿ.ಜ್ಯೋತಿ

24 Jul 2017, 11:03 am

ರಾತ್ರಿಯಲಿ ನನ್ನವಳು

ರಾತ್ರಿಯು ಕಳೆಯುತಲಿ
ಕನಸುಗಳು ಕರಗುತಿವೆ!!
ಚಂದಿರನೇ ನೀ ನೋಡಿ
ನಗುತಲಿ ಇರುವೆಯಾ!!

ಕನಸಿನಲಿ ನನ್ನವಳ
ಕಾಣುವುದೇ ನೆಮ್ಮದಿಯು!!
ಬೆಳಕು ಹರಿದರೆ ಅವಳು
ನಿನ್ನ ಸೇರುವಳು!!

ಬೇಸರವು ದಿನವೆಲ್ಲ
ಗೋಚರಿಸಿ ನನ್ನ ಒಳಗೆ!!
ಮತ್ತೆ ನೆನೆಯಲೇ ಅವಳ
ರಾತ್ರಿಯ ಕನಸಿನಲ್ಲಿ!!

ಕನಸಿನಲಿ ಬಂದವಳು
ಹಿತ ಉಣಿಸಿ ಹೋಗುವಳು!!
ಹಗಲಿನಲಿ ತಣಿಸು ಬಾರೇ
ನೀ ವಿರಹದ ಹಸಿವ!!

- ಪಿ.ಜಿ.ಜ್ಯೋತಿ

24 Jul 2017, 10:46 am

ಮುಂಜಾನೆ

ಮೂಡಣದಿ ಮುಂಜಾನೆ
ಹೊಂಬೆಳಕ‌‌ ಆರತಿ!!
ಪಡುವಣದಿ ಕಡಲಿನಲಿ
ಅಂಬಿಗನು ಸಾರತಿ!!

ತೆಂಕಣದಿ ಓಡುತಿರುವ
ಮೋಡಗಳ ಸಾಲಿದೆ!!
ಬಡಗಣದಿ ಹಾರುತಿರುವ
ಹಕ್ಕಿಗಳ ಗುಂಪಿದೆ!!

ಎಲ್ಲೆಲ್ಲೂ ಸೌಂದರ್ಯವು
ಕಣ್ಣ ತುಂಬಿಕೊಂಡಿದೆ!!
ಅದ ನೋಡುತಲಿ ಕವಿಯ
ಮನ ಎಲ್ಲಿಗೋ ಓಡಿದೆ!!

- ಪಿ.ಜಿ.ಜ್ಯೋತಿ

24 Jul 2017, 10:16 am