Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ತಿಳಿದಿದೆಯೇ ಚೆಲುವೆ
ನನ್ನ ನಗುವಿನ ಅಳು ಏಕೆಂದು?
ತಿಳಿದಿದೆಯೇ ಚೆಲುವೆ
ನನ್ನ ಕಣ್ಣೀರಾಗೆ ಬಿದ್ದ ಕೊನೆ ಕನಸು ಯಾವುದೆಂದು?
ತಿಳಿದಿದೆಯೇ ಚೆಲುವೆ
ನನ್ನ ಮಂದಹಾಸದ ಕೊನೆ ಆಸೆ ಯಾವುದೆಂದು?
ತಿಳಿದಿದೆಯೇ ಚೆಲುವೆ
ನನ್ನ ಉಸಿರು ಉಸುರುತ್ತಿರುವ ಹೆಸರು ಯಾರದೆಂದು?
ತಿಳಿದಿದೆಯೇ ಚೆಲುವೆ
ನನ್ನ ಕಣ್ಣು ಕಾಣದ ಹೃದಯ ಕಂಡ ಮೊದಲ ಹೆಣ್ಣು ಯಾರೆಂದು?
ಇವೆಲ್ಲವನೂ ತಿಳಿಸುವೆ ನಾನಿಂದು
ಇದೆಲ್ಲದಕ್ಕೂ ಉತ್ತರ ನೀನೆಂದು........!
- ಅಕವಿ
26 Jul 2017, 09:24 pm
ತಿಳಿದಿದೆಯೇ ಚೆಲುವೆ
ಏಳು ಅದ್ಭುತಗಳಲ್ಲಿ ನಿನ್ನ ಕಣ್ಣುಗಳು ಎಷ್ಟನೆಯದೆಂದು?
ತಿಳಿದಿದೆಯೇ ಚೆಲುವೆ
ಷಡ್ರಸಗಳಲ್ಲಿ ನಿನ್ನ ತುಟಿಗಳು ಎಷ್ಟನೇ ರಸವೆಂದು?
ತಿಳಿದಿದೆಯೇ ಚೆಲುವೆ
ದೇವಲೋಕದ ಅಪ್ಸರಸೆಗಳಲಿ ನೀನು ಎಷ್ಟನೆಯವಳೆಂದು?
ತಿಳಿದಿದೆಯೆ ಚೆಲುವೆ
ಸಪ್ತ ಸರೋವರಗಳಲಿ ನಿನ್ನ ಪ್ರೀತಿ ಎಷ್ಟನೆ ಸರೋವರವೆಂದು?
ಇವೆಲ್ಲವನೂ ತಿಳಿಸುವೆ ನಾನಿಂದು
ಇದೆಲ್ಲದರಲ್ಲೂ ನೀನೇ ಮಿಗಿಲೆಂದು......!!!!!
- ಅಕವಿ
26 Jul 2017, 09:13 pm
ಉಸಿರಲ್ಲಿ ಉಸಿರಾಗಿ ನನ್ನ ಬಚ್ಚಿಡುವೆಯಾ ಲೋಕಕ್ಕೆ ಕಾಣದಂತೆ..............
ಮಡಿಲಲ್ಲಿ ಮಗುವಾಗಿ ನನ್ನ ಕಾಪಾಡುವೆಯಾ
ನರರ ಕಣ್ಣಿನ ಶಾಖ ನನಗೆ ತಾಗದಂತೆ..............
ನನ್ನಲ್ಲಿನ ಕಾಂತಿಗೆ ಕತ್ತಲಾಗಿ ನೀನಿರುವೆಯಾ
ನನ್ನ ನೆರಳುಕೂಡ ನನ್ನ ಕದಿಯದಂತೆ........
ಕೈಯಲ್ಲಿ ಬೆಚ್ಚಗಿನ ಬೆವರಾಗಿ ನೀನಿರುವೆಯಾ ತಂಗಾಳಿ ನನ್ನಲ್ಲಿ ಸೇರಿದಾಗ ದೂರ ಸರಿಸಿ ಮತ್ತೆ ಮರೆಯಾಗುವಂತೆ.............
ಕನಸಲ್ಲಿ ನಲಿವಾಗಿ ಮನಸಲ್ಲಿ ನೆಲೆಯಾಗಿ
ನನ್ನಲ್ಲಿ ನಿನಾಗಿ ಕರೆದಲ್ಲಿ ರೂಪವಾಗಿ ನೀ ಸೇರುವೆಯಾ ಪದಗಳಲ್ಲಿ ಜನಿಸಿದ ಅಕ್ಷರಗಳಾಗಿ
ಬರೆವ ನನ್ನ ಕೈಗಳಿಗೆ ನಗೆಯ ಶಾಯಿಯಂತೆ........
- ಚುಕ್ಕಿ
26 Jul 2017, 08:39 pm
ಬಡವನಿಗೂ ಹಣವಂತನಿಗೂ ಒಂದೇ ಚಿಂತೆ.
ಅದು ಹೊಟ್ಟೆಯ ಚಿಂತೆ.
ಬಡವನಿಗೆ ಹೊಟ್ಟೆ ತುಂಬಿಸುವ ಚಿಂತೆ,
ಹಣವಂತನಿಗೆ ಹೊಟ್ಟೆ ಕರಗಿಸುವ ಚಿಂತೆ !
- ಶ್ರೀಗೋ.
26 Jul 2017, 08:29 pm
ಮುಗ್ದ ಹೇಂಟೆಯು
ಮುದ್ದಿನಿಂದ ಮೊಟ್ಟೆಯಿಟ್ಟು
ಮರಿಯ ಮಾಡಿತು,ನೂರು ಕಾಲ ಬಾಳಿರಿ ನರರ ದೃಷ್ಟಿ ತಾಗದೆ
ಎಂದಿತು ಉಸಿರಕೊಟ್ಟು
ಕರುಳ ಕುಡಿಗಳ
ಜೋಪಾನ ಮಾಡಿತು
ಹದ್ದು-ಕಾಗೆಯ ಕಂಗಳ
ಮರೆಮಾಚಿ ನಾಯಿ- ನರಿಗಳ
ಸನಿಹದಿಂದ ದೂರವಿರಿಸಿ
ಕಿತ್ತು ತಿನ್ನುವ ಒಡೆಯನಿಹನು
ಪಕ್ಕದಲ್ಲೆ,ಎಂಬುದ ಮರೆತು
ಮುದ್ದಿನಿಂದ ತುತ್ತುನೀಡಿತು
ಹರುಷದಲಿ ,
ದಷ್ಟಪುಷ್ಟವಾಗಿ ಬೆಳೆದಿದ್ದ
ಕೋಳಿ ಎಡೆಗೆ ಗಮನವರಿಯಿತು
ತಾಯಿ-ಮಕ್ಕಳ ಅಗಲಿಕೆಗೆ
ಮುನ್ನುಗ್ಗಿದ ಹುರುಪಿನಲಿ
ನೀ ಉಂಡದ್ದು ಉಳಿಯುವುದು
ಕ್ಷಣಕಾಲ
ನಾನಿದ್ದರೆ ಸಂಬಂದ ಉಳಿವುದು
ಅನುಗಾಲ
ಯೋಚಿಸಿ ನೋಡು
ಬಾಳಲು ಬಿಡು!
ಶಾರಧ
- ಶಕುಂತಲಾ
26 Jul 2017, 06:47 pm
ಬೇರೆಯವರು ಮಾಡಲಾಗದ್ದನ್ನು ನಾನು ಮಾಡಿದೆ
ಬೇರೆಯವರು ಹೆದರಿ ಹೋಗಲಾಗದ ಜಾಗಕ್ಕೆ ನಾ ಹೋದೆ
ಏನನ್ನೂ ಕೊಡಲಾರದವರನ್ನು ಏನೋ ಕೇಳಿದೆ
ಇಷ್ಟವಿಲ್ಲದಿದ್ದರೂ ಶಾಶ್ವತ ಒಂಟಿತನವನ್ನು ಸ್ವೀಕರಿಸಿದೆ
ಭಯೋತ್ಪಾದಕನ ಮುಖವನ್ನು ನೋಡಿದೆ
ಭಯದ ಭಾವವನ್ನು ಕೊಂದೆ
ಭಾರತಾಂಬೆಯ ಮಮತೆಯ ಅನುಭವಿಸಿದೆ
ಯುದ್ಧದಲ್ಲಿ ಕಣ್ಣೀರಿಟ್ಟೆ,ನೊಂದು ಬೆಂದೆ,
ಭರವಸೆಯ ಮೆಟ್ಟಿಲು ಹತ್ತಲು ಛಲಬಿಡದೆ ಹೋರಾಡಿದೆ
ಸತ್ತರೂ ಬದುಕಿದರೂ ನಾ ಹೇಳಬಯಸುವುದೊಂದೇ
ನಾನೊಬ್ಬ ಸೈನಿಕ ಉಸಿರಿರುವ ತನಕ ಈ ನಾಡಿನ ರಕ್ಷಕ
- ಎಸ್.ಬಿ
26 Jul 2017, 11:54 am
ಅಂದು ಲೆಕ್ಕ ಇಲ್ಲದಷ್ಟು ಪ್ರೀತಿಯ
ಸಾಲ ನನ್ನಿಂದ ಪಡೆದೆ ನೀನು!!
ಇಂದು ಬಡ್ಡಿ ನೀಡುವುದು ಬೇಡ
ಅಸಲನ್ನಾದರೂ ಹಿಂತಿರುಗಿಸು!!
ಅಂದು ನನ್ನಲ್ಲಿರುವ ಎಲ್ಲ
ಪ್ರೀತಿಯನ್ನು ನಿನಗೆ ಧಾರೆ ಎರೆದೆ!!
ಇಂದು ಚೂರು ಪ್ರೀತಿಗಾಗಿ
ಹಂಬಲಿಸಿ ನಾ ಬಿಕಾರಿ ಆಗಿರುವೆ!!
ಅಂದು ಕ್ಷಣ ಕ್ಷಣವೂ ನಾನು
ನಿನ್ನ ಏಳಿಗೆ ಬಯಸುತ್ತಿದ್ದೆ!!
ಇಂದು ಏಳಲು ಆಗದ ಕಂದಕದಲ್ಲಿ
ಬಿದ್ದು ನೊಂದು ಒದ್ದಾಡುತ್ತಿರುವೆ!!
ಅಂದು ನಾನು ನಿನಗೆ ನೀಡಿದ
ಪ್ರೀತಿಯ ಸಾಲವೂ ಇಲ್ಲ!!
ಇಂದು ಅದನ್ನು ಹಿಂತಿರುಗಿಸಲು
ನೀನು ಜೊತೆಯಲ್ಲಿ ಇಲ್ಲ!!
- ಪಿ.ಜಿ.ಜ್ಯೋತಿ
26 Jul 2017, 09:48 am
ಅವಳ ಆ ಮುಂಗುರುಳ ಭಾಷೆಗೆ
ನನ್ನಲಿ ಹೊಸ ಒಲವು ಶುರುವಾಗಿದೆ!!
ಅವಳ ಆ ಕುಡಿನೋಟದ ಚಲುವಿಗೆ
ನನ್ನ ಈ ಹೃದಯವು ಮಿಡಿದಿದೆ!!
ಅವಳನೇ ಮತ್ತೆ ಮತ್ತೆ ನೋಡಲು
ಹಂಬಲಿಸಿ ಕಾಯುತಿವೆ ನನ್ನ ಕಂಗಳು!!
ಅವಳದೇ ಕನಸು ರಾತ್ರಿ ನಿದ್ದೆಯಲ್ಲಿ
ಸದ್ದಿಲ್ಲದೇ ಬಂದು ನನ್ನ ಕಾಡುತ್ತಿವೆ!!
ಅವಳದೇ ನೆನಪಿನಲ್ಲಿ ದಿನವಿಡೀ
ಅಲೆದಾಡುತ ಸಾಗಿದೆ ನಾ ಅರಿಯದ!!
ಅವಳನೇ ವರಿಸಲು ನನ್ನ ಮನದಲಿ
ಹೋಸ ಆಸೆಯೊಂದು ಆವರಿಸಿದೆ!!
- ಪಿ.ಜಿ.ಜ್ಯೋತಿ
26 Jul 2017, 09:04 am
ಬೆಚ್ಚನೆಯ ಮನೆಯಲ್ಲಿ
ಅಚ್ಚುಮೆಚ್ಚಿನ ಪ್ರೀತಿಯಲ್ಲಿ
ರಚ್ಚೆಮಾಡುವ ಇಚ್ಚೆಗಳು
ಅರಿದಾಡಿದಾಗ ಉಕ್ಕುವುದು ಪ್ರೇಮಾ..
ಹಂಚಿನ ಕೆಳಗಡೆ ಹೊಂಚಾಕಿದ
ಮನಗಳು ಇಂಚಿನ ಲೆಕ್ಕಾಚಾರ
ಕಂಚಿನ ಬಿಂದಿಗೆಯ ನೀರು
ಸವಿದಾಗ ಉಕ್ಕವುದು ಪ್ರೇಮಾ..
ರವಿಯ ಕಿರಣಗಳು ಕಿಟಕಿ ಒಳಗಡೆ
ಹರಿದಾಡಲು ಜಾಗವಿತ್ತ
ಒಡೆಯ ಓಡಾಡಲು
ಹೊಮ್ಮಿತ್ತು ಪ್ರೇಮಾ..
ಮನಸ್ಸಿನ ಮಾತ್ತಿಗೆ
ಮುತ್ತಿಡುವ ಮನಸುಗಳು
ಸಂಚಾರದ ಕಾಲುಗಳು
ಬೆರಳ ಸ್ಪರ್ಶದಿ ಪ್ರೇಮಾ...
ಈಶ,ಎಂ.ಸಿ.ಹಳ್ಳಿ
- ಈಶ,ಎಂ.ಸಿ.ಹಳ್ಳಿ
25 Jul 2017, 10:41 pm
ತಾಯಿಯಿಲ್ಲದ ತವರಲ್ಲಿ
ತಬ್ಬಳಿಯಂತೆ ಬೆಳೆದಳು
ಮಲತಾಯಿಯ ಕಾಲುತೊಳೆಯಲು
ಕಣ್ಣೀರ ಅಭಿಷೇಕ ಗೈದವಳು........
ಹೆಸರಿಗೊಂದು ತಂದೆ ಇರುವನು
ಹೊಸ ಹೆಂಡತಿಯನ್ನು ಕರೆತಂದು
ಕ್ಷಣದಲ್ಲೇ ತಾನೆತ್ತ ಮಗಳೆಂದು ಮರೆತು
ಹೊದೆನು.............
ಮುದ್ದಾದ ಗೊಂಬೆ ಇವಳು
ಮಲ್ಲಿಗೆಗಿಂತ ಮೃದುವಾದ
ಮನಸುಳ್ಳವಳು ಕಷ್ಟವೆಂದವರಿಗೆ
ತಾನಿರುವೆನೆಂದು ಸಹಾಯಸ್ಥ
ನೀಡುವವಳು.........
ಕಾಣದ ದೇವರಿಗೆ ತಾಯಿ ನೀನೆಂದು
ಕೈಮುಗಿದು ಬೇಡುವವಳು ವಿದ್ಯೆಯ
ಕೈಯಿಡಿದು ವೈದ್ಯಕೀಯ ವೃತ್ತಿಯನ್ನು
ಆಯ್ದುಕೊoಡವಳು.............
ತನ್ನ ತಾಯಿಯ ಸಾವಿನಂತೆ ಯಾವ ತಾಯಿಯು ಮತ್ತೊಂದು ಮಗಳ ಕೈಬಿಟ್ಟು ಹೋಗಬಾರದೆಂದು ಹಗಲಿರುಳು ಶ್ರಮಿಸಿ ಡಾಕ್ಟರಾದಳು ನಮ್ಮೂರ ಹೆಣ್ಣುಮಗಳು ಕರುಣೆಯುಳ್ಳ ಕಾರುನ್ಯೆಯವಳು...
- ಚುಕ್ಕಿ
25 Jul 2017, 10:00 pm