Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
"ನಾನು",ನನ್ನದೆಂಬ ನುಡಿಯು "ನಿನ್ನನ್ನು" ನಿಂದಿಸದಂತಾಗದಿರಲಿ..
"ನಾನು".., "ನಿನ್ನನ್ನು" ನಗುವ ನುಡಿಯಾಗಿರಲಿ...
"ನಾನು" ನಿಮ್ಮ ನೆಮ್ಮದಿಯ ನುಡಿಯಾಗಿರಲಿ..
- ಗೌಡಕಲರ್ಪುಲ್
29 Jul 2017, 07:11 am
ನಿದ್ದೆ ಮಾಡಬೇಕೆಂದಾಗಲ್ಲೆಲ್ಲ
ನಿನ್ನ ನೆನಪು ಕಾಡಿಸಿ ಎಬ್ಬಿಸುತ್ತೆ ಪದೇಪದೇ
ಕಣ್ಣ ರೆಪ್ಪೆ ಮುಚ್ಚಿದರೂ ಕಂಗೊಳಿಸುತಿದೆ ನಿನ್ನ ಮನವೆಲ್ಲ
ನೀ ದೂರಾಗಿ,ದಿನ ಕಳೆದರೂ ನಿನ್ನ ನೆನಪಿನ ಗುಂಗಿನಲ್ಲೆ ಇರುವೆ ನಾ ಸಾದಾ
ಮರೆತು ಮರೆಯಾಗಬೇಕೆಂದ ನಿನ್ನ ನೆನಪುಗಳು ಈ ಮಧ್ಯ ರಾತ್ರಿಯಲ್ಲೇ ನೆನಪಿಸುತಿದೆಯಲ್ಲ
ನಿನ್ನ ಬಿಟ್ಟು ಇರಲಾರದ ಬದುಕು
ಅನುಭವಿಸುತಿದೆ ಕ್ಷಣ ಕ್ಷಣಕ್ಕೂ ಯಾತನೆ
ನಿನ್ನ ನೆನಪೊಂದೆ ಹಗಲು ಈ ನಡು ರಾತ್ರಿಯ ಪುಳಕವು
ಸ್ಟೇಟಸ್ ನೋಡಿದವ ಅಂದುಕೊಂಡನು
ಇವ ಎಂತ ಮಾನಸಿಕ ಪ್ರೇಮಿ ಬರೆಯುತ್ತನೆ ನಡು ರಾತ್ರಿಯಲ್ಲೂ ಅವಳನ್ನೇ ಧ್ಯಾನಿಸಿ
ನೀ ಅಲ್ಲದೇ ನಿನ್ನಾರ ನೆನಪ ಬರಲಿ ಈ ನಡು ರಾತ್ರಿ ಓ.....ಬಿಟ್ಟು ಹೋದಾ ಪಿಶಾಚಿ...
ಓ.....ಸಾರಿ....ಪ್ರೇಯಸಿ...!!
- ಎಸ್.ಬಿ
29 Jul 2017, 01:42 am
ಅನ್ನದ ಋಣವ
ಬಲ್ಲವರಾರು
ಹುಡುಕುತ ಬರುವುದು
ಬೇಡವೆಂದರು
ಕನಸಿನ ಕೋಟೆ
ಕರಗಿದರೇನು
ತಾಳ್ಮೆಯ ಜ್ಯೋತಿ
ಬೆಳಗದೇನು
ಅರಸಿ ಬಂದಾಗ
ದೂರ ಸರಿದೆ
ನಿಟ್ಟುಸಿರು ಬಿಟ್ಟಾಗ
ನೀನೆ ಬಳಿ ಬಂದೆ
ನಾ ಬಯಸಿದಂತೆ
ನಡೆಯದೇನು
ನಡೆಯುವುದೆಲ್ಲ ನಿನ್ನ ಲೀಲೆಯಲ್ಲವೇನು
ನಾ ನಿನ್ನ ಮಗಳಲ್ಲವೇನು!
ನನ್ನ ಏಳಿಗೆ ನಿನ್ನ ಹೊಣೆಯಲ್ಲವೇನು!
ಕೈ ಹಿಡಿದು ಕಾಯವ್ವ ನೀನು!
ಸದಾಕಾಲ ನಿನ್ನ ಸೇವಕಳು ನಾನು!
ಶಾರಧ
- ಶಕುಂತಲಾ
28 Jul 2017, 10:10 pm
ಬದುಕಾಗಿದೆ ಮರೀಚಿಕೆಯ ಹುಡುಕುವಂತ ಪರಿ
ಕಣ್ಣೀರ ಕಡಲೆ ಹರಿಯುತಿದೆ ಕಣ್ಣಿಂದ ಜಾರಿ
ಸೋಲುಗಳೇ ಜೊತೆ ಸೇರಿವೆ ಪ್ರತಿ ಬಾರಿ
ಮರೀಚಿಕೆಯ ಹಿಡಿಯಲು ಇರುವುದೆ ದಾರಿ
ಜೀವನವಾಗಿದೆ ನೋವುಗಳ ರೂವಾರಿ
ಕರೆತಂದಿದೆ ಮನಸಿಗೆ ಸಾವೆಂಬ ವ್ಯಾಪಾರಿ
ಉಳಿದೋಗಿದೆ ಜೀವ ವ್ಯಾಪಾರದಲಿ ಆಗದೆ ಬಿಕರಿ
ಸೋತಿರಲು ಜೀವ ವ್ಯಾಪಾರಿಯೆದುರು ಹಲವು ಬಾರಿ
ನಾನಿಗಿರುವೆ ಮಾತಾಡಲಾಗದ ಮೌನಿ ಜಗದೆದುರು
ಮಾತಾಗಲಾರದ ಮೌನವು ಬಿಗಿಹಿಡಿದಿದೆ ನನ್ನ ಉಸಿರು
ಕರುಣೆ ಇಲ್ಲದೆ ನಿಲ್ಲಿಸಿಬಿಡಲೆ ಮನಸಿನ ಮಾತು
ಮನಸಿರದೆ ಬದುಕಿ ಮಾಡುವುದಾದರು ಎಂತು
- ಶ್ರೀಕಾವ್ಯ
28 Jul 2017, 09:23 pm
ಇಬ್ಬರೊಳಗೂ ಏಕಾಂತವಿದೆ.
ಆದರೆ........
ಅವನದು ಸ್ವ ಇಚ್ಛೆಯ ಏಕಾಂತ,
ನನ್ನದು ಹೇರಿಕೆಯ ಏಕಾಂತ.
ಕಣ್ಣೀರೆಲ್ಲ ಜಾರಿ ಭೂ ಸ್ಪರ್ಶವಾದರೂ
ಅವನು ಕಲ್ಲು ಬಂಡೆಯಂತೆ ತಟಸ್ಥ,
ನಿಜಕ್ಕೂ ಅವನು ನನ್ನವನಲ್ಲ!!!!
ನನ್ನವನು ನಿಜಕ್ಕೂ ಅವನಲ್ಲ!!!!
ಕಳೆದುಕೊಂಡಿಹೆನು ಏನನ್ನೊ....
ಮಾತಾಡಬೇಕೆಂದು ಕರೆದವನ ಮೌನ
ಎಲ್ಲದಕ್ಕೂ ಉತ್ತರವಾಗಿ ನಿಂತಿದೆ.
ಪುನಃ ಮಾತಾಡಿ ಪ್ರಶ್ನೆಗಳ ಸುರಿಮಳೆ ಹರಿಸಲೆ?
ಮಾತಾಡದೆ ಮೌನದಲಿ ಎಲ್ಲವನು ಬಗೆಹರಿಸಲೆ?
ಅನರ್ಥಗೊಂಡಿದೆ ಎಲ್ಲವೂ....
ಅಕ್ಕ-ಪಕ್ಕದಲಿ ಕುಳಿತ ಇಬ್ಬರಲ್ಲೂ ಏಕಾಂತ.
ಆದರೆ......
ಅವನದು ಸ್ವ ಇಚ್ಛೆಯ ಏಕಾಂತ,
ನನ್ನದು ಹೇರಿಕೆಯ ಏಕಾಂತ.
- ಅಕ್ಷತ
28 Jul 2017, 03:13 pm
ಹಕ್ಕಿಗಳ ಇಂಪಾದ ನಾದದಲಿ
ಇಷ್ಟವಾದ ಹಾಡಿನ ಗುಂಗಲಿ
ಸುಂದರವಾಗಿ ಕಾಣುವ ಆಕೃತಿಯಲಿ
ಹರ್ಷ ಮೂಡುವುದು ಎದೆಯಲಿ
ಸಮುದ್ರದ ಅಂತರಾಳದಲಿ
ಆಗಸದ ಮೋಡಗಳ ಎತ್ತರದಲಿ
ಭೂವಿಯ ಗರ್ಭದ ಗುಹೆಗಳಲಿ
ಭಯ ಕಾಡುವುದು ಹೃದಯಂಚಿನಲಿ
ಅರಿಯದೆ ಆದ ತಪ್ಪಿನಲಿ
ಅನ್ಯರಿಗೆ ಮಾಡಿದ ಸಹಾಯದಲಿ
ಹಿರಿಯರಿಗೆ ನೀಡಿದ ಗೌರವದಲಿ
ಸಮಾಧಾನವಿರುವುದು ಮನದಲಿ
ಕನ್ಯೆಯ ಆಕರ್ಷಣೆಯಲಿ
ಹೊನ್ನಿನ ವಿಚಾರದಲಿ
ಮಣ್ಣಿನ ಸಂಘದಲಿ
ಹಿರೇಉಳ್ಳಿಗೇರಿ ಕರೆಮ್ಮ ಚಿಂತೆಯೇ ಪ್ರತಿಯೊಂದು ಅಂಗದಲಿ
- MB
28 Jul 2017, 01:46 pm
ದೇಹವೆಂಬ ಪಂಜರದಲ್ಲಿ
ಬಂದಿಯಾಗಿರುವೆನು ನಾನು!!
ಪಂಜರಕ್ಕೆ ತಾಗುವ ಪ್ರತಿಯೊಂದು
ಪೆಟ್ಟು ನನ್ನನ್ನು ಕಂಪಿಸುತ್ತಿದೆ!!
ಆಂತರಿಕ ಆನಂದ ತೊರೆದು
ಪ್ರಾಪಂಚಿಕ ಮಾಯೆಯಲ್ಲಿ
ಮುಳುಗಿಹೋಗಿರುವೆ ನಾನು!!
ಆಸ್ತಿ ಅಂತಸ್ತಿನ ಪರದಾಟದಲ್ಲಿ
ನನ್ನ ನಾನು ಮರೆತಿರುವೆನೇನು!!
ಜಗದ ಎಲ್ಲಾ ಸುಖಗಳು ನನ್ನವಾದರೂ
ನನಗೆ ನಿಜವಾದ ಸಂತೋಷ ಲಭಿಸುವುದಿಲ್ಲ!!
ಏಕೆಂದರೆ ಇಷ್ಟುದಿನ ನನ್ನ ದೇಹದ
ನಿರಂತರ ಶ್ರಮಕ್ಕೆ ಬಿಡುವಿಲ್ಲದೆ ಬಿದ್ದ
ಕಷ್ಟಗಳಿಗೆ ನಾನು ನೊಂದಿರುವೆನು ನನ್ನೊಳಗೆ!!
ಈ ಪಂಜರವ ದಾಟಿ ಗಾಳಿಯಲ್ಲಿ ಗಾಳಿಯಾಗಿ ಸೇರುವ ತನಕ ವಿಶ್ರಾಂತಿ ಸಿಗಲಾರದು ನನಗೆ!!
ರೂಪವಲ್ಲದ ರೂಪದಲ್ಲಿ ಶಾಶ್ವತವಲ್ಲದ ದೇಹದಲ್ಲಿ ಅನಗತ್ಯ ನೋವಿನಲ್ಲಿ ಬದುಕುತ್ತಿರುವೆ ಈ ದೇಹಕ್ಕೆ ಹೆಸರೊಂದನಿಟ್ಟುಕೊಂಡು ಮನಸ್ಸಿಲ್ಲದ ಮಾನವರ ಜೊತೆಯಲ್ಲಿ ಆತ್ಮವಾಗಿ ನೊಂದು ನಾನಿಂದು!!
- ಚುಕ್ಕಿ
27 Jul 2017, 06:57 pm
ಮನದ ಕಲ್ಪನೆಗಳ ಮಹಾಪೂರ,
ಮೂಕರಾಗ ಮೌನದ ಸ್ವರ,
ಬರವಣಿಗೆಯ ಆಗರ,
ನೊಂದ ಮನಗಳ ಮಾನಸ ಸರೋವರ
"ಈ ನನ್ನ ಕವನ".
- Spb...@#
27 Jul 2017, 05:20 pm
ಭೂವಿಯ ಪ್ರೀತಿಯ ಚಿತ್ತ
ಬಾನಿನ ನಕ್ಷತ್ರದತ್ತ
ಪ್ರೇಮ ಮಾಯದ ಮತ್ತ
ಇದು ಎಲ್ಲರ ಸ್ವತ್ತ
ಉಂಗುರ ಆಕಾರ ಕತ್ತ
ನೇರ ಕಾಣುವ ಬೆತ್ತ
ಶುಕ್ರ ಹೋಳೆಯುವದು ಬೆಳಗಿನ ಹೊತ್ತ
ಉಣಬಡಿಸುವದು ನೆನಪಿನ ತುತ್ತ
ಕರಿಮಣಿಯಲಿ ಮಿಂಚುವ ಮುತ್ತ
ಕಳಕೊಳ್ಳಬಾರದೆಂಬ ಗತ್ತ
ಹಠ ಮಾಡಿಯಾದರು ಪಡೆಯುವುದು ಅತ್ತ
ಬೆಳ್ಳಿ ಕಾಲುಂಗುರ ಸುತ್ತ
ಬಂಗಾರ ಮೂಗಿನ ನತ್ತ
ಅಲಂಕಾರ ರೂಪದ ಮೊತ್ತ
ಹೊಟ್ಟೆ ತುಂಬಿಸುವ ಭತ್ತ
ಹಿರೇಉಳ್ಳಿಗೇರಿ ಕರೆಮ್ಮ ಪೂಜಿಸಲ್ಪಡುವುದು ಹುತ್ತ
- MB
27 Jul 2017, 04:15 pm
ಕೀರ್ತಿಗಾಗಿ ಹುಟ್ಟಿದ ಕವಿತೆಯಲ್ಲ ಮಮತೆಯ ಮಾತೆಯ ಲಾಲಿ ಹಾಡು
ಗರಿ ಗರಿ ನೋಟುಗಳಲ್ಲ. ಪ್ರತಿಯೊಬ್ಬ ಭಾರತೀಯನ ಉಸಿರಾಟ
ಪಾಠ ಪರೀಕ್ಷೆಗಳಲ್ಲ ನಮ್ಮಂತರಂಗದ ಶಾಂತಿಯ ತೋಟ
ವರ್ಷಕ್ಕೊಮ್ಮೆ ಬರುವ ಹಬ್ಬವಲ್ಲ ದಿನದಿನದ ಪ್ರತಿಕ್ಷಣದ ಹೃದಯದ ಮಿಡಿತ
ಪ್ರಶಾಂತ ಕಡಲು ಬುಡ್ಡೀದೀಪ ನಮ್ಮ ಎದೆಯ ಕಂದೀಲು
....
- ದೊಡ್ಡಕಲ್ಲಹಳ್ಳಿನಾರಾಯಣಪ್ಪ
26 Jul 2017, 11:22 pm