Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾಕಾಗಿ ಹೋಗಿದೆ ಒಬ್ಬಂಟಿಯ ಸ್ವಪ್ನ ಸಂಚಾರ ,
ಜೊತೆಯಾಗಿ ಸಾಗಿ ನೆಡೆವ ತುಸು ದೂರ
ನಿನ ದನಿಯೇ ಸಪ್ತಸ್ವರ
ಕನ್ನಡಿಯ ಬಿಂಬದಲಿ ನೀನೆ ಕಾಣುತಿಹೆ
ಬೆಂಬಿಡದೆ ಬಡಪಾಯಿ ಹೃದಯವ ಕಾಡುತಿಹೆ
ಮುಂಜಾನೆ ಮಂಜಿನ ಸುಳಿಗಾಳಿ ನಿನ ಕಂಪು
ಇಳಿಸಂಜೆಯಲಿ ನಿನ್ನ ಮಧುರ ದನಿ ಕಿವಿಗಿಂಪು
ಕಾಡದಿರು ನೀ ತುಂಬ
ಮಾಡು ಕಣ್ಣತಂಪು
- pavan
02 Aug 2017, 08:42 am
( ನನ್ನವಳು ನೆನಪು )
ಕಡಲಿನೊಳಗೆ ಅಡಗಿ ಕುಳಿತಿರುವ
ಚಿಪ್ಪಿನೊಳಗಿನ ಮುತ್ತು ನನ್ನವಳು.
ಹೊಳೆಯುವಂತಃ ಹೆಣ್ಣಿವಳು.
ಬೆಳ್ಳಿ ಚುಕ್ಕಿಯಂತಃ ಕಣ್ಣಿನವಳು.
ಹಕ್ಕಿಯಂತೆ ಹಾರುವಳು // ನನ್ನವಳು //
ಕಿವಿಯಲ್ಲಿ ಓಲೆ ಕೊರಳಲ್ಲಿ ಮಾಲೆ
ಕಾಲಲ್ಲಿ ಕಾಲ್ಗೆಜ್ಜೆ ತೊಟ್ಟು . ಪುಟ್ಟ ಹೆಜ್ಜೆ ಇಟ್ಟು
ನಲಿದವಳು.
ನವಿಲಿನಂತೆ ಗರಿಬಿಚ್ಚಿ ಕುಣಿದವಳು.
ಮಿಂಚಿನಂತೆ ಮರೆಯಾಗುವಳು.
ಗುಡುಗಿನಂತೆ ಬಾನಲ್ಲಿ ಗುಡುಗಿ ಮಳೆಹನಿಯಂತೆ ಧರೆಯಲ್ಲಿ ಧುಮುಕಿ ನನ್ನ ಮನಸ್ಸಲ್ಲಿ ತಣ್ಣೀರನ್ನು ಪನ್ನೀರಾಗಿಸಿದವಳು.
ನನ್ನ ಹ್ರುದಯಾನ ಕದ್ದು. ಮನಸ್ಸನ್ನು ಗೆದ್ದು.
ಪ್ರೀತೀನ ಚೆಲ್ಲಿದವಳು ಜೀವನವನ್ನು
ನನ್ನೊಂದಿಗೆ ಹಂಚಿಕೊಂಡವಳು.//ನನ್ನವಳು
ಚಂದಿರನ ಮಗಳಿವಳು.ಈ ಸುಂದರನ ಕೈ ಇಡಿಯಲು ಧರೆಯಲ್ಲಿ ಜನಿಸಿದವಳು.
ನನ್ನ ಉಸಿರಲ್ಲಿ ಬೆರೆತವಳು.
ನನ್ನ ಮನದಲ್ಲಿ ಅರಳಿದ ಕಮಲದಂತೆ ಹೊಳೆಯುವಂತ ಹೆಣ್ಣಿವಳು..//ನನ್ನವಳು//
( ಸಂತೋಷ್ // ಜೀತು )
- ಸಂತೋಷ್//ಜೀತು
02 Aug 2017, 08:32 am
ನವಿಲಿಗೂ ನಾಚಿಕೆ ತರಿಸುವ
ಸೊಬಗಿನವಳು...
ಜಿಂಕೆಗೂ ಅಸೂಯೆ ಮೂಡಿಸುವ
ಕಣ್ಣಿನವಳು...
ಕೊಳಲನೂ ಮೀರಿಸುವಂತಹ
ಕೊರಳಿನವಳು...
ಕೋಗಿಲೆಗೂ ಮೌನ ತರಿಸುವ
ಕಂಠದವಳು...
ನನ್ನೊಳಗಿರುವ ನನಗೆ ಕಾಣದ ನನ್ನವಳು...
--- ಧರ್ಮ ರಾಜ್
- ಧರ್ಮರಾಜ್
02 Aug 2017, 07:39 am
ಕಾಣದ ಪ್ರೀತಿ ಶುರುವಾಯಿತು ನನ್ನ ಮನದಲಿ.
ಪ್ರೀತಿಸದ ನನ್ನ ಮನಸ್ಸು ಕಾಣದ ಪ್ರೀತಿಯ ಬಲೆಗೆ ಬಿತ್ತು..
ಪ್ರೀತಿ ಹೇಳುವ ಆಸೆ ನನ್ನ ಪುಟ್ಟ ಮನಸಿಗೆ.. ಆದರೆ ಹೇಳಲಾಗದೆ ಚಟಪಡಿಸುತ್ತಿದೆ ನನ್ನ ಹೃದಯದ ಗೂಡು..
ಅವಳು ನನ್ನ ಹತ್ತಿರ ಬರುವಳು, ಆದರೆ
ಏಕೆ??? ಅವಳು ನನ್ನ ತಪ್ಪಾಗಿ ತಿಳಿಯ ಬಹುದು.
ಆದರೆ ಇಂದು ಹೇಳಿದಳು ಮನೆಯಲ್ಲಿ ನನ್ನ ಮದುವೆಗೆ ಹುಡುಗ ನನ್ನು ನೀಡುತ್ತಿದ್ದಾರೆ ಅಂತಾ.. ಅದು ನಿಜವೊ ಸುಳ್ಳೊ..
ಆದರೆ ನನ್ನ ಪ್ರೀತಿ ಸುಳ್ಳಲ್ಲ....
- ಪ್ರಭಾಕರ್
02 Aug 2017, 12:21 am
ನಿನ್ನ ನೆನಪ ಚಾದರವ ಹೊದ್ದು ಮಲಗಿದ್ದೆ
ನೀನೇ ತುಂಬಿರುವಾಗ ಕಣ್ಣುಗಳಲ್ಲಿ, ಇನ್ನೆಲ್ಲಿ ನಿದ್ದೆ....
- ರಮೇಶ್
01 Aug 2017, 09:29 pm
ಬಂಧಿಯಲ್ಲದಿದ್ದರೂ
ಸುತ್ತಲೂ ಎತ್ತರದ ಗೋಡೆ ಕಟ್ಟದಿದ್ದರೂ
ಹೊರಬಾರೆನು ನೀ ಕರೆವ ಮುನ್ನ
ಮನಕೆ ಬಾಗಿಲು ಕಿಟಕಿಗಳೇ
ಇಲ್ಲದಿರುವಾಗ ಮುಚ್ಚಲು ವ್ಯರ್ಥ ಯತ್ನ ಅರಿ ನೀ ನನ್ನ
- ANITHAKRISHNAMURTHY
01 Aug 2017, 08:26 pm
ಗಜಲ್
ಭುವನೆಯಾಕೋ ಅಳುತಿರುವಳು ಸಂತೈಸುವವರಾರೂ ಇಲ್ಲ,
ದಿಕ್ಕು ಬದಲಿಸಿದ ಅವಳನು ಮರು ಸ್ವಾಗತಿಸುವವರಾರೂ ಇಲ್ಲ,
ಭುವನೆಯ ಬೆನ್ನೇರಿ ಆಂಗ್ಲನೆಂಬ ರಾಕ್ಷಸನು ಆರ್ಭಟಿಸಿರುವನು,
ಕೈ ಕಾಲನು ಹಿಡಿದು ಅವಳು ಕುಗ್ಗದೆ ನಿಲ್ಲಿಸುವವರಾರೂ ಇಲ್ಲ,
ಸುತ್ತಲೂ ಬಲವಂತವಾಗಿ ಆವರಿಸಿದೆ ನಮದಲ್ಲದಿದ್ದರೂ,
ಮೈಕೊಡವಿ ಅದಕೆ ಚೀಮಾರಿ ಹಾಕುವವರಾರೂ ಇಲ್ಲ,
ಮಲಿನವಾದ ಕನ್ನಡಿಯು ಮರು ಹೊಳೆಯಲೆತ್ನಿಸಿದೆ ಹೊಳಪ,
ಅದನು ಮನಸೊಳಗಿನ ಧೈರ್ಯವೆಂಬ ಕಣ್ಣೀರಿನಿಂದ ತೊಳೆಯುವವರಾರೂ ಇಲ್ಲ,
ಅವಳು ಮೇಲೆದ್ದು ನಿಂತು ನಡೆಯಲು ಆಗದೆ ಕೂತಿಹಳು,
ಕೈ ಹಿಡಿದು ಪ್ರಮಾಣಿಸಿ,ಪ್ರಾಮಾಣಿಕವಾಗಿ,ನಡೆಯುವವರಾರೂ ಇಲ್ಲ,
ಈ ಭುವನೆಯ ಸ್ವಂತ ಮಗನಂತೆ ನೀನು "ಓ ಸಮಂಥ",
ನಿನ್ನನು ಕರೆದು ಅವಳಿಗಾಗಿ ಕೈ,ಕೈ ಸೇರಿಸುವ ಹೃದಯವಂತರಾರೂ ಇಲ್ಲ,
- ಮಂಜುನಾಥಸರ್ಜಾಪುರ.ವಿ
01 Aug 2017, 07:34 pm
ನಾ ಹಿಡಿದೆ ಕೊಡೆಯೊಂದ
ನೆನೆಯುತ್ತಿದ್ದಾಳೆಂದು
ಮಳೆಯಲಿ ನನ್ನವಳು...
ಆದರವಳು ಆ ಕೊಡೆ ಪಡೆದು
ಹಿಂದಿರುಗಿ ನೋಡದೆ ಹೋದಳು
ನಾ ನೆನೆಯುತ ನಿಂತಿರಲು...
ಬೇಸರವೇನಿಲ್ಲ ನನಗೆ..ಕಾರಣ
ನಾ ಕೊಟ್ಟ ಆ ಕೊಡೆ
ನನ್ನ ನೆನಪಾಗಿ ಅವಳ ಬಳಿಯಿರಲು....
--- ಧರ್ಮ ರಾಜ್
- ಧರ್ಮರಾಜ್
01 Aug 2017, 06:15 pm
ಮಳೆ ಸೋತಮೇಲೆ ಹನಿಗೆಲ್ಲಿ ಬೆಲೆಯೋ
ಮಾನ ಹೋದಮೇಲೆ ಮಾತಿಗೆಲ್ಲಿ ಬೆಲೆಯೋ
ಮೋಹ ಮೋಳಗಿದ ಮೇಲೆ ನೀತಿಗೆಲ್ಲಿ ಬೆಲೆಯೋ
ಮನು ಮೋಸನಾದಮೇಲೆ ಸತ್ಯಕ್ಕೆಲ್ಲಿ ಬೆಲೆಯೋ
ನಮ್ರತೆ ಅಡಗಿದ ಮೇಲೆ ಆಚರಣೆಗೆಲ್ಲಿ ಬೆಲೆಯೋ
ನಟನೆ ಅತಿಯಾದ ಮೇಲೆ ವಿಶ್ವಾಸಕ್ಕೆಲ್ಲಿ ಬೆಲೆಯೋ ನನ್ನತನ ಅಳಸಿದಮೇಲೆ ವಾದಕ್ಕೆಲ್ಲಿ ಬೆಲೆಯೋ
ನಗು ಅರಳದಮೇಲೆ ಜೀವನಕ್ಕೆಲ್ಲಿ ಬೆಲೆಯೋ
ಕಷ್ಟಕ್ಕೆ ಪರಿಹಾರವಿಲ್ಲದ ಮೇಲೆ ಪ್ರಯತ್ನಕ್ಕೆಲ್ಲಿ
ಬೆಲೆಯೋ
ಕಾರ್ಯ ಫಲಪ್ರದವಾಗದ ಮೇಲೆ ಯೋಜನೆಗೆಲ್ಲಿ ಬೆಲೆಯೋ
ಕ್ರೌರ್ಯ ಪ್ರಭಾವ ಬೀರಿದ ಮೇಲೆ ಮಾನವೀಯತೆಗೆಲ್ಲಿ ಬೆಲೆಯೋ
ಕ್ರಾಂತಿಗೆ ಗೃಹಣ ಹಿಡಿದ ಮೇಲೆ ಹೊಸತನಕ್ಕೆಲ್ಲಿ ಬೆಲೆಯೋ
ಸಂಸಾರ ನೆಮ್ಮದಿ ಇಲ್ಲವೆಂದ ಮೇಲೆ ಒಡಗೂಡಿಬಾಳಿಗೆಲ್ಲಿ ಬೆಲೆಯೋ
ಸಾಹಿತ್ಯ ನಿಜವಿಲ್ಲದ ಮೇಲೆ ಓದಿಗೆಲ್ಲಿ ಬೆಲೆಯೋ
ಸಂಪತ್ತು ನಿಧಿಯಾದ ಮೇಲೆ ಒಡನಟಕ್ಕೆಲ್ಲಿ ಬೆಲೆಯೋ
ಶ್ರೀ ಹಿರೇಉಳ್ಳಿಗೇರಿ ಕರೆಮ್ಮಳನ್ನು ನೆನೆಯದಮೇಲೆ ಬರವಣಿಗೆಲ್ಲಿ ಬೆಲೆಯೋ
- MB
01 Aug 2017, 04:54 pm
ಹೊಡೆಯಬೇಡ ನೀ ಹರಟೆ,
ಹೊಡೆದರೆ ಬಾರಿಸಬೇಕಾದಿತು ಜಾಗಟೆ,
ಹೊಡೆದರೆ ಹೀಗೆ ನೀ ಹರಟೆ,
ಕಡೆಗೆ ದೇವಸ್ಥಾನದಲ್ಲೂ ಸಿಗದು ಬಾರಿಸಲು ಘಂಟೆ..!
ಅರ್ಥ ಮಾಡಿಕೊ ತಮ್ಮ,
ಇದ ತಿಳಿ ಹೇಳಲಾರ ಯಾವ ಬ್ರಹ್ಮ,
ನಿನ್ನ ನಂಬಿದ ಜೀವಕೆ ನೀನೇ ಆಧಾರ ತಿಳಿಯೋ ಮಂಕುತಿಮ್ಮ..
- Spb...@#
01 Aug 2017, 04:35 pm