Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರು ನೀ ಮಾಯಾವಿ

ಯಾರು ನೀನು ಮಾಯಾವಿ
ಎಲ್ಲಿ ಕದ್ದೆ ಮನಸಿನ ಮನೆಯ ಛಾವಿ
ಎದೆಯಲಿ ತುಂಬಿದೆ ಸಿಹಿ ಪ್ರೀತಿಯ ಸವಿ
ನಾನಿನ್ನ‌ ಸೇರುವ ಮುನ್ನ‌ ನಾನಾದೆ ನಿನ್ನಾಸೆ ಬಟ್ಟಲಿಂದ ಆವಿ

ಮನಸ ತುಂಬಿದ ನೋವುಗಳೇ ಪ್ರೀತಿಗೆ ಬಳುವಳಿ
ನೆನ್ನೆಗಳ ನೆನಪಲಿ ನಡೆಯುತಿದೆ ಎದೆಯಲಿ ಚಳುವಳಿ
ಅರುಕು ಮುರುಕು ಭಾವಗಳೆ‌ ಜೀವಕಿನ್ನು ಉಸಿರು
ಮನಸಿಗಿಲ್ಲ ಇನ್ನೂ ಸಹಜ ನಗುವಿನ ಅಲಂಕಾರದ ತಳಿರು

ಹೊರಟದ್ದಾಗಿದೆ ಈ ನನ್ನ ಮನಸು ಗೂಡ ತೊರೆದು
ನೋಡಲಾರದೆ‌ ಹೋದೆ ನೀನು ಮನಸಿನ ಕಣ್ಣ ತೆರೆದು
ಬದುಕಬೇಕು ಬಣ್ಣವಿರದ‌‌ ಕನಸಿಗೆ ತೇಪೆಯ ಬಣ್ಣ ಬಳಿದು
ಬಚ್ಚಿಡಬೇಕು ಆಸೆ ಕನಸುಗಳ ಎದೆಯಾಳದಲಿ ಕನ್ನ ಕೊರೆದು

- ಶ್ರೀಕಾವ್ಯ

04 Aug 2017, 05:19 pm

ಸ್ವಾತಿ

ಸ್ವಾತಿ ಮುತ್ತಿಗಾಗಿ ಬರದೆ ಪ್ರೇಮದ ಸಂದೇಶ
ಕಣ್ಣಂಚಿನಲಿ ನೋಟದ ನಗೆ ಬೀರಿ
ಬಂಧಿಸಿದಳು ಹೃದಯ ಅಂತರಾಳದಲ್ಲಿ
ಏನೋ ಹರುಷದಲ್ಲಿ ತೂಗುತ್ತಿತು ಪ್ರೀತಿಯ ಜೋಕಾಲಿ
ಈಗೇ ಸಾಗುತ್ತಿರುವಾಗ ಹರಿದು ಬಂತು ಪ್ರೀತಿಯ ಆದೇಶ
ಮನಸ್ಸು ಒಪ್ಪಲಿಲ್ಲ ಆವಳ ಉಪದೇಶ
ಅದಕ್ಕೇ ಬಿಟ್ಟು ಆರಿಸಿದಳು ಹೊರದೇಶ
ಪ್ರೀತಿ ಹಾ(ಆ)ರಿ ಹೋಯಿತು ಆ ದೇಶಕ್ಕೇ
ಆದರೂ ನೆನಪುಗಳಿಂದ ನೆನಯುತ್ತಿರುವೇ ಸ್ವಾತಿ ಮಳೆಯಲ್ಲಿ....
ಎ ಜಿ ಶರಣ್

- ಎ ಜಿ ಶರಣ್

04 Aug 2017, 04:38 pm

ನೋವು

ಕಣ್ಣಲಿ ಜಾಗವಿಲ್ಲದೆ ಜಾರುತಿದೆ ಕಂಬನಿ
ನೋವಿನ ಬಿಸಿಲಿಗೆ ಕರಗುತಿದೆ ನಗು ಎಂಬ ಇಬ್ಬನಿ.....
.....®

- ರಮೇಶ್

03 Aug 2017, 09:42 pm

ನಿದಿರೆಯ ಜೊಂಪು

ನಿದಿರೆಯ ಜೊಂಪು ಹತ್ತಿದ ಕೂಡಲೇ
ಪ್ರತ್ಯಕ್ಷ ಆಕಳಿಕೆ ಶುರುವಾಯ್ತು ತೂಕಡಿಕೆ!!
ಮುಗ್ಗರಿಸಿ ಮುಗ್ಗರಿಸಿ ಬಿದ್ದರೂ ಮತ್ತದೇ
ಚಾಳಿ ಅರಿವಿಲ್ಲದಂತೆ ದಾಳಿ ನಡೆಸಿದೆ!!

ಯಾರೋ ನೆತ್ತಿಗೆ ಲಗಾಮು ಕಟ್ಟಿ ಎಳೆದಂತೆ
ಎಷ್ಟೇ ತಡೆದರೂ ಹಿಡಿತಕೆ ಸಿಗದಂತೆ!!
ಸಾಕಾಯ್ತು ಈ ತೂರಾಟದ ಹೋರಾಟ
ಅತಿಯಾಯ್ತು ಈ ನಿದಿರೆಯ ಪರದಾಟ!!

ಎಲ್ಲ ಮರೆತು ಹಾಯಾಗಿ ಮಲಗಿ ಬಿಡಲೇ
ಒಂದು ಕ್ಷಣ ಇಲ್ಲಿ ಯಾರಿಗೂ ತಿಳಿಯದಂತೆ!!
ಅಯ್ಯೋ ಯಾರಾದರೂ ಕಂಡರೆ ನನ್ನನ್ನು
ಎಬ್ಬಿಸಿ ತರುವರೇ ನನ್ನ ನಿದಿರೆಗೆ ಭಂಗ!!

ಎಷ್ಟೇ ಯೋಚಿಸಿದರೂ ಯೋಚನೆಗಳೆಲ್ಲ
ಕನಸೇ ಹೊರತು ಆಲೋಚನೆಯಲ್ಲ!!
ಎಷ್ಟೇ ಯತ್ನಿಸಿದರೂ ನಿದಿರೆಯ ಜೊಂಪು
ತೂಕಡಿಕೆ ನನ್ನಿಂದ ತಲೆಯಲು ಆಗುತ್ತಿಲ್ಲ!!

- ಪಿ.ಜಿ.ಜ್ಯೋತಿ

03 Aug 2017, 04:03 pm

ಕಣ್ಣೀರು

ಕಣ್ಣೀರಿಗೂ ಮರುಕ ಬಂದಿತು
ನನ್ನವಳು ನನಗೆ ಕೊಟ್ಟ
ನೋವ ಕಂಡು...

ಅದಕ್ಕೆ ನಾ ಕರೆಯದಿದ್ದರೂ
ಅದು ತಾನಾಗೆ ಉಕ್ಕಿ ಬಂದಿತು
ಸಂತೈಸುವೆ ನಿನ್ನ ಎಂದು....

‌ --- ಧರ್ಮ ರಾಜ್

- ಧರ್ಮರಾಜ್

03 Aug 2017, 03:12 pm

ನಿನ್ನ ಪ್ರೀತಿ

ಪ್ರಿಯಾ ನಿನ್ನ ಪ್ರೀತಿ
ನನ್ನ ಪಾಲಿಗಿರಲಿ
ಆ ಪ್ರೀತಿಗಾಗಿ ನಾನು
ಜನುಮ ಜನುಮ ಕಾಯುವೆ‌ನು!!

ಎದೆಯಾಳದಲ್ಲಿ ಅಡಗಿರುವ
ನಿನ್ನ ಪ್ರೀತಿಯನ್ನ
ನಾ ತಾಳೆನು ಚೆಲುವ
ನಾ ತಾಳೆನು!!

ಮನದಾಳದಲ್ಲಿ ನಿನ್ನ
ರೂಪವನ್ನ ಇಟ್ಟು ನಾನು
ಪೂಜಿಸುವೆನು ಗೆಳೆಯ
ಪೂಜಿಸುವೆನು!!

ಸ್ನೇಹ ಎಂಬ ಮಾತಿಲ್ಲಿ
ಪ್ರೀತಿಯಾಯ್ತು‌ ನಮ್ಮಲ್ಲಿ
ನಿನ್ನ ಜೊತೆಗೆ ನಾನೇ‌ ಇರುವೆ
ಈ ಜೀವ ಜನುಮದಲಿ!!

- ಪಿ.ಜಿ.ಜ್ಯೋತಿ

03 Aug 2017, 02:01 pm

ಉಬ್ಬಿದ ಉದರದಲಿ

ಉಬ್ಬಿದ ಉದರದಲಿ
ಇರುವುದು ಕಂದಮ್ಮ!!
ಹಬ್ಬದ ಸಡಗರವು
ತಾಯ ಮಡಿಲಿನಲಿ!!

ಹೆಸರೇನು ನಾ ಇಡಲಿ
ಹೇಗೆ ನಾ ಮುದ್ದಿಸಲಿ!!
ಮಗನಾಗೋ ಮಗಳಾಗೋ
ಬಾ ನೀನು ಕಂದಮ್ಮ!!

ಹೆದರದೇ ನಾ ಹೆರುವೆ
ಅಳಬೇಡ ಕಂದಮ್ಮ!!
ನೋವನು ನಾ ನುಂಗಿ
ಜನುಮ ನೀಡುವೆ ನಿನಗೆ!!

ಈ ನನ್ನ ಅಂಗೈಯು
ನಿನ್ನ ಬರುವ ಕಾದಿಹುದು!!
ಮಮತೆಯು ಕಡಲಿನಂತೆ
ಹೃದಯದಲಿ ಉಕ್ಕಿಹುದು!!

ಮುದ್ದಿಸಲು ನಾ ನಿನ್ನ
ಕಾತುರದಿ ಕಾದಿರುವೆ!!
ನವ ಮಾಸ ಕಳೆದೊಡನೆ
ನವ ಭಾವ ನೀ ತುಂಬು!!

- ಪಿ.ಜಿ.ಜ್ಯೋತಿ

03 Aug 2017, 01:18 pm

ಸತ್ಯದ ದಾರಿಯಲ್ಲಿ

ಹಿಂತಿರುಗಿ ನೋಡದೇ
ನೀ ನಡೆದುಬಿಡು ಮನುಜ!!
ನಿನಗೆ ಸರಿ ಎನಿಸಿದ
ಸತ್ಯದ ದಾರಿಯಲ್ಲಿ!!

ಕಡುಗತ್ತಲ‌ ಹಾದಿ ಅದು
ಹೆದರದೇ ಮುನ್ನುಗ್ಗು!!
ಕಲ್ಲು ಮುಳ್ಳಿರಬಹುದು
ಸ್ವಲ್ಪ ಸಹಿಸಿಕೋ!!

ಏಕಾಂತ ಕಾಡಿದರೂ
ಎದೆಗುಂದ ಬೇಡ ನೀ!!
ಬೆನ್ನ ಹಿಂದೆ ಕಾವಲಾಗಿ
ನಿಂತಿರುವುದು ಒಂದೇ ಸತ್ಯ!!

- ಪಿ.ಜಿ.ಜ್ಯೋತಿ

03 Aug 2017, 10:40 am

ಕಸಾಯಿ ಖಾನೆ

ಕಸಾಯಿ ಖಾನೆಗೆ ಸಾಗಿಸುತ್ತಿರುವ
ಗೋವೊಂದು ತಪ್ಪಿಸಿಕೊಂಡು
ನನ್ನ ಬಳಿ ಓಡಿ ಬಂದು
ರಕ್ಷಣೆಯನ್ನು ಕೋರಿ ನಿಂತಿತ್ತು!!

ಅದರ ಹಣೆಯನ್ನೊಮ್ಮೆ
ನೆವರಿಸಲು ನಾನು
ಅದರ ಕಣ್ಣಿಂದ ನೀರು
ಜಿನುಗಿತ್ತು ಹರಿದಿತ್ತು!!

ಛೇ ಮಾತೃ ಸ್ವರೂಪಿಯಾದ
ಗೋ ಮಾತೆಗೆ ಈ ಗತಿಯೇ
ಎಂದು ಮನದಲ್ಲಿ ನೊಂದು
ಅದನೊಮ್ಮೆ ಅಪ್ಪಿದೆ!!

ನನ್ನ ಬಿಸಿ ಉಸಿರ ಸಮಾಧಾನವೋ
ಅದರ ಆತ್ಮ ವಿಶ್ವಾಸವೋ
ಅದನ್ನು ಎಳೆದುಕೊಂಡು ಹೋಗಲು
ಬಂದವನನ್ನು ತಿವಿದು ಉರುಳಿಸಿತು!!

ಮನದಲ್ಲಿ ಹೊಸ ಹುರುಪೊಂದು
ಮೂಡಿ ಆ ಗೋವಿನ ಜೊತೆಯಲ್ಲಿ
ಮನೆಗೆ ಹಿಂದಿರುಗುವಾಗ
ಅದೆಸ್ಟೊ ಆಲೋಚನೆಗಳು!!

ಇಂತಹ ಸಾವಿರಾರು ಗೋಗಳನ್ನು
ರಕ್ಷಿಸುವ ಹಾಗೂ ಕಸಾಯಿ ಖಾನೆಯನ್ನು
ಮುಚ್ಚಿಸುವ ಶಕ್ತಿ ನೀಡೆಂದು
ಗೋ ಮಾತೆಯಲ್ಲಿ ಬೇಡಿದೆ!!

- ಪಿ.ಜಿ.ಜ್ಯೋತಿ

03 Aug 2017, 10:28 am

ನೀನಿಲ್ಲದ ಬದುಕು

ನೀನಿಲ್ಲದ ಈ ಬದುಕಿನಲ್ಲಿ
ಸಂತಸವ ನಾ ಹೇಗೆ ಹುಡುಕಲಿ!!
ನಿನ್ನ ನೆನಪಿನ ಸಂದೇಶವು
ನನ್ನ‌ ಹೃದಯದಲ್ಲಿ ಪ್ರತಿ ಕ್ಷಣವು!!

ನಿನ್ನ ನೆನ‌ಪಿನ ಸೋಗಿನಿಂದ
ತಪ್ಪಿಸಿಕೊಳ್ಳುವ ದಾರಿ ಹುಡುಕುತ್ತಿರುವೆ!!
ಆದರೂ ಈ ರಾಡಿಯಾದ ಮನಸಿನ
ಕೊಳೆಯನ್ನು ತೊಳೆಯಲಾಗುತ್ತಿಲ್ಲ!!

ನಿನ್ನ ನೆನಪನ್ನು ಮರೆಸು ಎಂದು
ಸಾಗರದ ಅಲೆಗಳನ್ನು ಕೇಳ ಬಯಸಿದೆ!!
ನನ್ನ ದುರಾದೃಷ್ಟವೇ ಸಾಗರದ ನೀರೆಲ್ಲ
ಬತ್ತಿ ಮರುಭೂಮಿ ಶೃಷ್ಠಿ ಆಗಿದೆ!!

ಮಳೆಯಲ್ಲಿ ನಿಂತು ನಾನು ಒಮ್ಮೆ
ಅತ್ತುಬಿಡಲೇ ಎಂದು ಅಂದುಕೊಂಡೆನು!!
ಆ ಮೋಡಕೂ ಕನಿಕರ ಬಾರದೇ
ಗಾಳಿಯ ಸೇರಿ ಎಲ್ಲೋ ದೂರ ಓಡಿದೆ!!

- ಪಿ.ಜಿ.ಜ್ಯೋತಿ

03 Aug 2017, 09:42 am