Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಪ್ರಸ್ತಾಪ

*ಪ್ರೀತಿಯ ಪ್ರಸ್ತಾಪ*


ವರ್ಷದ ಹಿಂದೆ
ನೀ ನನ್ನ ಬಾಳಲ್ಲಿ ಬಂದೆ
ಅಂದು ನಿನ್ನ ನೋಡಿ ನಾ ನಕ್ಕೆ
ನನ್ನ ನೋಡಿ ನೀ ನಕ್ಕೆ
ಅಂದೇ ನಾವಿಬ್ಬರು ಸ್ನೇಹಿತರಾದೆವು
ಕಷ್ಟ ಸುಖಗಳಲ್ಲಿ ಒಂದಾದೆವು

ನಿನ್ನ ಮುಗ್ಧ ಮನಸ್ಸು, ಆ ಕೆಂದುಟಿಯ ನಗು
ಏನೋ ಹೇಳ ಹೊರಟಿರುವ ಮೀನಿನಂತಹಾ ಕಣ್ಣುಗಳು
ಇವೆಲ್ಲವುಗಳಿಂದ ನಾ ನಿನ್ನ ಬಳಿಗೆ ಆಕರ್ಷಿತನಾದೆ
ನಿನಗೇನೋ ಹೇಳಬೇಕೆಂದು ನನ್ನ ಮನ ಹಂಬಲಿಸುತಿದೆ

ನಮ್ಮ ಸ್ನೇಹವಿಂದು ಪ್ರೀತಿಯೆಡೆಗೆ ಬಾಗುತಿರೆ
ಇದ ನಿನಗೆ ಹೇಳುವ ಮಾರ್ಗ ನಾ ಹುಡುಕುತಿರೆ
ಅದಕಾಗಿ ನಾ ಈ ಕವನ ಬರೆಯುತಿರೆ
ಇದ ನಿನಗೆ ತಲುಪಿಸಲಾಗದೆ ಮನ ಮರುಗುತಿರೆ

ಪ್ರಿಯೇ,
ನನ್ನ ಮನದ ಹಂಬಲ ಹೇಳಲಿ ಹೇಗೆ?
ನನ್ನ ಹೃದಯದ ಮಾತು ನಿನಗೆ ಅರ್ಥವಾಗದೇ?

-ಅರೆಯೂರು ಚಿ.ಸುರೇಶ್

- ಅರೆಯೂರು ಚಿ. ಸುರೇಶ್

08 Aug 2017, 07:47 am

ಗಜಲ್

ಮಂಕು ಕವಿದ ನನ್ನ ಭಾವಗಳಿಗೆ
ಗೆಳತಿ ನೀನೇ ವಾಸಿ ಮಾಡೋ ಗುಳಿಗೆ

ನನ್ನೆಲ್ಲಾ ನೋವುಗಳ ಆಳಕಿಳಿದು
ಅವನ್ನೆಲ್ಲಾ ನಿವಾರಿಸಲು ಬಂದೆ ಬಳಿಗೆ

ಸತ್ತ ಭರವಸೆಗಳ ಮತ್ತೆ ಬದುಕಿಸಿ
ಹಣತೆ ಹಚ್ಚಿದೆ ನೀ ಬಾಳ ಕತ್ತಲೆಯೊಳಗೆ

ಎಲ್ಲ ಅವಮಾನಗಳ ಸಂತೈಸಿ
ಮತ್ತೆ ಪುಟಿದೇಳುವಂತೆ ಮಾಡಿದೆ ನನ್ನೊಳಗೆ

ಹಾರತುರಾಯಿಗಳಿಂದು ಬೀಳುತಿವೆ
ಅಂದು ಸೋತು ಸೊರಗಿದ್ದ ಕೊರಳಿಗೆ

ಅಮು ಎಂಬ ಕೂಸನ್ನು ಹುಟ್ಟುಹಾಕಿದೆ
ನಿನ್ನ ಛಲದ ಬಲವಿತ್ತು ನನಗೆ

0559ಎಎಂ08082017

ಅಮುಭಾವಜೀವಿ

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

08 Aug 2017, 06:30 am

ಕಷ್ಟಗಳಲ್ಲಿ ಸುಖ‌ವಂದಿರುವುದು

ಕಷ್ಟಗಳಲ್ಲಿ ಸುಖ‌ವಂದಿರುವುದು
ತಿಳಿದರೇ ನೀ ಜಗ್ಗುವುದಿಲ್ಲ
ಸುಖದಿಂದೆ ಹಲವು ಕಷ್ಟಗಳ ಸರಪಳಿ ಇರುವುದು, ಅರಿತರೇ ಜಂಬದಿಂದಿರಲು ಸಾದ್ಯವಿಲ್ಲ
ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿದರೆ ವ್ಯತ್ಯಾಸ ಪಡಿಸಲು ಅವಕಾಶಗಳಿಲ್ಲ.

- harsha

07 Aug 2017, 08:01 pm

ಸುರಿಯೋ ಮಳೆ....

ಸುರಿಯೋ ಮಳೆ
ನಿನಗಾಗಿ ಕಾದಿದೆ ಇಳೆ
ನೀನಿಲ್ಲದೆ ಇಳೆಯಲಿಲ್ಲ ಕಳೆ
ನೀ ಬಂದು ಕಳೆದಾಕು ನೋವಿನ ಕೊಳೆ

ನೀ‌ ಬಂದು ತೊಳೆಯ ಬೇಕು ರೈತನ‌ ಕಣ್ಣೀರು
ನೀನಿದ್ದರೇನೆ ಅವರ ಬದುಕು ಪನ್ನೀರು
ನೀರಿಲ್ಲದಿದ್ದರೆ ಎಲ್ಲಿಂದ ಬರಬೇಕು ಹಸಿರಾದ ಬೆಳೆ
ಬೆಳೆ‌‌ ಇಲ್ಲವೆಂದರೆ ‌ಅವರಿಗೆಲ್ಲಿದೆ ಈ ಭೂಮಿಯಲಿ ಬೆಲೆ

ನೀನಿಲ್ಲದೆ ದಾನ ಮಾಡಿರುವರು ಜೀವವ ಯಮನಿಗೆ
ಕಿಂಚಿತ್ತಾದರು ಬೆಲೆಕೊಡರು ಯಾರು ಅವರ ಕಣ್ಣೀರಿಗೆ
ಜೀವ ಉಳಿಸುವ ನೀನೆ ದೂರ ಸರಿದರೆ ಮತ್ತ್ಯಾರು ಅವರಿಗೆ
ಜೀವದಾನ ನೀಡು ನೀನು ಸುರಿದು ಕೆರೆ ಕಟ್ಟೆ ತುಂಬುವರೆಗೆ

ನೀನು ಆಗದಿರು ಈ ಜನರಂತೆ ನಿಷ್ಕರುಣಿ‌
ನೀನಾಗು ಈ ಜಗಕ್ಕೆಲ್ಲ ಜೀವಧಾರಿಣಿ
ಕಾದಿರುವಳು ತನ್ನೊಡಲಲಿ ಹಸಿರ ನೋಡಲು ಧರಣಿ
ನೀನು ಇನ್ನೂ ಕಾರಣವಾಗಬೇಡ ಆಗಲು ಆತ್ಮಹತ್ಯೆ ‌ಸರಣಿ

- ಶ್ರೀಕಾವ್ಯ

07 Aug 2017, 06:30 pm

ರಕ್ಷಾ ಕವಚ

ನೂರು ನೂರಾರು ನೂಲನು ಜೊತೆಗಿರಿಸಿ
ಸಾಲು ಸಾಲುಗಳ ಸರಪಳಿಯ ಜೋಡಿಸಿ
ಕರುಣೆಯ ಕರಗಳ ಜೊತೆ ಮೀಲಾಯಿಸಿ

ಮನಸ್ಸಿನ ಆಹ್ಲಾ ದಕದ ತ್ರಿಗುಣ
ಸತ್ವ,ರಜ,ತಮ ಇದ್ದೆಲವ ಬದಿಗರಿಸಿ ಕರಗಳಿಗೆ ಕಟ್ಟು ನೀ ರಕ್ಷಣೆಯ ರಾಖಿಯ ಪಾಲನೆಯ ರಾಖಿಯ..

ಬದುಕಿನ ಭಾವನೆಯ ವಚನವ
ನಿನ ಕರದೊಳಿರಿಸಿ ದಡವ ಸೇರಿಸೋ
ಜೀವದ ಗೆಳತಿ .. ನನ್ನೋಡಹುಟ್ಟಿದಾಕಿ....

✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

07 Aug 2017, 09:48 am

ಪಿಸುಮಾತು...

ನೇಸರ ಸರಿದ‌‌ ಇಳಿ‌ ಸಂಜೆಯಲಿ
ತನುವ ಸೋಕುವ ತಂಪು ಗಾಳಿಯಲಿ
ಗೂಡು ಸೇರುವ ಹಕ್ಕಿಗಳ ಇಂಚರದಲಿ
ಪ್ರಕೃತಿ ಅಪ್ಪಿರಲು ಮೌನವನು ಪ್ರಶಾಂತತೆಯಲಿ‌

ಕೈ ಬೆರಳುಗಳು ತಾವಿಬ್ಬರು ಜೊತೆಗೆಂದು ಬೆಸೆದಿರಲು
ಇಬ್ಬರ ಕಣ್ಣುಗಳು‌ ಕಣ್ಣ ಮುಚ್ಚಾಲೆಯಾಡುತ ಸೇರಿರಲು
ನೋವುನಲಿವಲಿ ನಿನ್ನೊಟ್ಟಿಗೆಂದೂ‌ ಹೆಜ್ಜೆ ಜೊತೆಯಾಗಿರಲು
ತೋಳ ಬಳಸಿ, ಶಿರವ ತಗ್ಗಿಸಿ‌ ಎದೆಗೆ ತನುವು‌ ಒರಗಿರಲು

ಹೇಳುವೆಯೇನು ಮೆಲುದನಿಯಲೊಂದು‌ ಪಿಸುಮಾತು‌
ಈ ಜಗದಲಿ‌ ಇನ್ನೇನೂ ಬೇಡ ನನಗೆ ನಿನ್ನ‌ ಹೊರತು
ಬದುಕಲು ಆಗದು ಎಂದೂ ನಾನು ನಿನ್ನನು ಮರೆತು
ಇರಬೇಕು ನಿನಗಾಗಿ ನಾನು, ನನಗಾಗಿ ನೀನೆಂದು ಬೆರೆತು

- ಶ್ರೀಕಾವ್ಯ

06 Aug 2017, 03:59 pm

ಸ್ನೇಹವೊಂದೇ ಆಸ್ತಿ

ಸ್ನೇಹ ಬೆಸೆದ ಬಂಧ ನೀವು
ಬದುಕಿಗೆ ಜೀವ ತುಂಬಿದ ನೀವು
ನನ್ನೆದೆಯ ಸಿಂಹಾಸನದ ಮುತ್ತುಗಳು
ಈ ಹೃದಯ ಸಂಪಾದಿಸಿದ ಸಂಪತ್ತುಗಳು

ಪ್ರತಿಫಲದ ಅಪೇಕ್ಷೆಯಿಲ್ಲದೆ
ಪ್ರತಿ ಸ್ಪಂದನೆಯ ರೂಪವೇ ನೀವು
ಯಾವ ಪ್ರತಿರೋಧವೂ ಬರದಂತೆ
ಬದುಕ ಮುನ್ನಡೆಸಿ ದವರು ನೀವು

ನೋವಿರಲಿ ನಲಿವಿರಲಿ ಮೊದಲು
ಕೈ ಜೋಡಿಸುವವರು ನೀವು
ಸೋಲಿರಲಿ ಗೆಲುವಿರಲಿ ಎಲ್ಲದರಲೂ
ಸವಿನಯದ ಸಹಭಾಗಿಗಳು ನೀವು

ನನ್ನನ್ನು ಆ ಶಿಖರಕ್ಕೇರಿಸಲು
ಮೆಟ್ಟಿಲಾದವರು ನೀವು
ನನ್ನ ಭಾವಮಗುವು ನಗಲು
ತೊಟ್ಟಿಲಾದವರು ನೀವು

ಸ್ನೇಹವೊಂದೇ ನಮ್ಮ ಆಸ್ತಿ
ಸ್ನೇಹವೊಂದುಳಿದುದೆಲ್ಲಾ ನಾಸ್ತಿ
ಸ್ನೇಹವೇ ಬದುಕಿನ ಆಧಾರ
ಸ್ನೇಹವೇ ಸದ್ಭಾವದ ಸಂಸ್ಕಾರ

0724ಎಎಂ06082017

*ಅಮುಭಾವಜೀವಿ*

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

06 Aug 2017, 09:41 am

ಬರಡು ಭೂಮಿ

ನಾ ನಡೆವ ಹಾದಿಯಲ್ಲಿ
ಸ್ವಾಗತಿಸಲು ಹಚ್ಚಹಸುರಿಲ್ಲ
ಮಳೆಹನಿಗಳಲಿ ಮಿಂದೆದ್ದ
ಮಣ್ಣಿನ ಕಂಪಿಲ್ಲ
ಯಾರ ಶಾಪವೊ ತಿಳಿತಿಲ್ಲ
ಹುಡುಕುತ ಹೊರಟೆ ಮೂಲ
ಹರಡಿದೆ ನಮ್ಮದೆ ಜಾಲ!

ಅಪೌಷ್ಟಿಕತೆಗೆ ಆಸರೆಯಾಗಿ
ಪತನಗೊಂಡ ಪರ್ಣಗಳ
ಮೂಕವೀಕ್ಷಕನಂತೆ ನಿಂತಿವೆ
ತರು-ಲತೆಗಳು ಬೆತ್ತಲೆಯಾಗಿ
ಸಿಂಗರಿಸು ಬಾ ಮಳೆರಾಯ
ಆಗದಿರು ಇಳೆಗೆ ಜವರಾಯ!


ಶಾರಧ

- ಶಕುಂತಲಾ

06 Aug 2017, 07:58 am

ಬೇಡ ಈ ಬವಣೆ

ಬಡತನದ ಬೇಗೆಯೊಳಗೂ
ಈ ದೇಹಕೆ ಸೌಂದರ್ಯದ ಕಾಣಿಕೆ
ಚಿಂದಿ ಹುಟ್ಟ ಈ ಮೈಯಿಗೆ
ಬೀದಿ ಕಾಮಣ್ಣರ ದಬ್ಬಾಳಿಕೆ

ಹಸಿದ ಹೊಟ್ಟೆಗೆ ಕೂಳಿಲ್ಲ
ಕಾಮದ ಹಸಿವಿದ್ದವಗದು ಕಾಣಲ್ಲ
ಕಿತ್ತು ತಿನ್ನುವ ಬಡತನದೊಳಗೆ
ಕಾಮರಕ್ಕಸರ ಆಕ್ರಮಣ ತಪ್ಪಿಲ್ಲ

ಮೈಮಾರಿದ ಬಿಡಿಕಾಸಿನೊಳಗೆ
ನನ್ನವರ ಮಾನ ಮುಚ್ಚಬೇಕು
ಕಾಮಾಂಧರ ಆ ಶೋಷಣೆಗೆ
ಅಸಹಾಯಕ ಕಿಚ್ಚನು ಬಚ್ಚಿಡಬೇಕು

ವೇಶ್ಯೆಯ ಮುಟ್ಟುವವರೆಲ್ಲ
ಸಮಾಜದಿ ಘನತೆವೆತ್ತವರೇ ಎಲ್ಲ
ಕಾಮದ ಬೆವರಿನಲ್ಲಿ ಮಿಂದರೂ
ಅದರ ಘಮಲನೂ ಮರೆಸಿದೆ ಅತ್ತರು

ಮೈಕೊಟ್ಟ ತಪ್ಪಿಗೆ
ನನ್ನ ವೃತ್ತಿಗಿಲ್ಲ ಒಪ್ಪಿಗೆ
ಅವರೆಸೆವ ಭಿಕ್ಷೆಯ ಆಯ್ದು
ಬದುಕ ಕಟ್ಟಿಕೊಳ್ಳಬೇಕಿಂದು

ಬೇಡ ಇನ್ನಾರಿಗೂ ಈ ಬವಣೆ
ನಾಗರಿಕ ಸಮಾಜ ನೀಡದು ರಕ್ಷಣೆ
ಬಡತನದ ಹೆಣ್ಣೊಂದು ಹುಣ್ಣು
ಎಲ್ಲರನ್ನೂ ಸಹಿಸುವುದೊಂದೆ ಮಣ್ಣು

0654ಪಿಎಂ04082017

*ಅಮುಭಾವಜೀವಿ*

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

06 Aug 2017, 07:04 am

ಸಂಪತ್ತಿನ ಪ್ರದರ್ಶನ (ಲಕ್ಷ್ಮಿಹಬ್ಬದ ಆಚರಣೆ)

ಆರುಮೊಳ ಸೀರೆಯುಟ್ಟು
ಮೂರುಮೊಳ ಕೂರುವ
ಮುತ್ತೈದೆಯು ನೀನು!

ಗಗನಯಾತ್ರೆಯು ನಿನ್ನದು
ಹಿಡಿದಿಡುವ ಪ್ರಯತ್ನವು ನಮ್ಮದು
ನಿಲ್ಲುವೆಯ ಸ್ಥಿರವಾಗಿ ಎಂದೆಂದು!

ತರ-ತರಹದ ಫಲಪುಷ್ಪಗಳು
ವಿಧ-ವಿಧವಾದ ತಿನಿಸುಗಳು
ಅರ್ಥವಿಲ್ಲದ ಹಲವು ಆಚರಣೆಗಳು!

ನಿನದೊಂದು ಮೂರುತಿ
ಕೂರಿಸುವರು ಮಾಡುತ ಆರತಿ
ಕ್ಷಣಿಕವಾದ ಅನಿಯಮಿತ ಭಕುತಿ!

ಸಿರಿ-ಸಂಪತ್ತಿನ ಪ್ರದರ್ಶನ
ಮುತ್ತೈದೆಯರಿಗೆ ಆಹ್ವಾನ
ನೀಡುವರು ಬಾಗೀನ!

ಜಗವ ಕುಣಿಸುವ
ಜಗನ್ಮಾತೆಯು ನೀನು
ನಿನಗೆ ನಾವು ಶರಣು!



ಶಾರಧ

- ಶಕುಂತಲಾ

05 Aug 2017, 04:49 pm