Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಈ ಹಾಡು ನನ್ನದು ಈ ನಾಡು ನನ್ನದು
ಈ ಭಾಷೆ ನನ್ನದು ಎಂಬ ಹಿರಿಮೆ ನನ್ನದು!!
ಈ ಹಾವ ನನ್ನದು ಈ ಭಾವ ನನ್ನದು
ಕರುಣೆಗೆ ಹೆಸರಾಗಿಹ ಕರುನಾಡು ನನ್ನದು!!
ಈ ವೇಷ ನನ್ನದು ಈ ಲಾಸ್ಯ ನನ್ನದು
ಈ ರೀತಿ ನೀತಿ ವಿಧಿ ವಿಧಾನ ಎಲ್ಲ ನನ್ನದು!!
ಈ ಗಾಳಿ ನನ್ನದು ಈ ನೀರು ನನ್ನದು
ಈ ಮಣ್ಣು ನನ್ನದು ಎಂಬ ಗರಿಮೆ ನನ್ನದು!!
ಈ ತನುವು ನನ್ನದು ಈ ಮನವು ನನ್ನದು
ನರ ನಾಡಿಯಲ್ಲಿ ಹರಿಯುತ್ತಿರುವ ರಕ್ತ ನನ್ನದು!!
ಈ ವಿಚಾರ ನನ್ನದು ಈ ಆಚಾರ ನನ್ನದು
ಇಲ್ಲಿ ಹುಟ್ಟಿ ಇಲ್ಲಿ ಬೆಳೆದ ಬದುಕು ನನ್ನದು!!
ಈ ಬರಹ ನನ್ನದು ಈ ಕವಿತೆ ನನ್ನದು
ಈ ಸಾಲಿನಲ್ಲಿ ಬೆರೆತಿರುವ ಅಭಿಮಾನ ನನ್ನದು!!
ಈ ಹಾಡು ನನ್ನದು ಈ ನಾಡು ನನ್ನದು
ಈ ಭಾಷೆ ನನ್ನದು ಎಂಬ ಹಿರಿಮೆ ನನ್ನದು!!
- ಪಿ.ಜಿ.ಜ್ಯೋತಿ
09 Aug 2017, 09:27 am
ಮರಳಿ ಮರಳಿ ಏಕಾಂತ
ನನ್ನನೇ ಹುಡುಕಿ ಬರುತಿದೆ ಏಕೆ!!
ಕೊರಗಿ ಕೊರಗಿ ನಾನಿಲ್ಲಿ
ಕೂರಲು ಅದಕೆ ಸಂತಸವೇ!!
ನಿದಿರೆಯಲ್ಲೂ ಕನಸಿನ ಬಾದೆ
ಒಂಟಿಯಾಗೇ ಕಾಡಿದೆ ನನ್ನ!!
ಹಗಲಿನಲ್ಲೂ ಏಕಾಂತದ ಸಲಿಗೆ
ಅಂತರವಿಲ್ಲದೇ ಅಂಟಿದೆ ನನ್ನ!!
ಮರಳುಗಾಡಿನಲ್ಲಿ ಕಾಲು ಮುರಿದು
ಕುಳಿತವನ ಚಿಂತೆ ಅರಿತವರಾರು!!
ಏಕಾಂತದಲ್ಲಿ ನೊಂದವನಿಗೆ
ಸಾಂತ್ವನ ನೀಡುವವರಾರು!!
ಬೆಂಕಿಗೆ ಆಹುತಿಯಾಗಿ ಕರಗುತ್ತಿರುವ
ಮೇಣದಂತಹ ಬದುಕು ಇದು!!
ಚೂರು ಬೆಳಕ ಕಂಡ ಸಂತಸದಲ್ಲಿ
ಬದುಕನ್ನು ಬಲಿ ಪಡೆಯುತ್ತಿದೆ!!
ಸರಾಗವಾಗಿ ಹರಿಯುತ್ತಿರುವ
ಕಣ್ಣೀರಿಗೇನು ಕೊರತೆ ಕಣ್ಣಲ್ಲಿ!!
ಒಂಟಿಯಾದ ಮನಸಿನ ರೋದನೆ
ಮುಗಿಲಿಗೂ ಮಿಗಿಲಾದ ವೇದನೆ!!
- ಪಿ.ಜಿ.ಜ್ಯೋತಿ
09 Aug 2017, 09:16 am
ನನ್ನ ತವರೂರು ಬಲು ದೂರ ಗೆಳತಿ
ಅಲ್ಲಿ ನನ್ನ ತಾಯಿ ಮನೆ ಆಳೋ ಒಡತಿ!!
ಕಣ್ಣ ಮುಂದಿರುವ ಆ ತಾಯಿ ಮಮತೆ
ನನ್ನ ಕರೆದಿಹುದು ಬಾ ಕಂದ ಎನುತ!!
ಹೆತ್ತ ತಾಯಿಗೆ ನಾ ಮಡಿಲ ಮಗುವಾಗಿದ್ದೆ
ನಕ್ಕು ನಗಿಸುತ್ತ ನಾ ದಿನ ನಲಿಯುತ್ತಿದ್ದೆ!!
ಚಪ್ಪರಕ್ಕೆ ಉಯ್ಯಾಲೆ ಕಟ್ಟಿ ಜೀಗುತ್ತಿದ್ದಳು
ತಾಯಿ ನಗು ನಗುತ ನನ್ನನ್ನು ಅಪ್ಪಿ!!
ಅಂಗಳದ ರಂಗೋಲಿಯಲ್ಲಿ ಅಂದು
ಬಾನ ಚಂದಿರನ ಕರೆತರಲು ನನ್ನ ವಿಲಾಪ!!
ಬಾನಿಗೆ ಮುಖವೊಡ್ಡಿದ ಕನ್ನಡಿಯ ಒಡನೆ
ಬಾನ ಚಂದಿರನ ಆಗಮನದ ಸಂಭ್ರಮ!!
ಇರುಳಿನಲ್ಲಿ ಭಯಗೊಂಡು ಅತ್ತಾಗ
ತಾಯಿ ಎದೆಗೆ ಒರಗಿ ಪಡೆದಂತಹ ಸಾಂತ್ವನ!!
ತಾಯಿ ಮಡಿಲಲ್ಲಿ ಮಲಗಿರಲು ನಾನು
ಅವಳ ಜೋಗುಳದ ಪರಿ ಹೇಳತೀರದು!!
ಅವಳನು ನೋಡಲು ಕಾದ ನನ್ನ ಕಂಗಳು
ನೆನೆದಾಗ ಕಂಬನಿಯ ತಾ ಮಿಡಿದಿವೆ!!
ದೂರ ಇರುವ ನನ್ನ ತವರೂರಿಗೆ ನಾನು
ಇಂದು ಹೊರಟಿರುವೆ ಸಂಭ್ರಮದಿ ಗೆಳತಿ!!
- ಪಿ.ಜಿ.ಜ್ಯೋತಿ
09 Aug 2017, 08:52 am
ಇನಿಯ ನಿನ್ನ ಪ್ರೀತಿಯ
ಸಿರಿತನವನು ಕಂಡು
ಕಡಲಿನ ಆಳದ ಮುತ್ತಿಗೂ
ಬಂದಿತೇ ಬಡತನ!!
ಒಲ್ಲೆನೆಂದರೂ ಮನಸು
ಬಲವಂತವಾಗಿ ಸೆಳೆದು
ಬಯಸಿತೇ ನಿನ್ನ ಅಂತರಂಗದ
ಮುಗ್ಧ ಪ್ರೀತಿಯನ್ನು!!
ಕತ್ತಲ ಕಾನನದ ತುಂಬೆಲ್ಲ
ಹಣತೆಯನ್ನು ಬೆಳಗಿಸಿ
ಸಂಭ್ರಮಿಸ ಬಯಸಿತೇ
ನನ್ನ ಈ ಹುಚ್ಚು ಮನಸು!!
ಎತ್ತಲೋ ಓಡಿದ ಭಾವವನ್ನು
ಹಿಂದಿರುಗಿ ಕರೆಯುವ
ಮನಸಿಲ್ಲದೇ ಹೃದಯದಲ್ಲಿ
ಹೊಸದಾಗಿ ಹುಟ್ಟಿತೇ ಪ್ರೀತಿ!!
- ಪಿ.ಜಿ.ಜ್ಯೋತಿ
09 Aug 2017, 08:52 am
ಅವನಿಗೆ ಅವಳದೇ ನೆನಪು
ಅವಳಿಗೂ ಅವನಲಿ ಮನಸು!!
ಚಿಗುರೊಡೆದಿಹ ಹೊಸ ಪ್ರೀತಿ
ಗರಿಗೆದರಿದೆ ಇಬ್ಬರ ಒಳಗೂ!!
ನವಿರಾಗಿಹ ನವ ಭಾವನೆ ತುಂಬಿ
ನಲಿದಾಡಿದೆ ಇಬ್ಬರ ಮನಸು!!
ಈಜಾಡುತ ಹೃದಯದ ಒಳಗೇ
ಖುಷಿ ಪಡುತಿದೆ ಎಲ್ಲೋ ಅಡಗಿ!!
ಅತಿಯಾಗಿಹ ಈ ಹೇಳದ ಪ್ರೀತಿ
ಅನುಭವಿಸುತ್ತಿದೆ ವಿರಹದ ಬೇಗೆ!!
ಹಿತ ನೀಡುವ ಮನಸನು ಬಯಸಿ
ಚಡಪಡಿಸುತ್ತಿದೆ ಒಳಗೊಳಗೇ!!
- ಪಿ.ಜಿ.ಜ್ಯೋತಿ
09 Aug 2017, 08:51 am
ಕಲ್ಲಾದವನ ಮನವನು ಕರಗಿಸಿ
ಹೂವಾಗಿಸುವ ಬಗೆ ನೀ ತಿಳಿಸು!!
ಹೇಗಾದರೂ ನಾ ಕಲ್ಲನು ಕರಗಿಸಿ
ವಲಿಸಿಕೊಳ್ಳುವ ಬಗೆ ನೀ ತಿಳಿಸು!!
ಎಲೆ ಮಾನವ ಈ ಮನವಿ ಸತ್ಯವು
ನಿನಗಾಗಿ ಕಾದು ಕುಳಿತ ಕ್ಷಣ ನಿತ್ಯವು!!
ಭಾರವಾದ ನನ್ನ ಈ ಮನಸಿನ್ನು
ಹಗುರಾಗಿಸುವ ಬಗೆ ನೀ ತಿಳಿಸು!!
ನೋವ ನುಂಗಿ ಸುಖವ ಹಂಚಿ
ನಯವಾಗಿಸುವ ಬಗೆ ನೀ ತಿಳಿಸು!!
ಎಲೆ ಮಾನವ ಈ ಮನವಿ ಸತ್ಯವು
ನಿನಗಾಗಿ ಕಾದು ಕುಳಿತ ಕ್ಷಣ ನಿತ್ಯವು!!
ಅವನ ಉಸಿರಿನಲ್ಲಿ ನನ್ನ ಉಸಿರನ್ನು
ಬೆರೆಸಿ ನಲಿವ ಬಗೆ ನೀ ತಿಳಿಸು!!
ಉಸಿರು ನಿಲ್ಲುವ ಮೊದಲು ಅವನನ್ನು
ವಲಿಸಿಕೊಳ್ಳುವ ಬಗೆ ನೀ ತಿಳಿಸು!!
ಎಲೆ ಮಾನವ ಈ ಮನವಿ ಸತ್ಯವು
ನಿನಗಾಗಿ ಕಾದು ಕುಳಿತ ಕ್ಷಣ ನಿತ್ಯವು!!
- ಪಿ.ಜಿ.ಜ್ಯೋತಿ
09 Aug 2017, 08:51 am
ರತ್ತೋ ರತ್ತೋ ರಾಯ ನೀನು
ಬರುವೆಯೇನು ಇಲ್ಲಿಗೆ!!
ಬಿತ್ತೋ ಬಿತ್ತೋ ಪ್ರೇಮದ ಬೆಳೆಯ
ನನ್ನ ಹೃದಯದ ಹಿತ್ತಲಿಗೆ!!
ಒಂಟಿಯಲ್ಲ ನಾನು ಇಲ್ಲಿ
ನೀನು ಜೊತೆಗೆ ಇರುವಾಗ!!
ಜಂಟಿಯಾಯ್ತು ಮನಸು ಇಲ್ಲಿ
ಪ್ರೇಮ ಮೊಳಕೆ ಒಡೆದಾಗ!!
ಹೊಸ ಆಸೆ ಚಿಗುರಿತು ಈಗ
ನಿನ್ನ ಕೂಡಿ ನಲಿವಾಗ!!
ಸ್ಥಿರವಾಯ್ತು ಪ್ರೇಮ ಹೃದಯದಿ
ಬೇರೂರಿ ಕುಳಿತಾಗ!!
ತಂಪಾದ ತಂಗಾಳಿ
ನನ್ನ ಉಸಿರಿಂದ ಹೊರಬಂತು!!
ಪ್ರೇಮದ ಮರವು ಇಂದು
ಹಸಿರಾಗಿ ಬೆಳೆದು ತಾ ನಿಂತಾಗ!!
ನಿನ್ನ ಪ್ರೇಮದೊಲವಿನ ಬೆಸುಗೆ
ನನ್ನ ಒಳಗೆ ಬೆಸೆದಾಗ!!
ನನ್ನ ಸನಿಹದ ಮೋಹದ ಸಲಿಗೆ
ನಾ ನೀಡುವೆ ನಿನಗೆ!!
- ಪಿ.ಜಿ.ಜ್ಯೋತಿ
09 Aug 2017, 08:51 am
ನನ್ನ ಜೀವಕೆ ಉಸಿರು ನಿನ್ನದೇ
ನನ್ನ ಹೃದಯದಿ ನಿನ್ನ ಹೆಸರಿದೆ!!
ಉಸಿರ ಹೆಸರಲಿ ಪ್ರೀತಿ ಬೆರೆತಿದೆ
ನಿನ್ನ ನೆನೆಯುತ ನಾನು ಬದುಕಿದೆ!!
ಕರುಣೆ ಇಲ್ಲದೇ ನೀ ನನ್ನ ದೂರಿದೆ
ಉಸಿರು ನಿಲ್ಲಿಸಿ ನೀ ದೂರ ಸರಿದೆ!!
ನನ್ನ ಸನಿಹ ನೀ ಬರಲಾರದೇ
ಇಂದು ಹೀಗೇಕೆ ಜಡವಾಗಿ ಹೋದೆ!!
ಪ್ರಶ್ನೆ ನಾ ಕೇಳಲು ಉತ್ತರ ನೀಡದೇ
ಹೇಳು ಯಾಕಾಗಿ ನೀ ಮೌನಿಯಾದೆ!!
ಕಣ್ಣು ಕಂಬನಿಯನು ತಾ ಮಿಡಿಯುತ
ಹಂಬಲಿಸಿ ಕೇಳಿದೆ ನಿನ್ನ ಉಸಿರನು!!
- ಪಿ.ಜಿ.ಜ್ಯೋತಿ
09 Aug 2017, 08:50 am
ಓ ಮಳೆಯೇ,
ರಚ್ಛೆ ಹಿಡಿದ ಪುಟ್ಟ ಮಗುವಿನಂತೆ
ನೀ ಧುಮ್ಮಿಕ್ಕಿ ಸುರಿಯಬೇಡ..
ಕಳೆದ ನನ್ನ ಸುಂದರ ನೆನಪುಗಳ
ಮತ್ತೊಮ್ಮೆ ಹೆಕ್ಕಿ ತರಬೇಡ.
ಇದ್ದೀತು ಪ್ರತಿ ಆಲಿಕಲ್ಲಿನಲು
ಆಕೆ ಕೊಟ್ಟ ಸಿಹಿ ಕ್ಮುತ್ತಿನ ಘಮಲು.
ಗಾಳಿಗೆ ತೂರಿ ತೂರಿ ಹೊಡೆದಂತೆ ಇಸಿಲು
ಮನದೊಳಗೆ ಮುರುಟಿದ್ದ
ಪ್ರೀತಿಯ ಬೀಜ ಒಡೆದೀತು ಟಿಸಿಲು.
ನೆನೆದೀತು ನೆನಪುಗಳ ಬಚ್ಚಿಟ್ಟ ಗೂಡ.
ಕರಗೀತು ಕನಸುಗಳ ಕವಿದಿರುವ ಮೋಡ.
- ಶ್ರೀಗೋ.
09 Aug 2017, 12:43 am
ಹರಿದ ಬ್ಯಾಗಿಗೆ
ಬಿದ್ದಿತ್ತು ಸುಮಾರು ಕಡೆ ಹೊಲಿಗೆ
ಕಿತ್ತು ಹೋದ ಬ್ಯಾಗಿನ ಜಿಪ್ಪಿಗೆ
ಹಾಕಿದ್ದ ಪಿನ್ನುಗಳು ಮಾಡಿದ್ದವು ಸುಲಿಗೆ
ಬ್ಯಾಗಿನೊಳಗೆ ತುಂಬಿದ್ದ ಪುಸ್ತಕದ ಗಂಟು
ಬೆಸೆದಿತ್ತು ಬ್ಯಾಗು ಹೊತ್ತವನ ಕನಸುಗಳೊಂದಿಗೆ ನಂಟು
ಆ ಬ್ಯಾಗಿನೊಳಗೆ ಪುಸ್ತಕ ಜೋಡಿಸುವ ಜೊತೆಜೊತೆಗೆ
ಜೀವ ತೆರೆದಿತ್ತು ತನ್ನೊಳಗೆ ಭವಿಷ್ಯದ ಕನಸುಗಳ ಮಳಿಗೆ
ಮಳೆಗಾಲದಲಿ ಮಣ್ಣಲಿ ಬಿದ್ದ ಗುಂಡಿಯ ಹಾರುವ ರಭಸಕೆ
ಮಣ್ಣ ಸೇರಿತ್ತು ಕಿತ್ತು ಭುಜದ ಮೇಲಿದ್ದ ಪುಸ್ತಕದ ಜೋಳಿಗೆ
ಅದು ನೋಡಿ ನಡಯುವವರ ಮನಸಾಕ್ಷಿಯ ಅಳೆಯುವ ಘಳಿಗೆ
ಕಾಣದಂತೆ ನಡೆದ ಜನರ ಕಂಡು ಮುಸಿಮುಸಿ ನಕ್ಕಿತ್ತು ಮಾನವೀಯತೆಯು ಒಳಗೊಳಗೆ
ಎತ್ತವರಿಗೆ ದೊಡ್ಡ ದೊಡ್ಡ ವಿದ್ಯೆಯ ಕಲಿಸುವಾಸೆ
ಓದಿ ದೊಡ್ಡವನಾಗಬೇಕು ಬಡತನ ನೀಗಬೇಕೆಂಬುದು ಓದುವವನ ಮಹದಾಸೆ
ದುಡ್ಡಿದ್ದವರಿಗಷ್ಟೆ ಓದಬೇಕೆಂದು ವಿದ್ಯೆಯು ತೋರಲು ವರಸೆ
ಓದಿನ ಬಗೆಗೆ ಇರುವ ಕನಸುಗಳನ್ನೆಲ್ಲ ಮಾಡುಬಿಡುವರು ಖುಲಾಸೆ
ಹೇಳುತ್ತಿದ್ದರು ದುಡ್ಡು ದೊಡ್ಡಪ್ಪ, ವಿದ್ಯೆ ಅವರಪ್ಪ
ಈಗ ಕಲಿತ ವಿದ್ಯೆಗೆ ಎಲ್ಲಿ ಹೋದರು ಹಾಕರು ಸೊಪ್ಪ
ಈಗ ದುಡ್ಡು ಕೊಟ್ಟರೆ ಎಂಥ ವಿದ್ಯೆಗೂ ಅವರೆ ಅಪ್ಪ
ಸಾಮಾನ್ಯ ಮನುಷ್ಯ ಕಣ್ಣ ಮಿಟಿಮಿಟಿ ಮಾಡುತ ನೋಡತಲಿರಬೇಕು ಆಗಿ ಬೆಪ್ಪ
- ಶ್ರೀಕಾವ್ಯ
08 Aug 2017, 11:52 am