Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಾನವತಾವಾದಿ

ಸಾವಿರ ಶತಮಾನಗಳ ಹಿಂದೆ....

ದಿಗಂಬರನಾಗಿ ಹುಟ್ಟಿದ ಕಂದ
ತಾಯಿಯ ಶಾಂತಿ ಮೊಲೆಯುಂಡು ಬೆಳೆದ
ತಂದೆಯ ಅಕ್ಕರೆ -ಸಕ್ಕರೆ ಮಾತು ಕೇಳಿದ
ಶಿಕ್ಷಣದ ಶಿಕ್ಷೆ ಪಡೆದ ಶಿಖರದಂತೆ ಬೆಳದು ಬಂದ

ಭಾರತ ತಾಯಿಯನ್ನು ಸುಂದರವಾಗಿ ಗೀಚಿದ
ವರ್ಣನೆಯನ್ನು ಸುರುಳಿಯಾಕಾರದಲ್ಲಿ ಬರೆದ
ಓದುಗರ - ಕೇಳಗರ- ಒಪ್ಪಿದರು ಪ್ರಶಂಸೆ ಪಡೆದ
ಸಣ್ಣ ದೊಡ್ಡ ಮಾತುಗಳನ್ನು ದೂರ ತಳ್ಳಿದ

ದೀನ - ದಲಿತರಿಗೆ ಸ್ವ ಸಹಾಯ ಮಾಡಿದ
ಜಾತಿ - ಧರ್ಮವನ್ನು ದೂರಗಟ್ಟಿದ
ವಿಜ್ಞಾನವನ್ನು ಎಲ್ಲರಲ್ಲೂ ಹುಡುಕಿದ
ಮಾನವತೆ ನಡತೆಯಲ್ಲಿ ನೆಡೆದ

ಸೂರ್ಯ ಮುಳುಗಡೆಯ ಕಡೆಗೆ ಸಾಗಿದ
ಜಾತಿ - ಅಧರ್ಮ-ಅನೀತಿ ನೋಡಿ ಕಣ್ಣೀರು ಹಾಕಿದ
ಮಾನವರ ದೌರ್ಜನ್ಯ ನೋಡಿದ
ಹೃದಯ ಕಂಪನ ನಿಲ್ಲಿಸಿದ

ಇವನೇ ನಮ್ಮ ಆರಾಧ್ಯ ದೈವನಾದ
ಈ ದೇಶವನ್ನು ಬದಲಿಸಿದ ಪುಣ್ಯತ್ಮಾನಾದ
ಅವರೇ ನಮ್ಮ ಹೃದಯಕ್ಕೆ ಹತ್ತಿರನಾದ
ನಿತ್ಯವೂ ಆಲಿಸೋಣ ಅಣಿಮುತ್ತುನಾದ

- Shinan

10 Aug 2017, 10:59 am

ಹೇಗೆ ಸೇರಲಿ

ಮಿನುಗುವ ತಾರೆಯ
ಹೋಲಿಕೆಯು ಅವನಿಗೆ!!
ಮಿನುಗಿ ಮರೆಯಾಗುವ
ಮಾಯೆಯಂತೆ ಅವನು!!

ಸನಿಹ ಕಂಡರೂ ದೂರ
ಎನಿಸುವ ಕಾಂತಿ ಅವನದು!!
ದೂರ ಇದ್ದರೂ ಹೊಳೆದು
ಮನಸೆಳೆವ ಗೀಳು ಅವನಿಗೆ!!

ವಿರಹದ ಜಾಡು ಹಿಡಿದು
ಕಾಡಿಸುತ್ತಿರುವ ನನ್ನ ಅವನ!!
ಕಂಡೂ ಕಾಣದಂತೆ ನಟಿಸುವ
ನಾಟಕದ ಪಾತ್ರಧಾರಿ ಅವನು!!

ಸೇರದಾದೆ ಅವನ ನಾನು
ಬಾರದಾದ ಇಲ್ಲಿ ಅವನು!!
ಅವನ ಮೇಲೆ ಮೋಹ ನನಗೆ
ಸೇರಲಿ ಹೇಗೆ ನಾನು ಅವನ!!

- ಪಿ.ಜಿ.ಜ್ಯೋತಿ

10 Aug 2017, 08:43 am

ಶುಭೋದಯ

ಹೊನ್ನನ ಕಿರಣವ ಸುರಿಸುತ
ಗಗನಕೆ ಬಂದು‌ ರವಿತೇಜ ‌ನಿಂತ!!
ಹರಿಯುವ ನದಿಯ ಕಲರವ
ಕೇಳಲು ಮನಕೆ ಏನೋ ಆನಂದ!!

ಚಿಲಿ ಪಿಲಿ ಹಕ್ಕಿಯು ಹರುಷದಿ
ನುಡಿಯುತ ಸ್ವಾಗತ ಕೋರಿದೆ ರವಿಗೆ!!
ಇಳೆಯಲಿ ಇಬ್ಬನಿ ತಬ್ಬಿದ ಎಲೆಗಳು
ಹೊಸದಾಗಿ ಆರತಿ ಎತ್ತಿದೆ ಮುಗಿಲಿಗೆ!!

ಬಣ್ಣದದ ಓಕುಳಿ ಚಲ್ಲಿತು ಎದುರಲಿ
ನಿದಿರೆಯಿಂದ ಎದ್ದು ಕಣ್ಣ ತೆರೆದಾಗ!!
ರವಿಯ ಉದಯ ಶಶಿಯ ವಿದಾಯ
ನೋಡುತ ಏಳಲು ಶುಭೋದಯ!!

- ಪಿ.ಜಿ.ಜ್ಯೋತಿ

10 Aug 2017, 08:42 am

ಸ್ವಾತಂತ್ರ್ಯ ಭಾರತ

ಭಾರತ2 ಇದು ನಮ್ಮ ಭಾರತ ಸ್ವಾತಂತ್ರ್ಯ ಭಾರತ|
ವೀರಧೀರಾಳಿದ ಭಾರತ ಸ್ವಾತಂತ್ರ್ಯ ಭಾರತ||ಪ||

ಬಾಪೂಜಿ,ನೇತಾಜಿ ಬೆಳಗಿದ ಭಾರತ|
ನೆಹರು,ಅಂಬೇಡ್ಕರ್ ಬೆಳಸಿದ ಭಾರತ||
ವಿಶ್ವೇಶ್ವರಯ್ಯ,ರಾಧಾಕೃಷ್ಣನ್ ನಿರ್ಮಿಸಿದ ಭಾರತ|
ವಿವೇಕಾನಂದ, ಅಬ್ದುಲ್ ಕಲಾಂರ ಕನಸ್ಸಿನ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೧||

ಭಗತ್ ಸಿಂಗ್,ಆಜಾದ್ ಉಸಿರುಕೊಟ್ಟ ಭಾರತ|
ರಾಜಾದಿರಾಜ ಭರತನು ಹೆಸರುಕೊಟ್ಟ ಭಾರತ||
ಸುಲ್ತಾನ,ರಜಪೂತರು ಆಳಿದ ಭಾರತ|
ಸರ್ವ ಜಾತಿ-ಧರ್ಮಗಳು ಬಾಳಿದ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೨||

ದೇಶಭಕ್ತರ ರಕ್ತ ಕಣಕಣ ಚೆಲ್ಲಿ ಪಡೆದ ಸ್ವಾತಂತ್ರ್ಯ ಭಾರತ|
ಪಾಶ್ಚಿಮಾತ್ಯರನ್ನು ಹೊರಗಟ್ಟಿ ಮೆಟ್ಟಿನಿಂತ ಭಾರತ||
ನಮ್ಮೆಲ್ಲರಿಗೂ ನೆಮ್ಮದಿಯ ಬದುಕುಕೊಟ್ಟ ಭಾರತ|
ವಿಶ್ವವೇ ತಲೆಬಾಗಿ ವಂದಿಸುವ ಪುಣ್ಯಭೂಮಿ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೩||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

10 Aug 2017, 06:54 am

ನೀ ಬಿಟ್ಟು ಹೋಗುವಾಗ

ನೀ ಬಿಟ್ಟು ಹೋಗುವಾಗ
ಅಸ್ಪಷ್ಟತಯ ನೋಟ ಕಣ್ಣುಗಳಿಗೆ |
ಕಣ್ಣ ಹನಿಗಳು ನೋಡಲು ನಿನ್ನ ನಿಂತಿವೆ ಹೊರಗೆ
ನೀನೊಮ್ಮೆ ನೋಡು ತಿರುಗಿ |
ಅವಕಾಶ ಕೊಡಲು ಹನಿಯೂ ಜಾರಿ
ನೋಡಲಿ ಕಣ್ಣುಗಳು ಕೊನೆಯ ಬಾರಿ
ನಿನ್ನ ಮೋರೆಯ ನೆನಪಿಸಲು ಸಾರಿ ಸಾರಿ

- harsha

09 Aug 2017, 09:46 pm

ಅವಳ ಅಂದ ಚಂದ

ಗಂಧರ್ವ ಲೋಕದಿಂದ
ಬಂದವಳ ಅಂದ ಚಂದ!!
ಆ ಸೂರ್ಯಕಾಂತಿಯಂತೆ
ಅರಳಿರುವ ಮೊಗವು ಚಂದ!!

ಅವನಿಯಲ್ಲಿ ಹೊಂಗಿರಣ ಚಲ್ಲಿ
ನಸು ನಗುವ ಕಳೆಯು ಚಂದ!!
ಹೂ ಬಾಣ ಹೂಡಿ ನನ್ನೆಡೆಗೆ ಬಿಟ್ಟು
ನನ್ನ ಮನ ಸೆಳೆದ ಪರಿ ಚಂದ!!

ತುಸು ದೂರ ನಿಂತು ಬರ ಸೆಳೆದು
ನನ್ನ ಕಾಡಿರುವ ಬಗೆ ಚಂದ!!
ಖುಷಿಯಿಂದ ನಾ ಅವಳ ವರಿಸಿ
ಅವರೊಡನೆ ಬೆರೆತ‌ ಕ್ಷಣ ಚಂದ!!

ತಡ ರಾತ್ರಿಯಲ್ಲಿ ನನ್ನ ನಿದ್ದೆಯಲ್ಲಿ
ಜೊತೆಯಾಗಿ ಬಂದವಳು ಚಂದ!!
ಅವಳ ರಮಿಸಿ ಎದ್ದಾಗ ನೆನಪು
ನಾ ಕಂಡ ಅವಳ‌ ಕನಸದು ಚಂದ!!

- ಪಿ.ಜಿ.ಜ್ಯೋತಿ

09 Aug 2017, 08:21 pm

ನಿನ್ನ ಸೇರುವ ಆಸೆ

ತುದಿಗಾಲಿನಲ್ಲಿ ನಿಂತು ನಾ
ಕಾದಿರುವೆನು ನಿನ್ನ ಸೇರಲು!!
ಹೆಜ್ಜೆ ಇಡುವ ಮೊದಲು ಒಮ್ಮೆ
ಬಾ ನೀನು ನನ್ನ ಕಣ್ಣ ಎದುರು!!

ಮನಸು ಕೊಡುವೆ ನಾನು ಆಗಲೇ
ಮೂಡಿರುವುದು ಪ್ರೀತಿ ನನ್ನಲಿ!!
ಜಿಗಿದು ಬರುವೆ ನಾನು ಕೂಡಲೆ
ಕಾಡಿರುವುದು ವಿರಹ ನನ್ನನು!!

ಅರಿವು ಇಲ್ಲದಂತೆ ಸಮಯ
ಓಡಿ ಕಳೆದು ಬಿಡುವುದು ದಿನವ!!
ಹಿತವಾಗಿ ಬದುಕನು ನಡೆಸಲು
ನಿನ್ನ ಜೊತೆಗಾಗಿ ಕಾದಿದೆ ಮನವು!!

ಕಾತುರಕ್ಕೂ ಅವಸರಕ್ಕೂ
ಇರುವುದು ಒಂದೇ ಬಯಕೆಯು!!
ಪ್ರತಿ ಕ್ಷಣವೂ ನಿನ್ನ ಸೇರಿ
ನಲಿಯುವ ಆಸೆ ನನ್ನ‌ ಮನಸಿಗೆ!!

- ಪಿ.ಜಿ.ಜ್ಯೋತಿ

09 Aug 2017, 08:20 pm

ಅಡವಿಯಲಿ ಮೈ ಗೊಡವಿ

ಅಡವಿಯಲಿ ಮೈ ಗೊಡವಿ
ಕಳೆದುಕೊಂಡೆನು ಮನಸ!!
ಹುಡುಕಿದರೂ ಹಿಂತಿರುಗಿ
ಸಿಗುವುದು ಕನಸೇ!!

ಕಡು ರಾತ್ರಿ ಕಾಡಿನಲ್ಲಿ
ಕಾಡ ಮೃಗಗಳ ಬೇಟಿ!!
ಹೆದರಿದರೂ ಹಿಂತಿರುಗಿ
ಬಂದದ್ದು ನಿಜವೇ!!

ನಡು ನೀರಿನಲಿ ಕೈ ತೊಳೆದು
ಅಳಿಸಿದೆನು ನೆನಪುಗಳ!!
ನೆನೆದರೂ ಮರುಕವೇ
ಮರಳದಿರಲಿ ಆ ನೆನಪು!!

ಹೊಸತಾಗಿ ಕಟ್ಟಿದೆನು
ಅರಮನೆಯ ಹೃದಯದಲಿ!!
ಆಳುವವರು ಬಲ್ಲರೇ
ನನ್ನೆದೆಯ ನೋವ!!

ಕೈ ಹಿಡಿದು ನಡೆಸುವವರು
ಯಾರಿಹರು ಜೊತೆಯಲ್ಲಿ!!
ನನಗಾಗಿ ನಾನೊಂದೇ
ಎನ್ನುವುದೇ ಸತ್ಯ!!

- ಪಿ.ಜಿ.ಜ್ಯೋತಿ

09 Aug 2017, 05:34 pm

ಅವಳಿಗಾಗಿ ಬಯಸಿದೆ

ಚಂದಿರನ ಊರಿನಲ್ಲಿ
ಚಂದನದ ಗೊಂಬೆಯು!!
ಹುಣ್ಣಿಮೆಯ ರಾತ್ರಿಯಲ್ಲಿ
ಬೆಳದಿಂಗಳ ತಂದಳು!!

ನನ್ನ ಎದೆಯ ಬಾಗಿಲನ್ನು
ಬಡಿಯುತಲಿ ನಿಂತಳು!!
ನಾ ನೋಡುತ ಬೆರಗಾದೆ
ತೆರೆಯದೇ ಬಾಗಿಲು!!

ಅವಳ ಕಣ್ಣ ಸವಿ ನುಡಿಗಳ
ಪರಿ ತಿಳಿಯದೇ ಹೋದೆನು!!
ಮನಸಿಗೆ ಬೀಗ ಜಡಿದು
ಮೌನವಾಗಿ ಕುಳಿತೆನು!!

ಕಾದು ಕಾದು ಸಾಕಾಗಿ
ಅವಳು ತಿರುಗಿ ಹೋದಳು!!
ಎಚ್ಚೆತ್ತ ಮನಸು ಈಗ
ಹೋದವಳಿಗಾಗಿ ಬಯಸಿದೆ!!

- ಪಿ.ಜಿ.ಜ್ಯೋತಿ

09 Aug 2017, 05:30 pm

ಮುಗಿಲಿನ ಅಂಚಿನ ಕಾಯಕ

ಮುಗಿಲಿನ ಅಂಚಿಗೆ ಬಣ್ಣವ ಬಡಿಯುವ
ಕಾಯಕ ದೊರೆಯಿತೇ ಅವನಿಗೆ!!
ದೂರಕೆ ದೂರಕೆ ಹೋದವನು ಅವನು
ಹಿಂದಿರುಗಿ ಬರದಾದನೇ ಮನೆಗೆ!!

ಬಾಗಿಲ ಎದುರಲಿ ಕಾಯುತ ಕುಳಿತೆನು
ಅವನ ಆಗಮನಕ್ಕೆ ನಾನು!!
ಬಲುದೂರದಲಿ ಮುಗಿಲಿನ ಅಂಚು
ಕೊನೆ ಇಲ್ಲದೆಯೇ ಎಲ್ಲೆಡೆ ಹರಡಿದೆ!!

ಕಾಯಕ ಮುಗಿಸಿ ಮರಳುವನು ಎಂಬ
ಬರವಸೆಯ ಗೋಪುರ ಅಳಿಸಿದೆ!!
ಎಷ್ಟೇ ಯತ್ನಿಸಿದರೂ ನಿಲ್ಲದ ಗೋಪುರವ
ಮತ್ತೆ ಮತ್ತೆ ಕಟ್ಟಲು ನಾ ಯತ್ನಿಸಿದೆ!!

- ಪಿ.ಜಿ.ಜ್ಯೋತಿ

09 Aug 2017, 05:29 pm