Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅರಿಯದೆ ದುರಾದಳೂ

ಮುಕೂ ಪ್ರೀತಿಗೆ ಮರುಳಾಗಿ..

ಬಿಡುವಿನ ಪ್ರಿತಿಗೆ ಬಲಿಯಾಗಿ....

ಸಿಗದ ಪ್ರೀತಿಗೆ ಸ್ನೇಹಿತನಾಗಿ.......
ಪ್ರೀತಿಸೋ.. ಪ್ರೀತಿಗೆ,

ಸಧಾ ಪ್ರೇಮಿಯಾಗಿರುವೆ....
ಭಾ... ನನ್ನ ಗೆಳತಿ.
kissking.

- Rajmuttu Belagali

28 Sep 2024, 12:24 pm

ಅನುಜನ ಜನುಮ ದಿನ


ಅಪರೂಪಕ್ಕೂ ಪ್ರತಿರೂಪ ನೀನು
ಸಜ್ಜನಿಕೆಗೆ ಸಮಾನಾರ್ಥ ನೀನು
ಅಕ್ಕ ಅನ್ನೊ ಪದವಿಗೆ ಕಾರಣ ನೀನು
ಅಕ್ಕರೆಯ ಪ್ರೀತಿ ನೀಡುವ ಜೀವ
ಮಮತೆ ವಾತ್ಸಲ್ಯವ ಧಾರೆ ಎರೆವ ಅನುಜ
ಅಣ್ಣನಂತೆ ಸದಾ ಕಾಯುವ ಕಾವಲುಗಾರ
ನನ್ನ ಜೀವನದಲ್ಲಿ ಸಿಕ್ಕ ಅತ್ಯಮೂಲ್ಯ ಉಡುಗೊರೆ
ಯಾವ ಜನುಮದ ಅದೃಷ್ಟವೋ
ನೀ ನನ್ನ ಸಹೋದರನಾಗಿ ಬಂದದ್ದು
ಈ ಜೀವಕ್ಕೆ ಬೇರೆ ಏನೂ ಬೇಡಿಕೆಯಿಲ್ಲ
ಎಂದೆಂದಿಗೂ ನಮ್ಮ ಅನುಬಂಧ ಹೀಗೆ ಇರಬೇಕು
ಸದಾ ನೀ ನಗು ನಗುತಾ ಖುಷಿಯಾಗಿರಬೇಕು
ನೀ ನಡೆವ ದಾರಿಯಲ್ಲಿ ಏಳಿಗೆ ಯಶಸ್ಸು ತುಂಬಿರಲಿ
ನಿನ್ನ ಕಂಡ ಕನಸ್ಸೆಲ್ಲಾ ನನಸಾಗಲಿ
ಆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ
❤ಹುಟ್ಟು ಹಬ್ಬದ ಶುಭಾಶಯಗಳು ತಮ್ಮು❤

- ರಂಜಿತ ಭಾವನೆಗಳ ಸುಳಿಯಲ್ಲಿ

26 Sep 2024, 09:52 pm

ಸಮ್ಮೋಹಿತಳು

ನಿನ್ನ ಸೆಳೆತಕೆ
ಸಮ್ಮೋಹಿತಳು ನಾನು

ನಿನ್ನ ಪ್ರೀತಿಯಲಿ
ಮಿಂದೆದ್ದ ಮೇಲೂ
ಮೋಹಿಸಿದೆ ಇರಲಿ
ಹೇಗೆ ಹೇಳು

ನಿನ್ನೊಲವ ಅಲೆಗಳು
ಮನವ ತೋಯ್ದ ಮೇಲು
ಕಡಲಿಗೆ ಕೈಚಾಚದೆ ಹೇಗಿರಲಿ
ನೀನೆ ಹೇಳು

ಬೆರಳುಗಳು ಸೋಕಿ
ಮುಂಗುರುಳು ಮುಗಳ್ನಗಲು
ಮಿನುಗಿದ ಕಣ್ಣುಗಳಲಿ
ಪ್ರೀತಿಯ ನೀನೆ ನೋಡು

ತಂಗಾಳಿಯ ಹಿತವು
ಕಿರುಬೆರಳಲೆ ಕುಳಿತು
ಕೆಣಕುತಲೆ ಇರಲು
ಸೋಲದೆ ಹೇಗಿರಲಿ ಹೇಳು
-- ಶ್ರೀಕಾವ್ಯ

- ಶ್ರೀಕಾವ್ಯ

19 Sep 2024, 08:27 pm

ಅಮ್ಮ

ಪಯಣ ದಾರಿ ,
ಅವಳ ಹುಡುಕಿ
ಸಿಗುವುದೆಂದು?
ಅವಳಿರುವ ಹಾದಿ....

ಕಾರ್ಮೋಡದ ಕತ್ತಲು
ಮನದಲ್ಲಿಂದು,
ಮತ್ತೆ ಬೆಳಕು
ಬೆಳಗುವಳೆಂದು.....

ನೋವನುಂಡು
ಅಳುವೆನಿಂದು,
ಅವಳ ಕಂಡು
ನಗುವೆನೆಂದು?

ಅವಳ ನೆನೆದ
ದಿನಗಳನ್ನು
ಗೀಚುತ್ತಲಿರುವೆ
ದಿನವೂ ಇಂದು ....

ಅವಳು ಇರದ ಜಗವನಿಂದು ,
ನಾನು ಕೂಡ ಮರೆಯಲೆಂದು......
✍️ಸಂದೀಪ್ ಎಸ್ ಜಿ

- Sandeep SG

19 Sep 2024, 07:28 pm

ಶಿವ ಶಂಭೋ

ದೇವರೆ ನೀನು ಶಂಕರ
ಆದರೂ ನೀ ನನ್ನ ಮಿತ್ರನೆ
ಲೋಕವ ಕಾಯಲು ವಿಷವ ಕುಡಿದ
ನೀಲಕಂಠನು ನೀನಯ್ಯಾ...
ನನ್ನ ಕಾಯುವ ಓ ಶಂಭೋ ಶಂಕರನೇ...
ಕರೆದರೆ ಬರುವ ಕರುಣಾಮಯಿ ಯೇ
ಏನೂ ಕೇಳದ ವೈರಾಗಿಯೆ....
ಆಡಂಬರ ಅಲಂಕಾರ ನಿನಗಿಲ್ಲ
ಕೇವಲ ಭಸ್ಮವೆ ನಿನ್ನ ಪ್ರಿಯವು.
ನಂದಿಯೇ ನಿನ್ನ ವಾಹನವು
ಸರ್ಪವೇ ನಿನ್ನ ಕೊರಳ ಮಾಲೆಯು....
ಮುಕ್ತಿಯ ಮಾರ್ಗವೇ ನಿನ್ನದಯ್ಯ
ಭಕ್ತಿಯ ಮಾಡುವೆ ಬಾರಯ್ಯ...
ಶಂಭೋ ಶಂಕರ ಮಹಾದೇವ
ನಿನ್ನಾ ಭಜನೆಯ ಮಾಡುವೆ ಬಾರಯ್ಯ...
ಕಷ್ಟವ ನೀಗುವ ಓ ರುದ್ರ
ಕೋಪವು ಬಂದರೆ ಪ್ರಳಯವೇ ಹೇ ಭದ್ರಾ.....
ತ್ಯಾಗದ ರೂಪ ನೀನಯ್ಯ
ದೇವರ ದೇವ ಮಹಾದೇವ.
ಶಂಭೋ ಶಂಕರ ಮಹಾದೇವ
ಭಜಿಸುವೆ ನಿನ್ನಾ ಬಾರಯ್ಯ...




- Adesh Shetty

19 Sep 2024, 04:49 pm

ಪ್ರಕೃತಿಯ ಸೌಂದರ್ಯ

ನಿನ್ನ ಬಗ್ಗೆ ನನ್ನು ಏನೆಂದು ವರ್ಣಿಸಲಿ
ನಾವೆಲ್ಲ ಇರುವೆವು ನಿನ್ನ ಮಡಿಲಿನಲ್ಲಿ

ನಿನ್ನ ಒಂದೊಂದು ರೂಪವು ಬಲು ಚೆನ್ನಾ
ನೀ ಮೌನವಾದರೆ ಅಪ್ಪಟ ಚಿನ್ನ

ನಿನ್ನು ಮುನಿದರೆ ನಾಡೆ ಸರ್ವ ನಾಶ
ನಿನ್ನ ಮಡಿಲಲ್ಲಿ ನಲಿಯಲು ಸಿಕ್ಕಿದೆ ನನ್ನಗೊಂದು ಅವಕಾಶ

ನಿನ್ನು ಎಷ್ಟೊಂದು ಸುಂದರವಾಗಿರುವೆ
ನಿನ್ನನು ವರ್ಣಿಸಿ ನನ್ನು ಕವಿಯಗಿರುವೆ

- Prajwal Praju

16 Sep 2024, 10:29 pm

ಶೃಂಗಾರಕಾವ್ಯ...

ಸಾಕಾಗಿದೆ ವಿರಹದ ಪಾಠ ನೀನ್ ಒಪ್ಪುವುದಾದರೆ ಸಿಹಿ ತುಂಬಿದ ತುಟಿಗಳಲ್ಲಿ ಸಾಕಾಗವಷ್ಟು ಚುಂಬನ ನೀಡುವೆ..
ನಮ್ಮಿಬ್ಬರ ಹುಚ್ಚು ಕಾಮಧಾರಣೆಯಿಂದ ಹೊರ ಬರುವ ಬೆವರು ಹನಿಗಳು ನದಿಯಾಗಿ ಹರಿಯಲಿ ಪ್ರತಿ ಸಲ ಬೇಕಂತಲೇ ಸೋತು ಮತ್ತೆ ಮತ್ತೆ ಗೆಲುವ ಆಟದಲ್ಲಿ ಹೋರಾಡಿ ಪ್ರಶಸ್ತಿ ನಮ್ಮದಾಗಿಸಿಕೊಳ್ಳುವ...!!
ಎಮ್.ಎಸ್.ಭೋವಿ...✍️ ತಪ್ಪಾಗಿದರೆ ಕ್ಷಮಿಸಿ...

- mani_s_bhovi

14 Sep 2024, 06:53 pm

ಗೆಳತಿ ಕೊನೆಯಿರದ ಕನಸಿದು..ನನ್ನ ಪ್ರೀತಿ...

ಕಳೆದ ಕ್ಷಣಗಳ ಮರಳಿ ಬಯಸಿದೆ
ಹೃದಯ..ಅದರ ತಪ್ಪೇನಿಲ್ಲ
ಜೊತೆಯಿರುವ ಕನಸ ಕಂಡ ಮನವು
ಈಗೇಕೊ ಸುಮ್ಮನಾಗಿದೆ..ಅದರ ತಪ್ಪೇನಿಲ್ಲ
ಕಾಣದಿದ್ದರೂ ಮತ್ತೆ ಮತ್ತೆ ನೋಡುವ
ಬಯಕೆ ಕಂಗಳಿಗೆ..ಅದರ ತಪ್ಪೇನಿಲ್ಲ
ಹುಡುಕಿ ಹುಡುಕಿ ನೆಪಗಳ ಕರೆದಿದೆ ನೆನಪು
ಹತ್ತಿರ ಬರಲು..ಅದರ ತಪ್ಪೇನಿಲ್ಲ
ಗೆಳತಿ ನಿನ್ನ ನಗುವ ಸದ್ದು ಗುನುಗಿದೆ
ಎದೆಯಲಿ..ನಂಗೇನೂ ಗೊತ್ತಿಲ್ಲ..!!
ಎಮ್.ಎಸ್.ಭೋವಿ...✍️

- mani_s_bhovi

11 Sep 2024, 10:28 pm

ಭಾವನೆ ಬರಹವಾದಾಗ

✨ಕಣ್ಣೀರಿಡುವಾಗ ಕಚಗುಳಿ ಇಟ್ಟು ನಗಿಸಿದೆ..
ಪ್ರತೀ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದೆ..
ಈ ನಡುವೆ ನಾನು, ನನ್ನ ನೋವನ್ನು ಮರೆತೇ..
ಅಂದೇ ನಾನು ನೀ ನನ್ನ ನಗು ಎಂಬುದನ್ನ ಅರಿತೆ..
ಮನಕ್ಕೆ ಮಂದಹಾಸವಾಗಲು ನಿನ್ನ ಒಂದು ಮಾತು ಸಾಕು..
ನನ್ನೆಲ್ಲಾ ನೋವಿಗೂ ನೀನೆ ಪರಿಹಾರವಾಗಿರುವಾಗ ಬೇರೆ ಯಾರೋ ನನಗೇಕೆ ಬೇಕು..!?
ಈ ಜನ್ಮಕೂ ಮರು ಜನ್ಮಕೂ ನಿನ್ನ ಸಾಂಗತ್ಯವೆ ಸಾಕು..♥️✨


- Priya S

10 Sep 2024, 05:49 pm

ನನವಳು ??

ಭೂಮಿಗೆ ಸೌಂದರ್ಯದ ರಾಶಿಯೇನೆ ತಂದ ನನಗೆ ಎಂದೇ ಈ ಸುಂದರಿಯೆನೆ ಸೃಷ್ಟಿಸಿದ ನಾನೆ ಧನ್ಯ ಅವಳನ್ನು ಪಡೆದ ಹೋಗಳಲು ಪದವಿಲ್ಲ ಅವಳ ಅಂದ ನಕ್ಕಾಗ ಅವಳ ಸೌಂದರ್ಯ ಬಲು ಚಂದ್ ದುಪ್ಪಟ್ಟಾಗಿತ್ತು ಅದು ಅವಳ ಮೂಗುತಿಯಿಂದ???????

- Uday Shiravanti

09 Sep 2024, 01:49 pm