Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆಯ ಸದ್ದು

ಮಳೆ ಸದ್ದು ಮಾಡುತ್ತಿದೆ
ಆಡೋಣ ಬಾ ಎಂದು ಈ ತಂಗಾಳಿಯಲ್ಲಿ
ನಾವು ಮುಂದೆಂದು ಓಡುತ್ತಿವೆ ಗುಣಗುಟ್ಟುತ್ತ
ಕಪ್ಪೆಗಳು ಧರೆಯನ್ನು ತೊಳೆದು ತಂಪು ತುಂಬಲು ಬಂದಿರುವ ಮಳೆಯೆಡೆಗೆ.............

ಮರದಲ್ಲಿನ ಎಲೆಗಳು ಜಾರಿದರೆ ಮಳೆಹನಿಯು ಮತ್ತೆ ಸಿಗುವುದಿಲ್ಲವೆಂದು ಹಿಡಿದಿಟ್ಟುಕೊಳ್ಳುತ್ತಿವೆ ಮತ್ತೆ ಮಳೆ ನಿಂತ ಮೇಲೆ ನಮ್ಮಲ್ಲಿ ಇನ್ನು ತಂಪು ಉಳಿದಿದೆಯೆಂದು ನನ್ನ ಹಿಯಾಳಿಸಲು..........

ಹಕ್ಕಿಗಳು ಗೂಡು ಸೇರಿವೆ ಇಣುಕಿಣುಕಿ ಮಳೆಯಲ್ಲಿ ಆಡುತ್ತಿರುವ ನನ್ನ ನೋಡಲೆಂದು
ನೆನ್ನಯಲ್ಲಿನ ನಗುವು ಇಂದಿನ ಮನದಂಗಳಕೆ ತುಂಬಲೆಂದು ಕನಸು ಬಯಸಿದೆ ನನಸಾಗಿ ನನ್ನ ಪ್ರೀತಿಯ ಮುಂಗಾರು ಮಳೆಯಾಗಿ.............

- ಚುಕ್ಕಿ

15 Aug 2017, 08:02 pm

ಪ್ರೀತಿಯ ಕಾಣಿಕೆ

ಪ್ರೀತಿಯ ಕಾಣಿಕೆಯಾಗಿ
ಬಂದಿರೆ ಬಾಳಲಿ ನೀನು
ಸೋಜಿಗವು ಸಂಭ್ರಮವು
ಈ ಬದುಕಿಗೆ ಆನಂದವು!!

ಜೊತೆಯಲಿ ನೀನಿರುವಾಗ
ನನ್ನ ಭಾಗ್ಯಕೆ ದೊರೆತ ಯೋಗ
ಸುಂದರವು ಆ ಕ್ಷಣವು
ಸವಿ ಬದುಕಿನ ಮುನ್ನುಡಿಯು!!

ಬಾಯಾರಿದ ಈ ಮನಕೆ
ನೀ ಬಂದು ದಾಹ ನೀಗಿದೆ
ಒಲವಿಂದ ಆಗಲೇ ನೀನು
ನನ್ನ‌ ಮನವ ಸೇರಿದೆ!!

ಬಯಸಿ ಬಯಸಿ ಹೆಮ್ಮರವಾಗಿ
ಬೆಳೆದ ಪ್ರೀತಿ ಹೂ ಬನವಾಗಿ
ಸೊಗಸಾಗಿ ಹಿತವಾಗಿ
ನಮಗಾಗಿ ಕಂಪ ಬೀರಿದೆ!!

- ಪಿ.ಜಿ.ಜ್ಯೋತಿ

15 Aug 2017, 06:39 pm

ಮುಸ್ಸಂಜೆ ಮಾತು

ಮುಸ್ಸಂಜೆ ಮುಸುಕಲಿ...
ಮುದ್ದಾದ ಮನಸಲಿ...
ಕನಸೊಂದು ಬೀಳಲಿ...

ಓ ನನ್ನ ಮನವೆ
ನಗುವೆ ನಿನ್ನ ನೆನಪಲಿ
ನೀ ಬರುವೆ ನನ್ನ ಮನಕೆ ಯಾವುದೊ ನೆಪದಲಿ
ಸಿಗಲಾರೆ ನಾ ಸುಲಭದಲಿ ಕಾಯುತಿರು
ಕೂಡುವೆ ನಿನ್ನ ಈ ರಾತ್ರಿ ಬಿಳುವ ಕನಸಲಿ

- vittal balikayi

15 Aug 2017, 06:39 pm

"ಮರೆಯದ ನೆನಪು"

ನಿನ್ನ ಜೊತೆಗಾಡಿದ ಒಂದೊಂದು
ಮಾತು ಇಂದು ನನ್ನಲ್ಲಿ ಉಳಿದಿದೆ
ಮರೆಯದ ನೆನಪಾಗಿ............

ಕಣ್ಮರೆಯಲ್ಲಿ ಕದ್ದು ಬಚ್ಚಿಟ್ಟುಕೊಂಡಿರುವ
ಕಣ್ಣೀರು ನಿನ್ನ ನೋಡಿದ ತಕ್ಷಣ ನಗುವಾಗಿ ಹೊರಹೊಮ್ಮುತ್ತದೆ ನನ್ನ ಹರುಷ ನೀನೆಂದು........

ಮರೆಯದ ನೆನಪು ನೀನು,
ನನ್ನಲ್ಲಿನ ಹೊಳಪು ನೀನು,
ಮನದಲ್ಲಿನ ಮಾತು ನೀನು,
ನನ್ನ ಕೈಯ ರೇಖೆ ನೀನು ಹಣೆ ಬರಹಕೆ ನಗುವು ತುಂಬುವ ಲೇಖನಿಯು ನೀನು............

- ಚುಕ್ಕಿ

15 Aug 2017, 05:48 pm

ಮಳೆಹನಿ

ಜಿಟಿ-ಜಿಟಿ ಮಳೆಯ
ಪಟ-ಪಟ ಹನಿಗಳ
ನಡುವೆ ನೋಡು
ಹೊಂಡಗಳೆ ತುಂಬಿದ
ಇಲ್ಲಿನ ರಸ್ತೆಗಳ.......

ರಭಸದಿ ಬಂದು
ಹೊಂಡಕೆ ಬಿದ್ದು
ಕೈ-ಕಾಲ ಮುರಿದು
ಸೇರುತಿರುವೆವು
ದವಾಖಾನೆಯನಿಂದು......

ಪರಿಶೀಲಿಸಿದ ನಾಯಕರು
ಮೈಮರೆತು ಮಲಗಿಹರು
ಎಚ್ಚರಿಸಿದ ಮಾಧ್ಯಮದವರು
ವರದಿಗಳ ಮಾಡಿಹರು
ಪ್ರಚಾರಕಾಗಿ ಮಾಡುತಿಹರು.....



ಶಾರಧ

- ಶಕುಂತಲಾ

15 Aug 2017, 05:27 pm

ಜೀವನ

ಹುಟ್ಟಿದಾಗ ಬರುವವರು ಬಂದು-ಬಳಗದವರು
ಅತ್ತಾಗ ಕಣ್ಣೊರೆಸುವವರು ಹೆತ್ತವರು
ತಪ್ಪಾದಾಗ ತಿದ್ದುವರು ಗುರು-ಹಿರಿಯರು
ನೋವಲ್ಲೂ ಸ್ಪಂದಿಸುವವರು ಸ್ನೇಹಿತರು.
ಜೊತೆಯಾಗಿ ಹೆಜ್ಜೆಹಾಕುವರು ಪ್ರೀತಿ-ಪಾತ್ರರು.
ಸತ್ತಾಗ ಮತ್ತೆ ಬರುವವರು ನೆಂಟರಿಷ್ಟರು.
ಈ ಹುಟ್ಟು ಸಾವಿನ ನಡುವಿನಲ್ಲಿ
ಏನಾದರೂ ಸಾಧಿಸುವವರು
ನಿಜವಾದ ಮನುಜರು.....

- ಪ್ರಿಯಾಂಕ

15 Aug 2017, 04:56 pm

ಕನ್ನಡ ಕಲರವ

ಕನ್ನಡ ಕಲರವ ನಮ್ಮದು ಎಲ್ಲ
ಆತ್ಮೀಯರ ತಾಣವಿದು ಒಂದೇ ಊರಿನಲ್ಲಿ ನಾವಿಲ್ಲ ಎಲ್ಲ ಸಮಯದಲ್ಲಿಯೂ ಜೊತೆಗಿರುವುದಿಲ್ಲ............

ಆದರೂ ದುಃಖವನ್ನು ಹಚ್ಚಿಕೊಳ್ಳುತ್ತೇವೆ ಆದರದ ಮಾತುಗಳಿಂದ ಎಲ್ಲ ಧರ್ಮಗಳ ಹಬ್ಬಗಳು ಆಚರಿಸುತ್ತೇವೆ ಒಗ್ಗೂಡಿ ಒಂದಾಗಿ..............

ಸಿಹಿಯಂಚಿ ಮಾತಲ್ಲಿ ಮೌನವನ್ನು ಮುರಿಯುತ್ತೇವೆ ಕನ್ನಡದ ಕಮಣಿಯಾ ಪದಗಳಲ್ಲಿ...............

ಕಿವಿ ಕೇಳದ ಮಾತುಗಳಿವು ಮನಮುಟ್ಟುವಂತಹ ಬಂಧಗಳಿವು
ಅಕ್ಕ- ತಂಗಿ ಅಣ್ಣ- ತಮ್ಮ ಎಲ್ಲಗಿಂತ ನೆಚ್ಚಿನ ಸ್ನೇಹಿತರು ನೆಲೆಯಿರುವ ಜಾಗವಿದು ನಮ್ಮ ಕನ್ನಡ ಕಲರವವಿದು..............

- ಚುಕ್ಕಿ

15 Aug 2017, 02:13 pm

ಗೆಲುವು

ಹಂಚು ಬಾ ಗೆಳೆಯ
ನೀ ಸ್ವತಂತ್ರ್ಯದ ಸಿಹಿಯ!!
ಬೆಳಗ ಬಾ ಗೆಳೆಯ
ಈ ಸ್ವಾತಂತ್ರ್ಯದ ಗೆಲುವ!!

ದೇಶ ಪ್ರೇಮಿ ಪ್ರಾಣ ಕೊಟ್ಟು
ಉಳಿಸಿಕೊಟ್ಟ ನಾಡಿದು!!
ಸ್ಮರಿಸಬೇಕು ನಾವು ಎಂದೂ
ಅವರ ತ್ಯಾಗದ ಗೆಲುವನು!!

ದುಷ್ಟತನದಿ ಅಳಿಸಬೇಡ
ಉಳಿಸು ನಿನ್ನಯ ನಾಡನು!!
ಸ್ವಾರ್ಥ ಬಿಟ್ಟು ಸಾಗು ಮುಂದೆ
ಗೆಲುವು ನಿನ್ನನು ಕಾದಿದೆ!!

- ಪಿ.ಜಿ.ಜ್ಯೋತಿ

15 Aug 2017, 11:19 am

ಮೂರು ಬಣ್ಣ

ಮೂರು ಬಣ್ಣದಲ್ಲಿ ಇರುವ
ನೂರು ಶಕ್ತಿ ನಮ್ಮದು
ನಡುವೆ ಇರುವ ಚಕ್ರದಲ್ಲಿ
ನಮ್ಮ ಯುಕ್ತಿ ಅಡಗಿದೆ!!

ದೇಶಕ್ಕಾಗಿ ಪ್ರಾಣ ಕೊಟ್ಟ
ವೀರ ಜನತೆ ನಮ್ಮದು!!
ಅವರ ದಾರಿಯಲ್ಲಿ ದೊರೆತ
ಸ್ವಾತಂತ್ರ್ಯ ಎಂದೂ ನಮ್ಮದು!!

ಒಳಿತಿನಲ್ಲಿ ಪ್ರೇಮ ಇಟ್ಟು
ಧರ್ಮದಲ್ಲಿ ಬೇಧ ಬಿಟ್ಟು
ಕಿರ್ತಿ ಧ್ವಜವ ಹಿಡಿದು ನಾವು
ಸಾಗುವ ಮುಂದೆ ಸಾಗುವ!!

ನಾ ಕಂಡ ದೇಶ ಈ ನನ್ನ
ಭಾರತಕ್ಕೆ ಇಲ್ಲ ಸಾಟಿಯು
ಓ ದೇಶ ಪ್ರೀಮಿ ನೀನು
ಹಂಚ ಬಾರೋ ದೇಶ ಪ್ರೇಮವ!!

ಖಡ್ಗದಲ್ಲಿ ಶಾಂತಿ ಸಾರಿ
ಶಾಂತಿಯಿಂದ ಕ್ರಾಂತಿ ಅಳಿಸಿ
ಪ್ರೀತಿಯಿಂದ ಸಹಬಾಳ್ವೆಯಿಂದ
ಬಾಳುವ ನಾವು ಬಾಳುವ!!

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ
ಶುಭಾಶಯಗಳು.........

- ಪಿ.ಜಿ.ಜ್ಯೋತಿ

15 Aug 2017, 11:08 am

ಸ್ವಾತಂತ್ರ್ಯ

ನಾವು ಸ್ವಾತಂತ್ರ್ಯವಾಗಿದ್ದೀವಿ ಎಂದರೆ
ಅರ್ಥ ನಮ್ಮ ಹಾಗೆ ನಾವಿದಿವಿ ಎಂದು
ಯಾರಿಗಾಗಿಯೂ ಬದಲಾಗದೆ...............

ನಮ್ಮ ಸ್ವಂಚಂದ ನಗುವಿಗಿಂತ
ಮಿಗಿಲಾದ ಸ್ವಾತಂತ್ರ್ಯ ಮುಗಿಲೇರಿ
ನಿಂತರೂ ಕಾಣಲಾರೆದು ನಮ್ಮಲ್ಲಿ............

ಹಿಂಜರಿದು ನಿಲ್ಲಲ್ಲು ಮನ ನೋಯಿಸುವ
ಒಂದು ಮಾತು ಸಾಕು ನಮ್ಮನ್ನು ಕಟ್ಟಿ ಹಾಕಲು ನಾವು ಈ ಸಮಾಜದಲ್ಲಿ ಎಣೆದುಕೊಂಡ ಬಂಧನಗಳು ಸಾಕು.............

ನಿಮಗಾಗಿ ನೀವು ಪಡೆದುಕೊಳ್ಳುವ
ಪ್ರಯೊಂದು ಹಕ್ಕು ಸ್ವಾತಂತ್ರ್ಯ ಪಡೆದಂತೆ
ಸಂಗ್ರಾಮ ನಡೆದಂತೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಶ್ರಮ ಫಲವನ್ನು ಪಡೆದಂತೆ.............

- ಚುಕ್ಕಿ

15 Aug 2017, 10:51 am